ಯಾವುದೇ ಹೂಡಿಕೆಯ ಸ್ಕೀಮ್ ನಲ್ಲಿ ಹೂಡಿಕೆ ಮಾಡುವ ಮುನ್ನ ನನಗೆ ಏನು ಲಾಭ ಇದೆ ಎಂದು ತಿಳಿಯುವುದು ಬಹಳ ಮುಖ್ಯವಾಗಿದೆ. ಹೂಡಿಕೆಯ ಲಾಭಗಳು ಏನು ಎಂಬುದರ ವಿವರಗಳನ್ನು ಪಡೆದು ಹಣವನ್ನು ಹೂಡಿಕೆ ಮಾಡಬೇಕು. ಈಗ ಪೋಸ್ಟ್ office ನಲ್ಲಿ 5 ವರ್ಷ ಎಫ್ ಡಿ ಯೋಜೇನೆಯಲ್ಲಿಂಹುದಿಕೆ ಮಾಡಿದರೆ ತೆರಿಗೆ ಕಟ್ಟಬೇಕು ಎಂಬ ನಿಯಮ ಇಲ್ಲ. ಅದರಂತೆಯೇ ಈಗ ಪೋಸ್ಟ್ ಆಫೀಸ್ ತನ್ನ ಗ್ರಾಹಕರಿಗೆ ಇನ್ನೊಂದು ಉತ್ತಮ ಹೂಡಿಕೆ ಯೋಜನೆ ಒಂದನ್ನು ಬಿಡುಗಡೆ ಮಾಡಿದೆ. ಪೋಸ್ಟ್ ಆಫೀಸ್ ನ ಹೊಸ ಯೋಜನೆಯ ಪೂರ್ಣ ಮಾಹಿತಿಗಳನ್ನು ತಿಳಿಯಿರಿ.
ಪೋಸ್ಟ್ ಆಫೀಸ್ ನ ಹೊಸ ಸ್ಕೀಮ್ ಬಗ್ಗೆ ಮಾಹಿತಿ :- ಭಾರತೀಯ ಅಂಚೆ ಇಲಾಖೆಯು ಹೊಸದಾಗಿ ಪೋಸ್ಟ್ ಆಫೀಸ್ನ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನೂ ಆರಂಭ ಮಾಡಿದೆ. ಈ ಯೋಜನೆಯು 5ವರ್ಷದ ತೆರಿಗೆ ಮುಕ್ತ FD ಯೋಜನೆಗಿಂತ ಹೆಚ್ಚಿನ ಲಾಭಗಳನ್ನು ಹೊಂದಿದೆ. ಈ ಯೋಜನೆಯು ವಿಶೇಷವಾಗಿ ಸಣ್ಣ ಮತ್ತು ಮಧ್ಯಮ-ಆದಾಯ ಹೂಡಿಕೆದಾರರಿಗೆ, ಭದ್ರ ಮತ್ತು ಲಾಭದಾಯಕ ಹೂಡಿಕೆ ಅವಕಾಶವನ್ನು ನೀಡುತ್ತದೆ.
NSC ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು:-
ಅಂಚೆ ಕಛೇರಿಯ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡಲು ಬಯಸುವ ವ್ಯಕ್ತಿಗಳಿಗೆ ಕಡ್ಡಾಯವಾಗಿ ಭಾರತದ ಪ್ರಜೆ ಆಗಿರಬೇಕು. ಈ ಯೋಜನೆಯಲ್ಲಿ ತಂದೆ ತಾಯಿ ತಮ್ಮ ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಲು ಸಾಧ್ಯವಿದೆ. ಹಾಗೂ 10 ವರ್ಷಕ್ಕಿಂತ ಮೇಲ್ಪಟ್ಟ ಮಗು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಎರಡರಿಂದ ಮೂರು ಜನರು ಜಂಟಿ ಖಾತೆ ತೆರೆಯಲು ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಡ್ಡಿದರದ ಬಗ್ಗೆ ಮಾಹಿತಿ :- ಈ ಯೋಜನೆಯಲ್ಲಿ ಹೂಡಿಕೆ ಮಾಡುವವರು ಒಂದು ವಿಚಾರ ಗಮನದಲ್ಲಿಟ್ಟುಕೊಳ್ಳಬೇಕು. ಬೇರೆ ಯೋಜನೆಗಳಂತೆ ಬಡ್ಡಿದರಗಳು ಹೆಚ್ಚಾದಾಗ ಆ ಸಮಯದಲ್ಲಿ ನಿಮ್ಮ ಹೂಡಿಕೆ ಹಣದ ಮೇಲೆ ಹೂಡಿಕೆ ಮಾಡುವಾಗ ಏಷ್ಟು ಬಡ್ಡಿದರ ನಿಗದಿ ಆಗಿತ್ತು ಅಷ್ಟೇ ಬಡ್ಡಿ ಹಣ ಸಿಗುತ್ತದೆ.
ಹೂಡಿಕೆಯ ಮೊತ್ತ ಏಷ್ಟು :- ಈ ಯೋಜನೆಯ ಅಡಿಯಲ್ಲಿ ಕನಿಷ್ಟ 1,000 ರೂಪಾಯಿ ಹಣ ಹೂಡಿಕೆ ಮಾಡಬಹುದು. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಲು ಗರಿಷ್ಠ ಮಿತಿ ಇಲ್ಲ. ನಿಮ್ಮ ಶಕ್ತಿಯ ಅನುಸಾರ ಏಷ್ಟು ಹಣವನ್ನು ಬೇಕಾದರೂ ಹೂಡಿಕೆ ಮಾಡಲು ಸಾಧ್ಯವಿದೆ.
ತೆರಿಗೆ ವಿನಾಯಿತಿ ಬಗ್ಗೆ ಮಾಹಿತಿ :- ಈ ಎನ್ಎಸ್ಸಿ ಯೋಜನೆಯಲ್ಲಿ 1.5 ಲಕ್ಷದವರೆಗೆ ಹಣಕ್ಕೆ ಸೆಕ್ಷನ್ 80 ಸಿ ಅಡಿಯಲ್ಲಿ ವಾರ್ಷಿಕ ತೆರಿಗೆ ವಿನಾಯಿತಿ ಸಿಗುತ್ತದೆ. ಒಮ್ಮೆ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 5 ವರ್ಷಗಳ ಕಾಲ ಠೇವಣಿ ಮೊತ್ತವನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದರೆ ಹೂಡಿಕೆ ಮಾಡಿದ ವ್ಯಕ್ತಿ ನಿಧನ ಆದರೆ ಈ ಖಾತೆಯನ್ನು ಕ್ಲೋಸ್ ಮಾಡಲು ಸಾಧ್ಯವಿದೆ. 5 ವರ್ಷಗಳ ನಂತರ ಹೂಡಿಕೆ ಅವಧಿಯನ್ನು ವಿಸ್ತರಿಸಬೇಕು ಎಂದರೆ ಮತ್ತೆ ಅರ್ಜಿ ಸಲ್ಲಿಸಿ ಹೂಡಿಕೆ ಮಾಡುವ ಸೌಲಭ್ಯ ಇದೆ.
ತೆರಿಗೆ ಮುಕ್ತ FD ಯೋಜನೆಯ ಬಡ್ಡಿದರಗಳು ಹೀಗಿವೆ :-
ಪೋಸ್ಟ್ ಆಫೀಸ್ ನಲ್ಲಿ ಶೇಕಡಾ 7.5% ಬಡ್ಡಿದರ ಸಿಗುತ್ತದೆ. ಸ್ಟೇಟ್ ಬ್ಯಾಂಕ್ ನಲ್ಲಿ ಶೇಕಡಾ 6.5% ಬಡ್ಡಿದರ ಸಿಗುತ್ತದೆ. ಪಂಜಾಬ್ ಬ್ಯಾಂಕ್ ನಲ್ಲಿ ಶೇಕಡಾ 6.5% ಬಡ್ಡಿದರ ಸಿಗುತ್ತದೆ. ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಶೇಕಡಾ 6.5% ಬಡ್ಡಿದರ ಸಿಗುತ್ತದೆ. ಹಾಗೂ HDFC ಬ್ಯಾಂಕ್ ನಲ್ಲಿ ಶೇಕಡಾ 7% ಬಡ್ಡಿದರ ಸಿಗುತ್ತದೆ. ಹಾಗೂ ICICI ನಲ್ಲಿ 7% ಬಡ್ಡಿದರ ಸಿಗುತ್ತದೆ.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನಲ್ಲಿ ಕ್ಲರ್ಕ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಆಸಕ್ತರು ಅರ್ಜಿ ಸಲ್ಲಿಸಿ
ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆ ತಿದ್ದುಪಡಿಯ ಅಧಿಸೂಚನೆ ಹೊರಡಿಸಿದೆ.