ದುಡಿದ ಹಣವೂ ಸೇಫ್ ಆಗಿ ಇರಲಿ ಹಾಗೂ ನಾವು ಇನ್ವೆಸ್ಟ್ ಮಾಡಿದ ಹಣಕ್ಕೆ ಬಡ್ಡಿ ಸಿಗಲೆಂದು ನಾವು ಬ್ಯಾಂಕ್ ನಲ್ಲಿ, ಪೋಸ್ಟ್ ಆಫೀಸ್ ಗಳಲ್ಲಿ ಹಾಗೂ ಮ್ಯೂಚುವಲ್ ಫಂಡ್ ಗೆ ಹಣವನ್ನು ಇನ್ವೆಸ್ಟ್ ಮಾಡುತ್ತೇವೆ. ಆದರೆ ನಾವು ಹಣವನ್ನು ಹೂಡಿಕೆ ಮಾಡುವ ಮೊದಲು ಕೆಲವು ಅಂಶಗಳನ್ನು ಗಮನಿಸಬೇಕು.
ಈಗ ಹೆಚ್ಚಿನ ಜನರು SIP ಮ್ಯೂಚುವಲ್ ಫಂಡ್ ಗೆ ಹಣವನ್ನು ಇನ್ವೆಸ್ಟ್ ಮಾಡುತ್ತಾ ಇದ್ದಾರೆ. ಆದರೆ ಹಣ ಹೂಡಿಕೆ ಮಾಡುವ ಮೊದಲು ಕೆಲವು ಮುಖ್ಯ ಅಂಶಗಳ ಬಗ್ಗೆ ತಿಳಿದು ಕೊಳ್ಳುವುದು ಉತ್ತಮ. ಸಣ್ಣ ಪ್ರಮಾಣದ ಹೂಡಿಕೆ ಮಾಡಿ ಹೆಚ್ಚಿನ ಹಣವನ್ನು ಪಡೆಯಲು SIP ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆ ಆಗಿದೆ. ಆದರೆ SIP ಮ್ಯೂಚುವಲ್ ಫಂಡ್ ನಲ್ಲಿ ಏಷ್ಟು ಅನುಕೂಲ ಇದೆಯೋ ಹಾಗೆಯೇ ಕೆಲವು ಅನಾನುಕೂಲ ಸಹ ಇದೆ. ನೀವು ಸಹ SIP ಮ್ಯೂಚುವಲ್ ಫಂಡ್ ನಲ್ಲಿ ಇನ್ವೆಸ್ಟ್ಮೆಂಟ್ ಮಾಡ್ಬೇಕು ಎಂದುಕೊಂಡಿದ್ದಾರೆ ಈ ಕೆಳಗಿನ ಅಂಶಗಳ ಬಗ್ಗೆ ತಿಳಿದುಕೊಂಡಿರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
SIP ಮ್ಯೂಚುವಲ್ ಫಂಡ್ ಗೆ ಇನ್ವೆಸ್ಟ್ ಮಾಡುವ ಮೊದಲು ಈ ಕೆಳಗಿನ ಅಂಶಗಳ ಬಗ್ಗೆ ತಿಳಿದುಕೊಳ್ಳಿ :-
1) ಸಲಹೆ ಪಡೆಯಿರಿ:- ನೀವು ಹಣವನ್ನು ಇನ್ವೆಸ್ಟ್ಮೆಂಟ್ ಮಾಡುವ ಮೊದಲು SIP ಮ್ಯೂಚುವಲ್ ಫಂಡ್ ಬಗ್ಗೆ ಪೂರ್ಣ ವಿವರಗಳನ್ನು ಪಡೆದುಕೊಳ್ಳಬೇಕು. ಹಣ ಹೂಡಿಕೆಯ ವಿಧಾನ, ಏಷ್ಟು ಹಣ ಹೂಡಿಕೆ ಮಾಡಿದರೆ ಏಷ್ಟು ಲಾಭ ಸಿಗುತ್ತದೆ, ಹಣ ಹೂಡಿಕೆ ಅಪಾಯಗಳ ಬಗ್ಗೆ ಮಾಹಿತಿ ಎಲ್ಲವನ್ನೂ ಸಲಹೆಗಾರರ ಬಳಿ ಕೇಳಿ ತಿಳಿದುಕೊಳ್ಳುವುದು ಬಹಳ ಉತ್ತಮ.
2) ಮೊದಲು ಕಡಿಮೆ ಮೊತ್ತದ ಇನ್ವೆಸ್ಟ್ಮೆಂಟ್ ಆರಂಭಿಸಿ :- ಒಂದೇ ಬಾರಿಗೆ ದೊಡ್ಡ ಮೊತ್ತದ ಹಣವನ್ನು investment ಮಾಡುವ ಬದಲಿಗೆ ಮೊದಲ ಬಾರಿಗೆ ಇನ್ವೆಸ್ಟ್ ಮಾಡುವಾಗ ಮಿನಿಮಮ್ ಹಣ ಏಷ್ಟು ಇರುವುದೋ ಅಷ್ಟೇ ಹಣವನ್ನು ಅಥವಾ ಅದಕ್ಕೆ ಸ್ವಲ್ಪ ಜಾಸ್ತಿ ಹಣವನ್ನು ಹೂಡಿಕೆ ಮಾಡುವುದು ಉತ್ತಮ. ಹೀಗೆ ಮಾಡುವುದರಿಂದ ನಿಮಗೆ ಇನ್ವೆಸ್ಟ್ಮೆಂಟ್ ಪ್ಲಾನ್ ಬಗ್ಗೆ ತಿಳಿಯುವುದರ ಜೊತೆಗೆ ನಿಮ್ಮ ಹಣ ಏಷ್ಟು safety ಆಗಿ ಇರುವುದು ಎಂಬುದು ನಿಮಗೆ ಅರಿವಾಗುತ್ತದೆ. ಹಾಗೂ ಒಮ್ಮೆಲೆ ಹೆಚ್ಚಿನ ಮೊತ್ತದ ಹಣ ಹೂಡಿಕೆ ಮಾಡಿ ಹಣ ಕಳೆದುಕೊಳ್ಳುವ ಅಪಾಯದಿಂದ ಪಾರಾಗಲು ಸಹಾಯಕ.
3) ಹೂಡಿಕೆ ಮಾಡುವುದನ್ನು ನಿಲ್ಲಿಸಬಾರದು:- ಮಾರುಕಟ್ಟೆಯಲ್ಲಿ ಕುಸಿತ ಕಂಡು ಬಂದ ತಕ್ಷಣ ನೀವು ಪ್ರತಿ ತಿಂಗಳು ಅಥವಾ ಪ್ರತಿ ವರ್ಷ ಹಣ ಹೂಡಿಕೆ ಮಾಡುವುದನ್ನು ನಿಲ್ಲಿಸಬಾರದು. ಹೀಗೆ ಮಾಡಿದರೆ ನೀವು ನಷ್ಟ ಅನುಭವಿಸುವ ಸಾಧ್ಯತೆ ಇರುತ್ತದೆ. ಮಾರುಕಟ್ಟೆಯ ಕುಸಿತದ ಸಮಯದಲ್ಲಿ ಸ್ವಲ್ಪ ತಾಳ್ಮೆಯಿಂದ ನೀವು inevstment ಮಾಡುತ್ತಾ ಬಂದರೆ ನಿಮಗೆ ಲಾಭ ಸಿಗುತ್ತದೆ.
4)ಸರಿಯಾದ ಗುರಿಯನ್ನು ಇಟ್ಟುಕೊಂಡು ಇನ್ವೆಸ್ಟ್ಮೆಂಟ್ ಆರಂಭಿಸಿ :- ನೀವು ಹಣ ಇನ್ವೆಸ್ಟ್ಮೆಂಟ್ ಮಾಡುವಾಗ ಹಣ ಇನ್ವೆಸ್ಟ್ಮೆಂಟ್ ಏಷ್ಟು ವರುಷ ಮಾಡುತ್ತೀರಿ ಹಾಗೂ ನೀವು ಯಾವ ಕಾರಣಕ್ಕೆ ಹಣ ಇನ್ವೆಸ್ಟ್ಮೆಂಟ್ ಮಾಡುತ್ತಾ ಇದ್ದೀರಿ ಎಂಬುದನ್ನು ಮೊದಲು ಖಚಿತ ಪಡಿಸಿಕೊಂಡು ನಂತರ ಇನ್ವೆಸ್ಟ್ಮೆಂಟ್ ಆರಂಭಿಸಿ. ಇದರಿಂದ ನಿಮ್ಮ ಹಣ ನಿಮ್ಮ ಮಕ್ಕಳ ಮದುವೆಗೆ ನಿಮ್ಮ ರಿಟೈರ್ಮೆಂಟ್ ಲೈಫ್ ಗೆ ಅಥವಾ ನಿಮ್ಮ ಅನಾರೋಗ್ಯದ ಸಮಯದಲ್ಲಿ ಸಹಾಯಕ್ಕೆ ಬರುತ್ತದೆ.
ಇದನ್ನೂ ಓದಿ: ಕೇವಲ ಒಂದೇ ಒಂದು ಷರತ್ತಿನೊಂದಿಗೆ ಮಹಿಳೆಯರಿಗೆ 5 ಲಕ್ಷ ರೂ. ಸಾಲ ಸೌಲಭ್ಯ, ಇದಕ್ಕೆ ನೀವೇನು ಗ್ಯಾರಂಟಿ ಕೊಡಬೇಕಾಗಿಲ್ಲ!