ದಿನೇ ದಿನೇ ರೈಲ್ವೆ ಇಲಾಖೆಯು ಜನರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಹೊಸ ಹೊಸ ಅನುಕೂಲಕರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ರೈಲ್ವೆ ಇಲಾಖೆಯು ದಿನ ಓಡಾಡುವ ಜನರಲ್ ಬೋಗಿಯ ಪ್ರಯಾಣಿಕರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಆನ್ಲೈನ್ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಜಾರಿ ಗೊಳಿಸಿತ್ತು ಈಗ ಅದರ ಜೊತೆಗೆ ಹೊಸದಾಗಿ ಮತ್ತೆ ಪ್ಲಾಟ್ಫಾರ್ಮ್ ಟಿಕೆಟ್ ಅನ್ನು ಮನೆಯಿಂದ ಹೊರಡುವಾಗಲೇ ಕಾಯ್ದಿರಿಸಬಹುದಾದದ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಪಡೆಯಿರಿ.
ಸೌರಭ್ ಕಟಾರಿಯಾ ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳು ಏನು?: ರೈಲ್ವೆ ಇಲಾಖೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸೌರಭ್ ಕಟಾರಿಯಾ ಅವರು ಹೇಳಿರುವ ಪ್ರಕಾರ ಈ ಹಿಂದಿನಂತೆ ರೈಲ್ವೆ ವ್ಯಾಪ್ತಿಯ ಪ್ರದೇಶದಲ್ಲಿ ಪ್ಲಾಟ್ಫಾರ್ಮ್ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ನೀವು ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ಮೂಲಕ ಪ್ಲಾಟ್ಫಾರ್ಮ್ ಟಿಕೆಟ್ ಪಡೆಯಬಹುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೊಸ ಬದಲಾವಣೆಯಿಂದ ಏನೇನು ಉಪಯೋಗ ಆಗಲಿದೆ?
- ಸಮಯ ಉಳಿತಾಯ: ಈ ಬದಲಾವಣೆಯಿಂದ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಭೇಟಿ ನೀಡದೆಯೇ ಮನೆಯಿಂದಲೇ ಟಿಕೆಟ್ಗಳನ್ನು ಬುಕ್ ಮಾಡಬಹುದು ಇದರಿಂದ ಇದು ಸರತಿ ಸಾಲುಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ.
- ಅನುಕೂಲತೆ: ಈ ಬದಲಾವಣೆಯಿಂದ ಪ್ರಯಾಣಿಕರು ಯಾವುದೇ ಸಮಯದಲ್ಲಿ ಎಲ್ಲಿಂದಲಾದರೂ ತಮ್ಮ ಫೋನ್ ಅಥವಾ ಕಂಪ್ಯೂಟರ್ ತಂತ್ರಾಂಶವನ್ನು ಬಳಸಿ ಟಿಕೆಟ್ ಬುಕ್ ಮಾಡಬಹುದಾಗಿದೆ.
- ಹಣ ಉಳಿತಾಯ: ಆನ್ಲೈನ್ ಟಿಕೆಟ್ ಬುಕಿಂಗ್ಗೆ ಸಾಮಾನ್ಯವಾಗಿ ಕೌಂಟರ್ ಟಿಕೆಟ್ಗೆ ಹೋಲಿಸಿದರೆ ಕಡಿಮೆ ದರವಿರುತ್ತದೆ.
- ಕಡಿಮೆ ಕಾಗದದ ಬಳಕೆ: ಪೇಪರ್ಲೆಸ್ ಟಿಕೆಟ್ಗಳು ಪರಿಸರಕ್ಕೆ ಒಳ್ಳೆಯದು ಎಂಬ ದೃಷ್ಟಿಯಿಂದ ಕಾಗದದ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಆಗುತ್ತದೆ.
ಮುಂಬೈ ಅಂತಹ ರೈಲುಗಳ ಪ್ರಯಾಣಿಕರಿಗೆ ಅನುಕೂಲ :- ಈ ಹೊಸ ಬದಲಾವಣೆಯು ರೈಲು ಪ್ರಯಾಣಿಕರಿಗೆ ಅದರಲ್ಲೂ ವಿಶೇಷವಾಗಿ ಮುಂಬೈನಂತಹ ದೊಡ್ಡ ನಗರಗಳಲ್ಲಿ ಲಕ್ಷಾಂತರ ಜನರು ಸ್ಥಳೀಯ ರೈಲುಗಳ ಪ್ರಯಾಣವನ್ನು ಅವಲಂಬಿಸಿರುತ್ತಾರೆ. ಅಂತಹ ಪ್ರಯಾಣಿಕರಿಗೆ ಈ ಹೊಸ ಬದಲಾವಣೆ ಅನುಕೂಲವಾಗುವ ಸಾಧ್ಯತೆಯಿದೆ. ಈ ಹಿಂದಿನಂತೆ ಪ್ರಯಾಣಿಕರು 20 ಕಿಮೀ ವ್ಯಾಪ್ತಿಯ ಉಪನಗರ ರೈಲುಗಳಿಗೆ ಮತ್ತು ಉಪನಗರೇತರ ರೈಲುಗಳಿಗೆ 50 ಕಿಲೋಮೀಟರ್ಗಳವರೆಗೆ ಮಾತ್ರ ಪೇಪರ್ಲೆಸ್ ಟಿಕೆಟ್ಗಳನ್ನು ಖರೀದಿಸಬಹುದಾಗಿತ್ತು. ಈ ಹೊಸ ಬದಲಾವಣೆಗಳು ಟಿಕೆಟ್ಗಳ ಆನ್ಲೈನ್ ಬುಕಿಂಗ್ ಅನ್ನು ಮತ್ತಷ್ಟು ಹೆಚ್ಚಿಸಬಹುದು, ನಿಲ್ದಾಣದ ಟಿಕೆಟ್ ಕೌಂಟರ್ಗಳಲ್ಲಿ ದೀರ್ಘ ಸರತಿ ಸಾಲುಗಳನ್ನು ಕಡಿಮೆ ಮಾಡಬಹುದು ಮತ್ತು ಪ್ರಯಾಣಿಕರಿಗೆ ಸಮಯ ಮತ್ತು ಹಣವನ್ನು ಉಳಿಸಬಹುದಾಗಿದೆ.
ಇದನ್ನೂ ಓದಿ: 50,000 ರೂಪಾಯಿಗಳ ಒಳಗಿನ ಮಹಿಳೆಯರಿಗೆ ಎಲೆಕ್ಟ್ರಿಕ್ ಸ್ಕೂಟರ್ಗಳು; ಇವುಗಳ ವೈಶಿಷ್ಟತೆಯನ್ನು ನೀವೇ ತಿಳಿಯಿರಿ!
ಹಿಂದಿನ ನಿಯಮವನ್ನು ಬದಲಾವಣೆ ಮಾಡಲಾಗಿದೆ
ಈ ಹಿಂದೆ ರೈಲ್ವೆ ಇಲಾಖೆಯ ನಿಯಮಗಳ ಪ್ರಕಾರ ಟಿಕೆಟ್ಗಳನ್ನು ಕಾಯ್ದಿರಿಸಲು 50 ಕಿಮೀ ತ್ರಿಜ್ಯದ ಹೊರ ಗಡಿ ಜಿಯೋ ಫೆನ್ಸಿಂಗ್ ಅಂತರದ ನಿರ್ಭಂಧ ಇದ್ದಿತ್ತು. ಈಗಿನ ಹೊಸ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ.
ಪ್ರಯಾಣಿಕರಿಗೆ ಈ ಹೊಸ ಉಪಕರಣವನ್ನು ಉಪಯೋಗ ಆಗಲಿದೆ ಹಾಗೂ ಇದರ ಜೊತೆಗೆ ಭಾರತದಲ್ಲಿ ಅಂತರ್ಜಾಲದ ಬಳಕೆಯನ್ನು ಇನ್ನಷ್ಟು ಉತ್ತೇಜನ ನೀಡುವ ಮೂಲಕ ಭಾರತ ಉಳಿದ ದೇಶಗಳಿಗಿಂತ ತಂತ್ರಜ್ಞಾನದಲ್ಲಿ ಮುಂದೆ ಸಾಗಲು ಸಾಧ್ಯ ಆಗುತ್ತಿದೆ. ಜನರ ನಿತ್ಯ ಬದುಕಿನಲ್ಲಿ ನಿಮಿಷಗಳು ಮುಖ್ಯವಾಗಿರುವುದರಿಂದ ಈ ಕ್ರಮಗಳು ಜನರ ಸಮಯವನ್ನು ಉಳಿಸುತ್ತಿದೆ.
ಇದನ್ನೂ ಓದಿ: ಐಷಾರಾಮಿ ಮತ್ತು ಸಾಮರ್ಥ್ಯದ ಸಂಗಮವಾದ ಮಹೀಂದ್ರಾ XUV 3XO ಅನ್ನು ಖರೀದಿಸಿ!