ವಿದ್ಯಾರ್ಥಿ ಜೀವನದ ಅತ್ಯುನ್ನತ ಹಂತ ಎಂದರೆ SSLC. ಮುಂದಿನ ಹಂತದ ಶಿಕ್ಷಣಕ್ಕೆ SSLC ಯ ಫಲಿತಾಂಶದ ಜೊತೆಗೆ ಯಾವ ಕೋರ್ಸ್ ಆಯ್ಕೆ ಮಾಡುತ್ತೀರಿ ಎಂಬುದು ಸಹ ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಈಗ ಹಲವಾರು ಕೋರ್ಸ್ ಗಳು ಲಭ್ಯ ಇದೆ ಆದರೆ ನಮ್ಮ ಭವಿಷ್ಯಕ್ಕೆ ದಾರಿ ದೀಪ ಆಗುವ ಕೋರ್ಸ್ ಯಾವುದು ಎಂಬ ಮಾಹಿತಿ ಇಲ್ಲಿದೆ.
ಕೋರ್ಸ್ ಆರಿಸಿಕೊಳ್ಳುವ ಮುನ್ನ ಕೆಲವು ಸಲಹೆಗಳು :- ನೀವು SSLC ನಂತರ ಯಾವುದೇ ಕೋರ್ಸ್ ಆರಿಸಿಕೊಳ್ಳುವ ಮುನ್ನ ನಿಮ್ಮ ಆಸಕ್ತಿಯ ವಿಷಯ ಯಾವುದು ಎಂಬುದನ್ನು ಮೊದಲು ಅರಿತುಕೊಳ್ಳಬೇಕು ಹಾಗೂ ನೀವು ಯಾವ ಕ್ಷೇತ್ರದಲ್ಲಿ ಮುಂದುವರೆಯಲು ಇಷ್ಟ ಪಡುತ್ತೀರಿ ಯಾವ ಉದ್ಯೋಗ ಮಾಡುತ್ತೀರಿ ಎಂಬ ಬಗ್ಗೆ ನೀವು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಯಾಕೆಂದರೆ ಎಷ್ಟೋ ಸಲ ಇಷ್ಟ ಇಲ್ಲದ ವಿಷಯ ಆಯ್ದುಕೊಂಡು ಫೇಲ್ ಆಗುವ ಅಥವಾ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮೊದಲು ನಿಮ್ಮ ಗುರಿಯನ್ನು ನೀವು ನಿರ್ಧರಿಸಿ. ನಂತರ ಯಾವ ಕೋರ್ಸ್ ಮಾಡಿದರೆ ನಿಮಗೆ ಉತ್ತಮ ಉದ್ಯೋಗ ಸಿಗುತ್ತದೆ ಎಂಬ ಬಗ್ಗೆ ಮಾಹಿತಿ ಕಲೆಹಾಕುವುದು ಉತ್ತಮವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
SSLC ನಂತರ ಯಾವ ಯಾವ ಕೋರ್ಸ್ ಇವೆ?
ಪಿಯುಸಿ :- ಸಾಮಾನ್ಯವಾಗಿ ಹೆಚ್ಚಿನ ಜನರು SSLC ನಂತರ ಪಿಯುಸಿ ಓದುತ್ತಾರೆ. SSLC marks ಆಧಾರದ ಮೇಲೆ ಹೆಚ್ಚಿನ ಜನರು ಸೈನ್ಸ್, ಕಾಮರ್ಸ್, ಹಾಗೂ ಆರ್ಟ್ಸ್ ಕೋರ್ಸ್ ಗ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಪಿಯುಸಿ ಯಲ್ಲಿ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದು ಬಹಳ ಮುಖ್ಯ ಆಗುತ್ತದೆ. ನಿಮಗೆ ಸೈನ್ಸ್ ವಿಷಯ ಇಷ್ಟ ಇದ್ದು ಹಾಗೂ ನಿಮಗೆ ಮುಂದೆ ಇದೆ ವಿಷಯದಲ್ಲಿ ಮುಂದುವರೆಯಬೇಕು ಎಂದರೆ ಡಾಕ್ಟರ್, ಇಂಜಿನಿಯರ್, ಸೈಂಟಿಸ್ಟ್ ಇಂತಹ ಯಾವುದೇ ಹುದ್ದೆಗೆ ಹೋಗಬೇಕು ಎಂಬ ಆಸೆ ಇದ್ದರೆ ನೀವು ಸೈನ್ಸ್ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ. ನಿಮಗೆ ಅಕೌಂಟೆಂಟ್, ಬ್ಯುಸಿನೆಸ್ ಮನ್ ಅಂತಹ ಹುದ್ದೆಗಳಲ್ಲಿ ಕೆಲಸಮಾಡ್ಬೇಕು ಎಂತಾ ಆಸೆ ಇದ್ದರೆ ಹಾಗೂ ಕಾಮರ್ಸ್ ಸಬ್ಜೆಕ್ಟ್ ನಲ್ಲಿ ಮುಂದುವರೆಯುವ ಯೋಚನೆ ಇದ್ದರೆ ನೀವು ಕಾಮರ್ಸ್ ವಿಷಯ ಆರಿಸಿಕೊಳ್ಳಬೇಕು. ನಿಮಗೆ ಇತಿಹಾಸ ಅಥವಾ ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ನಿಮಗೆ ಆಸಕ್ತಿ ಇದ್ದಲ್ಲಿ ನೀವು ಆರ್ಟ್ಸ್ ವಿಷಯವನ್ನು ಆಯ್ದುಕೊಳ್ಳಬೇಕು.
ವೃತ್ತಿಪರ ಕೋರ್ಸುಗಳು:- ಈಗ ಹಲವಾರು ವೃತ್ತಿಪರ ಕೋರ್ಸ್ ಗಳ ಇವೆ. ಸಾಹಿತ್ಯ, ಸಂಗೀತ, ಫ್ಯಾಶನ್ ಡಿಸೈನ್, ವೆಬ್ ಡಿಸೈನ್, ಡೇಟಾ ಎಂಟ್ರಿ ಹೀಗೆ ಅನೇಕ ವೃತ್ತಿಪರ ಕೋರ್ಸ್ ಗಳು ಇವೆ. ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಹಾಗೂ ಯಾವ ಕೋರ್ಸ್ ಗೆ ಹೆಚ್ಚಿನ ಪ್ರಾಧಾನ್ಯತೆ ಇದೆ ಎಂಬುದನ್ನು ಅರಿತು ವಿಷಯವನ್ನು ಆಯ್ದುಕೊಳ್ಳಬೇಕು.
ಐಟಿಐ :- ಇದರಲ್ಲಿ 100ಕ್ಕೂ ಹೆಚ್ಚಿನ ವಿಷಯಗಳು ಇವೆ. ಆರು ತಿಂಗಳಿನಿಂದ ಒಂದು ವರ್ಷದ ವರೆಗೆ ಈ ಕೋರ್ಸ್ ಇರುತ್ತದೆ. ಇದು ಸರ್ಕಾರಿ ತರಬೇತಿ ಸಂಸ್ಥೆ ಆಗಿದೆ.
ಡಿಪ್ಲೊಮಾ :- ಇದು ಕಡಿಮೆ ವೆಚ್ಚದಲ್ಲಿ ಇರುವ ಕೋರ್ಸ್ ಆಗಿದೆ. ಮೂರು ವರ್ಷಗಳ ವೃತ್ತಿಪರ ಕೋರ್ಸ್ ಇದಾಗಿದ್ದು ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್, ಕಂಪ್ಯೂಟರ್, ಮೆರೈನ್ ಟೆಕ್ನಾಲಜಿ, ಟೆಕ್ಸ್ಟೈಲ್ ಟೆಕ್ನಾಲಜಿ, ಆಟೋಮೊಬೈಲ್ ಜೊತೆಗೆ ಇನ್ನಷ್ಟು ವಿಷಯಗಳು ಲಭ್ಯ ಇದೆ.
ಪ್ಯಾರಾ ಮೆಡಿಕಲ್ :- ಇದು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೋರ್ಸ್ ಆಗಿದ್ದು ನೀವು ಎಕ್ಸ್-ರೇ ತಂತ್ರಜ್ಞ, ಡಯಾಲಿಸಿಸ್ ತಂತ್ರಜ್ಞ, ನರ್ಸಿಂಗ್ ಅಸಿಸ್ಟೆನ್ಸ್, ನೇತ್ರ ತಂತ್ರಜ್ಞ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ.
ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಡ್ರೈವರ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ