ಭಾರತದಲ್ಲಿ ಸ್ಕೂಟರ್ ಪ್ರಿಯರ ಸಂಖ್ಯೆ ಹೆಚ್ಚಿದೆ. ಹೆಣ್ಣು ಮಕ್ಕಳು ಮಹಿಳೆಯರು ಪುರುಷರು ಹೀಗೆ ಎಲ್ಲ ವರ್ಗದ ಜನರು ಹಾಗೂ ಎಲ್ಲಾ ವಯಸ್ಸಿನ ಜನರು ಸ್ಕೂಟಿ ಇಷ್ಟ ಪಡುತ್ತಾರೆ. ಹಾಗಾದರೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಯಾವುದು ಎಂಬುದು ತಿಳಿಯೋಣ.
ಹೆಚ್ಚು ಮಾರಾಟವಾಗುವ ಸ್ಕೂಟರ್ ಯಾವುದು?
ಸುಜುಕಿ ಬರ್ಗಮನ್ ಸ್ಟ್ರೀಟ್ :- ಇದು ಭಾರತದಲ್ಲಿ ಅತಿಹೆಚ್ಚು ಮಾರಾಟ ಆಗುವ ಸ್ಕೂಟರ್ ಆಗಿದೆ. ಭಾರತದಲ್ಲಿ 2023 ರ ಸಾಲಿನಲ್ಲಿ 1,24,691 ಯೂನಿಟ್ ಮಾರಾಟ ದಾಖಲೆ ನಿರ್ಮಿಸಿದೆ. ಹಾಗೆಯೇ 2024 ರ ಸಾಲಿನಲ್ಲಿ1,84,194 ಯೂನಿಟ್ ಮಾರಾಟ ಆಗಿದೆ. ಇದರ ಶೋ ರೂಮ್ ಆರಂಭಿಕ ಬೆಲೆ 94,000 ರೂಪಾಯಿ ಆಗಿದೆ.
ಟಿವಿಎಸ್ ಐಕ್ಯೂಬ್ :- ಇದು ಸಹ ಭಾರತದಲ್ಲಿ ಅತಿ ಹೆಚ್ಚು ಮಾರಾಟ ಆಗುತ್ತಿದೆ. ಇದು 2024 ರಲ್ಲಿ 1,89,896 ಯೂನಿಟ್ ಮಾರಾಟ ಕಂಡಿದೆ. 2023 ರಲ್ಲಿ 96,654 ಯೂನಿಟ್ ಮಾರಾಟ ಆಗಿದೆ. 2023 ಕ್ಕೆ ಹೋಲಿಸಿದರೆ 96.47% ಅಧಿಕ ಮಾರಾಟ ಆಗಿದೆ. ಈ ಸ್ಕೂಟರ್ ನ ಆರಂಭಿಕ ಬೆಲೆ 1,26,000 ರೂಪಾಯಿಗಳು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
Ola S1:- ಇದು ಅತಿ ಹೆಚ್ಚು ಮಾರಾಟ ಆಗುವ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ. ಇದರ ಶೋ ರೂಂ ಬೆಲೆ 69,999 ರೂಪಾಯಿ ಆಗಿದೆ. 2024 ರಲ್ಲಿ ಈ ಸ್ಕೂಟರ್ ಮಾರಾಟ ಆಗಿರುವ ಯೂನಿಟ್ 3,29,237 ಆಗಿದೆ. ಹಾಗೂ 2023 ರ ಇಸವಿಯಲ್ಲಿ ಈ ಸ್ಕೂಟರ್ 1,52,791 ಆಗಿದೆ. ಪ್ರತಿಶತ ಮಾರಾಟ ದರ 2023ಕ್ಕೆ.ಹೋಲಿಸಿದರೆ 111.48% ಹೆಚ್ಚಾಗಿದೆ.
ಟಿವಿಎಸ್ ntorq:- ಇದರ ವಿಶಿಷ್ಟ ವಿನ್ಯಾಸದಿಂದ ಇದು ಹೆಚ್ಚಿನ ಜನರನ್ನು ಆಕರ್ಷಣೆ ಮಾಡುವಲ್ಲಿ ಯಶಸ್ವಿ ಆಗಿದೆ. ಈ ಸ್ಕೂಟಿ 2024 ರಲ್ಲಿ 3,31,865 ಯೂನಿಟ್ ಮಾರಾಟ ಆಗಿದೆ. 2023ರಲ್ಲಿ 2,90,539 ಯೂನಿಟ್ ಮಾರಾಟ ಆಗಿತ್ತು. ಮಾರಾಟ ದರವು 14.22% ಹೆಚ್ಚಾಗಿದೆ. ಇದರ ಶೋ ರೂಮ್ ನ ಬೆಲೆ 84,636 ರೂಪಾಯಿ ಆಗಿದೆ.
ಸುಜುಕಿ Access:- ಇದು ಸುಜುಕಿ ಕಂಪನಿಯ ಉತ್ತಮ ಸ್ಕೂಟರ್ ಆಗಿದ್ದು ತನ್ನ ವಿಶಿಷ್ಟ ವಿನ್ಯಾಸದಿಂದ ಜನರನ್ನು ಹೆಚ್ಚು ಸೆಳೆಯುತ್ತಿದೆ. ಸದ್ಯ ಶೋ ರೂಂ ನಲ್ಲಿ ಇದರ ಆರಂಭಿಕ ಬೆಲೆ 79,899 ರೂಪಾಯಿ ಆಗಿದೆ. ಇದು 2024 ರ ಸಾಲಿನಲ್ಲಿ 6,34,563 ಯೂನಿಟ್ ಮಾರಾಟ ಆಗಿದೆ. 2323 ರ ಸಾಲಿನಲ್ಲಿ 4,98,844 ಯೂನಿಟ್ ಮಾರಾಟ ಆಗಿದೆ. 2023 ರ ಮಾರಾಟದ್ದ ಪ್ರಮಾಣಕ್ಕೆ ಹೋಲಿಸಿದರೆ 2024 ರಲ್ಲಿ 27.21% ರಷ್ಟು ಹೆಚ್ಚಿನ ಯೂನಿಟ್ ಮಾರಾಟ ಆಗಿದೆ.
ಟಿವಿಎಸ್ ಜುಪಿಟರ್ :- ಇದು ಟಿವಿಎಸ್ ಕಂಪನಿಯ ಉತ್ತಮ ಸ್ಕೂಟರ್ ಆಗಿದ್ದು ಭಾರತದ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ಸ್ ಇರುವ ಸ್ಕೂಟಿ ಇದಾಗಿದೆ. 2024 ನೇ ಸಾಲಿನಲ್ಲಿ ಇದು 8,44,863 ಯೂನಿಟ್ ಮಾರಾಟ ಕಂಡಿದೆ. 2023 ರಲ್ಲಿ ಮಾರಾಟ ಆಗಿರುವ ಪ್ರಮಾಣವು 7,29,546 ಯೂನಿಟ್ ಆಗಿದೆ. 2023 ರಕ್ಕೆ ಮಾರಾಟ ಆಗಿರುವ ಪ್ರಮಾಣಕ್ಕೆ ಹೋಲಿಸಿದರೆ 2024 ರಲ್ಲಿ ಶೇಕಡಾ 15.81% ಮಾರಾಟವೂ ಹೆಚ್ಚಾಗಿದೆ. ಇದರ ಶೋ ರೂಮ್ ಬೆಲೆಯೂ 73,340 ರೂಪಾಯಿಯಿಂದ ಆರಂಭ ಆಗಿದೆ.
ಹೊಂಡ ಆಕ್ಟಿವಾ :- ಇದು ಇತ್ತೀಚಿಗೆ ಮಾರುಕಟ್ಟೆಯಲ್ಲಿ ಬಹಳ ಸದ್ದು ಮಾಡುತ್ತಿದೆ. ಇದು 2024 ರಲ್ಲಿ 22,54, 537 ಯೂನಿಟ್ ಮಾರಾಟ ಕಂಡಿದೆ. 2023 ಅನೇ ಸಾಲಿನಲ್ಲಿ 21,49,537 ಯೂನಿಟ್ ಮಾರಾಟ ಆಗಿತ್ತು. ಹೋದ ವರುಷಕ್ಕೆ ಹೋಲಿಸಿದರೆ 4.48 % ಹೆಚ್ಚಿಗೆ ಮಾರಾಟ ಆಗಿದೆ. ಇದರ ಶೋ ರೂಮ್ ಬೆಲೆ 76,234 ರೂಪಾಯಿಯಿಂದ ಆರಂಭ ಆಗಿದೆ.
ಇದನ್ನೂ ಓದಿ: ಉತ್ತಮ ರಿಯಾಯಿತಿ: ಹೋಂಡಾ ಆಕ್ಟಿವಾ ಬೆಲೆ 78,000 ರೂ. ನಿಂದ 18,000 ರೂ. ಗೆ ಖರೀದಿಸಿ!
ಇದನ್ನೂ ಓದಿ: ಬರೋಬ್ಬರಿ 323KM ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಆಗಮಿಸುತ್ತಿದೆ; ಅದು ಕಡಿಮೆ ಬೆಲೆಯಲ್ಲಿ