ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುವಾಗ ದಿನಗಟ್ಟಲೆ ಪ್ರಯಾಣ ಮಾಡುವ ಸಂದರ್ಭ ಬರುತ್ತದೆ ಅಂತಹ ಸಮಯದಲ್ಲಿ ಊಟ ಮಾಡಲು ಹಾಗೂ ವಿಶ್ರಾಂತಿ ಪಡೆಯಲು ಕೆಲವು ಸಮಯಗಳ ವರೆಗೆ ಬಸ್ ನಿಲುಗಡೆ ಮಾಡಬೇಕು ಎಂಬ ನಿಯಮಗಳು ಇವೆ. ನಿಯಮದ ಬಗ್ಗೆ ಪೂರ್ಣ ಮಾಹಿತಿ ಪಡೆಯಲು ಈ ಲೇಖನವನ್ನು ಓದಿ.
2017 ನೇ ಇಸವಿಯಲ್ಲಿ ನಿಯಮ ರೂಪಿಸಲಾಗಿದೆ:- ಕೆಎಸ್ಆರ್ಟಿಸಿ 5 ದೂರದ ಊರಿಗೆ ಡೈರೆಕ್ಟ್ ಬಸ್ ವ್ಯವಸ್ಥೆ ಕಲ್ಪಿಸುತ್ತದೆ. ಉದಾಹರಣೆಗೆ ಬೆಂಗಳೂರಿನಿಂದ ಮಲೆನಾಡು, ಮಂಗಳೂರು, ಚಿಕ್ಕಮಂಗಳೂರು ಹೀಗೆ ದೂರದ ಊರಿಗೆ ಡೈರೆಕ್ಟ್ ಬಸ್ ಗಳು ಇವೆ. 300 ರಿಂದ 500 km ದೂರ ಇರುವ ಕಾರಣ ಬೆಂಗಳೂರಿನಿಂದ 8 ರಿಂದ 9 ಗಂಟೆಯ ಪ್ರಯಾಣ ಆಗುತ್ತದೆ. ಹಾಗಿದ್ದಾಗ ಪ್ರಯಾಣಿಕರಿಗೆ ಊಟದ ಸಮಯ ಹಾಗೂ ವಿಶ್ರಾಂತಿಯ ಸಮಯ ನೀಡಿ ಮುಂದಿನ ಪ್ರಯಾಣ ಮಾಡಬೇಕು ಎನ್ನುವ ನಿಯಮವನ್ನು ರೂಪಿಸಲಾಗಿದೆ.
ಎಷ್ಟು ದೂರದ ಮಾರ್ಗಕ್ಕೆ ಏಷ್ಟು ನಿಮಿಷ ವಿಶ್ರಾಂತಿಯ ಸಮಯ ನೀಡಬೇಕು?
- ಲಘು ವಿಶ್ರಾಂತಿ ಸಮಯ :- ದೂರದ ಊರಿಗೆ ಪ್ರಯಾಣ ಮಾಡುವಾಗ ಲಘು ವಿಶ್ರಾಂತಿಗೆ, ಅಥವಾ ಪ್ರಯಾಣಿಕರಿಗೆ ಶೌಚಾಲಯಕ್ಕೆ ತೆರಳಲು ಅನುಕೂಲ ಆಗುವಂತೆ 2 ರಿಂದ 2.30 ಗಂಟೆಯ ಬಳಿಕ 10 ರಿಂದ 15 ನಿಮಿಷದ ವರೆಗೆ ಬಸ್ ನಿಲುಗಡೆ ಮಾಡಬೇಕು ಎಂಬ ನಿಯಮ ಇದೆ. ಜೊತೆಗೆ ವಿಶ್ರಾಂತಿಗೆ ಅನುಕೂಲ ಇರುವ ಜಾಗದಲ್ಲಿ ನಿಲುಗಡೆ ಮಾಡಬೇಕು. ಉಪಹಾರಕ್ಕೆ ಅನುಕೂಲ ಆಗುವ ಜಾಗದಲ್ಲಿಯೇ ಬಸ್ ನಿಲ್ಲಿಸಬೇಕು ಎಂಬ ನಿಯಮ ಇದೆ.
- ಊಟದ ವಿಶ್ರಾಂತಿಯ ಸಮಯ :- ಮಧ್ಯಾನ್ಹ ಅಥವಾ ರಾತ್ರಿಯ ಊಟಕ್ಕೆ ರೆಸ್ಟೋರೆಂಟ್ ಅಥವಾ ಯಾವುದೇ ಹೋಟೆಲ್ ಇರುವ ಜಾಗದಲ್ಲಿ ಬಸ್ ನಿಲುಗಡೆ ಮಾಡಬೇಕು. ಹಾಗೂ 15 ರಿಂದ 30 ನಿಮಿಷಗಳ ವರೆಗೆ ಬಸ್ ನಿಲುಗಡೆ ಮಾಡಬೇಕು ಎಂದು ನಿಯಮದಲ್ಲಿ ಇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಉಪಾಹಾರ ಮಂದಿರಗಳಿಗೆ ನಿಯಮಗಳು ಏನು?
ಸಾಮಾನ್ಯವಾಗಿ ಬಸ್ ನಲ್ಲಿ ದಿನವೂ ಒಂದೇ ಸ್ಥಳದಲ್ಲಿ ಊಟ ಮತ್ತು ಉಪಹಾರಕ್ಕೆ ನಿಲುಗಡೆ ಆಗುತ್ತದೆ. ಆದ ಕಾರಣ ಯಾವ ಉಪಹಾರ ಮಂದಿರದ ಹತ್ತಿರ ಕೆಎಸ್ಆರ್ಟಿಸಿ ಬಸ್ ನಿಲುಗಡೆ ಮಾಡುವುದೋ ಅಂತಹ ಉಪಹಾರ ಕೇಂದ್ರಗಳು ಹಾಗೂ ಹೋಟೆಲ್ ಗಳು ಜನರಿಗೆ ಕೈಗೆಟುಕುವ ದರದಲ್ಲಿ ಆಹಾರ ನೀಡುವ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಶುಚಿಯಾದ ಆಹಾರವನ್ನು ನೀಡಬೇಕು. ಹಾಗೂ ಹೋಟೆಲ್ ಅನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು ಎಂದು ನಿಯಮ ಇದೆ.
ಇನ್ನಷ್ಟು ನಿಯಮಗಳು ಇವೆ :-
ಬಸ್ ಗಳು ಊಟೋಪಚಾರಕ್ಕೆ ನಿಲ್ಲಿಸುವ ಹೋಟೆಲ್ ನಲ್ಲಿ ಹೆಚ್ಚಿನ ದರ ನಿಗದಿ ಮಾಡಿವೆ ಎಂಬ ಬಗ್ಗೆ ಕೆಲವು ದೂರುಗಳು ಸರಕಾರದ ಗಮನಕ್ಕೆ ಬಂದಿದ್ದು. ಊಟೋಪಚಾರಕ್ಕೆ ಜನರಿಗೆ ಕೈಗೆಟುಕುವ ದರದಲ್ಲಿ ಕೆಲವು ಹೋಟೆಲ್ ಗಳನ್ನೂ ಗುರುತಿಸಬೇಕು ಎಂದು ಆದೇಶಿಸಿದೆ. ಜೊತೆಗೆ
ಊಟೋಪಚಾರಕ್ಕೆ ನಿಲುಗಡೆ ಮಾಡುವ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಹಾಗೂ ತ್ತು ಪ್ರಮುಖ ಮಾರ್ಗಗಳಲ್ಲಿ, ಯಾವ ಸ್ಥಳಗಳಲ್ಲಿ ಫಲಹಾರ ಮಂದಿರಗಳ ಲಭ್ಯತೆ ಹೆಚ್ಚಡೆ ಎಂಬುದನ್ನು ಸಮೀಕ್ಷೆ ಮಾಡಬೇಕು. ದೂರ ಸಂಚಾರದ ಪ್ರಯಾಣದಲ್ಲಿ ಯಾವ ಯಾವ ಹೋಟೆಲ್ ಅಥವಾ ಊಟೋಪಚಾರ ಮಂದಿರಗಳು ಇವೆ ಎಂಬುದರ ಬಗ್ಗೆ ಪಟ್ಟಿ ಮಾಡಬೇಕು. ನಂತರ ಉತ್ತಮ ವ್ಯವಸ್ಥೆ ಹಾಗೂ ಮಧ್ಯಮ ಅಥವಾ ಕಡಿಮೆ ಬೆಲೆಯಲ್ಲಿ ಕಡಿಮೆ ಇರುವ ಊಟೋಪಚಾರ ಕೇಂದ್ರದ ಎದುರು ಬಸ್ ನಿಲುಗಡೆ ಮಾಡಬೇಕು. ಹಾಗೂ ಊಟೋಪಚಾರ ಕೇಂದ್ರದಲ್ಲಿ ಬಸ್ ನಿಲುಗಡೆಗೆ ಹೆಚ್ಚಿನ ಜಾಗ ಇದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕು.
ಇದನ್ನೂ ಓದಿ: ಆದಾಯ ತೆರಿಗೆ ನಿಯಮದ ಪ್ರಕಾರ ಉಳಿತಾಯ ಖಾತೆಯಲ್ಲಿ ಏಷ್ಟು ಹಣ ಠೇವಣಿ ಮಾಡಬಹುದು?