ರಾಜ್ಯದಲ್ಲಿ ಮೇ 7 ಮಂಗಳವಾರದಂದು ಎರಡನೇ ಹಂತದ ಮತದಾನ ನಡೆಯಲಿದ್ದು ಬೆಂಗಳೂರಿನಿಂದ ಮತದಾನ ಮಾಡಲು ಊರಿಗೆ ತೆರಳುವ ಜನರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಈಗ ರೈಲ್ವೆ ಇಲಾಖೆ ವಿಶೇಷ ರೈಲು ಬಿಡಲಿದ್ದು, ರೈಲ್ವೆ ಇಲಾಖೆ ನೀಡಿದ ಮಾಹಿತಿಗಳ ಪೂರ್ಣ ವಿವರಗಳು ಈ ಲೇಖನದಲ್ಲಿ ನೋಡಬಹುದು.
ಬೆಂಗಳೂರಿನಿಂದ ಯಾವ ಯಾವ ನಗರಗಳಿಗೆ ವಿಶೇಷ ರೈಲು ಸಂಚರಿಸಲಿದೆ?: ಬೆಂಗಳೂರಿಂದ ವಿಜಯಪುರ, ಬೀದರ್, ತಾಳಗುಪ್ಪ, ವಿಜಯನಗರ, ಮೈಸೂರು, ಕಾರವಾರ, ಸಂಬಲಪುರ, ಬೆಳಗಾವಿ ನಗರಗಳಿಗೆ ವಿಶೇಷ ರೈಲು ಸಂಚರಿಸಲಿದೆ.
ರೈಲಿನ ಪೂರ್ಣ ಮಾಹಿತಿ :-
1) ವಿಜಯಪುರ :- ಬೆಂಗಳೂರಿಂದ ವಿಜಯಪುರಕ್ಕೆ ಸಂಚರಿಸುವ ರೈಲು ಸಂಖ್ಯೆ 06231. ಈ ರೈಲು ಮೇ 6 ಸೋಮವಾರ ರಾತ್ರಿ 7 ಗಂಟೆಗೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣದಿಂದ ಹೊರಡುತ್ತದೆ. ಹಾಗೂ ರೈಲು ಮೇ 7 ರ ಬೆಳಗ್ಗೆ ವಿಜಯಪುರಕ್ಕೆ ಹೋಗುತ್ತದೆ. ಹಾಗೂ ವಿಜಯಪುರದಿಂದ ಮೇ 7 ಮಂಗಳವಾರ ರಾತ್ರಿ 7 ಗಂಟೆಗೆ ವಿಜಯಪುರ ರೈಲು ನಿಲ್ದಾಣದಿಂದ 06232 ಸಂಖ್ಯೆಯ ರೈಲು ಹೊರಟು ರೈಲು ಮೇ ಬುಧವಾರ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣ ತಲುಪಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
2) ಬೀದರ್ :- ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಬೀದರ್ ಗೆ ಹೊರಡುವ ರೈಲು ಸಂಖ್ಯೆ 06227. ಈ ರೈಲು ಮೇ 6 ಸೋಮವಾರ ತಡ ರಾತ್ರಿ 11 ಗಂಟೆಗೆ ಹೊರಟು ಮೇ 07 ಮಂಗಳವಾರದಂದು ಬೀದರ್ ರೈಲು ನಿಲ್ದಾಣ ತಲುಪಲಿದೆ. ಹಾಗೂ ಅದೇ ದಿನ ಮಧ್ಯಾಹ್ನ 02:10 ನಿಮಿಷಕ್ಕೆ ಬೀದರ್ ರೈಲು ನಿಲ್ದಾಣದಿಂದ ರೈಲು ಸಂಖ್ಯೆ 06228 ಹೊರಟು ಮೇ 8 ರಂದು ಯಶವಂತಪುರ ರೈಲು ನಿಲ್ದಾಣಕ್ಕೆ ಬರಲಿದೆ.
3) ವಿಜಯನಗರ :- ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ವಿಜಯಪುರಕ್ಕೆ ಹೊರಡುವ ರೈಲಿನ ಸಂಖ್ಯೆ 07319. ಈ ರೈಲು ಮೇ 6 ಸೋಮವಾರ ರಾತ್ರಿ 9 ಗಂಟೆಗೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಟು ಮೇ 07 ಮಂಗಳವಾರದಂದು ವಿಜಯನಗರಕ್ಕೆ ತಲುಪುತ್ತದೆ ಹಾಗೂ ವಿಜಯನಗರದಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರ ಅನುಕೂಲಕ್ಕೆ ಹೊರಡುವ ವಿಜಯನಗರದಿಂದ ಹೊರಡುವ ರೈಲು ಸಂಖ್ಯೆ 07320. ಈ ರೈಲು ಮೇ 7 ರಂದು ವಿಜಯನಗರದಿಂದ ಹೊರಟು ಮೇ 8 ರಂದು ಯಶವಂತಪುರ ರೈಲು ನಿಲ್ದಾಣ ತಲುಪಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
4) ತಾಳಗುಪ್ಪ :
ಬೆಂಗಳೂರಿನಿಂದ ತಾಳಗುಪ್ಪ ಹೋಗುವ ಪ್ರಯಾಣಿಕರಿಗೆ ವಿಶೇಷ ರೈಲು ಸಂಖ್ಯೆ 07373. ಈ ರೈಲು ಮೇ 6 ಸೋಮವಾರ ರಾತ್ರಿ 9 ಗಂಟೆಗೆ ಮೈಸೂರು ರೈಲು ನಿಲ್ದಾಣದಿಂದ ಹೊರಟು ಬೆಂಗಳೂರು ಮಾರ್ಗವಾಗಿ ರೈಲು ಮೇ 07 ರಂದು ಬೆಳಗ್ಗೆ ತಾಳಗುಪ್ಪ ತಲುಪುತ್ತದೆ. ಹಾಗೆಯೇ ತಾಳಗುಪ್ಪ ಇಂದ 07374 ರೈಲು ಸಂಖ್ಯೆಯ ಗಾಡಿ ಮೇ 7 ರಂದು ಸಂಜೆ 6 ಗಂಟೆಗೆ ತಾಳಗುಪ್ಪ ಇಂದ ಬೆಂಗಳೂರು ಮಾರ್ಗವಾಗಿ ಮೇ 8 ರಂದು ಮೈಸೂರು ರೈಲು ನಿಲ್ದಾಣ ತಲುಪಲಿದೆ.
5) ಬೆಳಗಾವಿ :- ಬೆಂಗಳೂರಿನಿಂದ ಬೆಳಗಾವಿಗೆ ಹೊರಡುವ ರೈಲು ಸಂಖ್ಯೆ 07317. ಈ ರೈಲು ಮೇ 6 ಸೋಮವಾರ ಬೆಳಿಗ್ಗೆ 8:45ಕ್ಕೆ ಬೆಳಗಾವಿಯಿಂದ ಹೊರಟು ರಾತ್ರಿ 8:15 ಗಂಟೆಗೆ ಮೈಸೂರು ರೈಲು ನಿಲ್ದಾಣ ತಲುಪುತ್ತದೆ. ಹಾಗೂ 07375 ಅಂಕೆಯ ರೈಲು ಮೇ 6 ಸೋಮವಾರ ಬೆಳಗ್ಗೆ 8 ಗಂಟೆಗೆ ಬೆಳಗಾವಿಯಿಂದ ಹೊರಟು ರಾತ್ರಿ 8 ಗಂಟೆಗೆ ಯಶವಂತಪುರ ರೈಲು ನಿಲ್ದಾಣ ತಲುಪುತ್ತದೆ.
6) ಕಾರವಾರ :- ಮೈಸೂರಿನಿಂದ ಕಾರವಾರಕ್ಕೆ ಹೋಗುವ ರೈಲು ಸಂಖ್ಯೆ 06241. ಈ ರೈಲು ಮೇ 6 ಸೋಮವಾರ ರಾತ್ರಿ 8:15ಕ್ಕೆ ಮೈಸೂರು ರೈಲು ನಿಲ್ದಾಣದಿಂದ ಹೊರಟು ಮೇ 07 ಮಂಗಳವಾರ ಕಾರವಾರ ರೈಲು ನಿಲ್ದಾಣ ತಲುಪುತ್ತದೆ. ಹಾಗೂ ಮೇ 7 ಮಂಗಳವಾರ ರಾತ್ರಿ 10 ಗಂಟೆಗೆ ಕಾರವಾರ ರೈಲು ನಿಲ್ದಾಣದಿಂದ 06242 ಸಂಖ್ಯೆಯ ರೈಲು 08 ರಂದು ಮೈಸೂರು ರೈಲು ನಿಲ್ದಾಣ ತಲುಪುತ್ತದೆ.
7) ಸಂಬಲಾಪುರ:- 08321 ಅಂಕೆಯ ರೈಲು ಮೇ 9 ಹಾಗೂ 16 ರಂದು ಸಂಬಲಪುರದಿಂದ ಹೊರಟು ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಬರಲಿದೆ. ಹಾಗೂ 08322 ಸಂಖ್ಯೆ ರೈಲು ಮೇ 11 ಮತ್ತು 18 ರಂದು ಬೆಂಗಳೂರಿಂದ ಸಂಬಲಾಪುರಕ್ಕೆ ತೆರಳಲಿದೆ.
ಇದನ್ನೂ ಓದಿ: ಕೆಲವು ಷರತ್ತುಗಳನ್ನು ಪೂರೈಸಿದರೆ ನೀವು 50,000 EPFO ಬೋನಸ್ ಹಣವನ್ನು ಕಡೆಯಬಹುದು.