ನಿರುದ್ಯೋಗಿ ಯುವಕ ಯುವತಿಯರಿಗೆ ತುಮಕೂರು ಜಿಲ್ಲಾ ನ್ಯಾಯಾಲಯವು ಬರೋಬ್ಬರಿ 60 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು. ಆಸಕ್ತ ಅಭ್ಯರ್ಥಿಗಳು online ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
ಹುದ್ದೆಯ ಮಾಹಿತಿ :- ತುಮಕೂರು ಜಿಲ್ಲಾ ಕೇಂದ್ರದಲ್ಲಿ ಸ್ಟೆನೋಗ್ರಾಫರ್, ಗುಮಾಸ್ತ, ಟೈಪಿಸ್ಟ್ ಹಾಗೂ ಕಾಪಿಯಿಸ್ಟ್ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಸ್ಟೆನೋಗ್ರಾಫರ್ ಹಾಗೂ ಟೈಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಸಂಬಂಧಿತ ಡಿಪ್ಲೊಮಾದೊಂದಿಗೆ 12 ನೇ ತರಗತಿಯನ್ನು ಪೂರ್ಣಗಿಂಡಿರಬೇಕು ಹಾಗೂ ಟೈಪಿಸ್ಟ್ ಹಾಗೂ ಕಾಪಿಯಿಸ್ಟ್ ಹುದ್ದೆಗೆ ಸೆಕೆಂಡ್ ಪಿಯುಸಿ ಪೂರ್ಣಗೊಂಡಿರಬೇಕು ಹಾಗೂ ಪ್ಯೂನ್ ಹುದ್ದೆಗೆ ಕನಿಷ್ಠ 10 ನೇ ತರಗತಿ ಪಾಸ್ ಆಗಿರಬೇಕು.
ಖಾಲಿ ಇರುವ ಹುದ್ದೆಗಳು :-
- ಸ್ಟೆನೋಗ್ರಾಫರ್ ಗ್ರೇಡ್-III – 10.
- ಟೈಪಿಸ್ಟ್ಗೆ- 5.
- ಟೈಪಿಸ್ಟ್-ಕಾಪಿಯಿಸ್ಟ್ ಗೆ -5.
- ಪ್ಯೂನ್ ಹುದ್ದೆಗಳಿಗೆ -40.
ವಯಸ್ಸಿನ ಮಿತಿ :- ಇಲಾಖೆಯ ಅಧಿಸೂಚನೆಯ ಪ್ರಕಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 35 ವರ್ಷ. ಸರ್ಕಾರದ ಮೀಸಲಾತಿ ನಿಯಮದ ಅನ್ವಯ SC ಅಥವಾ ST ಹಾಗೂ Cat-I ಅಭ್ಯರ್ಥಿಗಳಿಗೆ 5 ವರ್ಷಗಳ ಹಾಗೂ Cat-2A ಅಥವಾ 2B ಅಥವಾ 3A ಹಾಗೂ 3B ಅಭ್ಯರ್ಥಿಗಳಿಗೆ 3 ವರ್ಷಗಳ ವಯಸ್ಸಿನ ಸಡಿಲಿಕೆ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಶುಲ್ಕ :- SC ಹಾಗೂ ST ಹಾಗೂ Cat-I ಹಾಗೂ PH ಅಭ್ಯರ್ಥಿಗಳಿಗೆ ಶುಲ್ಕದ ವಿನಾಯಿತಿ ಇದೆ ಹಾಗೂ ಜನರಲ್ ಅಥವಾ ಕ್ಯಾಟ್-2ಎ ಅಥವಾ 2ಬಿ ಅಥವಾ 3ಎ ಮತ್ತು 3ಬಿ ಅಭ್ಯರ್ಥಿಗಳು 200 ಶುಲ್ಕವನ್ನು ಪಾವತಿಸಬೇಕು. ಶುಲ್ಕ ಪಾವತಿಸಲು ಕೊನೆಯ ದಿನಾಂಕ ಏಪ್ರಿಲ್ 11, 2024 ಆಗಿದೆ.
ಸಂಬಳದ ವಿವರ :- ಹುದ್ದೆಗೆ ಆಯ್ಕೆ ಆದ ಸ್ಟೆನೋಗ್ರಾಫರ್ ಗ್ರೇಡ್-III ಅಭ್ಯರ್ಥಿಯ ತಿಂಗಳ ವೇತನ 27,650 ರೂಪಾಯಿಯಿಂದ 52,650 ರೂಪಾಯಿ. ಟೈಪಿಸ್ಟ್ ಹಾಗೂ ಕಾಪಿಯಿಸ್ಟ್ ನ ತಿಂಗಳ ವೇತನ 21,400 ರೂಪಾಯಿಯಿಂದ 42,000 ರೂಪಾಯಿ. ಹಾಗೂ ಫ್ಯೂನ್ ಗೆ 18,000 ರೂಪಾಯಿಯಿಂದ 28,950 ರೂಪಾಯಿ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ನರೇಗಾ ಕಾರ್ಮಿಕರ ದಿನಗೂಲಿ ಹೆಚ್ಚಳ, ಯಾವ ರಾಜ್ಯದಲ್ಲಿ ಎಷ್ಟು ವೇತನ?
ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳು :-
- ನಿಮ್ಮ ಆಧಾರ್ ಕಾರ್ಡ್.
- ವಿಳಾಸದ ಪುರಾವೆ.
- ಶೈಕ್ಷಣಿಕ ಪ್ರಮಾಣಪತ್ರಗಳು.
- ಜಾತಿ ಪ್ರಮಾಣಪತ್ರ.
- ಪಾಸ್ಪೋರ್ಟ್ ಸೈಜ್ ಫೋಟೋ.
ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :- ಏಪ್ರಿಲ್ 10 2024.
ಅರ್ಜಿ ಸಲ್ಲಿಸುವ ವಿಧಾನ :- ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ ಭೇಟಿ ನೀಡಿ. “ಸ್ಟೆನೋಗ್ರಾಫರ್ ಗ್ರೇಡ್-III, ಟೈಪಿಸ್ಟ್, ಟೈಪಿಸ್ಟ್-ಕಾಪಿಸ್ಟ್ ಮತ್ತು ಪ್ಯೂನ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ” ಎಂಬ ಆಪ್ಷನ್ ಕ್ಲಿಕ್ ಮಾಡಿ ಅಧಿಸೂಚನೆಯನ್ನು ಪೂರ್ಣವಾಗಿ ತಿಳಿದುಕೊಳ್ಳಿ ನಂತರ ವೆಬ್ಸೈಟ್ ನಲ್ಲಿ ಆನ್ಲೈನ್ ನೇಮಕಾತಿ ಎಂಬ ಆಪ್ಷನ್ ಕ್ಲಿಕ್ ಮಾಡಿ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರಿ ಎಂದು ಯೋಚಿಸಿ ಹುದ್ದೆಯ ಆನ್ಲೈನ್ ಅರ್ಜಿ ಲಿಂಕ್ ಓಪನ್ ಮಾಡಿ ನಿಮ್ಮ ಹೆಸರು ವಿಳಾಸ ನಿಮ್ಮ ವಿದ್ಯಾರ್ಹತೆ, ನಿಮ್ಮ ಭಾವಚಿತ್ರ ಹಾಗೂ ಎಲ್ಲಾ ದಾಖಲೆಯ ಪುರಾವೆಗಳನ್ನು ಭರ್ತಿ ಮಾಡಿ. ಶುಲ್ಕದ ಹಣ ಪಾವತಿಸಿ ಅರ್ಜಿ ಸಲ್ಲಿಸಿ.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: TCS ನಲ್ಲಿ ಫ್ರೆಶರ್ಗಳ ನೇಮಕಾತಿಗೆ ಏಪ್ರಿಲ್ 5 ಕೊನೆಯ ದಿನ