ಈಗ ತಾನೆ SSLC ಫಲಿತಾಂಶ ಬಿಡುಗಡೆ ಆಗಿ ಸ್ವಲ್ಪ ದಿನ ಅಗಿದೆ. ಈಗ ಎಲ್ಲ ಮಕ್ಕಳೂ ಮತ್ತು ಪಾಲಕರು ಮಕ್ಕಳನ್ನು ಯಾವ ಕಾಲೇಜ್ ಗೆ ಕಲಿಸ್ಬೇಕು ಎಂಬ ಬಗ್ಗೆ ಚರ್ಚೆ ಅರಂಭಿಸಿರುತ್ತಾರೆ. ಅಂತವರಿಗೆ ಈಗ ವಸತಿ ಶಾಲೆಗಳು ಉಚಿತ ಪ್ರವೇಶ ನೀಡುವುದಾಗಿ ಹೇಳಿವೆ. ಆದರೆ ಉಚಿತ ಪ್ರವೇಶಕ್ಕೆ ವಸತಿ ಶಾಲೆಗಳು ಕೆಲವು ನಿರ್ಬಂಧನೆಗಳನ್ನು ಹಾಕಿವೆ. ಯಾರು ಯಾರು ಉಚಿತ ಪ್ರವೇಶ ಪಡೆಯಬಹುದು ಎಂಬ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.
ಉಚಿತ ಪ್ರವೇಶಕ್ಕೆ ನಿಬಂಧನೆಗಳು ಹೀಗಿವೆ:-
1) ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು:- ಉಚಿತ ಪ್ರವೇಶ ಪಡೆಯುವ ಮಕ್ಕಳ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಮತ್ತು ಸಿಖ್ ಸಮುದಾಯಗಳಿಗೆ ಸೇರಿರಬೇಕು. ಹಾಗೂ SSLC ಯಲ್ಲಿ ಶೇಕಡಾ 75 ರಷ್ಟು ಮಾರ್ಕ್ಸ್ ಪಡೆದಿರಬೇಕು. ಹಾಗೂ ಯಾವುದೇ ಅಲ್ಪಸಂಖ್ಯಾತರ ವಸತಿ ಶಾಲೆ ಅಥವಾ ಸರ್ಕಾರಿ ಅಥವಾ ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಗಳಲ್ಲಿ 10ನೇ ತರಗತಿ ಓದಿರಬೇಕು.
2) ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು: ಉಚಿತ ಪ್ರವೇಶಕ್ಕೆ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು. ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರುವುದಿಲ್ಲ.
3) ಆದಾಯ ಮಿತಿ: ಉಚಿತ ಪ್ರವೇಶ ಪಡೆಯಲು ಕುಟುಂಬದ ವಾರ್ಷಿಕ ಆದಾಯವು ರೂ.2.50 ಲಕ್ಷ ರೂಪಾಯಿ ಮೀರಿರಬಾರದು.
4) ಮುಖ್ಯವಾಗಿ ವಿಕಲಚೇತನರಿಗೆ ಶೇಕಡಾ 3 ರಷ್ಟು ಪ್ರವೇಶ ಮೀಸಲಿರಿಸಲಾಗಿದೆ ಹಾಗೂ ಹಿಂದುಳಿದ ವರ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಂದ ಶೇಕಡಾ 25 ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ಮೀಸಲಿರಿಸಲಾಗಿದೆ ಎಂದು ವಸತಿ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಯಾವ ಯಾವ ವಸತಿ ಕಾಲೇಜ್ ನಲ್ಲಿ ಉಚಿತ ಶಿಕ್ಷಣ ಲಭ್ಯವಿದೆ?: ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಹಾಗೂ ಡಾ ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಕಾಲೇಜುಗಳು ಹಾಗೂ ಮೊರಾರ್ಜಿ ದೇಸಾಯಿ ವಸತಿ ಮತ್ತು ಸರ್ಕಾರಿ ಮುಸ್ಲಿಂ ವಸತಿ ಕಾಲೇಜ್ ಗಳಲ್ಲಿ ಉಚಿತ ಶಿಕ್ಷಣ ಲಭ್ಯವಿದೆ.
ಉಚಿತ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :- ಉಚಿತ ಪ್ರವೇಶಕ್ಕೆ 15-05-2024 ರಿಂದ 27-05-2024 ರ ಸಂಜೆ 05-30 ಗಂಟೆವರೆಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: SIP ಫಾರ್ಮುಲಾ; ಈ 4 ಸಲಹೆಗಳೊಂದಿಗೆ ನಿಮ್ಮ ಹಣವನ್ನು ಡಬಲ್, ಟ್ರಿಪಲ್ ಮಾಡಿ!
ಉಚಿತ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ವಿಧಾನ :-
ಇನ್ನೂ ಉಚಿತ ಶಿಕ್ಷಣ ಪಡೆಯಲು ಆಸಕ್ತ ಅಲ್ಪಸಂಖ್ಯಾತರ ಪೋಷಕರು ಅಥವಾ ವಿದ್ಯಾರ್ಥಿಗಳು ಅಗತ್ಯ ಇರುವ ಎಲ್ಲಾ ದಾಖಲೆಗಳ ಸಹಿತ ಯಾವುದೇ ಹತ್ತಿರದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಅಥವಾ ಡಾ ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಕಾಲೇಜುಗಳು ಹಾಗೂ ಮೊರಾರ್ಜಿ ದೇಸಾಯಿ ವಸತಿ ಮತ್ತು ಸರ್ಕಾರಿ ಮುಸ್ಲಿಂ ವಸತಿ ಕಾಲೇಜು ಅಥವಾ ಯಾವುದೇ ಹತ್ತಿರದ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ವಸತಿ ಶಾಲೆಗಳಲ್ಲಿ ಯಾವ ಸೌಲಭ್ಯ ನೀಡುತ್ತಾರೆ?: ಉಚಿತ ಶಿಕ್ಷಣದ ಜೊತೆಗೆ ಪುಸ್ತಕ ಪಟ್ಟಿ ಹಾಗೂ ಸೌಚ ಗೃಹದ ಸಾಮಗ್ರಿಗಳು , ಹಾಗೂ ತಾಂತ್ರಿಕ ಮತ್ತು ವೈದ್ಯಕೀಯ ಮತ್ತು ಇತ್ಯಾದಿ ವೃತ್ತಿಪರ ಶಿಕ್ಷಣಕ್ಕೆ ಬೇಕಾಗಿರುವ ವಿಜ್ಞಾನ ವಿಷಯಗಳಿಗೆ ಪಿಸಿಎಂಬಿ ಹಾಗೂ ಪಿಸಿಎಂಸಿ ವಿಷಯಗಳು ಹಾಗೂ ವಾಣಿಜ್ಯ ವಿಷಯಗಳ HEBA ಸಂಯೋಜನೆಗಳ ತರಗತಿಗಳನ್ನು ಆಂಗ್ಲ ಮಾಧ್ಯಮದ ಶಿಕ್ಷಣ ನೀಡಲಾಗುತ್ತದೆ. ಹಾಗೂ ಪಿಯುಸಿ ಬಳಿಕ ವೃತ್ತಿಪರ ಶಿಕ್ಷಣಕ್ಕೆ ಎಂಟರೆನ್ಸ್ ಎಕ್ಸಾಮ್ ಗೆ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹರಿದ ನೋಟ್ ಏನು ಮಾಡ್ಬೇಕು ಎಂಬ ಚಿಂತೆ ಕಾಡುತ್ತಿದೆಯ ಹಾಗಾದರೆ ಈ ಸಿಂಪಲ್ ಹಂತವನ್ನು ಅನುಸರಿಸಿ