ನರೇಂದ್ರ ಮೋದಿ ಸರಕಾರ ರಾಷ್ಟ್ರದ ರೈತರಿಗೆ ಆರ್ಥಿಕ ನೆರವು ನೀಡಬೇಕು ಎಂದು ಆರಂಭ ಮಾಡಿದ ಯೋಜನೆ ಕಿಸಾನ್ ಸಮ್ಮನ್. ಈಗಾಗಲೆ 16 ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದ್ದು. ಈಗ 17 ನೆ ಕಂತಿನ ಹಣವನ್ನು ಲೋಕಸಭಾ ಚುನಾವಣೆಯ ದಿನ ಬಿಡುಗಡೆ ಆದ. ಬಳಿಕ ರೈತರ ಖಾತೆಗೆ ಜಮಾ ಆಗಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯ ಆಗಿದೆ.
16 ನೆ ಕಂತಿನ ಹಣ ಯಾವಾಗ ಜಮಾ ಆಗಿತ್ತು?: ದೇಶದ ರೈತರಿಗೆ ಪಿಎಂ ಕಿಸಾನ್ ಸಮ್ಮನ್ ಯೋಜನೆಯ 16ನೇ ಕಂತಿನ ಹಣವು ಫೆಬ್ರುವರಿ 28 2024 ರಂದು ನೇರವಾಗಿ 2000 ರೂಪಾಯಿ ಹಣ ಜಮಾ ಆಗಿತ್ತು.
ಚುನಾವಣೆಯ ಫಲಿತಾಂಶದ ಬಳಿಕ 17ನೆ ಕಂತಿನ ಹಣ ಜಮಾ ಆಗುವ ದಿನಾಂಕ ನಿರ್ಧಾರ ಆಗಲಿದೆ:- ಇಂದು ಲೋಕಸಭೆ ಚುನಾವಣೆಯ ಫಲಿತಾಂಶ ಬಿಡುಗಡೆ ಆಗಲಿದ್ದು ಫಲಿತಾಂಶ ಬಿಡುಗಡೆ ಆಗಿ ದೇಶದ ಚುಕ್ಕಾಣಿ ಹಿಡಿದ ಬಳಿಕ ಪಿಎಂ ಕಿಸಾನ್ ಸಮ್ಮನ್ ಯೋಜನೆ ಯ ಹಣ ಬಿಡುಗಡೆ ದಿನಾಂಕ ತಿಳಿಯಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪಿಎಂ ಕಿಸಾನ್ ಸಮ್ಮನ್ ಯೋಜನೆಯ ಲಾಭಗಳು :-
- ಆರ್ಥಿಕ ನೆರವು: ಪಿಎಂ ಕಿಸಾನ್ ಸಮ್ಮನ್ ಯೋಜನೆಯಲ್ಲಿ ಪ್ರತಿ ವರ್ಷ 6,000 ರೂಪಾಯಿ ಹಣವನ್ನು ಮೂರು ಕಂತುಗಳಲ್ಲಿ ರೈತರಿಗೆ ನೀಡುತ್ತಾರೆ. ಈ ಹಣವು ಕೃಷಿಕರ ಕೃಷಿ ಖರ್ಚುಗಳನ್ನು ನಿಭಾಯಿಸಲು ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಅವರ ಆರ್ಥಿಕ ಜೀವನಮಟ್ಟವನ್ನು ಸುಧಾರಿಸಲು ಸಹಾಯ ಆಗುತ್ತದೆ.
- ಹೂಡಿಕೆ ಹೆಚ್ಚಳ : ಈ ಹಣದಿಂದ ಕೃಷಿ ಉಪಕರಣಗಳು ಹಾಗೂ ಬೀಜಗಳು ಮತ್ತು ಗೊಬ್ಬರ ಮತ್ತು ಕೀಟನಾಶಕಗಳಿಗೆ ಹೆಚ್ಚಿನ ಹೂಡಿಕೆಗೆ ಮಾಡಲು ಸಾಧ್ಯವಾಗುತ್ತದೆ.
- ಸಾಲದ ಹೊರೆ ಕಡಿಮೆ: ಅಲ್ಪ ಹಣ ಆದರೂ ಸಹ ರೈತರೂ ಮಾಡುವ ಸಾಲದ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಹಾಯ ಆಗುತ್ತದೆ.
- ಆರ್ಥಿಕ ಸ್ಥಿರತೆ: ಇದರಿಂದ ರೈತರಿಗೆ ಆದಾಯದ ಮೂಲವನ್ನು ಹೆಚ್ಚಿಸುವ ಜೊತೆಗೆ ಆರ್ಥಿಕ ಸ್ಥಿರತೆಯನ್ನು ಸುಧಾರಿಸಲು ಸಹಾಯ ಆಗುತ್ತದೆ.
- ಗ್ರಾಮೀಣ ಜನಜೀವನ ಮಟ್ಟದ ಸುಧಾರಣೆ: ಗ್ರಾಮೀಣ ಪ್ರದೇಶದ ರೈತರು ಅಭಿವೃದ್ದಿ ಆಗುವುದಕ್ಕೆಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಜನರ ಜೀವನಮಟ್ಟವನ್ನು ಸುಧಾರಿಸುತ್ತದೆ.
- ಆರ್ಥಿಕತೆಗೆ ಉತ್ತೇಜನ: ಈ ಯೋಜನೆಯು ಗ್ರಾಮೀಣ ಬೇಡಿಕೆಯನ್ನು ಹೆಚ್ಚಿಸುವ ಮೂಲಕ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
ಈ ಯೋಜನೆಯಿಂದ ಹಲವಾರು ರೈತರ ಜೀವನ ಮಟ್ಟ ಸುಧಾರಿಸುವ ಜೊತೆಗೆ ಬೇರೆ ದೇಶಗಳಿಂದ ಆಮದು ಪಡೆಯುವ ಅವಕಾಶ ಇರುವುದಿಲ್ಲ. ರೈತರು ಬೆಳೆಯುವ ಬೆಳೆ ಹೆಚ್ಚಾದ ಹಾಗೆ ದೇಶದಲ್ಲಿ ರಪ್ತು ಪ್ರಮಾಣ ಜಾಸ್ತಿ ಆಗಿ ದೇಶದ ಆರ್ಥಿಕ ಅಭಿವೃದ್ದಿ ಆಗುತ್ತದೆ. ರೈತರು ಬೆಳೆಯುವ ಜೊತೆಗೆ ದೇಶವು ಆರ್ಥಿಕವಾಗಿ ಅಭಿವೃದ್ದಿ ಆಗುತ್ತದೆ.ಇದೆ ಉದ್ದೇಶದಿಂದ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕಾರ ಮಾಡಿದ ಬಳಿಕ ದೇಶದ ಬೆನ್ನೆಲುಬು ರೈತರು. ಇವರನ್ನು ಮುನ್ನೆಲೆಗೆ ತಂದರೆ ಭಾರತವೇ ಅಭಿವೃದ್ದಿ ಹೊಂದಲಿದೆ ಎಂದು ಈ ಯೋಜನೆಯನ್ನು ಜಾರಿಗೆ ತಂದರು.
ಇದನ್ನೂ ಓದಿ: ಅಟಲ್ ಪೆನ್ಷನ್ ಸ್ಕೀಮ್ ನಲ್ಲಿ ದಿನಕ್ಕೆ 7 ರೂಪಾಯಿ ಹೂಡಿಕೆ ಮಾಡಿ ತಿಂಗಳಿಗೆ 5000 ರೂಪಾಯಿ ಪೆನ್ಷನ್ ಪಡೆಯಿರಿ
ಇದನ್ನೂ ಓದಿ: ಜಿಯೋದ ಅಗ್ಗದ 365 ದಿನಗಳ ಯೋಜನೆ; ಒಂದು ವರ್ಷ ಉಚಿತ ಪ್ರೈಮ್ ವೀಡಿಯೊದೊಂದಿಗೆ!