ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಹಿಂದೆ ಜನರಲ್ ಬೋಗಿ ಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಆನ್ಲೈನ್ ಪೇಮೆಂಟ್ ಹಾಗೂ ಆನ್ಲೈನ್ ಬುಕಿಂಗ್ ವ್ಯವಸ್ಥೆಯನ್ನು ಜಾರಿ ಗೊಳಿಸುವುದಾಗಿ ತಿಳಿಸಿತ್ತು. ಈಗ ಆದರೆ ಬೆನ್ನಲ್ಲೇ ಯಾವುದೇ ಕಾರಣದಿಂದ ನಾವು ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ನಮ್ಮ ಟಿಕೆಟ್ ಹಣವು ಕೇವಲ 24 ಗಂಟೆಯ ಒಳಗೆ ನಮ್ಮ ಖಾತೆಗೆ ಜಮಾ ಆಗುವ ಬಗ್ಗೆ ಯೋಜನೆಯೊಂದನ್ನು ರೂಪಿಸಲು ರೈಲ್ವೆ ಇಲಾಖೆ ಮುಂದಾಗಿದೆ.
24 ಗಂಟೆಗಳಲ್ಲಿ ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಹಣ ವಾಪಸ್ :-
ಈಗ ನಾವು ಕಾಯ್ದಿರಿಸಿದ ಟಿಕೆಟ್ ರದ್ದುಗೊಳಿಸಿದರೆ ಮರುಪಾವತಿಯಗಳು ಕನಿಷ್ಠ ಮೂರು ದಿನಗಳ ಸಮಯ ಆಗುತ್ತದೆ. ಆದರೆ, ಈಗ ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ 24 ಗಂಟೆಯೊಳಗೆ ಹಣ ಮರುಪಾವತಿಸುವ ಯೋಜನೆಯೊಂದನ್ನು ಜಾರಿಗೊಳಿಸಲಿದೆ. ಈ ಯೋಜನೆಯನ್ನು ಜಾರಿಗೆ ತರಲು ರೈಲ್ವೇ ಇಲಾಖೆಯ ಹೊಸ ಸೂಪರ್ ಆ್ಯಪ್ ಅನ್ನು ಸಹ ಬಿಡುಗಡೆ ಮಾಡಲು ಆಲೋಚನೆ ನಡೆಸಿದೆ. ಈ ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ಟಿಕೆಟ್ ಬುಕಿಂಗ್ ಮಾಡಲು ಸಾಧ್ಯವಿದೆ. ಹಾಗೂ ರೈಲು ಟ್ರ್ಯಾಕ್ ಮಾಡಬಹುದು. ಹಾಗೂ ರೈಲ್ವೇ ಟಿಕೆಟ್ ಕ್ಯಾನ್ಸಲ್ ಮಾಡಬಹುದು. ಈ ಅಪ್ಲಿಕೇಶನ್ ಮೂಲಕ ರೈಲ್ವೆ ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು ಸುಲಭವಾಗಿ ಆಗುತ್ತವೆ.
100 ದಿನಗಳ ಕ್ರಿಯಾ ಯೋಜನೆ ಸಿದ್ಧಪಡಿಸಲು ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ :- ಲೋಕಸಭಾ ಚುನಾವಣೆಯು ಇನ್ನೇನು ಸನಿಹದಲ್ಲಿ ಇದ್ದು ನರೇಂದ್ರ ಮೋದಿ ಅವರು ಗೆಲ್ಲಲಿ ಎಂಬ ಆಶಯ ಇಡೀ ಭಾರತಕ್ಕೆ ಇದೆ. ಆದರೆ ಅದರ ಪೂರ್ವಭಾವಿಯಾಗಿ ಈಗಾಗಲೇ ಹಲವು ಯೋಜನೆಗಳನ್ನು ನರೇಂದ್ರ ಮೋದಿ ಅವರು ಸದ್ದಿಲ್ಲದೆ ನಡೆಸುತ್ತಾ ಇದ್ದಾರೆ. ಈಗಾಗ್ಲೇ ರೈಲ್ವೆ ಇಲಾಖೆಗೆ 100 ದಿನಗಳ ಕ್ರಿಯಾ ಯೋಜನೆ ಸಿದ್ಧಪಡಿಸಲು ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವಾಲಯ ಹಲವು ಸಿದ್ಧತೆ ನಡೆಸುತ್ತಾ ಇದೆ ಎಂಬ ಮಾಹಿತಿ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
100 ದಿನಗಳ ಕ್ರಿಯಾ ಯೋಜನೆಯಲ್ಲಿ ಯಾವ ಯೋಜನೆಗಳು ಜಾರಿಯಾಗಲಿವೆ? ಮೊದಲನೆಯದಾಗಿ ಮೇಲೆ ತಿಳಿಸುವಂತೆ 24 ಗಂಟೆಗಳಲ್ಲಿ ಟಿಕೆಟ್ ಕ್ಯಾನ್ಸಲ್ ಜಮಾ ಯೋಜನೆ ಜೊತೆಗೆ ಪಿಎಂ ರೈಲ್ ಯಾತ್ರಿ ವಿಮಾ ಯೋಜನೆಯು ಆರಂಭ ಗೊಳ್ಳುವ ನಿರೀಕ್ಷೆ ಇದೆ. ಹಾಗೂ 40,900 ಕಿ.ಮೀ ಉದ್ದದ ಮೂರು ಆರ್ಥಿಕ ಕಾರಿಡಾರ್ಗಳಿಗೆ ಸರ್ಕಾರ ಕ್ಯಾಬಿನೆಟ್ ಅನುಮೋದನೆಯನ್ನು ಕೋರಿದೆ ಮತ್ತು ಈ ಯೋಜನೆಗೆ 11 ಲಕ್ಷ ಕೋಟಿ ರೂಪಾಯಿ ಹೂಡಿಕೆ ಅಗತ್ಯ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗೂ ಇದರ ಜೊತೆಗೆ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆ ಪೂರ್ಣಗೊಂಡ ಬಳಿಕ ಜಮ್ಮುವಿನಿಂದ ಕಾಶ್ಮೀರಕ್ಕೆ ರೈಲುಗಳ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದೆ.
ಸ್ಲೀಪರ್ ಕೋಚ್ ಒಂದೇ ಭಾರತ್ ರೈಲು:-
ಇನ್ನು ಮುಂದೆ ಒಂದೇ ಭಾರತ್ ರೈಲಿನಲ್ಲಿ ಸ್ಲೀಪರ್ ಸಿಟ್ ಆರಂಭ ಆಗಲಿದೆ. ಹಾಗೂ ದೇಶದಲ್ಲೇ ಮೊದಲ ಬಾರಿಗೆ ರೈಲ್ವೇ ಮೇಲ್ಸೇತುವೆ ಜೊತೆ ರೈಲ್ವೆ ಕೆಳಸೇತುವೆಯನ್ನೂ ಕೂಡ ನಿರ್ಮಾಣ ಮಾಡುವ ಕಾರ್ಯ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ. ಅಹಮದಾಬಾದ್ ಹಾಗೂ ಮುಂಬೈಗೆ ಸಂಪರ್ಕ ಕಲ್ಪಿಸುವ ಬುಲೆಟ್ ಟ್ರೈನ್ ಕೆಲಸವೂ ಸಹ ವೇಗವಾಗಿ ಮಾಡಲಾಗುತ್ತದೆ ಎಂಬ ಮಾಹಿತಿ ಮಾಹಿತಿಯನ್ನು ಮೂಲಗಳು ತಿಳಿಸಿವೆ.
ಇದನ್ನೂ ಓದಿ: IRCTC ವತಿಯಿಂದ ರಾಮಾಯಣ ಯಾತ್ರಾ ರೈಲು ಆರಂಭ. ದೇಶದ 39 ಧಾರ್ಮಿಕ ಸ್ಥಳಗಳಿಗೆ ಇದು ಸಂಚರಿಸಲಿದೆ.
ಇದನ್ನೂ ಓದಿ: ಇದೊಂದು ವಿಧಾನವನ್ನು ಪಾಲಿಸಿದರೆ ಸಾಕು, ನಿಮ್ಮ ಕ್ರೆಡಿಟ್ ಸ್ಕೋರ್ ಸುಯ್ ಅಂತ ಮೇಲೇರುತ್ತೆ!