One Vehicle One FASTag: ಈಗಾಗಲೇ ಹೊಸ ಆರ್ಥಿಕ ವರ್ಷ ಆರಂಭವಾಗಿದೆ ಅದರ ಜೊತೆಗೆ ಹಲವಾರು ನಿಯಮಗಳು ಬದಲಾವಣೆ ಆಗಲಿದೆ. ಈಗಾಗಲೇ ಬ್ಯಾಂಕ್ ನ ಕೆಲವು ನಿಯಮಗಳು ಹಾಗೂ ಪಿಎಫ್ ನಿಯಮಗಳು ಬದಲಾವಣೆ ಆಗಿವೆ. ಅದರ ಜೊತೆ ಜೊತೆಗೆ ಏಪ್ರಿಲ್ ಒಂದರಿಂದ ಫಾಸ್ಟ್ ಟ್ಯಾಗ್ ನಿಯಮಗಳು ಸಹ ಬದಲಾವಣೆ ಆಗಲಿವೆ. ಹಾಗಾದರೆ ಬದಲಾವಣೆ ಆಗಿರುವ ನಿಯಮಗಳ ಬಗ್ಗೆ ತಿಳಿಯೋಣ.
ಫಾಸ್ಟ್ ಟ್ಯಾಗ್ ನಿಯಮಗಳು :- ಈಗಾಗಲೇ ಹೇಳಿರುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವು ಇನ್ನೂ ಮುಂದೆ ಒಂದು ವಾಹನದಲ್ಲಿ ಒಂದಕ್ಕಿಂತ ಹೆಚ್ಚು ಫಾಸ್ಟ್ಟ್ಯಾಗ್ ಅಳವಡಿಕೆ ಮಾಡುವಂತೆ ಇಲ್ಲ ಎಂಬ ನಿಯಮವನ್ನು ಜಾರಿಗೊಳಿಸಿದೆ. ಜೊತೆಗೆ ಒಂದೇ ಫಾಸ್ಟ್ಟ್ಯಾಗ್ ಒಂದಕ್ಕಿಂತ ಹೆಚ್ಚಿನ ವಾಹನಗಳಿಗೆ ಬಳಸುವುದನ್ನು ಸಹ ನಿಷೇಧ ಮಾಡಲಾಗಿದೆ.
ಈ ನಿಯಮದ ಪ್ರಮುಖ ಕಾರಣ :- ಟೋಲ್ ಗೇಟ್ ಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಿ ತ್ವರಿತ ಚಲನೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರಾಷ್ಟ್ರೀಯ ಹೆದ್ದಾರಿ (NHAI) ‘ಒಂದು ವಾಹನ, ಒಂದು ಫಾಸ್ಟ್ಟ್ಯಾಗ್’ ನೀತಿಯನ್ನು ಜಾರಿಗೆ ತಂದಿದೆ. ಈ ಉಪಕ್ರಮವು ಟೋಲ್ ಸಂಗ್ರಹ ವ್ಯವಸ್ಥೆಯ ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಫಾಸ್ಟ್ ಟ್ಯಾಗ್ ಎಂದರೇನು?
ಫಾಸ್ಟ್ ಟ್ಯಾಗ್ ಎಂಬುದು ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯ ಆಗಿದ್ದು ಈ ಟ್ಯಾಗ್ ಅನ್ನು ಕಾರಿನ ಮುಂದಿನ ಗಾಜಿಗೆ ಅಂಟಿಸಲಾಗುತ್ತದೆ. ಇದರಿಂದ ಟೋಲ್ ಶುಲ್ಕವನ್ನು ನಗದು ರಹಿತವಾಗಿ ಹಾಗೂ ತ್ವರಿತವಾಗಿ ಟೋಲ್ ಹಣವನ್ನು ನಿಮಿಷಗಳ ಒಳಗೆ ಪಾವತಿ ಮಾಡಲು ಶಯನಗಳಿದೆ. ಟೋಲ್ ಗೇಟ್ ನಲ್ಲಿ ಹೆಚ್ಚಿನ ವಾಹನ ದಟ್ಟಣೆಯನ್ನು ತಡೆಯುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕೇಂದ್ರ ಸರಕಾರವು ಪರಿಚಯಿಸಿದೆ. ಇದು ಡಿಜಿಟಲ್ ವ್ಯವಸ್ಥೆಗೆ ಇನ್ನೊಂದು ಮೈಲುಗಲ್ಲು ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
FASTag ಯಾವಾಗ ಜಾರಿ ಆಯಿತು?: ಈ ಫಾಸ್ಟ್ ಟ್ಯಾಗ್ ನಿಯಮವು 2019 ಡಿಸೆಂಬರ್ 01 ರಂದು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿತು. ಈಗಾಗಲೇ ದೇಶದ ತುಂಬಾ ಈ ಯೋಜನೆಯು ಪ್ರಚಲಿತದಲ್ಲಿ ಇದೆ. ಆದರೆ ಈ ಯೋಜನೆಗೆ ಟ್ಯಾಗ್ ಮಾಡಲಾಗಿರುವ ನಿಮ್ಮ ಖಾತೆಯಲ್ಲಿ ಹೆಚ್ಚಿನ ಹಣ ಇರಬೇಕು.
ಫಾಸ್ಟ್ ಟ್ಯಾಗ್ ಪಡೆಯುವುದು ಹೇಗೆ?: NHAI ಫಾಸ್ಟ್ ಟ್ಯಾಗ್ ನೀಡಲು ದೇಶದ 22 ಬ್ಯಾಂಕ್ ಗಳಿಗೆ ಅನುಮತಿ ನೀಡಿದೆ. ಜೊತೆಗೆ NHAI ಶಾಖೆಗಳಲ್ಲಿ ಹಾಗೂ NHAI ಅಧಿಕೃತ ವೆಬ್ಸೈಟ್ ನಲ್ಲಿ ಪಡೆಯಲು ಸಾಧ್ಯವಿದೆ. ಹಾಗೂ ಬ್ಯಾಂಕ್ ಗಳ ವೆಬ್ಸೈಟ್ ನಲ್ಲಿ ಹಾಗೂ ಅಮೆಜಾನ್ ನಂತಹ ಹಲವಾರು ಡಿಜಿಟಲ್ ಪ್ಲಾಟ್ಫಾರ್ಮ್ಗಳು ಫಾಸ್ಟ್ ಟ್ಯಾಗ್ ಕಾರ್ಡ್ಗಳನ್ನು ಆನ್ಲೈನ್ನಲ್ಲಿ ಒದಗಿಸುತ್ತವೆ.
FASTag ಪಡೆಯಲು ನೀಡಬೇಕಾದ ದಾಖಲೆಗಳು :-
ಫಾಸ್ಟ್ ಟ್ಯಾಗ್ ಪಡೆಯಬೇಕು ಎಂದಾದರೆ ನಿಮ್ಮ ವಿಳಾಸದ ದಾಖಲೆ, ನಿಮ್ಮ ಗುರುತಿನ ದಾಖಲೆ, ನಿಮ್ಮ passport size photo, ಹಾಗು ನಿಮ್ಮ ವಾಹನದ ನೋಂದಣಿ ಪ್ರಮಾಣಪತ್ರವನ್ನು (RC) ನೀಡಬೇಕು.
ಫಾಸ್ಟ್ ಟ್ಯಾಗ್ ಉಪಯೋಗ ಏನು?
- ಟ್ರಾಫಿಕ್ ಸಮಸ್ಯೆಗೆ ಇದು ಉತ್ತಮ ಉಪಕ್ರಮ ಆಗಿದೆ.
- ನಿಮ್ಮ ಹಾಗೂ ಇತರ ವಾಹನ ಸವಾರರ ಸಮಯ ಉಳಿತಾಯ ಆಗಲಿದೆ.
- ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಿದಂತೆ ಆಗುತ್ತದೆ.
- ಚಿಲ್ಲರೆ ಸಮಸ್ಯೆ ತಪ್ಪುತ್ತದೆ. ಮತ್ತು ನಿಮ್ಮ ಖಾತೆಯಿಂದ ಕಡಿತವಾದ ಹಣದ ಮಾಹಿತಿ ನಿಮಗೆ ನಿಖರವಾಗಿ ಸಿಗುತ್ತದೆ.
ಇದನ್ನೂ ಓದಿ: ಏಪ್ರಿಲ್ ಹತ್ತಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಬರುವ ಸಾಧ್ಯತೆ?
ಇದನ್ನೂ ಓದಿ: ಅತೀ ಕಡಿಮೆ ಬೆಲೆಯಲ್ಲಿ OnePlus Nord CE 4 5G, ಸಾಮಾನ್ಯ ವರ್ಗದವರೂ ಖರೀದಿಸಬಹುದು!