ಈಗಾಗಲೆ ಎಲ್ಲಾ ಶಾಲಾ ಕಾಲೇಜುಗಳು ಮತ್ತೆ ಆರಂಭ ಆಗಿವೆ. ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲು ಕೆಎಸ್ಆರ್ಟಿಸಿ ಆನ್ಲೈನ್ ಪೋರ್ಟಲ್ ತೆರೆದಿದೆ. ಒಟ್ಟು 10 ತಿಂಗಳ ಬಸ್ ಪಾಸ್ ವಿತರಣೆ ಮಾಡಲಿದೆ. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಬಸ್ ಪಾಸ್ ಶುಲ್ಕದ ವಿವರಗಳ ಬಗ್ಗೆ ಮಾಹಿತಿ ಇಲ್ಲಿದೆ.
10 ತಿಂಗಳ ಬಸ್ ಪಾಸ್ ದರ ಹೀಗಿದೆ?
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ, ಪಿಯುಸಿ, ಡಿಗ್ರಿ, ಐಟಿಐ ವಿದ್ಯಾರ್ಥಿಗಳಿಗೆ ಬೇರೆ ಬೇರೆ ದರ ನಿಗದಿ ಪಡಿಸಲಾಗಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 150 ರೂಪಾಯಿ, ಪ್ರೌಢ ಶಾಲಾ ವಿದ್ಯಾರ್ಥಗಳಿಗೆ 750 ರೂಪಾಯಿ, ಪರಿಶಿಷ್ಟ ಜಾತಿ ಹಾಗೂ ಪಂಗಡ ವಿದ್ಯಾರ್ಥಿಗಳಿಗೆ 150 ರೂಪಾಯಿ, ಗಡಿ ಆಚೆಯ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಗೆ 150 ರೂಪಾಯಿ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 1050 ರೂಪಾಯಿ, ಪರಿಶಿಷ್ಟ ಜಾತಿ ಹಾಗೂ ಪಂಗಡ ಡಿಪ್ಲೊಮಾ ವಿದ್ಯಾರ್ಥಿಗಳಿಗೆ 150 ರೂಪಾಯಿ, ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 12 ತಿಂಗಳ ಅವಧಿಗೆ 1310 ರೂಪಾಯಿ ಹಾಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 160 ರೂಪಾಯಿ, ಹಾಗೂ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ 1550 ರೂಪಾಯಿ ಹಾಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 150 ರೂಪಾಯಿ, ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ 1350 ರೂಪಾಯಿ ಹಾಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 150 ರೂಪಾಯಿ ಆಗಿರುತ್ತದೆ.
ಆನ್ಲೈನ್ ನಲ್ಲಿ ಬಸ್ ಪಾಸ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
- ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ :- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಭೇಟಿ ನೀಡಬೇಕು.
- ಫಾರ್ಮ್ ಡೌನ್ಲೋಡ್ ಮಾಡಿ :- ಸೇವಾ ಸಿಂಧು ವೆಬ್ಸೈಟ್ ನಲ್ಲಿ declaration form download ಮಾಡಬೇಕು.
- ಫಾರ್ಮ್ ತುಂಬಿ:- declaration form ನಲ್ಲಿ ಕೇಳಲಾದ ಮಾಹಿತಿಗಳನ್ನು ನಿಖರವಾಗಿ ಭರ್ತಿ ಮಾಡಬೇಕು.
- ಅರ್ಜಿ ಸಲ್ಲಿಸಿ :- ಭರ್ತಿ ಮಾಡಿದ ಫಾರ್ಮ್ ಕೆಳಗಿರುವ submit ಬಟನ್ ಒತ್ತಿ ಅರ್ಜಿ ಸಲ್ಲಿಸಬೇಕು.
ಬಸ್ ಪಾಸ್ ಪಡೆಯುವುದು ಹೇಗೆ?: ಅರ್ಜಿ ಸಲ್ಲಿಸಿದ ಬಳಿಕ ವಿದ್ಯಾರ್ಥಿಗಳ ಮೊಬೈಲ್ ನಂಬರ್ ಗೆ ನಿಮ್ಮ ಹತ್ತಿರದ ಪಾಸ್ ವಿತರಣೆ ಮಾಡುವ ಕೇಂದ್ರ ಅಥವಾ ಕೌಂಟರ್ನ ಹೆಸರು ಹಾಗೂ ವಿಳಾಸದ ಮಾಹಿತಿಯ ಬಗ್ಗೆ ಎಸ್ಎಂಎಸ್ ಕಳುಹಿಸಲಾಗುತ್ತದೆ. ನಂತರ ವಿದ್ಯಾರ್ಥಿಗಳು sms ನಲ್ಲಿ ತಿಳಿಸಿದ ಕೌಂಟರ್ ಅಡ್ರೆಸ್ ಗೆ ಭೇಟಿ ನೀಡಿ ಬಸ್ ಪಾಸ್ಶುಲ್ಕವನ್ನು ನಗದು ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅಥವಾ UPI ಮೂಲಕ ಪಾವತಿಸಿ ಪಾಸ್ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕೆಎಸ್ಆರ್ಟಿಸಿ ನಿಗಮವು ಒಟ್ಟು 129 ಪಾಸ್ ವಿತರಣಾ ಕೌಂಟರ್ಗಗಳ ಓಪನ್ ಮಾಡಿದ್ದು . ಕೌಂಟರ್ ಗಳ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ https://ksrtc.karnataka.gov.in ಭೇಟಿ ನೀಡಿ. ರಾಜ್ಯ ಸರ್ಕಾರವು ಗಡಿ ಆಚೆ ಇರುವ ಹಾಗೂ ಹಾದಿ ಭಾಗದಲ್ಲಿ ವಾಸವಾಗಿರುವ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂದು ಅವರಿಗೂ ಬಸ್ ಪಾಸ್ ವಿತರಣೆ ಮಾಡುತ್ತಿದೆ. ವಿದ್ಯಾರ್ಥಿನಿಯರು ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತವಾಗಿ ಬಸ್ ಪ್ರಯಾಣ ಮಾಡಬಹುದು ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಬರೋಬ್ಬರಿ ಒಂದು ಲೀಟರ್ ಗೆ 73KM ಮೈಲೇಜ್ ನೀಡುವ. ಹೊಸ Hero Splendor Plus XTEC 2.0 ಬೈಕ್
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆಗೆ ಜೂನ್ 12 ರ ವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ.