ಭಾರತೀಯ ಸಂಸ್ಕೃತಿಯಲ್ಲಿ, ಬಂಗಾರವನ್ನು ಲಕ್ಷ್ಮಿ ದೇವಿ ಎಂದು ಪೂಜಿಸುತ್ತಾರೆ. ಲಕ್ಷ್ಮಿ ದೇವಿ ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂಬ ನಂಬಿಕೆ ಇದೆ. ಹೆಣ್ಣುಮಕ್ಕಳ ನೆಚ್ಚಿನ ಆಭರಣ ಅದು ಬಂಗಾರದ ಒಡವೆಗಳು. ಈ ವರ್ಷದ ಯುಗಾದಿ ಹಬ್ಬಕ್ಕೆ ಹೊಸದಾಗಿ ಒಡವೆ ಖರೀದಿಸಬೇಕು ಎಂದು ಅಂದುಕೊಂಡಿದ್ದರೆ ನಿಮಗೆ ದರ ಏರಿಕೆಯ ಬಿಸಿ ತಟ್ಟುತ್ತದೆ.
ಏಷ್ಟು ಗ್ರಾಮ್ ಗೆ ಏಷ್ಟು ದರ ಏರಿಕೆ ಆಗಿದೆ?
ನಿನ್ನೆಯ ಬಂಗಾರದ ದರಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್ ಚಿನ್ನ 1 ಗ್ರಾಮ್ ಗೆ 10 ರೂಪಾಯಿ ಜಾಸ್ತಿ ಆದರೆ 8 ಗ್ರಾಮ್ ಗೆ 80 ರೂಪಾಯಿ ಹಾಗೂ 10 ಗ್ರಾಮ್ ಗೆ 100 ರೂಪಾಯಿ, 100 ಗ್ರಾಮ್ ಗೆ 1000 ರೂಪಾಯಿ ಜಾಸ್ತಿ ಆಗಿದೆ. 24 ಕ್ಯಾರೆಟ್ ಚಿನ್ನ 1 ಗ್ರಾಮ್ ಗೆ 11 ರೂಪಾಯಿ, 8 ಗ್ರಾಮ್ ಗೆ 88 ರೂಪಾಯಿ, 10 ಗ್ರಾಮ್ ಗೆ 110 ರೂಪಾಯಿ ಹಾಗೂ 100 ಗ್ರಾಮ್ ಗೆ 1100 ರೂಪಾಯಿ ದರವು ಹೆಚ್ಚಾಗಿದೆ. 18 ಗ್ರಾಮ್ ಚಿನ್ನ 1 ಗ್ರಾಮ್ ಗೆ 9 ರೂಪಾಯಿ 8 ಗ್ರಾಮ್ ಗೆ 72 ರೂಪಾಯಿ 10 ಗ್ರಾಮ್ ಗೆ 90 ರೂಪಾಯಿ ಹಾಗೂ 100 ಗ್ರಾಮ್ ಗೆ 900 ರೂಪಾಯಿ ಜಾಸ್ತಿ ಆಗಿದೆ.
ಭಾರತದ ವಿವಿಧ ನಗರಗಳ ಬಂಗಾರದ ದರ ಹೀಗಿದೆ:-
- ಬೆಂಗಳೂರು 22 ಕ್ಯಾರೆಟ್ ಚಿನ್ನದ ದರ 65,750 ರೂಪಾಯಿ ಹಾಗೂ 24 ಕ್ಯಾರೆಟ್ ಚಿನ್ನದ ದರ 71,730 ರೂಪಾಯಿ.
- ಹೈದ್ರಾಬಾದ್ 22 ಕ್ಯಾರೆಟ್ ಚಿನ್ನದ ದರ 65,750 ರೂ ಹಾಗೂ 24 ಕ್ಯಾರೆಟ್ ಚಿನ್ನದ ದರ 71,730 ರೂ.
- ಪುಣೆ 22 ಕ್ಯಾರೆಟ್ ಚಿನ್ನದ ದರ 65,750 ರೂ ಹಾಗೂ 24 ಕ್ಯಾರೆಟ್ ಚಿನ್ನದ ದರ 71,730 ರೂ.
- ದೆಹಲಿ 22 ಕ್ಯಾರೆಟ್ ಚಿನ್ನದ ದರ 65,900 ರೂ ಹಾಗೂ 24 ಕ್ಯಾರೆಟ್ ಚಿನ್ನದ ದರ 71,880 ರೂ.
- ಜೈಪುರ 22 ಕ್ಯಾರೆಟ್ ಚಿನ್ನದ ದರ 65,900 ರೂ ಹಾಗೂ 24 ಕ್ಯಾರೆಟ್ ಚಿನ್ನದ ದರ 71,880 ರೂ.
ಬೆಳ್ಳಿಯ ದರ:-
ಚಿನ್ನದ ದರ ಏರಿಕೆಯ ಹಾಗೆ ಬೆಳ್ಳಿಯ ದರವು ಏರಿಕೆ ಆಗಿದ್ದು 10 ಗ್ರಾಂ ಗೆ 7.50 ರೂಪಾಯಿ ಹಾಗೂ ಒಂದು ಕೆ. ಜಿ ಬೆಳ್ಳಿಯ ದರವು 750 ರೂಪಾಯಿ ಏರಿಕೆ ಆಗಿದ್ದು. ಇಂದಿನ ಬೆಳ್ಳಿಯ ದರವು 1 ಕೆ.ಜಿ ಗೆ 83,750 ರೂಪಾಯಿ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಂಗಾರದ ದರ ಏರಿಕೆಯಿಂದ ಜನರಿಗೆ ಉಂಟಾಗುವ ತೊಂದರೆಗಳು:
- ಖರೀದಿ ಶಕ್ತಿಯಲ್ಲಿ ಕುಸಿತ: ಬಂಗಾರದ ಬೆಲೆ ಏರಿದಾಗ ಜನರು ಖರೀದಿಸಲು ಕಡಿಮೆ ಹಣವನ್ನು ಹೊಂದಿರುತ್ತಾರೆ ಆದರೆ ಬಂಗಾರ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತದೆ.
- ಉಳಿತಾಯ ಮತ್ತು ಹೂಡಿಕೆಗಳ ಮೇಲೆ ಪರಿಣಾಮ: ಬಂಗಾರದಲ್ಲಿ ಹೂಡಿಕೆ ಮಾಡುವ ಜನರು ಲಾಭ ಗಳಿಸಬಹುದು, ಆದರೆ ಉಳಿತಾಯ ಮಾಡುವವರು ಮತ್ತು ಇತರ ಹೂಡಿಕೆಯಲ್ಲಿ ಹಣ ಹಾಕುವವರು ನಷ್ಟ ಅನುಭವಿಸಬಹುದು. ಇದು ಭವಿಷ್ಯದ ಯೋಜನೆಗಳಿಗೆ ಹಣಕಾಸು ಒದಗಿಸುವುದನ್ನು ಕಷ್ಟಕರವಾಗಿಸುತ್ತದೆ.
- ಸಾಲದ ಮೇಲೆ ಹೆಚ್ಚಿನ ಬಡ್ಡಿ: ಬಂಗಾರದ ಬೆಲೆ ಏರಿದಾಗ, ಬಡ್ಡಿದರಗಳು ಸಹ ಏರುತ್ತವೆ. ಇದು ಸಾಲಗಳನ್ನು ಮರುಪಾವತಿಸುವುದನ್ನು ಕಷ್ಟಕರವಾಗಿಸುತ್ತದೆ ಮತ್ತು ಜನರ ಮೇಲೆ ಹಣಕಾಸಿನ ಹೊರೆಯನ್ನು ಹೆಚ್ಚಿಸಿದ ಹಾಗೆ ಆಗುತ್ತದೆ.
- ಕಳ್ಳತನದ ಪ್ರಕರಣಗಳಲ್ಲಿ ಏರಿಕೆ: ಬಂಗಾರದ ಬೆಲೆ ಏರಿದಾಗ, ಚಿನ್ನದ ಕಳ್ಳತನ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತದೆ. ಇದು ಜನರಲ್ಲಿ ಭಯ ಮತ್ತು ಅನಿಶ್ಚಿತತೆಯನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: ಎಲ್ಲರಿಗೂ ಕೈಗೆಟುಕುವಂತಹ ಬೆಲೆಯಲ್ಲಿ ಎಥರ್ ಹ್ಯಾಲೊ ಸ್ಮಾರ್ಟ್ ಹೆಲ್ಮೆಟ್ ಬಿಡುಗಡೆ, ಹಾಗಾದರೆ ಇದರ ಬೆಲೆ ಎಷ್ಟು ಗೊತ್ತಾ?
ಇದನ್ನೂ ಓದಿ: ಪಿಯುಸಿ ಓದಿದವರಿಗೆ ಬಳ್ಳಾರಿ ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳು ಇವೆ. ಈಗಾಲೇ ಅರ್ಜಿ ಸಲ್ಲಿಸಿ