ಇಂದು ಬೆಳಗ್ಗೆ 10.30 ಗಂಟೆಗೆ SSLC ಪರೀಕ್ಷೆ ಒಂದರ ಫಲಿತಾಂಶ ಬಿಡುಗಡೆ ಆಗಿದೆ. ರಾಜ್ಯದಲ್ಲಿ ಶೇಕಡಾ 10% ಫಲಿತಾಂಶ ಇಳಿಕೆ ಕಂಡಿದೆ ಎಂಬ ಸುದ್ದಿ ಪ್ರಕಟ ಆಗಿದೆ. ಇದರ ಬೆನ್ನಲ್ಲೇ ಈಗ SSLC ಪರೀಕ್ಷೆ ಎರಡರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಪರಿಕ್ಷೆ ವೇಳಾಪಟ್ಟಿಯ ಮಾಹಿತಿ ಇಲ್ಲಿದೆ.
SSLC ಪರಿಕ್ಷೆ -2 ರ ಬಗ್ಗೆ ಮಾಹಿತಿ :- ನೀವು SSLC ಪರೀಕ್ಷೆ -1 ರಲ್ಲಿ ಕಡಿಮೆ ಅಂಕ ಗಳಿಸಿದ್ದರೆ ಅಥವಾ ಫೇಲ್ ಆಗಿದ್ದರೆ ನೀವು SSLC ಪರಿಕ್ಷೆ -2 ರಲ್ಲಿ ಮತ್ತೆ ಪರೀಕ್ಷೆ ಬರೆದು ಹೆಚ್ಚಿನ ಅಂಕಗಳನ್ನು ಗಳಿಸಬಹುದು. ಈ ಬಾರಿಯ ವಿಶೇಷತೆ ಏನೆಂದರೆ ನಿಮಗೆ ಮಾರ್ಕ್ಸ್ ಕಾರ್ಡ್ ನಲ್ಲಿ ಮರು ಪರೀಕ್ಷೆ ಬರೆದ ಬಗ್ಗೆ ಮಾಹಿತಿ ಇರುವುದಿಲ್ಲ.
SSLC ಪರೀಕ್ಷೆ -2ರ ವೇಳಾಪಟ್ಟಿ :- SSLC ಪರೀಕ್ಷೆ -2ರಯು ಮುಂಬರುವ ಜೂನ್ 7ರಿಂದ 14ರವರೆಗೆ ಪರೀಕ್ಷೆ ನಡೆಯಲಿದ್ದು ವೇಳಾಪಟ್ಟಿ ಈ ಕೆಳಗಿನಂತಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
- 07-06-2024-ಶುಕ್ರವಾರ – ಪ್ರಥಮ ಭಾಷೆ.
- 08-06-2024-ಶನಿವಾರ – ತೃತೀಯ ಭಾಷೆ.
- 10-06-2024- ಸೋಮವಾರ- ಗಣಿತ, ಸಮಾಜ ಶಾಸ್ತ್ರ.
- 11-06-2024- ಮಂಗಳವಾರ – ಅರ್ಥ ಶಾಸ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್.
- 12-6-2024- ಬುಧವಾರ – ವಿಜ್ಞಾನ ಹಾಗೂ ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ.
- 13-6-2024-ಗುರುವಾರ – ದ್ವಿತೀಯ ಭಾಷೆ.
- 14-6-2024 –ಶುಕ್ರವಾರ ಸಮಾಜ ವಿಜ್ಞಾನ.
ಎಸ್ಎಸ್ಎಲ್ಸಿ ಪರೀಕ್ಷೆ -2ರ ಪರೀಕ್ಷಾ ಸಮಯ :- ಬೆಳಗ್ಗೆ 10:15 ಗಂಟೆಯಿಂದ ಮಧ್ಯಾಹ್ನ 1:30 ಗಂಟೆಯ ವರೆಗೆ ಪ್ರತಿ ಪರೀಕ್ಷೆ ನಡೆಯಲಿದ್ದು ಆರಂಭಿಕ 15 ನಿಮಿಷಗಳನ್ನು ಪ್ರಶ್ನೆ ಪತ್ರಿಕೆ ಓದಲು ನೀಡಿದ್ದಾರೆ.
ಇದನ್ನೂ ಓದಿ: SSLC ನಂತರ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಯೋಚನೆಯೇ ಹಾಗಾದರೆ ಈ ಲೇಖನವನ್ನು ನೋಡಿ
ಸೂಚನೆಗಳು ಈ ಕೆಳಗಿನಂತೆ ಇವೆ:-
1) ಜೂನ್ 15 2024 ರಂದು, ಜೆಟಿಎಸ್ ವಿದ್ಯಾರ್ಥಿಗಳಿಗೆ ಜೆಟಿಎಸ್ ಕೋಡ್ 15 ಮತ್ತು 60 ರ ವಿಷಯಗಳಿಗೆ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿಯೇ ನಡೆಸುತ್ತಾರೆ ಜೊತೆಗೆ ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ವಿಷಯಗಳ ಪರೀಕ್ಷೆ ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 5:15 ಗಂಟೆಯ ವರೆಗೆ ಇರುತ್ತದೆ. ಹಾಗೂ ತಾತ್ವಿಕ ಪರೀಕ್ಷೆಯು ಮಧ್ಯಾಹ್ನ 2:00 ಗಂಟೆಯಿಂದ ಮಧ್ಯಾಹ್ನ 3:45 ಗಂಟೆಯ ವರೆಗೆ ಮತ್ತು ಪ್ರಾಯೋಗಿಕ ಪರೀಕ್ಷೆಯು ಮಧ್ಯಾಹ್ನ 3:45 ಗಂಟೆಯಿಂದ ಸಾಯಂಕಾಲ 5:15 ಗಂಟೆಯ ವರೆಗೆ ಇರುತ್ತದೆ.
2) ಅಂಗವಿಕಲ ಅಥವಾ ವಿಕಲಚೇತನ ಮಕ್ಕಳಿಗೆ ಪರೀಕ್ಷೆ ಬರೆಯಲು ಇನ್ನೊಬ್ಬರ ಸಹಾಯ ನಡೆಯುವ ಅವಕಾಶ ಇರುತ್ತದೆ. ಇಂತಹ ಮಕ್ಕಳಿಗೆ ಹೆಚ್ಚುವರಿಯಾಗಿ ಒಂದು ಗಂಟೆಯನ್ನು ನೀಡಲಾಗುತ್ತದೆ.
3) ಪ್ರಥಮ ಭಾಷೆ ಹಾಗೂ ಐಚ್ಛಿಕ ವಿಷಯಕಗಳ ಪರೀಕ್ಷೆಯ ಒಟ್ಟು ಸಮಯ 3.15 ಗಂಟೆಗಳು ಆಗಿರುತ್ತವೆ ಹಾಗೂ ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆ ಪರೀಕ್ಷೆಗಳಿಗೆ ಮೂರು ಗಂಟೆಗಳು ಇರುತ್ತವೆ.
4) ಎನ್.ಎಸ್.ಕ್ಯೂ.ಎಫ್ ವಿಷಯಗಳ ಪರೀಕ್ಷೆಗೆ ಬೆಳಗ್ಗೆ 10.15 ಗಂಟೆಯಿಂದ 12.30 ಗಂಟೆಯವರೆಗೆ ಇರುತ್ತದೆ.
ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆ ಇದೆಯಾ? ಚಿಂತಿಸಬೇಡಿ! ಈ ಸಲಹೆಗಳೊಂದಿಗೆ ಸುಲಭವಾಗಿ ಸಾಲ ಪಡೆಯಿರಿ!
ಇದನ್ನೂ ಓದಿ: ಇತ್ತೀಚೆಗೆ ಬಿಡುಗಡೆಯಾದ 10 ಸಾವಿರ ರೂಪಾಯಿ ಗಿಂತ ಕಡಿಮೆ ಬೆಲೆಯಲ್ಲಿ ಸಿಗುವ ಬೆಸ್ಟ್ ಫೋನ್ ಗಳು..