ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರ ಸಬಲೀಕರಣಕ್ಕೆ ಸಹಾಯಧನ ರೂಪದಲ್ಲಿ ಪ್ರತಿ ತಿಂಗಳು 2,000 ರೂಪಾಯಿ ನೀಡುವ ಉತ್ತಮ ಯೋಜನೆ ಇದಾಗಿದೆ. ಈ ಯೋಜನೆಯ ಲಕ್ಷಾಂತರ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸಿಗುತ್ತಿದೆ. ಈಗಾಗಲೇ ರಾಜ್ಯದ ಹಲವಾರು ಮಹಿಳೆಯರಿಗೆ 10 ಕಂತಿನ ಹಣವೂ ವರ್ಗಾವಣೆ ಆಗಿದ್ದು. ಈಗ 11 ನೇ ಕಂತಿನ ಹಣ ಬಗ್ಗೆ ಬಿಗ್ ಅಪ್ಡೇಟ್ ದೊರಕಿದೆ.
ಮೇ ತಿಂಗಳಲ್ಲಿ 4,000 ರೂಪಾಯಿ ಹಣ ಜಮಾ ಆಗಿದೆ: ರಾಜ್ಯದಲ್ಲಿ ಹಲವಾರು ಮಹಿಳೆಯರ ಖಾತೆಗೆ ಮೇ ತಿಂಗಳಲ್ಲಿ 4,000 ರೂಪಾಯಿ ಜಮಾ ಆಗಿದೆ. ಏಪ್ರಿಲ್ ತಿಂಗಳ 2,000 ರೂಪಾಯಿ ಹಣ ಜೊತೆಗೆ ಮೇ ತಿಂಗಳ ಹಣ ಒಟ್ಟಿಗೆ 4,000 ರೂಪಾಯಿ ಹಣ ಜಮಾ ಆಗಿದೆ. ಕೆಲವರು ಇದು ಎಲೆಕ್ಷನ್ ಗೋಸ್ಕರ ಎಂದು ಹೇಳಿದರು ಸಹ ರಾಜ್ಯ ಸರ್ಕಾರ ಇದನ್ನು ಅಲ್ಲಗಳೆದಿದೆ.
11 ನೇ ಕಂತಿನ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ ಮಾಹಿತಿ ಏನು?
ಮೇ ತಿಂಗಳಲ್ಲಿ ಎರಡು ಕಂತಿನ ಹಣವೂ ಒಟ್ಟಿಗೆ ಜಮಾ ಆಗಿರುವುದರಿಂದ ಮುಂದಿನ ಕಂತಿನ ಹಣವೂ ಸಹ ಇದೆ ಕಂತಿನಲ್ಲಿ ಜಮಾ ಆಗುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಜನರು ಸುಳ್ಳು ಸುದ್ದಿ ಹಬ್ಬಿಸುತ್ತ ಇದ್ದರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹಿಳಾ ಮತ್ತೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜೂನ್ ತಿಂಗಳ ಹಣ ಜೂನ್ ಮೊದಲ ತಿಂಗಳಲ್ಲಿ ಜಮಾ ಆಗುತ್ತದೆ. ಇನ್ನು ನಿಖರ ಮಾಹಿತಿ ನೀಡಲಾಗುವುದಿಲ್ಲ. ಜೂನ್ ತಿಂಗಳಲ್ಲಿ ಅಥವಾ ಜೂಲೈ ಮೊದಲ ವಾರದಲ್ಲಿ 11 ನೇ ಕಂತಿನ ಹಣ ಜಮಾ ಆಗುತ್ತದೆ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆ ನಿಲ್ಲುವುದಿಲ್ಲ: ಈಗಾಗಲೇ ಸರ್ಕಾರ ಸ್ಪಷ್ಟವಾಗಿ ಚುನಾವಣೆಯ ನಂತರ ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮಿ ಯೋಜನೆ ನಿಲ್ಲುವುದಿಲ್ಲ ಎಂದು ಹೇಳಿದೆ. ಆದರೂ ಸಹ ಹಲವಾರು ಜನ ಇದೆ ತಿಂಗಳು ಕೊನೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಖಂಡಿತವಾಗಿ ಗೃಹ ಲಕ್ಷ್ಮಿ ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವ ವರೆಗೂ ಈ ಯೋಜನೆ ಇರಲಿದೆ ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಒಂದು ಕಂತಿನ ಹಣ ಬಾರದೆ ಇದ್ದವರಿಗೆ ಈಗ ಹಣ ಜಮಾ ಆಗುತ್ತಿದೆ:-
ಗೃಹ ಲಕ್ಷ್ಮಿ ಯೋಜನೆ ಆರಂಭ ಆದ ದಿನದಿಂದ ಹಲವಾರು ಮಹಿಳೆಯರಿಗೆ ಒಂದು ಕಂತಿನ ಹಣವೂ ಬರಲಿಲ್ಲ. ಹಲವಾರು ಮಹಿಳೆಯರು ನೀಡಿದ ತಪ್ಪು ಮಾಹಿತಿ ಅಥವಾ ಅರ್ಧ ಮಾಹಿತಿಯಿಂದ ಕೆಲವರಿಗೆ ಹಣ ಬರಲಿಲ್ಲ. ಅಂತವರಿಗೆ ಸರಕಾರ ಒಟ್ಟಿಗೆ ಹಣ ನೀಡುತ್ತೇವೆ ಎಂಬ ಭರವಸೆ ನೀಡಿತ್ತು. ಅಂತವರಿಗೆ ಈ ತಿಂಗಳು ಮೊದಲ 5 ಕಂತಿನ ಹಣ ಜಮಾ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಾಕಿ ಇರುವ ಗೃಹ ಲಕ್ಷ್ಮಿ ಯೋಜನೆಯ ಹಣವೂ ನೇರವಾಗಿ ಮಹಿಳೆಯರ ಖಾತೆಗೆ ಜಮಾ ಆಗಲಿದೆ.
ಯಾವುದೇ ಕಾರಣಕ್ಕೂ ಯೂಟ್ಯೂಬ್ ಅಥವಾ ಫೇಸ್ಬುಕ್ ನಲ್ಲಿ ಗೃಹ ಲಕ್ಷ್ಮಿ ಖಾತೆಯ ಬಗ್ಗೆ ಸುಳ್ಳು ಸುದ್ದಿಯನ್ನು ನಂಬಬೇಡಿ. ಸರ್ಕಾರದ ವೆಬ್ಸೈಟ್ ಅಥವಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಪಡೆಯಿರಿ.
ಇದನ್ನೂ ಓದಿ: ಭಾಗ್ಯ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ತಿಳಿಯಿರಿ
ಇದನ್ನೂ ಓದಿ: ಬೆಳೆ ಪರಿಹಾರದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯೇ ಎಂದು ಈಗಲೇ ಚೆಕ್ ಮಾಡಿ