ಈಗಿನ ಕಾಲದಲ್ಲಿ ಯಾವುದೇ ವಸ್ತು ತೆಗೆದುಕೊಳ್ಳಬೇಕು ಎಂದರು ಸಹ ಮೊದಲು ಹಣ ನೀಡಬೇಕು. ಹಾಗಿದ್ದಾಗ ಒಂದು ನೋಟ್ ಹರಿದು ಹೋಯಿತು ಎಂದರೆ ನಮಗೆ ಬಹಳ ಬೇಸರ ಆಗುತ್ತದೆ. ನೋಟ್ ಗೆ ಗಮ್ ಹಚ್ಚಿ ನೀಡುವವರು ಇದ್ದಾರೆ ಆದರೆ ಅಂತಹ ನೋಟಿನ ಚಲಾವಣೆ ಕಷ್ಟ. ಹಾಗೂ ಇಂತಹ ನೋಟ್ ಗಳನ್ನು ಯಾವುದೇ ಅಂಗಡಿ ಅಥವಾ ಕಚೇರಿಗಳಲ್ಲಿ ತೆಗೆದುಕೊಳ್ಳುವುದು ಇಲ್ಲ. ಹಾಗಿದ್ದಾಗ ನಿಮ್ಮ ಬಳಿ ಇರುವ ನೋಟ್ ಅನ್ನು ಏನು ಮಾಡಬೇಕು ಎಂಬ ಯೋಚನೆ ನಿಮಗೆ ಇದ್ದರೆ ಇಲ್ಲಿದೆ ಸಿಂಪಲ್ ಸ್ಟೆಪ್ಸ್.
ನಿಮ್ಮ ಹತ್ತಿರದ ಬ್ಯಾಂಕ್ ಗೆ ತೆರಳಿ ನೋಟ್ ಎಕ್ಸ್ಚೇಂಜ್ ಮಾಡಿಸಿ :- ನಿಮ್ಮ ಬಳಿ ಯಾವುದೇ ಹರಿದ ನೋಟ್ ಇದ್ದರೆ ನೀವು ನೇರವಾಗಿ ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ನೀವು ಹಳೆಯದಾದ ಅಥವಾ ಹರಿದು ಹೋಗಿರುವ ನೋಟ್ ನೀಡಿದರೆ ನಿಮಗೆ ಹೊಸ ನೋಟ್ ನೋಡುತ್ತಾರೆ. ಇದರಿಂದ ನಿಮ್ಮ ಬಳಿ ಇರುವ ಹರಿದ ನೋಟಿಗೆ ಸಮನಾದ ಇನ್ನೊಂದು ನೋಟ್ ಸಿಕ್ಕಂತೆ ಆಗುತ್ತದೆ. ನೀವು ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಗೆ ಹೋಗಬಹುದು. ನ್ಯಾಷನಲ್ ಬ್ಯಾಂಕ್ ಅಥವಾ ಯಾವುದೇ ಸಣ್ಣ ಬ್ಯಾಂಕ್ ನಲ್ಲಿ ಸಹ ನೋಟ್ ಬದಲಾವಣೆ ಮಾಡಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕೊಳೆ ಆಗಿರುವ ನೋಟ್ ಸಹ ಬದಲಾವಣೆ ಮಾಡಬಹುದು :-
ಹರಿದ ನೋಟ್ ಜೊತೆಗೆ ನಿಮ್ಮ ಬಳಿ ಇರುವ ಯಾವುದೇ ಮಣ್ಣು ಅಥವಾ ಯಾವುದೇ ಕಲೆ ತಾಗಿರುವ ನೋಟ್ ಅಥವಾ ಬರೆದ ನೋಟ್ ಗಳು ಇದ್ದರೆ ನಿಮ್ಮ ಬಳಿ ಇರುವ ನೋಟ್ ಅನ್ನು ಬ್ಯಾಂಕ್ ಗೆ ನೀಡಿದರೆ ಅದಕ್ಕೆ ಮಾನ್ಯವಾಗುವ ಇನ್ನೊಂದು ನೋಟ್ ಬ್ಯಾಂಕ್ ನಿಮಗೆ ನೀಡುತ್ತದೆ. ಇದು ಸಹ ದೇಶದ ಯಾವುದೇ ಬ್ಯಾಂಕ್ ನಲ್ಲಿ ಸಹ ಎಕ್ಸ್ಚೇಂಜ್ ವ್ಯವಸ್ಥೆ ಇರುತ್ತದೆ.
ನೋಟ್ ನ ಒಂದು ಭಾಗ ಆದರೂ ಸರಿಯಾಗಿ ಇರಬೇಕು:- ಹರಿದ ನೋಟ್ ಅನ್ನು ಬ್ಯಾಂಕ್ ಗೆ ನೀಡುವಾಗ ಅರ್ಧ ನೋಟ್ ಆದರೂ ಸರಿಯಾಗಿ ಕಾಣುವಂತ ನೋಟ್ ನೀಡಬೇಕು. ಹಾಗೂ ನೋಟ್ ಸಂಖ್ಯೆ ಸರಿಯಾಗಿ ಕಾಣಬೇಕು ಎಂಬ ಅಂಶವನ್ನು ನೆನಪಿಟ್ಟುಕೊಳ್ಳಿ.
ಯಾವ ರೀತಿಯ ನೋಟ್ ಬ್ಯಾಂಕ್ ಸ್ವೀಕರಿಸುವುದಿಲ್ಲ?: ಸುಟ್ಟ ಅಥವಾ ಹಾಳಾದ ನೋಟಿನ ಒಂದು ಭಾಗವು ಕಾಣದಿದ್ದರೆ ಅಥವಾ ಹಾನಿಗೊಳಗಾಗಿದ್ದರೆ, ಅದರ ಮೂಲ ಮೌಲ್ಯವನ್ನು ನಿರ್ಣಯಿಸುವುದು ಕಷ್ಟಕರವಾಗಿದೆ ಹಾಗೂ ನೋಟುಗಳನ್ನು ನಕಲಿ ಮಾಡಲು ಸುಲಭವಾಗಿದೆ, ಇದು ವಂಚನೆ ಮಾಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಸುಟ್ಟ ಅಥವಾ ಸಂಪೂರ್ಣವಾಗಿ ಹಾಳಾದ ನೋಟುಗಳನ್ನು ಬ್ಯಾಂಕ್ ಶಾಖೆಗಳು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ.
ಇದನ್ನೂ ಓದಿ: ಕರ್ನಾಟಕ ರೈತರ ಗಮನಕ್ಕೆ; ಪಹಣಿಗೆ ಇನ್ಮುಂದೆ ಆಧಾರ್ ಲಿಂಕ್ ಕಡ್ಡಾಯ.
ಸುಟ್ಟ ನೋಟ್ RBI ಸ್ವೀಕರಿಸುತ್ತದೆ :-
ನಿಮ್ಮ ಬಳಿ ಸುಟ್ಟ ಅಥವಾ ಬಹುಪಾಲು ಹರಿದ ನೋಟ್ ಇದ್ದರೆ ನಿಮ್ಮ ಹತ್ತಿರದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಿ ನಿಮ್ಮ ನೋಟ್ ನೀಡಬಹುದು. ಆದರೆ RBI ನೋಟ್ ಸ್ವೀಕರಿಸಲು ಕೆಲವು ನಿಬಂಧೆಗಳು ಇವೆ. ಅವು ಏನೆಂದರೆ ನೋಟಿನ ಸರಣಿ ಸಂಖ್ಯೆ ಮತ್ತು ಸಹಿ ಸೇರಿದಂತೆ ಕೆಲವು ಪ್ರಮುಖ ಭಾಗಗಳು ಉಳಿದಿವೆ ಎಂದಾದರೆ RBI ನೋಟ್ ಸ್ವೀಕರಿಸುತ್ತದೆ. ಅಥವಾ ಯಾವುದಾದರೂ ಅಗ್ನಿ ಅವಘಡದಲ್ಲಿ ನೋಟ್ ಹಾಳಾದರೆ ಅದನ್ನು RBI ಸ್ವೀಕರಿಸುತ್ತದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ.