ಹೆಣ್ಣು ಸಮಾಜದ ಕಣ್ಣು. ಹೆಣ್ಣು ಮಕ್ಕಳಿಗೆ ಬಂದು ಮಕ್ಕಳಿಗೆ ಸಿಗುವಂತೆ ಆಸ್ತಿಯಲ್ಲಿ ಸಮಪಾಲು ಸಿಗಬೇಕು ಎಂಬ ನಿಯಮವೂ ಇದೆ. ಪ್ರಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಸಮನಾದ ಹಕ್ಕು ಇರುವುದು ಎಲ್ಲರಿಗೂ ತಿಳಿದಿದೆ ಆದರೆ ತಂದೆಯ ಸ್ವಂತ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಪಾಲು ಏಷ್ಟು ಎಂಬ ಪೂರ್ಣ ವಿವರಗಳು ಇಲ್ಲಿವೆ.
ಹೆಣ್ಣು ಮಕ್ಕಳ ಆಸ್ತಿಯ ಹಕ್ಕು ನಿಯಮವೇನೂ?: ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯಿದೆ 2005 ರ ಪ್ರಕಾರವಾಗಿ ತಂದೆಯ ಸ್ವಂತ ಶ್ರಮದ ಆಸ್ತಿಗಳು ಮಗನಿಗೆ ಸಿಗುವಂತೆ ಸಮನಾಗಿ ಹೆಣ್ಣು ಮಕ್ಕಳಿಗೆ ಸಿಗಬೇಕು ಎಂಬ ನಿಯಮ ಇದೆ. ಒಂದು ವೇಳೆ ಮಗಳು ವಿವಾಹ ಆಗಿದ್ದರೂ ಅಥವಾ ವಿಚ್ಛೇದಿತಳಾಗಿದ್ದರೂ ಹಾಗೂ ಮದುವೆ ಆಗದೆ ಇದ್ದರೂ ಸಹ ಅವಳಿಗೆ ಮಗನಿಗೆ ಸಿಗುವಂತೆ ಮಗಳಿಗೆ ಸಿಗುತ್ತವೆ. ಮಗಳು ಸಹ ಸಮನದ ಹಕ್ಕುದಾರಳು ಎಂಬ ನಿಯಮ ಇದೆ. ಹೆಣ್ಣು ಮಕ್ಕಳ ಅಣ್ಣ ಅಥವಾ ತಮ್ಮ ಯಾರೇ ಮೋಸ ಮಾಡಿ ಆಸ್ತಿಯ ಹಕ್ಕನ್ನು ಕಿತ್ತುಕೊಳ್ಳವ ಪ್ರಯತ್ನ ಮಾಡಿದರೆ ಕೋರ್ಟ್ ಗೆ ಹೋಗಿ ನಿಮ್ಮ ಹಕ್ಕನ್ನು ನೀವು ಪಡೆಯಲು ಸಾಧ್ಯವಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿಲ್ ಪ್ರಕಾರ ಆಸ್ತಿಯ ಹಕ್ಕು ಹೆಣ್ಣು ಮಕ್ಕಳಿಗೆ ಸಿಗುತ್ತದೆಯೇ?
ತಂದೆ ಸಾಯುವ ಮೊದಲು ತನ್ನ ಸ್ವಯಾರ್ಜಿತ ಆಸ್ತಿಗಳನ್ನು ಮಗನಿಗೆ ಅಥವಾ ಬೇರೆ ವ್ಯಕ್ತಿಗೆ ಅಥವಾ ಯಾವುದೇ ಸಂಸ್ಥೆಗೆ ಆಸ್ತಿ ಯನ್ನು ಹಸ್ತಾಂತರ ಮಾಡುವಂತೆ ವಿಲ್ ಬರೆದಿದ್ದಾರೆ ಆಗ ನೀವು ಹಕ್ಕು ಪಡೆಯಲು ಸಾಧ್ಯವೇ ಎಂದು ಯೋಚಿಸಬಹುದು. ಕಾಯಿದೆಯ ಪ್ರಕಾರ ಯಾವುದೇ ವ್ಯಕ್ತಿ ಪಿತ್ರಾರ್ಜಿತ ಆಸ್ತಿ ಹೊರತು ಪಡಿಸಿ ತಾನು ಸಂಪಾದಿಸಿದ ಆಸ್ತಿಯನ್ನು ತನಗೆ ಇಷ್ಟ ಬಂದವರ ಹೆಸರಿನಲ್ಲಿ ವಿಲ್ ಬರೆಯುವ ಅಥವಾ ಹಸ್ತಾಂತರಿಸುವ ಹಕ್ಕು ಹೊಂದಿರುತ್ತಾನೆ. ವಿಲ್ ಬರೆದು ವ್ಯಕ್ತಿ ಸತ್ತರೆ ವಿಲ್ ಯಾರ ಹೆಸರಿಗೆ ಬರೆದು ಇರುತ್ತಾರೋ ಅವರಿಗೆ ಅದು ಸಿಗುತ್ತದೆ. ನೀವು ನಿಮ್ಮ ಹಕ್ಕಿನ ಬಗ್ಗೆ ಕೋರ್ಟ್ ನಲ್ಲಿ ನೀವು ಧಾವೆ ಹಾಕಿದರು ನಿಮಗೆ ಯಾವುದೇ ಆಸ್ತಿಯೂ ಸಿಗುವುದಿಲ್ಲ. ಅಕಸ್ಮಾತ್ ವಿಲ್ ಬರೆಯದೆ ತಂದೆ ತೀರಿಕೊಂಡರು ಎಂದಾದರೆ ಆಗ ಎಲ್ಲಾ ಮಕ್ಕಳಿಗೆ ಸಮನಾದ ಹಕ್ಕುಗಳು ಸಿಗುತ್ತವೆ.
ಆದರೆ ತಂದೆಯ ಮರಣದ ಒಳಗೆ ಯಾವುದೇ ಹಕ್ಕು ಗಳು ಮಕ್ಕಳಿಗೆ ಸಿಗುವುದಿಲ್ಲ. ನೀವು ತಂದೆ ಜೀವಂತ ಆಗಿರುವಾಗ ಯಾವುದೇ ಹಕ್ಕು ಬೇಕು ಎಂದು ಕೋರ್ಟ್ ಗೆ ಹೋಗುವಂತೆ ಆಗುವುದು ಇಲ್ಲ. ಆದರೆ ನೀವು ನಿಮಗೆ ಆಸ್ತಿ ಬೇಡ ಎಂದು ಒಮ್ಮೆ ಸಹಿ ಹಾಕಿದರೆ ನಿಮಗೆ ಆಸ್ತಿ ಯಲ್ಲಿ ಯಾವುದೇ ಹಕ್ಕುಗಳು ಸಿಗುವುದಿಲ್ಲ. ನೀವು ನಿಮ್ಮ ಆಸ್ತಿಯ ಹಕ್ಕನ್ನು ಪಡೆಯುವ ಮುನ್ನ ನೀವು ವಕೀಲ ರನ್ನು ಭೇಟಿ ಮಾಡಿ ಕಾಯಿದೆಯ ವಿವರವನ್ನು ಪೂರ್ಣ ಅರಿತು ನಂತರ ದಲ್ಲಿ ಕೋರ್ಟ್ ಗೆ ತೆರಳಿ ವಕೀಲರ ಮೂಲಕ ವಾದ ಮಾಡಿ ನಿಮ್ಮ ಆಸ್ತಿಯ ಹಕ್ಕನ್ನು ಪಡೆಯಬಹುದು.
ಇದನ್ನೂ ಓದಿ: ರೈಲಿನಲ್ಲಿ ಮೊದಲೇ ಟಿಕೆಟ್ ಕಾಯ್ದಿರಿಸಿದ್ದರೂ ನೆಮ್ಮದಿಯ ಪ್ರಯಾಣ ಅಸಾಧ್ಯ, ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು!
ಇದನ್ನೂ ಓದಿ: ಪಿಎಂ ಮುದ್ರಾ ಯೋಜನೆಯಲ್ಲಿ ಯಾವುದೇ ಪತ್ರವನ್ನು ಅಡ ಇಡದೆಯೆ ಸಿಗುತ್ತದೆ 10 ಲಕ್ಷ ರೂಪಾಯಿ ಸಾಲ