ಕೆಲವು ವರ್ಷಗಳ ಹಿಂದೆ ಉದ್ಯೋಗಿಗಳಿಗೆ ಸುಲಭವಾಗಿ ಹಣ ಪಡೆಯಲು ಸಹಾಯ ಮಾಡುವ ಸ್ವಯಂ-ಸೆಟಲ್ಮೆಂಟ್ ಸೌಲಭ್ಯವನ್ನು EPFO ಪರಿಚಯ ಮಾಡಿತು. ಈ ಸೌಲಭ್ಯ 1952 ಇಪಿಎಫ್ ಯೋಜನೆ 68ಜೆ, 68ಕೆ ಮತ್ತು 68ಬಿ ವಿಭಾಗಗಳ ಅಡಿಯಲ್ಲಿ ಕ್ಲೈಮ್ಗಳನ್ನು ಸ್ವಯಂಚಾಲಿತವಾಗಿ ಮಾಡಲು, ಅಂದರೆ ಇಪಿಎಫ್ಒ ಅಧಿಕಾರಿಗಳ ಅನುಮೋದನೆ ಬೇಕೆಂಬ ಹಳೆಯ ನಿಯಮ ಇರುವುದಿಲ್ಲ. ಎಲ್ಲವೂ ಈಗ ಆನ್ಲೈನ್ ಮೂಲಕವೇ ಆಗುತ್ತದೆ. ಈಗ ಆಟೊ ಸೆಟಲ್ಮೆಂಟ್ ಸೌಲಭ್ಯದಲ್ಲಿ ಹಿಂಪಡೆಯಲಾಗುವ ಹಣದ ಮಿತಿಯನ್ನು ಎರಡು ಪಟ್ಟು ಹೆಚ್ಚಳ ಮಾಡಲಾಗಿದೆ. ಈಗ ಸಲ್ಲಿಸಿದ ಕೈಮ್ ಗಳು ತಿರಸ್ಕಾರ ಆಗುತ್ತಿವೆ ಎಂಬ ಬಗ್ಗೆ ಹಲವು ದೂರುಗಳು ಬಂದಿದ್ದು ಇಲಾಖೆಯು ನಿಯಮದಲ್ಲಿ ಕೊಂಚ ಬದಲಾವಣೆ ಮಾಡಿದೆ.
EPFO ಸ್ಕೀಮ್ ಗಳ ಬಗ್ಗೆ ಮಾಹಿತಿ :-
- ಪ್ಯಾರಾ 68ಬಿ: ಈ ಸ್ಕೀಮ್ ನ ಅಡಿಯಲ್ಲಿ, ನೀವು ಮನೆ ಅಥವಾ ನಿವೇಶನ ಖರೀದಿಸಲು ಅಥವಾ ಮನೆ ಕಟ್ಟಲು ಹಣವನ್ನು ಪಡೆಯಬಹುದು.
- ಪ್ಯಾರಾ 68ಕೆ: ಈ ಸ್ಕೀಮ್ ನ ಅಡಿಯಲ್ಲಿ, ನೀವು ಮದುವೆ ಅಥವಾ ಉನ್ನತ ಶಿಕ್ಷಣಕ್ಕಾಗಿ ಇಪಿಎಫ್ ಮುಂಗಡ ಪಡೆಯಬಹುದು.ಮದುವೆ ಎಂದರೆ ಇಪಿಎಫ್ ಸದಸ್ಯರ ಮದುವೆಯೇ ಎಂದರ್ಥವಲ್ಲ. ಸದಸ್ಯರ ಮಕ್ಕಳು ಅಥವಾ ಸಹೋದರ ಅಥವಾ ಸಹೋದರಿಯವರ ಮದುವೆ ನಡೆಯುವುದಿದ್ದರೆ ಆಗಲು ಸಹ ಪಿಎಫ್ ಹಣ ಹಿಂಪಡೆಯಬಹುದು.
- ಪ್ಯಾರಾ 68 ಜೆ: ಈ ಸ್ಕೀಮ್ ನ ಅಡಿಯಲ್ಲಿ, ನಿರ್ದಿಷ್ಟ ಕಾಯಿಲೆಗಳಿಂದ ಬಳಲುತ್ತಿರುವವರು ಚಿಕಿತ್ಸೆಗೆ ಹಣವನ್ನು ಪಡೆಯಬಹುದು.
EPFO ಅಡ್ವಾನ್ಸ್ ಹಣ ಪಡೆಯುವ ಮಿತಿ ಎರಡು ಪಟ್ಟು ಹೆಚ್ಚಿಸಲಾಗಿದೆ.:- 68ಬಿ, 68ಜೆ ಮತ್ತು 68ಕೆ ಸ್ಕೀಮ್ ನ ಅಡಿಯಲ್ಲಿ ಸಲ್ಲಿಸಲಾಗುವ ಕ್ಲೆಮ್ಗಳನ್ನು ಸ್ವಯಂಚಾಲಿತವಾಗಿ ಪಡೆಯಬಹುದಾಗಿದೆ. ಈ ಹಿಂದೆ 50,000 ರೂಪಾಯಿಗಳ ಮಿತಿ ಇದ್ದಿತ್ತು. ಈಗ ಮಿತಿಯನ್ನು ಒಂದು ಲಕ್ಷ ರೂಪಾಯಿಯ ವರೆಗೆ ಹೆಚ್ಚಿಸಲಾಗಿದೆ. ಒಂದು ಲಕ್ಷ ರೂಪಾಯಿಯ ವರೆಗೆ ಯಾವುದೇ ಅಧಿಕಾರಿಗಳು ಮಧ್ಯ ಪ್ರವೇಶ ಮಾಡುವುದು ಇಲ್ಲ. ಇನ್ನು ಹೆಚ್ಚಿನ ಹಣಕ್ಕೆ ನೀವು ಅಧಿಕಾರಿಗಳ ಅನುಮತಿ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹರಿದ ನೋಟ್ ಏನು ಮಾಡ್ಬೇಕು ಎಂಬ ಚಿಂತೆ ಕಾಡುತ್ತಿದೆಯ ಹಾಗಾದರೆ ಈ ಸಿಂಪಲ್ ಹಂತವನ್ನು ಅನುಸರಿಸಿ
ಹಣವನ್ನು ಕ್ಲೇಮ್ ಮಾಡುವಾಗ ಕೆಳಗಿನ ಅಂಶಗಳನ್ನು ನೆನಪಿಟ್ಟುಕೊಳ್ಳಿ :-
1) ಸಂಬಂಧಿತ ದಾಖಲೆಗಳನ್ನು ಒದಗಿಸಬೇಕು: ನೀವು EPFO ಹಣವನ್ನು ನಿಮ್ಮ ವೈಯಕ್ತಿಕ ಕಾರಣಗಳಿಗೆ ಕ್ಲೇಮ್ ಮಾಡುವುದಾದರೆ ಮೊದಲು ಹಣ ಪಡೆಯಲು ನಿಖರವಾದ ದಾಖಲೆ ನೀಡಬೇಕು. ಅಂದರೆ ಮಕ್ಕಳ ಉನ್ನತ ಶಿಕ್ಷಣಕ್ಕೆ ಹಣ ಪಡೆಯಲು ಬಯಸಿದರೆ ನೀವು ಶಿಕ್ಷಣ ಸಂಸ್ಥೆಯಿಂದ ಕೋರ್ಸ್ನ ಅಂದಾಜು ವೆಚ್ಚದ ಪ್ರಮಾಣಪತ್ರವನ್ನು ಪಡೆಯಬೇಕು, ಅಥವಾ ಮದುವೆಗೆ ಹಣ ತೆಗೆಯಬೇಕು ಎಂದರೆ ಮಂಗಲಪತ್ರ ಅಂಥಾ ದಾಖಲೆ ನೀಡಬೇಕು.
2) ಫಾರ್ಮ್ ನಲ್ಲಿ ಸರಿಯಾದ ಮಾಹಿತಿ ತುಂಬಿ :- ನಿಮಗೆ ಎಷ್ಟು ಹಣ ಬೇಕು ಯಾಕೆ ಬೇಕು ಎಂಬ ಮಾಹಿತಿಯನ್ನು ನಿಖರವಾಗಿ ಫಾರ್ಮ್ ನಲ್ಲಿ ಭರ್ತಿ ಮಾಡಿ. ಮಾಹಿತಿ ತಪ್ಪಾಗಿದ್ದರೆ ಸಹ ನಿಮ್ಮ ಅರ್ಜಿ ತಿರಸ್ಕಾರ ಆಗಬಹುದು.
3) ನಿಮ್ಮ ಪೆನ್ಷನ್ ನಂತರ ಹಣವನ್ನು ಲೆಕ್ಕ ಹಾಕಿ ಅಡ್ವಾನ್ಸ್ ಹಣ ಪಡೆಯಿರಿ :- ಯಾವುದೇ ಕಾರಣಕ್ಕೂ ಪೂರ್ಣ ಪಿಎಫ್ ಹಣವನ್ನು ಪಡೆಯಬಾರದು. ನಿಮ್ಮ ಪೆನ್ಷನ್ ಜೀವನಕ್ಕೆ ಸ್ವಲ್ಪ ಆದರೂ ಹಣವನ್ನು ಉಳಿಸಿಕೊಂಡು ನಂತರ ನೀವು ಹಣವನ್ನು ಪಡೆಯುವುದು ಉತ್ತಮ . ಅದರಿಂದ ನೀವು EPFO ಹಣವನ್ನು ಪಡೆಯುವಾಗ ನಿಮ್ಮ ಹೂಡಿಕೆಯ ಮೊತ್ತ ಎಷ್ಟು ಎಷ್ಟು ನಿಮಗೆ ಪೆನ್ಷನ್ ಹಣ ಬರುತ್ತದೆ ಎಂಬ ಮಾಹಿತಿ ತಿಳಿದು ನಂತರ ನೀವು ಅಡ್ವಾನ್ಸ್ ಹಣ ಪಡೆಯಿರಿ.
ಇದನ್ನೂ ಓದಿ: SIP ಫಾರ್ಮುಲಾ; ಈ 4 ಸಲಹೆಗಳೊಂದಿಗೆ ನಿಮ್ಮ ಹಣವನ್ನು ಡಬಲ್, ಟ್ರಿಪಲ್ ಮಾಡಿ!