ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಸಂಸ್ಥೆಯ 2025-26 ಸಾಲಿನಿಂದ ವಿದ್ಯಾರ್ಥಿಗಳಿಗೆ ಎರಡು ಬಾರಿ ಬೋರ್ಡ್ ಪರೀಕ್ಷೆ ನಡೆಸಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಆದರೆ ಸೆಮಿಸ್ಟರ್ ಯೋಜನೆ ಬರುವುದಿಲ್ಲ ಎಂದು ಹೇಳಲಾಗುತ್ತಿದೆ.
ಸಾಂಪ್ರದಾಯಿಕ ಪರೀಕ್ಷೆ ನಿಯಮ ಬದಲಾವಣೆ :- ವಾರ್ಷಿಕವಾಗಿ ಎರಡು ಬಾರಿ ಬೋರ್ಡ್ ಎಕ್ಸಾಮ್ ನಡೆದರೆ ಇಷ್ಟು ವರುಷಗಳಿಂದ ನಡೆದು ಬಂದ ಸಾಂಪ್ರದಾಯಿಕ ನಿಯಮಗಳು ಬದಲಾವಣೆ ಆಗಲಿದೆ. ಈ ನಿಯಮಗಳು ಬದಲಾವಣೆ ಆದರೆ ಹಲವಾರು ಉಪಯೋಗಗಳು ಇವೆ.
ಎರಡು ಬಾರಿ ಬೋರ್ಡ್ ಎಕ್ಸಾಮ್ ನಡೆಸುವುದರಿಂದ ಏನು ಉಪಯೋಗ?
- ಒತ್ತಡ ಕಡಿಮೆ: ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ ನಡೆಸುವುದರಿಂದ ಮಕ್ಕಳಿಗೆ ಅತಿಯಾದ ಒತ್ತಡ ಉಂಟಾಗುವುದಿಲ್ಲ. ಹಾಗೂ ಅನಗತ್ಯವಾಗಿ ಹೆಚ್ಚಿನ ಹೊರೆ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಆಗುವುದಿಲ್ಲ.
- ಉತ್ತಮ ಕಲಿಕೆ: ವರುಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳು ತಮ್ಮ ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ. ಹಾಗೂ ಅಗತ್ಯವಿರುವ ತಮ್ಮ ಕಲಿಕೆಯ ವಿಷಯದ ಮೇಲೆ ಸುಧಾರಿಸಲು ಹೆಚ್ಚಿನ ಅವಕಾಶಗಳು ಇವೆ.
- ಹೆಚ್ಚಿನ ಆಯ್ಕೆಗಳು: ವಿದ್ಯಾರ್ಥಿಗಳು ಯಾವುದೇ ಒಂದು ಪರೀಕ್ಷೆಯಲ್ಲಿ ಅಥವಾ ಎರಡು ಪರೀಕ್ಷೆಗಳಲ್ಲಿ ಬರೆಯಲು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದು ಮಕ್ಕಳಿಗೆ ತಮ್ಮ ಶಕ್ತಿ ಮತ್ತು ದುರ್ಬಲತೆಗಳ ಆಧಾರದ ಮೇಲೆ ತಮ್ಮ ಫಲಿತಾಂಶಗಳನ್ನು ಸುಧಾರಿಸಲು ಅವಕಾಶ ಸಿಕ್ಕಂತೆ ಆಗುತ್ತದೆ.
- ಉತ್ತಮ ಉದ್ಯೋಗಾವಕಾಶಗಳು: ಉತ್ತಮ ಅಂಕಗಳನ್ನು ಗಳಿಸಲು ಅವಕಾಶ ಇರುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶಗಳು ಮತ್ತು ಉನ್ನತ ಶಿಕ್ಷಣಕ್ಕೆ ಅವಕಾಶಗಳನ್ನು ಪಡೆಯಲು ಸಾಧ್ಯವಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಎರಡು ಬಾರಿ ಬೋರ್ಡ್ ಎಕ್ಸಾಮ್ ನಡೆಸುವುದರಿಂದ ಏನು ಅನುಕೂಲ?
- ಹೆಚ್ಚಿನ ಕೆಲಸದ ಹೊರೆ: ಎರಡು ಬಾರಿ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹೆಚ್ಚಿನ ಕೆಲಸದ ಹೊರೆ ಉಂಟಾಗುವ ಸಾಧ್ಯತೆ ಇರುತ್ತದೆ.
- ಹೆಚ್ಚಿನ ಖರ್ಚು: ಎರಡು ಬಾರಿ ಪರೀಕ್ಷೆಗಳನ್ನು ನಡೆಸುವುದು ಮತ್ತು ಮೌಲ್ಯಮಾಪನ ಮಾಡುವುದು ಇಲಾಖೆಗೆ ಹೆಚ್ಚು ಖರ್ಚು ಉಂಟಾಗುತ್ತದೆ.
- ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ: ಎರಡು ಬಾರಿ ಪರೀಕ್ಷೆ ನಡೆಸುವುದರಿಂದ ಪರೀಕ್ಷೆಗಳ ಮೇಲಿನ ಹೆಚ್ಚಿನ ಗಮನ ಉಂಟಾಗಿ ಶಿಕ್ಷಣದ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಯಾಕೆಂದರೆ ಈಗ ಇರುವ ನಿಯಮದಲ್ಲಿ ಮಕ್ಕಳು ಗುಣಮಟ್ಟದ ಶಿಕ್ಷಣ ಸಿಗಿತ್ತಿದೆ. ನಿಯಮ ಬದಲಾವಣೆ ಆದರೆ ಶಿಕ್ಷಣದ ಗುಣಮಟ್ಟ ಕಡಿಮೆ ಆಗಬಹುದು.
- ಸಮಾನತೆಯ ಕೊರತೆ: ಈಗ ಇರುವ ನಿಯಮದಲ್ಲಿ ಒಮ್ಮೆಲೆ ಪರೀಕ್ಷೆ ನಡೆಸಿ ಎಲ್ಲರ ಮಾರ್ಕ್ಸ್ ಅವರ ತಿಳುವಳಿಕೆ ಮತ್ತು ಜ್ಞಾನದ ಮೇಲೆ ನಿರ್ಧಾರ ಆಗುತ್ತದೆ. ಆದರೆ ಎರಡು ಬಾರಿ ಪರೀಕ್ಷೆ ನಡೆಸುವುದರಿಂದ ಉತ್ತಮ ವಿದ್ಯಾರ್ಥಿ ಕಡಿಮೆ ಅಂಕ ಗಳಿಸಿ ಸಾಧಾರಣ ಓದುವ ವಿದ್ಯಾರ್ಥಿ ಹೆಚ್ಚಿನ ಅಂಕ ಗಳಿಸಬಹುದು.
ಶಿಕ್ಷಣ ನೀತಿಯಲ್ಲಿ ಏನೇ ಬದಲಾವಣೆ ಆದರೂ ಸಹ ವಿದ್ಯಾರ್ಥಿಗಳು ಅನೇಕ ಸಮಸ್ಯೆ ಎದುರಿಸುತ್ತಾರೆ. ಕೆಲವು ನಿಯಮಗಳು ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೆ ಕೆಲವು ಕೇವಲ ಅಂಕಗಳಿಕೆಗೆ ಪ್ರಾಶಸ್ತ್ಯ ನೀಡುತ್ತವೆ. ಈಗಾಗಲೇ ಹಲವು ನಿಯಮಗಳು ಕೇವಲ ಅಂಕ ಗಳಿಕೆಗೆ ಇರುವುದರಿಂದ ಮಕ್ಕಳಿಗೆ ಕಲಿಯುವ ಆಸಕ್ತಿ ಹೆಚ್ಚಾಗುವ ಬದಲು ಕೆಲವ ಅಂಕಗಳಿಗೆ ಓದುವ ಹವ್ಯಾಸ ಶುರುವಾಗಿದೆ.
ಇದನ್ನೂ ಓದಿ: ತಿಂಗಳಿಗೆ 5 ರಿಂದ 10 ಸಾವಿರ ಇನ್ವೆಸ್ಟ್ ಮಾಡಿ ಒಂದು ಕೋಟಿ ಗಳಿಸುವ SIP ಯೋಜನೆ