ಸಾಮಾನ್ಯವಾಗಿ ಪ್ರತಿ ತಿಂಗಳು ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಜೊತೆಗೆ ಪ್ರತಿ ಆದಿತ್ಯವಾರ ಬ್ಯಾಂಕ್ ಗಳಿಗೆ ರಜೆ ಇದ್ದೆ ಇರುತ್ತದೆ. ಇದನ್ನು ಹೊರತು ಪಡಿಸಿ ಧಾರ್ಮಿಕ ಹಬ್ಬಗಳು ಹಾಗೂ ರಾಷ್ಟ್ರೀಯ ಹಬ್ಬಗಳಲ್ಲಿ ಬ್ಯಾಂಕ್ ಗಳು ರಜೆ ಘೋಷಣೆ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಷಯ ಅದರ ಜೊತೆಗೆ ಕೆಲವು ಸ್ಥಳೀಯ ರಜೆಗಳು ಹಾಗೂ ಬೇರೆ ಬೇರೆ ರಾಜ್ಯದಲ್ಲಿ ಆಚರಿಸುವ ಹಬ್ಬಗಳ ರಜೆಗಳು ಒಂದೊಂದು ದಿನ ಇರುತ್ತವೆ. ಹಾಗಾದರೆ ಭಾರತದಲ್ಲಿ ಏಪ್ರಿಲ್ ತಿಂಗಳಿನಲ್ಲಿ ರಾಜ್ಯವಾರು ರಜೆಗಳು ಯಾವ ದಿನಗಳು ರಜೆ ಇವೆ ಎಂಬುದನ್ನು ನೋಡೋಣ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬಿಡುಗಡೆ ಮಾಡಿರುವ ರಜಾ ಪಟ್ಟಿಯ ಪ್ರಕಾರ ಏಪ್ರಿಲ್ ತಿಂಗಳಲ್ಲಿ 14 ದಿನಗಳ ಕಾಲ ಬ್ಯಾಂಕ್ ಗೆ ರಜೆ ಇರಲಿದೆ. ಈ ಸಮಯದಲ್ಲಿ ಬ್ಯಾಂಕ್ ಗೆ ಹೋಗಿ ಯಾವುದೇ ಹಣದ ವ್ಯವಹಾರ ಮಾಡಲು ಸಾಧ್ಯವಿಲ್ಲ. ನಿಮಗೆ ಬ್ಯಾಂಕ್ ಕೆಲಸಗಳು ಇದ್ದರೆ ಕೆಳಗೆ ತಿಳಿಸಿರುವ ದಿನಾಂಕದಂದು ಯಾವುದೇ ಕಾರಣಕ್ಕೂ ನೀವು ಬ್ಯಾಂಕ್ ಗೆ ಹೋಗಬಾರದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬ್ಯಾಂಕ್ ನ ರಜಾ ದಿನಗಳ ಪಟ್ಟಿ :-
- ಏಪ್ರಿಲ್ 1 ಸೋಮವಾರದಂದು ಮಿಜೋರಾಂ, ಚಂಡೀಗಢ, ಸಿಕ್ಕಿಂ, ಬಂಗಾಳ, ಹಿಮಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯಗಳಲನ್ನು ಹೊರತು ಪಡಿಸಿ ಅನೇಕ ರಾಜ್ಯಗಳಲ್ಲಿನ ಬ್ಯಾಂಕ್ ಗಳಲ್ಲಿ ತಮ್ಮ ವಾರ್ಷಿಕ ಖಾತೆಗಳನ್ನು ಮುಚ್ಚುವ ಸಲುವಾಗಿ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಿರುತ್ತಾರೆ.
- ಏಪ್ರಿಲ್ 5 ಶುಕ್ರವಾರದಂದು ಹೈದರಾಬಾದ್ – ತೆಲಂಗಾಣ, ಜಮ್ಮು ಮತ್ತು ಶ್ರೀನಗರ ರಾಜ್ಯಗಳಲ್ಲಿ ಬಾಬು ಜಗಜೀವನ್ ರಾಮ್ ಅವರ ಜನ್ಮದಿನ ಹಾಗು ಜುಮಾತ್-ಉಲ್-ವಿದಾಗಾಗಿ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಿರುತ್ತಾರೆ.
- ಏಪ್ರಿಲ್ 7 ಭಾನುವಾರ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
- ಏಪ್ರಿಲ್ 9 ಮಂಗಳವಾರ ದಂದು ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಹೈದರಾಬಾದ್ , ಆಂಧ್ರಪ್ರದೇಶ, ತೆಲಂಗಾಣ, ಮಣಿಪುರ, ಗೋವಾ ರಾಜ್ಯಗಳಲ್ಲಿ ಗುಧಿ ಪಾಡ್ವಾ ಅಥವಾ ಯುಗಾದಿ ಹಬ್ಬ ಅಥವಾ ತೆಲುಗು ಹೊಸ ವರ್ಷದ ದಿನ ಅಥವಾ ಸಜಿಬು ನೋಂಗ್ಮಪನ್ಬ (ಚೈರೊಬಾ) ಅಥವಾ 1ನೇ ನವರಾತ್ರಿಯ ಪ್ರಯುಕ್ತ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಿರುತ್ತಾರೆ.
- ಏಪ್ರಿಲ್ 10 ಬುಧವಾರ ಕೇರಳ ರಾಜ್ಯದಲ್ಲಿ ರಂಜಾನ್-ಈದ್ (ಈದ್-ಉಲ್-ಫಿತರ್) ಪ್ರಯುಕ್ತ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಿರುತ್ತಾರೆ.
- ಏಪ್ರಿಲ್ 11 ಗುರುವಾರದಂದು ಚಂಡೀಗಢ, ಸಿಕ್ಕಿಂ, ಕೇರಳ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲನ್ನು ಬಿಟ್ಟು ಉಳಿದ ಹಲವು ರಾಜ್ಯಗಳಲ್ಲಿ ರಂಜಾನ್-ಈದ್ (ಈದ್-ಉಲ್-ಫಿತರ್) ಇರುವುದರಿಂದ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಿರುತ್ತಾರೆ.
- ಏಪ್ರಿಲ್ 13 ರಂದು ಎರಡನೇ ಶನಿವಾರ ಆಗಿರುವುದರಿಂದ ಎಲ್ಲಾ ರಾಜ್ಯಗಳ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಜೊತೆಗೆ ತ್ರಿಪುರಾ, ಅಸ್ಸಾಂ, ಮಣಿಪುರ, ಜಮ್ಮು, ಮತ್ತು ಶ್ರೀನಗರದಲ್ಲಿ ಬೊಹಾಗ್ ಬಿಹು ಅಥವಾ ಚೀರೊಬಾ ಅಥವಾ ಬೈಸಾಖಿ ಅಥವಾ ಬಿಜು ಉತ್ಸವಕ್ಕಾಗಿ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಿರುತ್ತಾರೆ.
- ಏಪ್ರಿಲ್ 14 ಭಾನುವಾರ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
- ಏಪ್ರಿಲ್ 15 ಸೋಮವಾರದಂದು ಅಸ್ಸಾಂ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಬೊಹಾಗ್ ಬಿಹು ಅಥವಾ ಹಿಮಾಚಲ ದಿನ ಆಗಿರುವುದರಿಂದ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಿರುತ್ತಾರೆ.
- ಏಪ್ರಿಲ್ 16 ಮಂಗಳವಾರದಂದು ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾ, ಚಂಡೀಗಢ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಶ್ರೀರಾಮ ನವಮಿ (ಚೈತೆ ದಾಸೈನ್) ಹಬ್ಬದ ಪ್ರಯುಕ್ತ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಿರುತ್ತಾರೆ.
- ಏಪ್ರಿಲ್ 20 ಮೂರನೇ ಶನಿವಾರ ಆದರೂ ಸಹ ತ್ರಿಪುರಾದಲ್ಲಿ ಗರಿಯಾ ಪೂಜೆಯ ಪ್ರಯುಕ್ತ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಿರುತ್ತಾರೆ.
- ಏಪ್ರಿಲ್ 21 ಭಾನುವಾರ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
- ಏಪ್ರಿಲ್ 27 ನಾಲ್ಕನೇ ಶನಿವಾರ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
- ಏಪ್ರಿಲ್ 28 ಭಾನುವಾರ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
ಇದನ್ನೂ ಓದಿ: ಈ ಅವಕಾಶವನ್ನು ನೀವು ಬಳಸಿಕೊಂಡರೆ ನೀವು iPhone 14 ಅಥವಾ 14 Plus ಖರೀದಿಯಲ್ಲಿ 22,000 ರೂಪಾಯಿಗಳನ್ನು ಉಳಿಸಬಹುದು.