ಭಾರತೀಯರ ಪಾಲಿನ ಕನಸು ನನಸಾಗುವ ಸಮಯ ಬಂದಿದೆ. ಯಾವುದೋ ದೂರದ ದೇಶದಲ್ಲಿ ಬುಲೆಟ್ ಟ್ರೆನ್, ಸುಚ್ಚಜಿತ ವ್ಯವಸ್ಥೆಗಳ ಬಗ್ಗೆ ಜನರು ಮಾತನಾಡುತ್ತಿದ್ದರು. ಇನ್ನು ಮುಂದೆ ಭಾರತದ ವಂದೇ ಭಾರತ್ ಟ್ರೈನ್ ಬಗ್ಗೆ ಜಗತ್ತಿನ ದಿಗ್ಗಜ ರಾಷ್ಟ್ರಗಳು ಮಾತನಾಡುವ ದಿನ ಬರುತ್ತಿದೆ. ನರೇಂದ್ರ ಮೋದಿ ಅವರ ಕನಸಿನ ಕನ್ನಡಿಯಾಗಿ ಇನ್ನೆರಡು ತಿಂಗಳಲ್ಲಿ ಭಾರತದಲ್ಲಿ ವಂದೇ ಭಾರತ್ ರೈಲು ಸಂಚಸಲಿದೆ. ಮೊದಲು ಭಾರತದಲ್ಲಿ ಯಾವ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚರಿಸಲಿದೆ ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಯಾವಾಗಿನಿಂದ ವಂದೇ ಭಾರತ್ ಟ್ರೈನ್ ಸಂಚರಿಸಲಿದೆ?: ವಂದೇ ಭಾರತ್ ಟ್ರೈನ್ ಪ್ರಾಯೋಗಿಕವಾಗಿ ಇದೆ ಬರುವ ಜುಲೈ ತಿಂಗಳಿನಿಂದ ಆರಂಭ ಆಗುವ ನಿರೀಕ್ಷೆ ಇದೆ. ಪ್ರಾಯೋಗಿಕವಾಗಿ ಕೆಲವು ರಾಜ್ಯಗಳಲ್ಲಿ ವಂದೇ ಭಾರತ್ ರೈಲು ಸಂಚಾರಿಯಲ್ಲಿದ್ದು, ಯಾವ ಯಾವ ರಾಜ್ಯದಲ್ಲಿ ಪ್ರಾಯೋಗಿಕ ಸಂಚಾರ ನಡೆಯಲಿದೆ ಎಂಬ ಬಗ್ಗೆ ನಿಖರ ಮಾಹಿತಿಗಳು ಲಭ್ಯ ಇಲ್ಲ.
ಅಂತರ್ ರಾಜ್ಯ ಸಂಪರ್ಕಿಸುವ ನಿರೀಕ್ಷೆ ಹೊಂದಿದೆ :- ವಂದೇ ಭಾರತ್ ಟ್ರೈನ್ ಸ್ಲೀಪರ್ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ನಿರೀಕ್ಷೆ ಹೊಂದಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಯಾವುದೇ ಮಾರ್ಗದಿಂದ ಸಾಮಾನ್ಯ ಜನರು ಸಂಪರ್ಕ ಸಾಧಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ ಅತಿ ವೇಗವಾಗಿ ಚಲಿಸುವ ಒಂದೇ ಭಾರತ್ ರೈಲು ಕಡಿಮೆ ಸಮಯದಲ್ಲಿ ಹೆಚ್ಚಿನ ದೂರದ ಪ್ರದೇಶಗಳನ್ನು ತಲುಪಲು ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಂದೇ ಭಾರತ್ ಟ್ರೈನ್ ಸ್ಲೀಪರ್ 15 ಬೋಗಿ ಹೊಂದಿರಲಿದೆ. :-
ವಂದೇ ಭಾರತ್ ಸ್ಲೀಪರ್ ಟ್ರೈನ್ ನಲ್ಲಿ ಒಟ್ಟು 15 ಬೋಗಿಗಳು ಇರಲಿದ್ದು ಎಲ್ಲಾ ಬೋಗಿಗಳು ಸ್ಲೀಪರ್ ಕೋಚ್ ಹೊಂದಿರಲಿದೆ. ಹಾಗೂ ಒಂದೇ ಭಾರತ್ ಟ್ರೈನ್ ರಾತ್ರಿಯ ವೇಳೆಯಲ್ಲಿ ಮಾತ್ರ ಸಂಚಾರ ನಡೆಸಲಿದೆ ಎಂಬ ಮಾಹಿತಿಗಳು ಲಭ್ಯ ಇದೆ.
ಎಷ್ಟು ದೂರದ ವರಗೆ ಕ್ರಮಿಸಲಿದೆ?: ವಂದೇ ಭಾರತ್ ಟ್ರೈನ್ ನ ಸ್ಲೀಪರ್ ಒಂದು ಬಾರಿಗೆ 1,000 ಕಿಲೋ ಮೀಟರ್ ಗಳ ವರೆಗೆ ಸಂಚಾರ ಮಾಡಲಿದೆ. ವಂದೇ ಭಾರತ್ ಟ್ರೈನ್ ಗಂಟೆಗೆ 160 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯ ಹೊಂದಿರಲಿದೆ.
ಯಾವ ಯಾವ ಪ್ರದೇಶಗಳಿಗೆ ಸಂಪರ್ಕ ಸಾಧಿಸಲಿದೆ?: ವಂದೇ ಭಾರತ್ ಟ್ರೈನ್ ನ ಸ್ಲೀಪರ್ ಕೋಚ್ ಮೊದಲ ಹಂತದಲ್ಲಿ ಮುಂಬೈ ಮತ್ತು ಅಯೋಧ್ಯೆಗೆ ಸಂಪರ್ಕಿಸುತ್ತದೆ. ಹಾಗೆ ಎರಡನೇ ಮಾರ್ಗ ಮಧ್ಯ ಪ್ರದೇಶ ಮತ್ತು ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ಸಾಧ್ಯತೆ ಇದೇ. ಇನ್ನೊಂದು ಮಾರ್ಗದ ರೈಲು ಮಧ್ಯ ಪ್ರದೇಶ ಮತ್ತು ರಾಜಸ್ಥಾನವನ್ನೂ ಸಂಪರ್ಕಿಸುತ್ತದೆ.
ಇದನ್ನೂ ಓದಿ: ರೈಲ್ವೆ ಪ್ರಯಾಣ ಮಾಡುವಾಗ ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬೇಡಿ! ಬೀಳುತ್ತೆ ದಂಡ
ವಂದೇ ಭಾರತ್ ಟ್ರೇನ್ಗಳು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ :-
ಸಂಪೂರ್ಣವಾಗಿ ಸ್ಲೀಪರ್ ಕೋಚ್ ಹೊಂದಿರಲಿದೆ. ಸಂಪೂರ್ಣ ರಿವಾಲ್ವಿಂಗ್ ಸೀಟ್ಗಳು ಇರುತ್ತವೆಂ ಜೊತೆಗೆ ಟ್ರೈನ್ ನಲ್ಲಿ ಎಲ್ ಇಡಿ ಲೈಟಿಂಗ್ ವ್ಯವಸ್ಥೆ ಹೊಂದಿರಳಿದೆ. ಇನ್ನೊಂದು ವಿಶೇಷತೆ ಎಂದರೆ ಸ್ವಯಂಚಾಲಿತ ಬಾಗಿಲುಗಳು ವಂದೇ ಭಾರತ್ ಟ್ರೈನ್ ನಲ್ಲಿ ಇರಲಿದೆ. ಉಚಿತ ವೈಫೈ ವ್ಯವಸ್ಥೆ ಇರ್ಲೈಡ್. ಜೊತೆಗೆ ವಾಟರ್ ವೆಂಡರ್ಗಳು ಹಾಗೂ ಟೀ ಮತ್ತು ಕಾಫಿ ವೆಂಡರ್ಗಳು ಹಾಗೂ ಫೈರ್ ಅಲಾರ್ಮ್ ವ್ಯವಸ್ಥೆ ಇರಲಿದೆ. ರೈಲಿನ ಪ್ರಯಾಣಿಕರ ಸುರಕ್ಷತೆಗೆ CCTV ಕ್ಯಾಮೆರಾಗಳ ಅಳವಡಿಕೆ ಇರಲಿದೆ ಎಂಬ ಮಾಹಿತಿಗಳು ಲಭ್ಯ ಇವೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಸ್ಕೀಮ್ ನಲ್ಲಿ 5 ವರ್ಷ ಹೂಡಿಕೆ ಮಾಡಿ 15 ಲಕ್ಷ ರೂಪಾಯಿ ಗಳಿಸಿರಿ