ಜೂನ್ ಮೊದಲ ವಾರದಿಂದ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ಆಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ವರದಿ ಮಾಡಿದೆ. ಅದರಂತೆಯೇ ಈಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುತ್ತಿದ್ದು ಮುಂದಿನ ಒಂದು ವಾರ ರಾಜ್ಯದಲ್ಲಿ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಒಟ್ಟು 12 ಜಿಲ್ಲೆಗಳಲ್ಲಿ ಈಗಾಗಲೇ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಯಾವ ಯಾವ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ?: ಜೂನ್ 7 2024 ರ ವರೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು ಜನರು ಎಚ್ಚರಿಕೆಯಿಂದ ಇರಲು ಇಲಾಖೆ ಸೂಚಿಸಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಹಾಗೂ ಕೊಲಾರ ಮತ್ತು ಕೊಡಗು ಹಾಗೂ ಹಾಸನ ಮತ್ತು ಮೈಸೂರು ಹಾಗೂ ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ರಾಜ್ಯಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿಯೂ ಮಳೆ ಬೀಳುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೇಗೆ ಹೆಚ್ಚಿಸುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!
ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ :-
ರಾಜ್ಯದಲ್ಲಿ ಮುಂಗಾರು ಮಳೆ ಆರಂಭ ಆಗಿರುವುದರಿಂದ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಕೆಲವು ಮುನ್ನೆಚ್ಚರಿಕೆ ತಿಳಿಸಿದೆ.
- ನೀರಿನ ಮಟ್ಟ ಏರಿಕೆ ಆಗಬಹುದು :- ಹೆಚ್ಚಿನ ಮಳೆ ಬೀಳುವುದರಿಂದ ಹಳ್ಳ ಕೊಳ್ಳಗಳು ತುಂಬುತ್ತವೆ. ನದಿ ಹಾಗೂ ಸಮುದ್ರದ ನೀರಿನ ಮಟ್ಟ ಏರಿಕೆ ಆಗುವುದರಿಂದ ನದಿ ಹಾಗೂ ಸಮುದ್ರ ದ ಹತ್ತಿರ ವಾಸ ಮಾಡುವ ಜನರು ಎಚ್ಚರಿಕೆಯಿಂದ ಇರಬೇಕು.
- ವಿದ್ಯುತ್ ಕಡಿತ ಆಗಬಹುದು :- ಭಾರಿ ಗಾಳಿ ಮಳೆಯಿಂದಾಗಿ ದೊಡ್ಡ ದೊಡ್ಡ ಮರಗಳು ಮುರಿದು ವಿದ್ಯುತ್ ಕಡಿತ ಉಂಟಾಗುವ ಸಾಧ್ಯತೆ ಇರುತ್ತದೆ.
- ಪ್ರಯಾಣಿಕರಿಗೆ ಎಚ್ಚರಿಕೆ :- ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವಾಗ ಮಳೆಯ ಅಬ್ಬರದ ನಡುವೆ ಯಾವುದೇ ಪ್ರಯಾಣ ಮಾಡಬೇಡಿ. ದೂರದ ಪ್ರಯಾಣ ಮಾಡುವವರು ಎಚ್ಚರಿಕೆ ವಹಿಸಿ ಹಾಗೂ ನೀವು ಪ್ರಯಾಣ ಮಾಡುವ ಮಾರ್ಗದಲ್ಲಿ ಯಾವುದೇ ರೀತಿಯ ರೋಡ್ ಬ್ಲಾಕ್ ಆಗಿದೆಯೇ ಅಥವಾ ಮಳೆಯ ಪ್ರಮಾಣ ಹೇಗಿದೆ ಎಂಬುದನ್ನು ತಿಳಿದು ಪ್ರಯಾಣ ಮಾಡುವುದು ಉತ್ತಮ.
- ಅಧಿಕಾರಿಗಳ ಸೂಚನೆ ಪಾಲಿಸಿ :- ಮಳೆಯ ಪ್ರಮಾಣದ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಲ್ಲೆಯ ಹಾಗೂ ತಾಲೂಕಿನ ಅಧಿಕಾರಿಗಳು ತಿಳಿಸುವ ಸೂಚನೆಯನ್ನು ಪಾಲಿಸಿ.
- ಹವಾಮಾನ ಇಲಾಖೆಯ ವರದಿ ತಿಳಿಯಿರಿ :- ಹವಾಮಾನ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಏಷ್ಟು ಮಳೆ ಆಗಲಿದೆ ಎಂಬ ಮಾಹಿತಿ ಇರುತ್ತದೆ ಹಾಗೂ ನ್ಯೂಸ್ ಚಾನಲ್ ಗಳಲ್ಲಿ ಹಾಗೂ ರೇಡಿಯೋ ದಲ್ಲಿ ದಿನವೂ ಹವಾಮಾನ ವರದಿ ಪ್ರಸಾರ ಮಾಡಲಾಗುತ್ತದೆ. ಅದನ್ನು ಕೇಳಿ.
- ಪ್ರವಾಸಿಗರು ಎಚ್ಚರಿಕೆ ವಹಿಸಿ :- ಮಳೆಗಾಲದಲ್ಲಿ ಫಾಲ್ಸ್ ಹಾಗೂ ಸಮುದ್ರ ದಡಗಳಿಗೆ ಪ್ರವಾಸಿಗರು ತೆರಳುತ್ತಾರೆ. ಮಳೆ ಹೆಚ್ಚಾಗಿ ಜೀವ ಹಾನಿಯಾಗುವ ಏಷ್ಟೋ ಪ್ರಕರಣಗಳನ್ನು ನೋಡುತ್ತೇವೆ. ಆದ್ದರಿಂದ ಭಾರಿ ಮಳೆ ಬೀಳುವ ಬೆಲೆಯಲ್ಲಿ ಫಾಲ್ಸ್ ವೀಕ್ಷಣೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯ ಇರುತ್ತದೆ. ಹಾಗೂ ಸಮುದ್ರ ವೀಕ್ಷಣೆಯ ವೇಳೆಗೆ ನೀರಿನ ಹರಿವಿನ ಮಟ್ಟವನ್ನು ತಿಳಿದು ತೆರಳುವುದು ಉತ್ತಮ.
ಹೆಚ್ಚಿನ ಮಾಹಿತಿ ತಿಳಿಯಲು ಹವಾಮಾನ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
ಇದನ್ನೂ ಓದಿ: 22 ನೇ ವಯಸ್ಸಿಗೆ ಐಎಎಸ್ ಅಧಿಕಾರಿ ಆಗಿರುವ ಸ್ಮಿತಾ ಸಭರ್ವಲ್ ಅವರ ಸಾಧನೆಯ ಬಗ್ಗೆ ತಿಳಿಯೋಣ