ನಿವೃತ್ತಿಯ ಜೀವನಕ್ಕೆ ಆರ್ಥಿಕ ಭದ್ರತೆಯ ಸಲುವಾಗಿ ವೃತ್ತಿ ಜೀವನದ ಆರಂಭದಿಂದ ಪ್ರತಿಯೊಬ್ಬರೂ ಹಣವನ್ನು ಕೂಡಿಡುತ್ತಾರೆ. ಆದರೆ ನಾವು ನಿವೃತ್ತಿಯ ಜೀವನಕ್ಕೆ ಹಣ ಬೇಕೆಂದು ಹೂಡಿಕೆ ಮಾಡುವಾಗ ಎಷ್ಟು ಹೂಡಿಕೆ ಮಾಡಿದರೆ ನಮಗೆ ನಿವೃತ್ತಿಯ ನಂತರ ತಿಂಗಳಿಗೆ ಎಷ್ಟು ರೂಪಾಯಿ ಹಣವೂ ಬರುತ್ತದೆ ಎಂಬುದನ್ನು ತಿಳಿದಿರಬೇಕು. ಈಗಾಗಲೇ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಇವೆ. ಹಾಗಾದರೆ ನಿಮಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ಪಿಂಚಣಿ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಥವಾ ಎನ್ಪಿಎಸ್ ಹೂಡಿಕೆ ಬಗ್ಗೆ ಮಾಹಿತಿ :- ಹಣ ಹೂಡಿಕೆ ಮಾಡುವ ಮುನ್ನ ನಮ್ಮ ಹಣ ಏಷ್ಟು ಸೇಫ್ ಆಗಿ ಇರುತ್ತದೆ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಹಲವಾರು ಬ್ಯಾಂಕ್ ಗಳು ಕಂಪನಿಗಳು ಪಿಂಚಣಿ ಯೋಜನೆ ನೋಡುತ್ತದೆ ಆದರೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಥವಾ ಎನ್ಪಿಎಸ್ ಹೂಡಿಕೆ ಹಣ ಹೂಡಿಕೆ ಮಾಡಿದರೆ ನಮಗೆ ಹೆಚ್ಚಿನ ಲಾಭದ ಜೊತೆಗೆ ನಾವು ಹೂಡಿಕೆ ಮಾಡಿದ ಹಣವೂ ಸೇಫ್ ಆಗಿ ಇರುತ್ತದೆ. ಈ ಯೋಜನೆಯು ಶುರುವಾದಾಗ ಕೇವಲ ಸರಕಾರಿ ನೌಕರರಿಗೆ ಮಾತ್ರ ಹೂಡಿಕೆಯ ಅವಕಾಶ ನೀಡಿತು. ಕ್ರಮೇಣ ಇದು ಪ್ರೈವೇಟ್ ಉದ್ಯೋಗಿಗಳು ಸಹ ಹೂಡಿಕೆ ಮಾಡಲು ಅವಕಾಶ ಮಾಡಿಕೊಡಲಾಯಿತು. ತಿಂಗಳಿಗೆ ಅಲ್ಪ ಹಣವನ್ನು ಹೂಡಿಕೆ ಮಾಡಿ ನಿವೃತ್ತಿಯ ನಂತರದ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸಲು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ( NPS ) ಉತ್ತಮ ಕೊಡುಗೆ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
NPS ಹೂಡಿಕೆಯ ವಿಧಾನಗಳು :-
NPS ನಲ್ಲಿ ಹಲವರು ಹೂಡಿಕೆಯ ವಿಧಾನಗಳು ಇವೆ. ಮುಖ್ಯವಾಗಿ ಎರಡು ವಿಧಾನಗಳ ಬಗ್ಗೆ ಈಗ ತಿಳಿಯೋಣ. ನಿಮಗೆ ಎರಡು ಶ್ರೇಣಿಯ ಹೂಡಿಕೆಯನ್ನು NPS ಒದಗಿಸುತ್ತದೆ. ಅವು ಯಾವುವೆಂದರೆ.
- ಶ್ರೇಣಿ 1: ಈ ಖಾತೆಯುನ್ನ ಹೊಂದಿರುವುದು ಹಾಗೂ ಹೂಡಿಕೆ ಮಾಡುವುದು ಕಡ್ಡಾಯವಾಗಿದೆ. ಶ್ರೇಣಿ 1 ನಲ್ಲಿ ಕನಿಷ್ಠ ಹೂಡಿಕೆ ನಿಯಮಗಳು ಇವೆ. ಇದರಲ್ಲಿ ತಿಂಗಳಿಗೆ ಕನಿಷ್ಠ ಹೂಡಿಕೆ ಮಾಡಲು ಬಯಸುವವರಿಗೆ ಪ್ರಯೋಜನ ಆಗಿದೆ.
- ಶ್ರೇಣಿ 2: ಈ ಖಾತೆಯು ಸ್ವಯಂಪ್ರೇರಿತವಾಗಿದೆ. ಶ್ರೇಣಿ 2 ಹೆಚ್ಚುವರಿ ಉಳಿತಾಯ ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಇದೆ. ಈ ಶ್ರೇಣಿಯಲ್ಲಿ ನೀವು ನಿಮ್ಮ ಸಂಬಳಕ್ಕೆ ಅನುಗುಣವಾಗಿ ಅಥವಾ ನಿವೃತ್ತಿಯ ನಂತರ ಹೆಚ್ಚಿನ ಹಣ ಬೇಕೆಂಬ ಇಷ್ಟ ಇದ್ದರೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲು ಅವಕಾಶ ಇರುತ್ತದೆ.
ಇದನ್ನೂ ಓದಿ: ಭಾಗ್ಯ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ತಿಳಿಯಿರಿ
ಮಾಸಿಕ ಒಂದು ಲಕ್ಷ ರೂಪಾಯಿ ಪಡೆಯುವ ವಿಧಾನ ಹೇಗೆ?
30 ವರ್ಷ ವಯಸ್ಸಿನ ವ್ಯಕ್ತಿಯು ತಿಂಗಳಿಗೆ 5,000 ರೂಪಾಯಿ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 50% ಈಕ್ವಿಟಿ ಮತ್ತು 50% ಸರ್ಕಾರಿ ಮತ್ತು ಕಾರ್ಪೋರೇಟ್ ಬಾಂಡ್ಗಳಲ್ಲಿ ಸಮತೋಲಿತ ಹಂಚಿಕೆಯ ಜೊತೆಗೆ ವಾರ್ಷಿಕವಾಗಿ ಶೇಕಡಾ 6% ಬಡ್ಡಿಯ ಜೊತೆಗೆ ಶೇಕಡಾ 10% ಲಾಭವನ್ನು ಪಡೆಯಬಹುದು. ತಿಂಗಳಿಗೆ 5,000 ಹೂಡಿಕೆ ಮಾಡಿದರೆ 60 ವರ್ಷ ಆಗುವ ವರೆಗೆ ನಿಮ್ಮ ಹೂಡಿಕೆಯ ಹಣ 1.85 ಕೋಟಿ ಆಗಿರುತ್ತದೆ. ನೀವು 100% ವರ್ಷಾಶನ ಆಯ್ಕೆ ಮಾಡಿದರೆ ತಿಂಗಳಿಗೆ 1,05,292 ಪಿಂಚಣಿ ಸಿಗುತ್ತದೆ.
50,000 ಮಾಸಿಕ ಪಿಂಚಣಿ ಪಡೆಯುವುದು ಹೇಗೆ?: ನೀವು ನಿವೃತ್ತಿಯ ನಂತರ ತಿಂಗಳಿಗೆ 50,000 ರೂಪಾಯಿ ಹೂಡಿಕೆ ಮಾಡಿದರೆ ನೀವು ತಿಂಗಳಿಗೆ 2,500 ರೂಪಾಯಿ ಹೂಡಿಕೆ ಮಾಡಿದಾರೆ 60 ನೇ ವಯಸ್ಸಿಗೆ ನಿಮ್ಮ ಹೂಡಿಕೆಯ ಮೊತ್ತ 92.5 ಲಕ್ಷ ಆಗಿರುತ್ತದೆ. ನಿಮಗೆ ಸರಾಸರಿ 50,000 ರೂಪಾಯಿ ಮಾಸಿಕ ಪಿಂಚಣಿ ಸಿಗುತ್ತದೆ. ಹಾಗೂ ನಿಮ್ಮ ಹೂಡಿಕೆಯ ಮೊತ್ತಕ್ಕೆ ಬಡ್ಡಿದರ 6% ಆಗಿರುತ್ತದೆ.
ಇದನ್ನೂ ಓದಿ: ಉಳಿತಾಯಕ್ಕಿಂತ ಹೆಚ್ಚು; FD ಖಾತೆಯೊಂದಿಗೆ ನಿಮ್ಮ ಹಣವನ್ನು ಬೆಳೆಸಿ!