ಈಗ ಸಾಮಾನ್ಯವಾಗಿ ಫಿಕ್ಸೆಡ್ ಡಿಪಾಸಿಟ್ ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಬ್ಯಾಂಕ್ ನಲ್ಲಿ 3 ತಿಂಗಳಿಂದ 5 ವರ್ಷದ ವರೆಗೆ FD ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. FD ಯೋಜನೆಯಲ್ಲಿ ಯಾವ ಬ್ಯಾಂಕ್ ನಲ್ಲಿ ಏಷ್ಟು ಪ್ರಮಾಣದ ಬಡ್ಡಿದರ ಸಿಗುತ್ತದೆ ಎಂಬುದನ್ನು ತಿಳಿಯೋಣ.
ಅವಧಿಗೆ ಅನುಗುಣವಾಗಿ ಬಡ್ಡಿದರಗಳು ನಿಗದಿ ಆಗುತ್ತವೆ:- ಸಾಮಾನ್ಯವಾಗಿ FD ಯೋಜನೆಯಲ್ಲಿ ಅಲ್ಪಾವಧಿ ಹೂಡಿಕೆ ಮಧ್ಯಮಾವಧಿ ಹೂಡಿಕೆ ಹಾಗೂ ದೀರ್ಘಾವಧಿ ಹೂಡಿಕೆ ಎಂಬುದು ಇದೆ. ನಾವು ಎಷ್ಟು ಏಷ್ಟು ವರ್ಷಕ್ಕೆ FD ಯೋಜನೆಯಲ್ಲಿ ಹೂಡಿಕೆ ಮಾಡುತ್ತೇವೆ ಎಂಬುದರ ಮೇಲೆ ನಿರ್ಧಾರ ಆಗುತ್ತದೆ. ಉದಾಹರಣೆಗೆ ಹೇಳುವುದಾದರೆ SBI bank ನಲ್ಲಿ ಎಫ್ಡಿ ಯೋಜನೆಯಲ್ಲಿ ಮೂರು ತಿಂಗಳ ಹೂಡಿಕೆಗೆ ಶೇಕಡಾ 5.5% ಬಡ್ಡಿದರ ಸಿಗುತ್ತದೆ. ಹಾಗೆಯೇ 1 ವರ್ಷದ ಅವಧಿಗೆ ಶೇಕಡಾ 6.8% ಬಡ್ಡಿದರ ಸಿಗುತ್ತದೆ.
ಹೆಚ್ಚಿನ ಬಡ್ಡಿ ನೀಡುವ ಬ್ಯಾಂಕ್ ಗಳು ಯಾವುವು?
- State bank of inida : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಐದು ವರ್ಷಗಳ ಅವಧಿಗೆ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಶೇಕಡಾ ಶೇಕಡಾ 6.5% ಬಡ್ಡಿದರ ಸಿಗುತ್ತವೆ. ಆದರೆ ಕಡಿಮೆ ಅವಧಿಗೆ ಅಂದರೆ ಒಂದು ವರ್ಷದ ಅವಧಿಗೆ ಶೇಕಡಾ 6.8 ಬಡ್ಡಿ ದರ ನೀಡಲಾಗುತ್ತದೆ. ಈ ದರಗಳು ಮೇ 15, 2024 ರಂದು ಘೋಷಣೆ ಆಗಿದೆ.
- ICICI bank :- ICICI ಬ್ಯಾಂಕ್ ನಲ್ಲಿ ಐದು ವರ್ಷದ ಅವಧಿಗೆ FD ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಶೇಕಡಾ 7% ಬಡ್ಡಿಯನ್ನು ನೀಡಲಾಗುತ್ತದೆ. ಒಂದು ವೇಳೆ ಕೇವಲ ಒಂದು ವರ್ಷದ ಅವಧಿಗೆ ಹೂಡಿಕೆ ಮಾಡಿದರೆ ನಿಮಗೆ ಶೇಕಡಾ 6.7% ಶೇಕಡಾ ಬಡ್ಡಿ ನೀಡಲಾಗುತ್ತದೆ. ಈ ದರಗಳನ್ನು ಬ್ಯಾಂಕ್ ಫೆಬ್ರವರಿ 17 2024 ರಿಂದ ಜಾರಿಗೆ ತಂದಿದೆ.
- HDFC bank: ಭಾರತದಲ್ಲಿ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆಗಿರುವ HDFC ಬ್ಯಾಂಕ್ ನಲ್ಲಿ ಐದು ವರ್ಷಗಳ ಅವಧಿಗೆ ನೀವು ಮಾಡಿರುವ ಹೂಡಿಕೆಯ ಮೇಲೆ ಶೇಕಡಾ 7% ಬಡ್ಡಿದರ ನಿಗದಿ ಪಡಿಸಲಾಗಿದೆ. ಒಂದು ವರ್ಷದ ಅವಧಿಗೆ ಹೂಡಿಕೆ ಮಾಡಿದರೆ ಶೇಕಡಾ 6.6% ಬಡ್ಡಿದರ ಸಿಗುತ್ತದೆ. ನೂತನ ದರಗಳು ಫೆಬ್ರುವರಿ 9, 2024 ರಿಂದ ಜಾರಿಗೆ ಬಂದಿವೆ.
- bank of baroda: 5 ವರ್ಷಗಳ FD ಹೂಡಿಕೆಯ ಮೇಲೆ ಶೇಕಡಾ 6.50% ಬಡ್ಡಿದರ ನೀಡುತ್ತದೆ ಆದರೆ ಒಂದು ವರ್ಷದ ಅವಧಿಗೆ ಶೇಕಡಾ 6.85% ಬಡ್ಡಿದರ ನೀಡಲಾಗುತ್ತದೆ. ನೂತನ ದರಗಳು ಜನವರಿ 15, 2024 ರಿಂದ ಜಾರಿಯಲ್ಲಿವೆ.
- kotak mahendra bank : 5 ವರ್ಷಗಳ ಅವಧಿಗೆ ಶೇಕಡಾ 6.20% ಬಡ್ಡಿದರ ನೀಡುತ್ತದೆ ಜೊತೆಗೆ ಒಂದು ವರ್ಷದ ಹೂಡಿಕೆಯ ಅವಧಿಗೆ 7.10% ಬಡ್ಡಿದರ ನೀಡುತ್ತದೆ. ನೂತನ ದರಗಳು ಫೆಬ್ರವರಿ 27, 2024 ಇಂದ ಜಾರಿಯಲ್ಲಿದೆ.
- Panjab National bank : ಈ ಬ್ಯಾಂಕ್ ನಲ್ಲಿ 5ವರ್ಷದ ಹೂಡಿಕೆಯ ಅವಧಿಗೆ 6.55 % ಬಡ್ಡಿದರ ನೀಡುತ್ತದೆ ಆದರೆ ಅಲ್ಪಾವಧಿಯ ಸ್ಥಿರ ಠೇವಣಿಗಳಿಗೆ ಹೆಚ್ಚಿನ ಬಡ್ಡಿದರ ನೀಡುತ್ತಿದೆ. ನೀವು ಕೇವಲ ಒಂದು ವರ್ಷದ ಅವಧಿಗೆ ಹೂಡಿಕೆ ಮಾಡಿದರೆ ಶೇಕಡಾ 6.8% ಬಡ್ಡಿ ಸಿಗುತ್ತದೆ. ನೂತನ ದರಗಳು ಏಪ್ರಿಲ್ 12, 2024 ರಿಂದ ಜಾರಿಯಲ್ಲಿವೆ.
ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಟಲ್ ಪೆನ್ಷನ್ ಸ್ಕೀಮ್ ನಲ್ಲಿ ದಿನಕ್ಕೆ 7 ರೂಪಾಯಿ ಹೂಡಿಕೆ ಮಾಡಿ ತಿಂಗಳಿಗೆ 5000 ರೂಪಾಯಿ ಪೆನ್ಷನ್ ಪಡೆಯಿರಿ
ಇದನ್ನೂ ಓದಿ: ಜಿಯೋದ ಅಗ್ಗದ 365 ದಿನಗಳ ಯೋಜನೆ; ಒಂದು ವರ್ಷ ಉಚಿತ ಪ್ರೈಮ್ ವೀಡಿಯೊದೊಂದಿಗೆ!