ಈಗಾಗಲೇ ಟೋಲ್ ಪಾವತಿಸಲು ಫಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದಿದೆ. ಟೋಲ್ ಗೇಟ್ ಬಳಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಇದು ಸಹಾಯಕ ಆಗಿದೆ. ಈಗ ಟೋಲ್ ಪಾವತಿಸಲು ಆಧುನೀಕರಣದ ಕಡೆಗೆ ಇನ್ನೊಂದು ಹೆಜ್ಜೆ ಇಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹೊಸ ಟೋಲ್ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಯಿರಿ.
ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆ ಎಂದರೇನು?: ನೀವು ಚಲಿಸುವ ವಾಹನದ ದೂರದ ಪ್ರಕಾರ ನಿಮ್ಮ ಟೋಲ್ ಹಣವನ್ನು ಸ್ವಯಂ ಚಾಲಿತವಾಗಿ ಕಡಿತಗೊಳ್ಳುವ ಒಂದು ಆಧುನಿಕ ವ್ಯವಸ್ಥೆ ಇದಾಗಿದೆ. ಈ ವ್ಯವಸ್ಥೆಯಲ್ಲಿ ನೀವು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ನಿಂತುಕೊಂಡು ಟೋಲ್ ಪಾವತಿಸುವ ಅಗತ್ಯ ಇಲ್ಲ. ಹಾಗೆಯೇ ಟೋಲ್ ಗೇಟ್ ಇಂದ ಒಂದೆರಡು ಕಿಲೋಮೀಟರ್ ಅಂತರದಲ್ಲಿ ಅಷ್ಟೇ ನೀವು ತಲುಪುವ ಊರು ಇದೆ ಎಂದರು ಸಹ ಹೆಚ್ಚು ಹಣ ಪಾವತಿ ಮಾಡುವ ವಿಧಾನವೂ ಇಲ್ಲ. ನೀವು ಕ್ರಮಿಸಿದ ದೂರದ ಪ್ರಕಾರ ಮಾತ್ರ ಹಣವನ್ನು ಪಾವತಿಸಿದರೆ ಸಾಕು.
ನಿತಿನ್ ಗಡ್ಕರಿ ಅವರ ಹೇಳಿಕೆ ಏನು?
ಈ ಹಿಂದೆ ರಾಜ್ಯಸಭೆಯಲ್ಲಿ ಒಂದು ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರರಾದ ನಿತಿನ್ ಗಡ್ಕರಿ ಅವರೂ ಟೋಲ್ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ ಈ ಉಪಗ್ರಹ ಟೋಲ್ ವ್ಯವಸ್ಥೆಯು ವಿಶ್ವದ ಅತ್ಯುತ್ತಮ ತಂತ್ರಜ್ಞಾನ ಹೊಂದಿದೆ. ಭಾರತದಲ್ಲಿ ಉಪಗ್ರಹ ಆಧಾರಿತ ವ್ಯವಸ್ಥೆಯನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ನಾವು ಭರವಸೆಯನ್ನು ನೀಡುತ್ತೇವೆ. ಇನ್ನು ಮುಂದೆ ಟೋಲ್ ಗೆಟ್ ಬಂದ್ ಆಗಲಿವೆ ಎಂದು ತಿಳಿಸಿದರು.
ಫಾಸ್ಟ್ ಟ್ಯಾಗ್ ನಿಂದ ಸಂಗ್ರಹ ಆದ ಹಣ :- ಇನ್ನು ಫಾಸ್ಟ್ ಟ್ಯಾಗ್ ಬಗ್ಗೆ ಮಾತನಾಡಿದ ಗಡ್ಕರಿ ಅವರು ಫಾಸ್ಟ್ಯಾಗ್ ವ್ಯವಸ್ಥೆ ನಿಂದ ಈಗಾಗಲೇ 49 ಸಾವಿರ ಕೋಟಿ ರೂ.ಗೂ ಹೆಚ್ಚು ಟೋಲ್ ಸಂಗ್ರಹ ಆಗಿದೆ. ಪ್ರತಿದಿನವು 170 ರಿಂದ 200 ಕೋಟಿ ರೂಪಾಯಿ ಟೋಲ್ ಗೇಟ್ ಹಣವೂ ಸಂಗ್ರಹ ಆಗುತ್ತಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಟೋಲ್ ಗೇಟ್ ಬಂದ್ ಆಗಲಿದೆಯೇ?: ಇನ್ನು ಟೋಲ್ ಗೇಟ್ ಇನ್ನು ಮುಂದೆ ಇರುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ನಿತಿನ್ ಗಡ್ಕರಿ ಅವರೂ ಈಗಲೇ ಟೋಲ್ ಗೇಟ್ ನ ಗುತ್ತಿಗೆದಾರರು ಪರಿಹಾರಕ್ಕೆ ಬೇಡಿಕೆ ಇಟ್ಟಿರುವುದರಿಂದ ಈ ಟೋಲ್ಗಳನ್ನು ತೆಗೆದುಹಾಕಲು ನಮಗೆ ಈಗ ಸಾಧ್ಯವಾಗುವುದಿಲ್ಲ. ಟೋಲ್ ಗೇಟ್ ಮುಚ್ಚಲು ಸ್ವಲ್ಪ ಸಮಯ ಬೇಕಾಗುತ್ತದೆ. ಯಾವುದೇ ಒಪ್ಪಂದಕ್ಕೆ ಗುತ್ತಿಗೆದಾರರು ಒಪ್ಪದೇ ಇದ್ದರೆ ನಾವು ಒಪ್ಪಂದದ ಅವಧಿ ಮುಗಿಯುವವರೆಗೆ ಮಾತ್ರ ಟೋಲ್ ಗೇಟ್ ವ್ಯವಸ್ಥೆ ಜಾರಿಗೆ ಇರುತ್ತದೆ. ನಂತರ ಟೋಲ್ ಗೆಟ್ ಗಳು ಬಂದ್ ಆಗಲಿವೆ ಎಂದು ತಿಳಿಸಿದರು.
ಇದನ್ನೂ ಓದಿ: Tata Nexon ಹಾಗೂ Tiago EV ಗಳಲ್ಲಿ ಪಡೆಯಿರಿ big discount, hurry up!
ಉಪಗ್ರಹ ಆಧಾರಿತ ಟೋಲ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ವ್ಯವಸ್ಥೆಯು ಟೋಲ್ ರಸ್ತೆಗಳಲ್ಲಿ ಚಲಿಸುವ ವಾಹನಗಳನ್ನು ಟ್ರ್ಯಾಕ್ ಮಾಡಲು ಉಪಗ್ರಹಗಳನ್ನು ಬಳಸುತ್ತದೆ. ವಾಹನವು ಟೋಲ್ ರಸ್ತೆಗೆ ಪ್ರವೇಶಿಸಿದಾಗ ಮತ್ತು ನಿರ್ಗಮಿಸಿದಾಗ, ಅದರ GPS ಸ್ಥಳವನ್ನು ಆಯ್ಕೆ ಮಾಡುವುದರ ಮೂಲಕ ಟೋಲ್ ಹಣ ಕಡಿತ ಆಗುತ್ತದೆ. ಕ್ರಮಿಸಿದ ದೂರದ ಆಧಾರದ ಮೇಲೆ ಟೋಲ್ ಶುಲ್ಕವನ್ನು ವಾಹನದ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸುತ್ತದೆ. ಕಡಿತಗೊಂಡ ಬಗ್ಗೆ ಮಾಹಿತಿ ನಿಮಗೆ SMS ಮೂಲಕ ಸಿಗುತ್ತದೆ. ಈ ವ್ಯವಸ್ಥೆಗ ಜಾರಿಗೆ ಬಂದರೆ FASTag ಅಥವಾ ಇತರ RFID- ಆಧಾರಿತ ಟೋಲ್ ಪಾವತಿ ವ್ಯವಸ್ಥೆಯ ಅಗತ್ಯವಿರುವುದಿಲ್ಲ.
ಇದನ್ನೂ ಓದಿ: ಸ್ವಿಗ್ಗಿ ಹಾಗೂ ಜೊಮಾಟೊಗೆ ಪೈಪೋಟಿ ನೀಡಲು ಬರುತ್ತಿದೆ ಹೊಸ Tata Neu, ಬೆಂಗಳೂರಿನಲ್ಲಿ ಇದರ ಹವಾ ಶುರು!