ಭಾರತ ಯಾಂತ್ರಿಕತೆಯ ಪ್ರಪಂಚಕ್ಕೆ ದಾಪುಗಾಲು ಇಟ್ಟು ಬಹಳ ವರುಷಗಳೇ ಕಳೆದಿವೆ. ಕ್ಯಾಶ್ Transaction ಗಳು ಬಹತೇಕ ಮಾಯವಾಗಿದೆ. ಎಲ್ಲ ಕಡೆ ಮೊಬೈಲ್ ಅಪ್ಲಿಕೇಶನ್ ಗಳು ಇಲ್ಲ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಮೂಲಕ ಹಣ ಪಾವತಿ ಮಾಡುವ ಪ್ರಕ್ರಿಯೆ ದೇಶದ ಮೂಲೆ ಮೂಲೆಯಲ್ಲೂ ಆರಂಭವಾಗಿದೆ. ಇದರ ಜೊತೆಗೆ ಈಗ ಇನ್ನೊಂದು ಆಧುನಿಕ ವ್ಯವಸ್ಥೆ ನಮ್ಮ ಮುಂದೆ ಬರುವ ಬಗ್ಗೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ಟೋಲ್ ಗೇಟ್ ಬಳಿ ಸಮಯ ವ್ಯರ್ಥ ಮಾಡದೆ ನಮ್ಮ ಟೋಲ್ ಗೇಟ್ ಹಣವನ್ನು ಪಾವತಿ ಮಾಡುವ ಉಪಗ್ರಹ ಆಧಾರಿತ ವ್ಯವಸ್ಥೆ ಜಾರಿಗೆ ಬರುವ ಸೂಚನೆ ನೀಡಿದ್ದಾರೆ.
ಏನಿದು ಉಪಗ್ರಹ ಆಧಾರಿತ ಟೋಲ್ ಗೇಟ್ ವ್ಯವಸ್ಥೆ
ಉಪಗ್ರಹ ಟೋಲ್ ಗೇಟ್ ವ್ಯವಸ್ಥೆ ಯಿಂದ ನಮಗೆ ಪ್ರತಿ ಟೋಲ್ ಗೇಟ್ ನಲ್ಲಿ ಹಣ ಪಾವತಿ ಮಾಡಬೇಕು ಎಂಬ ನಿಯಮ ಇರುವುದಿಲ್ಲ. ನಾವು ಕ್ರಮಿಸುತ ದೂರವನ್ನು ಉಪಗ್ರಹವು ಕಂಡುಹಿಡಿದು. ಕ್ರಮಿಸಿದ ದೂರಕ್ಕೆ ಅನುಗುಣವಾಗಿ ಟೋಲ್ ಹಣವನ್ನು ಪಡೆಯುತ್ತದೆ. ಈ ಹಣವೂ ನಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ಕಡಿತವಾಗಿತ್ತದೆ. ಹಾಗೂ ಹಣ ಕಡಿತವಾಗುವ ಮಾಹಿತಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುತ್ತದೆ. ಇದರಿಂದ ನೀವು ಹೆಚ್ಚಿನ ಹಣ ಟೋಲ್ ಗೆ ನೀಡುವುದು ತಪ್ಪುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಉಪಗ್ರಹ ಆಧಾರಿತ ಟೋಲ್ ಗೇಟ್ ವ್ಯವಸ್ಥೆಯಿಂದ ಏನು ಲಾಭ:-
1) ಸಮಯದ ಉಳಿತಾಯ:- ನಾವು ಟೋಲ್ ಗೇಟ್ ಬಳಿ ಗಾಡಿಯನ್ನು ನಿಲ್ಲಿಸಿ ಹಣ ವನ್ನು ಪಾವತಿಸಲು ಕಡಿಮೆ ಎಂದರೂ ಎರಡು ನಿಮಿಷ ಬೇಕೆ ಬೇಕು. ನಾವು ಟೋಲ್ ಗೇಟ್ ಪಾವತಿಸುವ ಸಮಯದಲ್ಲಿ ಹಿಂದೆ ಇದ್ದ ವಾಹನ ಸವಾರರು ಕಾಯಬೇಕಾಗುತ್ತದೆ. ನಾವು ಟೋಲ್ ಹಣ ಪಾವತಿ ಮಾಡುವ ಮುನ್ನ ನಮ್ಮ ಮುಂದೆ ಇರುವ ವಾಹನ ಸವಾರ ಹಣ ಪಾವತಿ ಮಾಡುವ ತನಕ ನಾವು ಮಾಡಿರುತ್ತೇವೆ. ಆದರೆ ಈ ಉಪಗ್ರಹ ಆಧಾರಿತ ವ್ಯವಸ್ಥೆಯಿಂದ ನಾವು ಯಾವುದೇ ಟೋಲ್ ಗೇಟ್ ಬಳಿ ಕಾಯುವ ಅವಶ್ಯಕತೆ ಇಲ್ಲ. ನಾವು ಪಾವತಿಸಬೇಕಾದ ಹಣವೂ ನೇರವಾಗಿ ನಮ್ಮ ಬ್ಯಾಂಕ್ ಖಾತೆಯಿಂದ ಕಡಿತವಾಗಿತ್ತದೆ.
2) ಹಣ ಉಳಿತಾಯ :- ನಾವು ಕ್ರಮಿಸಿದ ದೂರಕ್ಕೆ ಟೋಲ್ ಹಣ ಪಾವತಿ ಮಾಡುವುದರಿಂದ ನಾವು ದೂರದ ಪ್ರಯಾಣ ಮಾಡುವಾಗ ಎರಡು ಮೂರು ಟೋಲ್ ಗಳಿಗೆ ಹಣ ಪಾವತಿ ಮಾಡುವುದು ತಪ್ಪುತ್ತದೆ. ಜೊತೆಗೆ ಪ್ರತಿ ಟೋಲ್ ಗೇಟ್ ನ ಬಳಿ ವಿವಿಧ ರೀತಿಯ ಮೊತ್ತವನ್ನು ಪಾವತಿ ಮಾಡುವುದು ತಪ್ಪುತ್ತದೆ.
3) ಟ್ರಾಫಿಕ್ ಕಡಿಮೆ ಆಗುತ್ತದೆ:- ಈ ವ್ಯವಸ್ಥೆಯನ್ನು ಜಾರಿಗೆ ತರುವುದರಿಂದ ಟೋಲ್ ಗೇಟ್ ಬಳಿ ದಿನನಿತ್ಯ ನೋಡುವ ಟ್ರಾಫಿಕ್ ಜಾಮ್ ಆಗಲೂ ಸಾಧ್ಯವಿಲ್ಲ. ಯಾಕೆಂದರೆ ಯಾವ ವಾಹನ ಸವಾರರು ಸಹ ಟೋಲ್ ಹಣವನ್ನು ನೀಡಲು ನಿಲ್ಲಬೇಕಾದ ಪರಿಸ್ಥಿತಿ ಬರುವುದಿಲ್ಲ.
ಗಮನಿಸಬೇಕಾದ ಅಂಶಗಳು :- ಈ ವ್ಯವಸ್ಥೆಯಲ್ಲಿ ಬ್ಯಾಂಕ್ ಅಕೌಂಟ್ ನಿಂದಾ ಹಣ ಪಾವತಿ ಆಗಬೇಕು ಎಂದರೆ ನಿಮ್ಮ ಅಕೌಂಟ್ ನಲ್ಲಿ ಹೆಚ್ಚಿನ ಮೊತ್ತ ಇರುವುದು ಅವಶ್ಯಕವಾಗಿದೆ. ಹಾಗೂ ಈ ವ್ಯವಸ್ಥೆ ಜಾರಿಗೆ ಬರುವ ಸಮಯ ಹಾಗೂ ಇನ್ನಿತರ ಷರತ್ತುಗಳ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಯಾವುದೇ ಮಾಹಿತಿ ನೀಡಲಿಲ್ಲ. ಆದರೆ ಈ ಯೋಜನೆಯು ಜಾರಿಗೆ ಬಂದರೆ ಗ್ರಾಹಕರಿಗೆ ಉಪಯೋಗ ಆಗಲಿದೆ ಎನ್ನುವುದು ಸತ್ಯ.
ಇದನ್ನೂ ಓದಿ: SIP ಮ್ಯೂಚುವಲ್ ಫಂಡ್ ಗೆ ಇನ್ವೆಸ್ಟ್ ಮಾಡುವ ಮುನ್ನ ಈ ವಿಷಯಗಳ ಬಗ್ಗೆ ತಿಳಿದುಕೊಳ್ಳಿ
ಇದನ್ನೂ ಓದಿ: ನಿಮ್ಮ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಏಕೈಕ ಕಾರು ಎಂದರೆ ಅದುವೇ ಟಾಟಾ ಪಂಚ್, ಇದರ ಬಿಡುಗಡೆ ಯಾವಾಗ?