Karnataka Rains: ಬಿಸಿಲಿನ ತಾಪಕ್ಕೆ ಬೇಸತ್ತು ಹೋಗಿದ್ದ ಜನರಿಗೆ ಈ ಮಳೆ ಬಂದು ಸ್ವಲ್ಪ ತಂಪನ್ನು ತಂದಿದೆ. ಅದರಲ್ಲೂ ಪ್ರಮುಖವಾಗಿ ಕೋಲಾರ, ಚಿಕ್ಕಬಳ್ಳಾಪುರ, ಮಾಲೂರುಗಳಲ್ಲಿ ದಾಖಲೆ ಮಳೆ ಸುರಿದಿದೆ ಇನ್ನೂ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಸುರಿದ ಕಾರಣ ತಾಪಮಾನ ಸ್ವಲ್ಪ ಕಡಿಮೆಯಾಗಿದೆ. ಇದರಿಂದ ರೈತರಿಗೆ ಸಂತೋಷವಾದರೆ ನಗರ ಪ್ರದೇಶದಲ್ಲಿ ವಾಸಿಸುವ ಜನರು ಈ ಬಿಸಿಲಿನಿಂದ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಆಗಿದ್ದಾರೆ. ಆದರೆ ಈಗ ಅವಮಾನ ಇಲಾಖೆಯು ಕರ್ನಾಟಕದಲ್ಲಿ ಇನ್ನು ಎರಡು ದಿನ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ. ಅದು ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ ನೋಡೋಣ, ಮುಂದೆ ಓದಿ..
ಹೌದು ಮುಂದಿನ ಎರಡು ದಿನ ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ಅವಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದ್ದು ಎಲ್ಲೋ ಅಲರ್ಟ್ ಕೂಡ ಘೋಷಿಸಿದೆ. ಇನ್ನು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗಲಿದೆ ಹಾಗೂ ಗಾಳಿಯು ಸಹ ಹೆಚ್ಚು ಬೀಸಲಿದೆ ಎಂದು ಹೇಳಲಾಗುತ್ತಿದೆ. ಸಿಡಿಲು ಸಹಿತ ಮಳೆ ಆಗಲಿದ್ದು ಆಲಿಕಲ್ಲು ಸಹ ಬೀಳಬಹುದು ಎಂದು ಹೇಳುತ್ತಿದ್ದಾರೆ. ಎಲ್ಲ ಸಾರ್ವಜನಿಕರಿಗೆ ಮತ್ತು ರೈತರಿಗೆ ಅವಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ.
ಯಾವ ಯಾವ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮಳೆ ಆಗಲಿದೆ?
ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆ ಆಗಲಿದ್ದು ರಾಜ್ಯದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ,ಚಿಕ್ಕಮಂಗಳೂರು, ಹಾಸನ, ಬೆಂಗಳೂರು ನಗರ ,ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ಚಾಮರಾಜನಗರ, ಕೊಡಗು, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಬಹಳ ಮಳೆಯಾಗಲಿದೆ ಎಂದು ಅವಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಬಹಳ ಮಳೆಯಾಗುತ್ತಿರುವ ಹಿನ್ನೆಲೆ ಯಲ್ಲಿ ದಕ್ಷಿಣ ಒಳನಾಡಿನ ಕೆಲವು ಕಡೆ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಯಲ್ಲಿ ಉಷ್ಣಾಂಶ ಇಳಿಕೆ ಆಗಿದೆ ಎಂದು ಅವಮಾನ ಇಲಾಖೆಯು ಹೇಳಿದೆ. ಮಳೆ ಆಗುವ ಕಾರಣ ಜನರೆಲ್ಲ ಸುರಕ್ಷಿತವಾಗಿ ಇರಬೇಕಾಗುತ್ತದೆ. ಹಾಗೂ ಮಳೆಯ ಕಾರಣ ಜನರೆಲ್ಲ ಸ್ವಲ್ಪ ದಿನ ಬಿಸಿಲಿನಿಂದ ರಿಲಾಕ್ಸ್ ಪಡೆದು ಮಳೆಯನ್ನು ಆನಂದಿಸಬಹುದಾಗಿದೆ.
ಇದನ್ನೂ ಓದಿ: ಚಿಕ್ಕ ವಯಸ್ಸಿಗೆ ಮರಣ ಹೊಂದಿದ ಕನ್ನಡದ ಕಿರುತೆರೆ ನಟ ನಟಿಯರು!
ಕರ್ನಾಟಕದಲ್ಲಿ ಚುನಾವಣೆ ಪ್ರಚಾರಕ್ಕೆ ಮಳೆ ಅಡ್ಡಿ!
ಹೌದು ನೆನ್ನೆ ಮೋದಿಯವರು ಬಹಳ ದೊಡ್ಡ ಪ್ರಚಾರವನ್ನು ಮಾಡಿದರು. ಮೋದಿಯವರು ಪ್ರಚಾರಕೂ ಬರುವುದಕ್ಕೂ ಕೆಲವು ಸಮಯ ಮುನ್ನ ಅವರು ಪ್ರಚಾರ ಮಾಡುವ ಪ್ರದೇಶದಲ್ಲಿ ಸ್ವಲ್ಪಮಟ್ಟಿಗೆ ಮಳೆಯಾಗಿತ್ತು. ಆದರೂ ಸಹ ಮಳೆಯ ನಡುವೆಯೂ ಜನರು ಪ್ರಚಾರಕ್ಕೆ ಆಗಮಿಸುತ್ತಿದ್ದರು. ಮಳೆಯೂ ಸ್ವಲ್ಪ ಹೊತ್ತಿನವರೆಗೂ ಬಂದು ನಿಂತು ಹೋಯಿತು ಆನಂತರ ಅವರು ಪ್ರಚಾರವನ್ನು ಶುರು ಮಾಡಿದರು ಮತ್ತು ಮುಗಿಸಿದರು. ಇನ್ನೂ ಹಲವು ಕಡೆ ಇದೇ ರೀತಿಯಲ್ಲಿ ಹಲವು ಅಭ್ಯರ್ಥಿಗಳು ಚುನಾವಣೆ ಪ್ರಚಾರವನ್ನು ಮಾಡುತ್ತಿರುವಾಗ ಈ ಮಳೆ ಬಂದು ಚುನಾವಣಾ ಪ್ರಚಾರವನ್ನು ನಿಲ್ಲಿಸಿ ಬಿಟ್ಟಿತ್ತು. ಆಗ ಬಿಸಿಲು ಚುನಾವಣಾ ಪ್ರಚಾರಕ್ಕೆ ಒಂದು ರೀತಿ ಅಡ್ಡಿಯಾಗಿದ್ದರೆ ಈಗ ಮಳೆಯು ಕೂಡ ಚುನಾವಣಾ ಪ್ರಚಾರಕ್ಕೆ ಅಡ್ಡಿಯಾಗುತ್ತಿದೆ ಅಂತಾನೆ ಹೇಳಬಹುದು.
ಕೆಲವು ಪ್ರಮುಖ ಜಿಲ್ಲೆಗಳ ಉಷ್ಣಾಂಶ
- ಬೆಂಗಳೂರಿನಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಮೈಸೂರಿನಲ್ಲಿ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಕಲಬುರಗಿಯಲ್ಲಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 24 ಡಿಗ್ರಿ ಸೆಲ್ಫಿಯಸ್ ಕನಿಷ್ಠ ಉಷ್ಣಾಂಶ.
- ಬೆಳಗಾವಿಯಲ್ಲಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಕೋಲಾರದಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಮಂಗಳೂರಿನಲ್ಲಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 26 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
ಇದನ್ನೂ ಓದಿ: ಛೋಟಾ ಚಾಂಪಿಯನ್ ಶೋ ಗೆ ಟೈಟಲ್ ಹಾಡನ್ನು ಹೇಳಿದ ದಿಯಾ ಹೆಗ್ಡೆ, ಶೋ ಯಾವಾಗಿನಿಂದ ಶುರುವಾಗುತ್ತೆ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram