ರಾಜ್ಯದ ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 2,000 ನೀಡುವ ಯೋಜನೆ ಗೃಹ ಲಕ್ಷ್ಮಿ. ಮಹಿಳೆಯರ ಸ್ವಾಭಿಮಾನ ಮತ್ತು ಆರ್ಥಿಕ ಸ್ಥಿತಿ ಸುಧಾರಿಸಬೇಕು ಎಂಬ ಉತ್ತಮ ಉದ್ದೇಶದೊಂದಿಗೆ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿತು. ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರುವ ಮುಂಚೆ ತಾವು ಅಧಿಕಾರಕ್ಕೆ ಬಂದಲ್ಲಿ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಿತ್ತು. ಅದರಂತೆಯೇ ಈಗ ಯೋಜನೆ ಜಾರಿಗೆ ಬಂದು ಎಂಟು ಕಂತಿನ ಹಣವನ್ನು ನೇರವಾಗಿ ಮಹಿಳೆಯರ ಖಾತೆಗೆ ಹಾಕಲಾಗಿದೆ. ಈಗ ಒಂಬತ್ತನೇ ಖಾತೆ ಹಣ ಯಾವಾಗ ಬರುತ್ತದೆ ಎಂಬ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ.
8ನೇ ಕಂತಿನ ಹಣ ಎಷ್ಟು ಪರ್ಸೆಂಟ್ ಜನರಿಗೆ ನೀಡಲಾಗಿದೆ?: ಈಗಾಗಲೇ 8 ಕಂತುಗಳ ಹಣವನ್ನು ರಾಜ್ಯದ ಜನತೆಗೆ ನೀಡಲಾಗಿದೆ. ಈಗಾಗಲೇ ಶೇಕಡಾ 80% ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. 8ನೇ ಕಂತಿನ ಹಣವೂ ಏಪ್ರಿಲ್ ತಿಂಗಳಲ್ಲಿ ಸಹ ಕೆಲವು ಮಹಿಳೆಯರ ಖಾತೆಗೆ ಜಮಾ ಆಗಿದೆ. ಕೆಲವು ತಾಂತ್ರಿಕ ದೋಷಗಳಿಂದ ಕೆಲವರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಏಪ್ರಿಲ್ ತಿಂಗಳ ಒಳಗೆ 8 ನೇ ಕಂತಿನ ಹಣ ಜಮಾ ಆಗಲಿದೆ ಎಂಬ ಮಾಹಿತಿ ನೀಡಿದ್ದಾರೆ.
9ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ?
ಇಂದಿನಿಂದ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ಏಪ್ರಿಲ್ 26 ಹಾಗೂ ಮೇ 7ರಂದು ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣದಿಂದ ಇನ್ನು ಮುಂದಿನ ಕಂತು ಹಣ ಬಿಡುಗಡೆ ಆಗುವ ದಿನಾಂಕ ಇನ್ನು ನಿಗದಿ ಆಗಲಿಲ್ಲ. ಎಲೆಕ್ಷನ್ ಇರುವ ಕಾರಣ ಮುಂದಿನ ದಿನಗಳಲ್ಲಿ 9 ನೇ ಕಂತಿನ ಹಣ ಬಿಡುಗಡೆ ಆಗುವ ದಿನಾಂಕವನ್ನು ಸ್ಪಷ್ಟಪಡಿಸಲಾಗುವುದು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗೃಹ ಲಕ್ಷ್ಮಿ ಖಾತೆಯ ಹಣ ಬಾರದೆ ಇದ್ದಾರೆ ಹೀಗೆ ಮಾಡಿ: ಈಗಾಗಲೇ ಎಂಟು ಕಂತಿನ ಹಣ ಸರ್ಕಾರ ನೀಡಿದೆ ಆದರೆ ಕೆಲವು ಖಾತೆಗಳಿಗೆ ಇನ್ನು ಸಹ ಒಂದು ಕಂತಿನ ಹಣವೂ ಬಾರದೆ ಇದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಆಧಾರ್ ಲಿಂಕ್ ಆಗದೆ ಇದ್ದರೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಬೇಕು. ಇಲ್ಲದೆ ಇದ್ದರೆ ನೀವು ಅರ್ಜಿ ಸಲ್ಲಿಸುವಾಗ ನೀವು ನೀಡಿದ ಎಲ್ಲಾ ಮಾಹಿತಿಗಳು ಸರಿಯಾಗಿ ಇವೆಯೇ ಎಂಬುದರ ಬಗ್ಗೆ ಮಾಹಿತಿ ಪಡೆಯಿರಿ. ಇನ್ನೊಮ್ಮೆ ಅರ್ಜಿ ಸಲ್ಲಿಸಿ. ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ ಹಾಗೂ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಿರಿ.
ಚುನಾವಣೆಯ ನಂತರ ಗೃಹಲಕ್ಷ್ಮಿ ಖಾತೆಯ ಹಣ ಹೆಚ್ಚಾಗಲಿದೆ:-
ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗೃಹ ಲಕ್ಕ್ಮಿ ಖಾತೆಯ ಹಣ ಹೆಚ್ಚಾಗಲಿದೆ . ಯಾಕೆ ಎಂದರೆ ಒಂದು ಲಕ್ಷ ರೂಪಾಯಿ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ತಿಳಿಸಿದೆ. ಹಾಗಾದರೆ ಪ್ರತಿ ತಿಂಗಳು 10,000 ರೂಪಾಯಿ ಹಣ ಮಹಿಳೆಯರ ಖಾತೆಗೆ ಬರಲಿದೆ.
ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮೊಬೈಲ್ ಮೂಲಕ ಈಗಲೇ ಚೆಕ್ ಮಾಡಿ
ಇದನ್ನೂ ಓದಿ: ವೈದ್ಯಕೀಯ ವೆಚ್ಚ ಭರಿಸುವುದು ಇನ್ನು ಮುಂದೆ ಸುಲಭ, ನಿಮ್ಮ EPF ನಿಂದ ರೂ.1 ಲಕ್ಷದವರೆಗೆ ಹಿಂಪಡೆಯಬಹುದು!