ಜನರು ಹೂಡಿಕೆ ಮಾಡುವಾಗ ಯಾವ ಬ್ಯಾಂಕ್ ನಲ್ಲಿ ಯಾವ ಯೋಜನೆಯಲ್ಲಿ ಹೆಚ್ಚಿನ ಲಾಭ ಇದೆ ಎಂದು ತಿಳಿದು ಹೂಡಿಕೆ ಮಾಡುತ್ತಾರೆ. ಸಾಧಾರಣವಾಗಿ ಹೆಚ್ಚಿನ ಜನರು fixed deposit ನಲ್ಲಿ ಹೂಡಿಕೆ ಮಾಡುವುದು ಹೆಚ್ಚಾಗಿದೆ. ಹಾಗಾದರೆ ನಿಮಗೆ ಯಾವ ಬ್ಯಾಂಕ್ ನಲ್ಲಿ FD ಯೋಜನೆಯಲ್ಲಿ ಹೆಚ್ಚಿನ ಬಡ್ಡಿದರ ಸಿಗುತ್ತದೆ ಎಂಬ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
FD ಯೋಜನೆಗೆ ಅತಿ ಹೆಚ್ಚು ಬಡ್ಡಿ ನೀಡುತ್ತವೆ NBFC ಗಳು :- ಸಾಮಾನ್ಯವಾಗಿ FD ಯೋಜನೆಯಲ್ಲಿ 6.5% ಇಂದ 8% ವರೆಗೆ ವಾರ್ಷಿಕ ಬಡ್ಡಿದರಗಳು ಇರುತ್ತವೆ. ಆದರೆ ಕೆಲವು NBFC ಗಳು ಹೂಡಿಕೆಯ ಮೊತ್ತ ಹೆಚ್ಚಿಸಲು ಹಾಗೂ ಜನರಿಗೆ ಹೆಚ್ಚಿನ ಬಡ್ಡಿದರ ನೀಡಲು ಬರೋಬ್ಬರಿ 9.60% ವರೆಗೆ ಬಡ್ಡಿ ನೀಡುತ್ತವೆ.
9.60% ಪ್ರತಿಶತ ಬಡ್ಡಿದರ ನೀಡುವ NBFC ಯಾವುವು?
1) ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ :- ಇದು ಒಂದು NBFC ಆಗಿದ್ದು ನೀವು ಈ ಬ್ಯಾಂಕ್ ನಲ್ಲಿ ಎಫ್ಡಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಹೆಚ್ಚಿನ ಬಡ್ಡಿದರ ಸಿಗುತ್ತದೆ. . ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇಕಡಾ 9.10% ಬಡ್ಡಿದರಗಳು ಇವೆ. ಹಿರಿಯ ನಾಗರಿಕರು FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿರುವ ಮೊತ್ತಕ್ಕೆ ಶೇಕಡಾ 9.60% ಬಡ್ಡಿದರ ನೀಡುತ್ತಾರೆ. ನೀವು ಈ ಬಡ್ಡಿದರವನ್ನು ಪಡೆಯಲು FD ಯೋಜನೆಯಲ್ಲಿ 5 ವರ್ಷಗಳ ಅವಧಿಗೆ ಹೂಡಿಕೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
2) ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ :- ಈ ಬ್ಯಾಂಕ್ ನಲ್ಲಿ FD ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದಾದರೆ 1001 ದಿನಗಳ ಅವಧಿಗೆ ಹೂಡಿಕೆ ಮಾಡಿದರೆ ಸಾಮಾನ್ಯ ಗ್ರಾಹಕರಿಗೆ ಹೂಡಿಕೆ ಮಾಡಿರುವ ಮೊತ್ತಕ್ಕೆ ಶೇಕಡಾ 9% ಬಡ್ಡಿದರವನ್ನು ಪಡೆಯಬಹುದು. ಹಿರಿಯ ನಾಗರಿಕರು ಇದೆ ಅವಧಿಗೆ ಹೂಡಿಕೆ ಮಾಡಿದರೆ ಶೇಕಡಾ 9.50% ತನಕ ಹೂಡಿಕೆಯ ಮೊತ್ತದ ಮೇಲೆ ಬಡ್ಡಿಯನ್ನು ಪಡೆಯಬಹುದಾಗಿದೆ.
3) ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ :- ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ FD ಯೋಜನೆಯಲ್ಲಿ ಹೂಡಿಕೆ 1000 ದಿನಗಳ ಅವಧಿಗೆ ಹೂಡಿಕೆ ಮಾಡಿದರೆ ಸಾಮಾನ್ಯ ಗ್ರಾಹಕರಿಗೆ ಶೇಕಡಾ 8.51% ಬಡ್ಡಿದರ ಸಿಗುತ್ತದೆ. ಹಿರಿಯ ನಾಗರಿಕರು ಹೂಡಿಕೆ ಮಾಡಿದರೆ ನೀವು ಶೇಕಡಾ 9.11% ಬಡ್ಡಿ ಪಡೆಯಲು ಸಾಧ್ಯ.
4) ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್:- ಈ ಫೈನಾನ್ಸ್ ಬ್ಯಾಂಕ್ ನಲ್ಲಿ 888 ದಿನಗಳ ಅವಧಿಗೆ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೂಡಿಕೆಯ ಮೊತ್ತಕ್ಕೆ ಶೇಕಡಾ 8.50% ಬಡ್ಡಿದರ ಪಡೆಯಬಹುದು. ಹಿರಿಯ ನಾಗರಿಕರು ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆಯ ಮೊತ್ತಕ್ಕೆ ಶೇಕಡಾ 9% ಬಡ್ಡಿ ಹಣವನ್ನು ಪಡೆಯಬಹುದು.
5) ESAF ಸ್ಮಾಲ್ ಫೈನಾನ್ಸ್ ಬ್ಯಾಂಕ್ :- ESAF ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 2 ರಿಂದ 3 ವರ್ಷಕ್ಕಿಂತ ಕಡಿಮೆ ಅವಧಿಗೆ FD ಯೋಜನೆ ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆಯ ಮೊತ್ತಕ್ಕೆ ಶೇಕಡಾ 8.50% ಬಡ್ಡಿ ಸಿಗುತ್ತದೆ. ಹಾಗೂ ಹಿರಿಯ ನಾಗರಿಕ ಹೂಡಿಕೆಗೆ 9% ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: ನಿವೃತ್ತಿಯ ನಂತರ ತಿಂಗಳಿಗೆ ಒಂದು ಲಕ್ಷ ರೂಪಾಯಿ ಪಿಂಚಣಿ ಸಿಗಬೇಕು ಎಂದಾದರೆ ಹೀಗೆ ಮಾಡಿ.
ಇದನ್ನೂ ಓದಿ: ಕಾರು ಖರೀದಿಸುವ ಕನಸು ನನಸಾಗಬೇಕಾ? ಹಾಗಾದರೆ 2024 ರ ಕಡಿಮೆ ಬಡ್ಡಿದರದಲ್ಲಿ ಕಾರ್ ಲೋನ್ಗಳ ಬಗ್ಗೆ ತಿಳಿಯಿರಿ!