ಇಂದು ಹೂಡಿಕೆ ಮಾಡಲು ಹಲವು ಯೋಜನೆಗಳು ಇವೆ. ಜನರ ದೈನಂದಿನ ಬದುಕಿನ ಹಣಕಾಸಿನ ವ್ಯವಹಾರದ ಉಳಿತಾಯವನ್ನು ಕೂಡಿಟ್ಟು ನಾಳೆ ಮಕ್ಕಳ ಮದುವೆಗೆ ಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ ಮನೆ ಕಟ್ಟುವ ಕನಸಿಗೆ ವಿದೇಶ ಪ್ರವಾಸಕ್ಕೆ ಹೀಗೆ ಹಲವಾರು ಕಾರಣಗಳಿಂದ ಜನರು ಹಣವನ್ನು save ಮಾಡುವ ಯೋಚನೆ ಹೊಂದಿರುತ್ತಾರೆ. ಅಕೌಂಟ್ ನಲ್ಲಿ ಅಥವಾ ನಮ್ಮ ಕೈಯಲ್ಲಿ ಹಣ ಇದ್ದರೆ ಅದು ನಮಗೆ ತಿಳಿಯದಂತೆ ಖಾಲಿ ಆಗುತ್ತದೆ. ಅದೇ ನಾವು ಹಣವನ್ನು ಯಾವುದಾದರೂ ಸ್ಕೀಮ್ ನಲ್ಲಿ ಉಳಿತಾಯ ಮಾಡಿದರೆ ಅದು ನಮಗೆ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ದಿನಕ್ಕೆ ಕೇವಲ 333 ರೂಪಾಯಿ ಗಳನ್ನೂ ಹೂಡಿಕೆ ಮಾಡಿ ಬರೋಬ್ಬರಿ 17 ಲಕ್ಷ ರೂಪಾಯಿ ಪಡೆಯುವ ಯೋಜನೆ ಒಂದನ್ನು ಪೋಸ್ಟ್ ಆಫೀಸ್ ಆರಂಭ ಮಾಡಿದೆ. ಈ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ತಿಳಿಯೋಣ.
10 ವರ್ಷಗಳ ಹೂಡಿಕೆಯ ಅವಕಾಶ :-
ಪೋಸ್ಟ್ ಆಫೀಸ್ ತನ್ನ ಕೂಲಿ ಕಾರ್ಮಿಕರು ಹಾಗೂ ದಿನ ಗೂಲಿ ನೌಕರರಿಗೆ ಉತ್ತಮ ಯೋಜನೆ ಒಂದನ್ನು ಹೊರತಂದಿದೆ. ಈ ಯೋಜನೆಯ ಹೆಸರು ಪಿಗ್ಗಿ ಬ್ಯಾಂಕ್. ಈ ಯೋಜನೆಯಲ್ಲಿ ನೀವು ದಿನಕ್ಕೆ 33 ರೂಪಾಯಿಗಳನ್ನು ಹೂಡಿಕೆ ಮಾಡಿ 10 ವರ್ಷಗಳ ಬಳಿಕ 17 ಲಕ್ಷ ರೂಪಾಯಿ ಹಣವನ್ನು ಪಡೆಯಬಹುದು. ಇದು ಬಡ ವರ್ಗ ಹಾಗೂ ಮಧ್ಯಮ ವರ್ಗದ ಜನರಿಗೆ ಉತ್ತಮ ಹೂಡಿಕೆಯ ಯೋಜನೆ ಆಗಿದೆ. ದಿನದ ಲೆಕ್ಕದಲ್ಲಿ ದುಡಿಯುವ ಗ್ರಾಹಕರಿಗೆ ಸಣ್ಣ ಹೂಡಿಕೆಯ ಹಣವನ್ನು ಹೂಡಿಕೆ ಮಾಡುವ ಅವಕಾಶ ನೀಡುವ ಸಲುವಾಗಿ ಪೋಸ್ಟ್ ಆಫೀಸ್ ಈ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ಅತಿ ಕಡಿಮೆ ಎಂದರೆ 100 ರೂಪಾಯಿ ಹಣವನ್ನು ಹೂಡಿಕೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪಿಗ್ಗಿ ಬ್ಯಾಂಕ್ ಹೂಡಿಕೆಯ ಲೆಕ್ಕಾಚಾರ :-
ದಿನಕ್ಕೆ 333 ರೂಪಾಯಿ ಗಳನ್ನೂ ಹೂಡಿಕೆ ಮಾಡಿದರೆ ತಿಂಗಳಿಗೆ ನಿಮ್ಮ ಹೂಡಿಕೆ ಮೊತ್ತ 9,990 ರೂಪಾಯಿ ಆಗುತ್ತದೆ. ಅದೇ ವರುಷಕ್ಕೆ ನಿಮ್ಮ ಹೂಡಿಕೆಯ ಮೊತ್ತ 1,21,545 ರೂಪಾಯಿ ಆಗಿರುತ್ತದೆ. 10 ವರುಷಗಳ ಕಾಲ ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆಯ ಮೊತ್ತ 12,15,450 ರೂಪಾಯಿ ಆಗಿರುತ್ತದೆ. ಇದಕ್ಕೆ ಪೋಸ್ಟ್ ಆಫೀಸ್ ನ ಇಂದಿನ ಬಡ್ಡಿದರ 5,08,546 ಆಗಿರುತ್ತದೆ. 10 ವರ್ಷಗಳ ನಂತರ ನಿಮಗೆ ಸರಾಸರಿ 17 ಲಕ್ಷ ರೂಪಾಯಿ ಸಿಗುತ್ತದೆ.
ಪೋಸ್ಟ್ ಆಫೀಸ್ ಯೋಜನೆ ಅಪಾಯ ಮುಕ್ತ :-
ಇತರ ಪ್ರೈವೇಟ್ ಬ್ಯಾಂಕ್ ಹಾಗೂ ಯಾವುದೇ ಸಂಘ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಹಣವನ್ನು ಕಳೆದುಕೊಳ್ಳುವುದಾಕ್ಕಿಂತ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದು ಬಹಳ ಉತ್ತಮ ಯಾಕೆಂದರೆ ಇದು ಕೇಂದ್ರ ಸರಕಾರದ ಅಡಿಯಲ್ಲಿ ಇರುವದರಿಂದ ನಮ್ಮ ಹಣ ಸೇಫ್ ಆಗಿ ಇರುತ್ತದೆ. ಹಾಗೂ ನಿಮ್ಮ ಹೂಡಿಕೆಯ ಹಣಕ್ಕೆ ಉತ್ತಮ ರೀತಿಯ ಬಡ್ಡಿ ದೊರೆಯುತ್ತದೆ. ಪೋಸ್ಟ್ ಆಫೀಸ್ ನಲ್ಲಿ 100 ರೂಪಾಯಿ ನಿಂದ ಹೂಡಿಕೆ ಮಾಡಬಹುದಾದ ಯೋಜನೆಗಳು ಇರುವುದರಿಂದ ಅತೀ ಬಡವರು ಸಹ ನಾಳಿನ ಭವಿಷ್ಯಕ್ಕೆ ಹೂಡಿಕೆ ಮಾಡಲು ಸಾಧ್ಯವಿದೆ. ಹಾಗೂ ಇಲ್ಲಿ ಒಮ್ಮೆಲೇ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಲು ಸಹ ಸಾಧ್ಯವಿದೆ. ಇದರ ಜೊತೆ ಪೋಸ್ಟ್ ಆಫೀಸ್ ಭಾರತದ ತುಂಬಾ ಇರುವುದರಿಂದ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಬಹುದು.
ಇದನ್ನೂ ಓದಿ: 20 ವರ್ಷಗಳ ಅವಧಿಗೆ ಹೊಮ್ ಲೋನ್ ತೆಗೆದುಕೊಂಡರೆ EMI ಎಷ್ಟು ಪಾವತಿಸಬೇಕು ಎಂಬುದನ್ನು ತಿಳಿಯೋಣ