ತೆರಿಗೆ ನಿಯಮದ ಪ್ರಕಾರ ಯಾವುದೇ ವ್ಯಕ್ತಿ ಉಳಿತಾಯ ಖಾತೆಯಲ್ಲಿ ಏಷ್ಟು ಮಿತಿಯವರೆಗೆ ಠೇವಣಿ ಮಾಡಬಹುದು ಎಂಬುದನ್ನು ಹೇಳಿದೆ. ತೆರಿಗೆ ಮಿತಿಯ ಅನುಸರ ಹೆಚ್ಚಿನ ಹಣವನ್ನು ಠೇವಣಿ ಮಾಡುವ ವ್ಯಕ್ತಿಗಳು ಆದಾಯ ತೆರಿಗೆ ಇಲಾಖೆಗೆ ಠೇವಣಿ ಮಾಡುವಾಗ ಸಮರ್ಪಕವಾದ ಕಾರಣ ನೀಡಬೇಕಾಗುತ್ತದೆ. ಹಾಗಾದರೆ ಎಷ್ಟು ಹಣ ಠೇವಣಿ ಮಾಡುವಾಗ ಆದಾಯ ತೆರಿಗೆ ಅವರಿಗೆ ಮಾಹಿತಿ ನೀಡಬೇಕು ಎಂಬುದನ್ನು ತಿಳಿಯೋಣ.
ಒಂದು ಹಣಕಾಸಿನ ವರ್ಷದಲ್ಲಿ ಹಣ ಠೇವಣಿ ಮಾಡುವ ಮಿತಿ ಏಷ್ಟು?: ಒಂದು ಹಣಕಾಸಿನ ವರ್ಷದಲ್ಲಿ ಉಳಿತಾಯ ಖಾತೆಗೆ 10 ಲಕ್ಷ ಠೇವಣಿ ಮಾಡಬಹುದು ಹಾಗೂ ಚಾಲ್ತಿ ಖಾತೆಯಲ್ಲಿ 50 ಲಕ್ಷ ರೂಪಾಯಿ ಠೇವಣಿ ಮಾಡಬಹುದು. ಇದಕ್ಕೂ ಮೀರಿದ ಠೇವಣಿಗೆ ಆದಾಯ ತೆರಿಗೆ ಇಲಾಖೆ ಗೆ ಮಾಹಿತಿ ನೀಡಬೇಕು.
ಆದಾಯ ತೆರಿಗೆ ಸೆಕ್ಷನ್ ನಿಯಮಗಳು ಹೀಗಿವೆ :-
1) ಸೆಕ್ಷನ್ 194N ನಗದು ಹಿಂಪಡೆಯುವಿಕೆಗಳ ಮೇಲಿನ TDS ನಿಯಮಗಳ ಬಗ್ಗೆ ಭಾರತೀಯ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194N ಅನ್ನು ಅಲ್ಲಿ ವಿವರವಾಗಿ ತಿಳಿಸಿದ್ದಾರೆ. ಒಂದು ಹಣಕಾಸು ವರ್ಷದಲ್ಲಿ ಒಂದು ಕೋಟಿಗಿಂತ ನಗದು ಹಿಂಪಡೆಯುವಿಕೆಗಳ ಮೇಲೆ 2% TDS ವಿಧಿಸಲಾಗುತ್ತದೆ. ಕಳೆದ ಮೂರು ವರ್ಷಗಳ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ವ್ಯಕ್ತಿಗಳಿಗೆ 20 ಲಕ್ಷಕ್ಕಿಂತ ಹೆಚ್ಚಿನ ನಗದು ಹಿಂಪಡೆಯುವಿಕೆಗಳ ಮೇಲೆ 2% TDS ಹಾಗೂ ಒಂದು ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ 5% TDS ಮೊತ್ತ ಕಡಿತಗೊಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
2) ಸೆಕ್ಷನ್ 269ST :- ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 269ST ಒಂದು ವರ್ಷ ಅಥವಾ ಒಂದೇ ವಹಿವಾಟಿನಲ್ಲಿ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಪಾವತಿಗಳನ್ನು ಸ್ವೀಕರಿಸುವ ವ್ಯಕ್ತಿಗಳಿಗೆ 30% ದಂಡವನ್ನು ವಿಧಿಸಲಾಗುತ್ತದೆ.
3) ಸೆಕ್ಷನ್ 269SS ಮತ್ತು 269T :- ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 269SS ಮತ್ತು 269T ನಗದು ಸಾಲಗಳಿಗೆ ಸಂಬಂಧಿಸಿದ ನಿಯಮಗಳನ್ನು ವಿಧಿಸಲಾಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ 20,000 ರುಪಾಯಿಗಿಂತ ಹೆಚ್ಚಿನ ನಗದು ಸಾಲಗಳನ್ನು ಸ್ವೀಕರಿಸುವುದು ಅಥವಾ ನೀಡುವುದು ಆದಾಯ ತೆರಿಗೆ ಕಟ್ಟಬೇಕಾಗುತ್ತದೆ.
4) ಸೆಕ್ಷನ್ 44AD/44ADA :- ವ್ಯಾಪಾರ ವ್ಯವಹಾರಗಳಿಗೆ ಈ ಸೆಕ್ಷನ್ ಇದೆ. ನಿಯಮದ ವಿರುದ್ಧವಾಗಿ ಯಾವುದೇ ವ್ಯವಹಾರಗಳು ಬಯಲಿಗೆ ಬಂದರೆ ತೆರಿಗೆ ಇಲಾಖೆಗೆ ಅದ್ಯದ ಮೂಲವನ್ನು ತಿಳಿಸುವಲ್ಲಿ 25% ಹೆಚ್ಚುವರಿ ಶುಲ್ಕದ ಜೊತೆಗೆ 4% ಸೆಸ್ ಹಾಗೂ 60% ಹೆಚ್ಚಿನ ತೆರಿಗೆಯನ್ನು ವಿಧಿಸಲಾಗುತ್ತದೆ.
ನಗದು ಉಡುಗೊರೆಗಳ ಮಿತಿ ಏಷ್ಟು?: ಆದಾಯ ತೆರಿಗೆ ನಿಯಮದ ಪ್ರಕಾರ ಯಾವುದೇ ಉಡುಗೊರೆ ಪಡೆದುಕೊಂಡರೆ ಅಥವಾ ನೀಡಿದರೆ ಯಾವುದೇ ರೀತಿಯ ತೆರಿಗೆ ನೀಡುವ ಅವಕಾಶ ಇಲ್ಲ.
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಬಗ್ಗೆ ಆದಾಯ ತೆರಿಗೆ ನಿಯಮ ಏನು?: ನಗದು ರೂಪದಲ್ಲಿ ಪಾವತಿ ಮಾಡಿದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಆದಾಯ ತೆರಿಗೆ ಬಿಲ್ ಪಾವತಿಯ ಮಿತಿಯ ಬಗ್ಗೆ ತಿಳಿಸಿದ್ದು, ಒಂದು ದಿನಕ್ಕೆ SBI bank ನ credit card ನಗದು ಪಾವತಿ ಮಿತಿ 50,000 ರೂಪಾಯಿ ಗಳ ವರೆಗೆ ಪಾವತಿ ಮಾಡಬಹುದು ಹಾಗೂ HDFC Bank 49,000 ರೂಪಾಯಿ ಆಗಿದೆ. ಇದಕ್ಕೂ ಹೆಚ್ಚಿನ ವಹಿವಾಟಿಗೆ ಆದಾಯ ತೆರಿಗೆ ವಿಧಿಸಲಿದೆ.
ಇದನ್ನೂ ಓದಿ: ಜೂನ್ 1 ರಿಂದ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಭಾರಿ ಬದಲಾವಣೆ! ಹೊಸ ನಿಯಮಗಳನ್ನು
ಇದನ್ನೂ ಓದಿ: ಸತತ ಪರಿಶ್ರಮದಿಂದ IFS ನಲ್ಲಿ ರಾಷ್ಟ್ರಕ್ಕೆ 7 ನೇ ಸ್ಥಾನಗಳಿಸಿದ ಕನ್ನಡತಿ ವೈ.ಎಸ್.ಕಾವ್ಯ.