ಭಾರತೀಯ ರೈಲ್ವೆ ಇಲಾಖೆಯು ದೇಶದಾದ್ಯಂತ ತನ್ನ ವಿಸ್ತೀರ್ಣವನ್ನು ಹೊಂದಿದೆ. ಇದರ ಜೊತೆಗೆ ರೈಲ್ವೆ ಇಲಾಖೆಯು ಸೆಂಟ್ರಲ್ ಗೌರ್ನ್ನೆಂಟ್ ಅಡಿಯಲ್ಲಿ ಇರುವುದರಿಂದ ನಮ್ಮ ಕೆಲಸಕ್ಕೆ ಭಧ್ರತೆಯ ಜೊತೆಗೆ ಸಂಬಳವೂ ಹೆಚ್ಚು. ಈಗ ಬರೋಬ್ಬರಿ 9,000 ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ರೈಲ್ವೆ ಇಲಾಖೆಯು ಮುಂದಾಗಿದ್ದು ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಹುದ್ದೆಯ ಬಗ್ಗೆ ಪೂರ್ಣ ಬೇಕಾದಲ್ಲಿ ಈ ಲೇಖನ ನೋಡಿ.
ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ ವಿವರ :- ರೈಲ್ವೆ ಇಲಾಖೆಯು 1,000 ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್ ಮತ್ತು ಟೆಕ್ನಿಷಿಯನ್ ಗ್ರೇಡ್ 3 ಸಿಗ್ನಲ್ ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್ ಹುದ್ದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಟ ವಯೋಮಿತಿ 18 ವರ್ಷ ಹಾಗೂ ಗರಿಷ್ಠ 36 ವರ್ಷ ಹಾಗೂ ಟೆಕ್ನಿಷಿಯನ್ ಗ್ರೇಡ್ 3 ಸಿಗ್ನಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಟ ವಯೋಮಿತಿ 18 ವರ್ಷ ಹಾಗೂ ಗರಿಷ್ಠ 33 ವರ್ಷ ವಯಸ್ಸಿನ ಮಿತಿ ನಿಗದಿ ಮಾಡಲಾಗಿದೆ. ಸರ್ಕಾರದ ನಿಯಮಗಳ ಪ್ರಕಾರ ವಯಸ್ಸಿನ ಮೀಸಲಾತಿ ಇದೆ. ಹುದ್ದೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 8 ಕೊನೆಯ ದಿನ ಆಗಿದೆ.
ಅರ್ಜಿ ಶುಲ್ಕದ ವಿವರ:-
ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ sc, st, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳು, ಅಂಗವಿಕಲ ಅಭ್ಯರ್ಥಿ ಹಾಗೂ ತೃತೀಯ ಲಿಂಗಿಗಳು ಮತ್ತು ಅಲ್ಪಸಂಖ್ಯಾತರು ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 250 ರೂಪಾಯಿ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು. ಹಾಗೂ ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 500 ರೂಪಾಯಿ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸಂಬಳದ ವಿವರಗಳು :- ಹುದ್ದೆಯ ತಿಂಗಳ ವೇತನ 19,900 ರಿಂದ 63,200 ರೂಪಾಯಿ, ಸಂಬಳವೂ ಗ್ರೇಡ್ ನ ಆಧಾರದ ಮೇಲೆ ನಿಗದಿ ಮಾಡಲಾಗುತ್ತದೆ.
ಇದನ್ನೂ ಓದಿ: ಈ ಕಾರ್ಡ್ ಇದ್ರೆ ಸಾಕು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಉಚಿತ ಗ್ಯಾಸ್ ಸಿಲೆಂಡರ್ ಸಿಗಲಿದೆ.
ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ :-
ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಇಲ್ಲಿ ಕ್ಲಿಕ್ ಮಾಡಿ ವೆಬ್ಸೈಟ್ ಗೆ ಭೇಟಿನೀಡಿ, ಆನ್ಲೈನ್ ಲಿಂಕ್ ಓಪನ್ ಮಾಡಿ. ನೀವು ಮೊದಲ ಬಾರಿಗೆ ಈ ಸೈಟ್ ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ಮೊದಲು ನಿಮ್ಮ ಮೇಲ್ id ಮತ್ತು password ನಮೂದಿಸಿ ಲಾಗ್ ಇನ್ ಆಗಿ. ನಂತರ ಆನ್ಲೈನ್ ಅಪ್ಲಿಕೇಶನ್ ನಲ್ಲಿ ನಿಮ್ಮ ಹೆಸರು, ನಿಮ್ಮ ವಿಳಾಸ, ನಿಮ್ಮ ಲಿಂಗ, ನಿಮ್ಮ ಹುಟ್ಟಿದ ದಿನಾಂಕ, ನಿಮ್ಮ ವಿದ್ಯಾರ್ಹತೆ, ನಿಮಗೆ ಕೆಲಸದ ಅನುಭವ ಇದ್ದರೆ, ನಿಮ್ಮ ಜಾತಿ ಆದಾಯ ಪ್ರಮಾಣ ಮಾತ್ರ ಇದ್ದಲ್ಲಿ, ಹಾಗೂ ನೀವು ಅಂಗವಿಕಲ ಆಗಿದ್ದರೆ ಮಾಹಿತಿ , ಹೀಗೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. ನಂತರ ನಿಮ್ಮ ಫೋಟೋ ಮತ್ತು ಸಹಿ ಯನ್ನೂ ಸ್ಕ್ಯಾನ್ ಮಾಡಿ ಹಾಕಬೇಕು. ನಂತರ ಆನ್ಲೈನ್ ಮೂಲಕ ಅಪ್ಲಿಕೇಶನ್ ಫೀಸ್ ತುಂಬಬೇಕು. ಕೊನೆಯದಾಗಿ ನೀವು ಭರ್ತಿ ಮಾಡಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ಇವೆಯೇ ಎಂದು ಪರಿಶೀಲಿಸಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: 500 ರೂಪಾಯಿಯನ್ನು ಹೂಡಿಕೆ ಮಾಡಿ 1 ಲಕ್ಷ ರಿಟರ್ನ್ ಅನ್ನು ಪಡೆಯಿರಿ, ಹೇಗೆ ಪಡೆಯುವುದು? ಇಲ್ಲದೆ ಸಂಪೂರ್ಣ ಮಾಹಿತಿ