SSLC ಫಲಿತಾಂಶ ಯಾವಾಗ ಬಿಡುಗಡೆ ಆಗುತ್ತದೆ? ಹೊಸ ಅಪ್ಡೇಟ್ ಇಲ್ಲಿದೆ.

SSLC Result 2024 Date

2023-24 ರಲ್ಲಿ SSLC ಪರೀಕ್ಷೆ ಬರೆದು ಯಾವಾಗ Result ಬರುತ್ತದೆ ಎಂದು ಕಾಯುತ್ತಾ ಇರುವ ವಿದ್ಯಾರ್ಥಿಗಳಿಗೆ ಯಾವಾಗ ಫಲಿತಾಂಶ ಬಿಡುಗಡೆ ಆಗುತ್ತದೆ ಎಂಬ ಬಗ್ಗೆ ಹೊಸ ಅಪ್ಡೇಟ್ ಇಲ್ಲಿದೆ.

WhatsApp Group Join Now
Telegram Group Join Now

ಯಾವಾಗ ಬರಲಿದೆ SSLC ಫಲಿತಾಂಶ?: ಶೈಕ್ಷಣಿಕವಾಗೀ ಕರ್ನಾಟಕ ರಾಜ್ಯದ ಫಲಿತಾಂಶವು ದೇಶ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಎಷ್ಟು ಪ್ರತಿಶತ ವಿದ್ಯಾರ್ಥಿಗಳು ಪಾಸ್ ಆದರೂ ಎಂಬುದು ಎಲ್ಲರ ಕುತೂಹಲ ವಿಷಯ ಅವುದೇ. ಆದ್ದರಿಂದ ಕರ್ನಾಟಕದ ಎಸ್‌ಎಸ್‌ಎಲ್‌ ಫಲಿತಾಂಶವ ಇಡೀ ದೇಶದ ಗಮನವನ್ನ ಸೆಳೆದಿದೆ ಎಂದರೆ ತಪ್ಪಲ್ಲ. ಯಾಕೆ ಎಂದರೆ ಕರ್ನಾಟಕದಲ್ಲಿ ಭಾರತದ ವಿವಿಧ ರಾಜ್ಯಗಳ ಜನರು ಸಹ ವಾಸ ಮಾಡುತ್ತಾ ಇದ್ದಾರೆ. ಎಲ್ಲರೂ ಕುತೂಹಲದಿಂದ ಕಾಯುತ್ತಾ ಇರುವ SSLC ಫಲಿತಾಂಶ ಇದೆ ಬರುವ ಮೇ 10 ರಂದು ಪ್ರಕಟ ಆಗುವ ಸಾಧ್ಯತೆಗಳು ಇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ವರ್ಷ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?: 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ 2750 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ ಒಟ್ಟು 8.69 ಲಕ್ಷ. ಒಟ್ಟು 4.41 ಲಕ್ಷ ಬಾಲಕರು ಹಾಗೂ 4.28 ಲಕ್ಷ ಬಾಲಕಿಯರು ಆಗಿದ್ದರು. ಇದರ ಜೊತೆಗೆ 18,225 ಖಾಸಗಿ ವಿದ್ಯಾರ್ಥಿಗಳು ಹಾಗೂ 41,375 ರೀ ಎಕ್ಸಾಮ್ ಬರೆದಿದ್ದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕೇಂದ್ರ ಸರ್ಕಾರದ ಯಾವ ಯೋಜನೆಯಲ್ಲಿ ಮಹಿಳೆಯರು ಕಡಿಮೆ ಮೊತ್ತ ಹೂಡಿಕೆ ಮಾಡಿ ಹೆಚ್ಚು ಬಡ್ಡಿ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.

ವೆಬ್ಸೈಟ್ ಮೂಲಕ ಫಲಿತಾಂಶ ನೋಡುವುದು ಹೇಗೆ?

  1. ನೀವು ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ವೆಬ್ಸೈಟ್ ಮೂಲಕ ಫಲಿತಾಂಶ ವೀಕ್ಷಣೆ ನೋಡುತ್ತೀರಿ ಎಂದರೆ ಅಧಿಕೃತ ವೆಬ್ಸೈಟ್ https://kseab.karnataka.gov.in ಅಥವಾ https://karresults.nic.in ಅಥವಾ https://sslc.karnataka.gov.in ವೆಬ್ಸೈಟ್ ಗೆ ತೆರಳಿ.
  2. ವೆಬ್ಸೈಟ್ ನಲ್ಲಿ ಫಲಿತಾಂಶಗಳು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  3. ನಂತರ SSLC Exam 1 2024 Result ‘ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
  4. ನಂತರ ನಿಮ್ಮ ಹಾಲ್ ಟಿಕೆಟ್ ನಂಬರ್ ಹಾಕಿ submit ಬಟನ್ ಕ್ಲಿಕ್ ಮಾಡಿದರೆ ನಿಮ್ಮ SSLC ಅಂಕಪಟ್ಟಿ ನೋಡಬಹುದು.

ಇದನ್ನೂ ಓದಿ: ಒಂದು ಬಾರಿಗೆ UPI ಮೂಲಕ ಏಷ್ಟು ಹಣ ವರ್ಗಾವಣೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ. 

ಮೊಬೈಲ್ ನಲ್ಲಿ SMS ಮೂಲಕ ಅಂಕಪಟ್ಟಿ ಪಡೆಯುವುದು ಹೇಗೆ?

ನೀವು ನಿಮ್ಮ ಮೊಬೈಲ್ ಸಂಖ್ಯೆಯಿಂದ ಇಂದ KB10 ಎಂದು ಟೈಪ್ ಮಾಡಿ ನಿಮ್ಮ ಹಾಲ್ ಟಿಕೆಟ್ ನಂಬರ್ ನಮೂದಿಸಿ 56263 ಗೆ SMS ಮಾಡಬೇಕು. ಸ್ವಲ್ಪ ಸಮಯದ ಬಳಿಕ ನಿಮ್ಮ ಮೊಬೈಲ್ ಗೆ SSLC ಫಲಿತಾಂಶದ ಸಂಪೂರ್ಣ ಮಾಹಿತಿಯನ್ನು ಬರುತ್ತದೆ. ಇಂಟರ್ನೆಟ್ ಇಲ್ಲದೆ ಇರುವ ಪ್ರದೇಶಗಳಿಗೆ ಇದು ಬಹಳ ಅನುಕೂಲ ಆಗಿದೆ. ಹಾಗೂ ಇದರ ಜೊತೆಗೆ ನಿಮ್ಮ ಶಾಲೆಯ ನೋಟಿಸ್ ಬೋರ್ಡ್ ನಲ್ಲಿ ಸಹ ಫಲಿತಾಂಶ ನೀಡಲು ಸಾಧ್ಯವಿದೆ. ನೀವು ನೀವು ಓದಿದ ಹೈಸ್ಕೂಲ್ ಗೆ ತೆರಳಿ ಶಾಲಾ ನೋಟಿಸ್‌ ಬೋರ್ಡ್‌ನಲ್ಲಿ ರಿಸಲ್ಟ್‌ ವೀಕ್ಷಣೆ ಮಾಡಬಹುದು.

ಶಾಲೆಯಲ್ಲಿ ಫಲಿತಾಂಶ ದಿನಾಂಕದಂದು ಮಧ್ಯಾಹ್ನದ ವೇಳೆಗೆ ಅಥವಾ ಮರುದಿನ ಬೆಳಗ್ಗೆ ಶಾಲಾ ನೋಟಿಸ್‌ ಬೋರ್ಡ್‌ನಲ್ಲಿ ಫಲಿತಾಂಶ ಪ್ರಕಟಣೆ ಮಾಡಲಾಗುತ್ತದೆ. ಈ ಬಗ್ಗೆ ನೀವು ನಿಮ್ಮ ಶಿಕ್ಷಕರನ್ನು ವಿಚಾರಿಸಿ. ಶಾಲೆಯಲ್ಲಿ ನೀವು ನಿಮ್ಮ ಶಾಲೆಯ ಪ್ರತಿಯೊಬ್ಬರ ಫಲಿತಾಂಶ ನೋಟಿಸ್ ಬೋರ್ಡ್ ನಲ್ಲಿ ನೋಡಲು ಸಾಧ್ಯವಿದೆ. ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಯನ್ನು ಹೇಗೆ ದೈರ್ಯವಾಗಿ ಎದುರಿಸಿದ್ದಿರೋ ಹಾಗೆ ಈ ಫಲಿತಾಂಶವನ್ನು ಎದುರಿಸಿ. ನಿಮ್ಮ ಫಲಿತಾಂಶ ಏನೇ ಇದ್ದರೂ ಜೀವನವನ್ನು ಗೆಲ್ಲಲು ಅನೇಕ ದಾರಿಗಳು ಇವೆ ಎಂಬುದನ್ನು ಮರೆಯಬೇಡಿ.