ಅಂಚೆ ಇಲಾಖೆಯಲ್ಲಿ ಗ್ರಾಹಕರ ಅನುಕೂಲಕ್ಕ್ಕೆ ತಕ್ಕಂತೆ ಹಲವಾರು ಯೋಜನೆಗಳು ಜಾರಿಯಲ್ಲಿ ಇವೆ. ಈಗಾಗಲೇ ಅಂಚೆ ಕಚೇರಿಯ ಯೋಜನೆಗಳು ಮಹಿಳೆಯರು ಮಕ್ಕಳು ಹಾಗೂ ವೃದ್ಧರ ಆರ್ಥಿಕ ಸ್ಥಿತಿ ಸುಧಾರಿಸಲು ಹಲವಾರು ರೀತಿಯ ಯೋಜನಗಳನ್ನು ಬಿಡುಗಡೆ ಮಾಡಿದ್ದೆ. ಈಗ ಹಿರಿಯ ನಾಗರೀಕರಿಗಾಗಿ ಇನ್ನೊಂದು ಯೋಜನೆಯನ್ನು ಅಂಚೆ ಇಲಾಖೆ SCSS ಅಂಚೆ ಕಛೇರಿ ಯೋಜನೆಯನ್ನು ಪರಿಚಯಿಸಿದೆ.
SCSS ಅಂಚೆ ಕಛೇರಿ ಯೋಜನೆಯ ಬಗ್ಗೆ ಮಾಹಿತಿ :- ಅಂಚೆ ಇಲಾಖೆಯು ಹಿರಿಯ ನಾಗರಿಕರಿಗೆ ಅಂದರೆ 60 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಗಳಿಗೆ ನಿವೃತ್ತಿ ಜೀವನದ ಆಧಾರಕ್ಕೆ 5ವರ್ಷಗಳ ಕಾಲ ಹೂಡಿಕೆ ಮಾಡಲು ಅವಕಾಶ ನೀಡುತ್ತಿದೆ. ಜೊತೆಗೆ ಸರಕಾರಿ ಕೆಲಸದಲ್ಲಿ ಇದ್ದ ವ್ಯಕ್ತಿಗಳು ವಿಆರ್ಎಸ್ ತೆಗೆದುಕೊಂಡರೆ ಅವರಿಗೂ ಹೂಡಿಕೆಯ ಅವಕಾಶಗಳನ್ನು ನೀಡುತ್ತಿದೆ. ಇದು ಬ್ಯಾಂಕ್ ನ FD ಯೋಜನೆಯಂತೆ ಕೆಲಸ ಮಾಡಲಿದೆ.
ಎಸ್.ಸಿ.ಎಸ್.ಎಸ್ ಅಂಚೆ ಕಛೇರಿ ಯೋಜನೆಗೆ ಬಡ್ಡಿ ಏಷ್ಟು?: ಸಧ್ಯಕ್ಕೆ ಪೋಸ್ಟ್ ಆಫೀಸ್ ನಲ್ಲಿ SCSS ಅಂಚೆ ಕಛೇರಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಶೇಕಡಾ 8.2% ಬಡ್ಡಿದರ ಸಿಗುತ್ತದೆ. ಈ ಯೋಜನೆಯಲ್ಲಿ ನೀವು ಕನಿಷ್ಠ 1000 ರೂಪಾಯಿ ಹೂಡಿಕೆ ಮಾಡಬೇಕು. ಹಾಗೂ ಗರಿಷ್ಠ ಹೂಡಿಕೆ ಮೊತ್ತ 30,00,000 ಆಗಿರುತ್ತದೆ. ನಿಮ್ಮ ಹೂಡಿಕೆಯ ಮೊತ್ತದ ಮೇಲೆ ತ್ರೈಮಾಸಿಕವಾಗಿ ಪಾವತಿಸಲಾಗುತ್ತದೆ.
SCSS ಅಂಚೆ ಕಛೇರಿ ಯೋಜನೆಗೆ ತೆರಿಗೆ ವಿನಾಯಿತಿ ಸಿಗುತ್ತದೆ :- ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಸೆಕ್ಷನ್ 80C ಅಡಿಯಲ್ಲಿ ನೀವು ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಪಡೆಯಬಹುದಾಗಿದೆ.
5 ವರ್ಷಗಳ ನಂತರ ಯೋಜನೆಯನ್ನು ಮುಂದುವರೆಸಬಹುದು :- SCSS ಅಂಚೆ ಕಛೇರಿ ಯೋಜನೆಯ ಮೆಚ್ಯುರಿಟಿ ಅವಧಿ 5 ವರ್ಷ. ಆದರೆ ನೀವು ಇನ್ನೂ ಈ ಯೋಜನೆಯ ಅವಧಿಯನ್ನು ಮುಂದುವರೆಸಬೇಕು ಎಂದು ಬಯಸಿದ್ದಲ್ಲಿ ನೀವು ಗರಿಷ್ಠ ಮೂರು ವರ್ಷಗಳ ಕಾಲ ಈ ಯೋಜನೆ ಮೆಚ್ಯುರಿಟಿ ಅವಧಿಯನ್ನ ಮುಂದುವರೆಸಲು ಸಾಧ್ಯವಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೂಡಿಕೆಯ ಲೆಕ್ಕಾಚಾರ :-
ನೀವು SCSS ಅಂಚೆ ಕಛೇರಿ ಯೋಜನೆಯಲ್ಲಿ 15 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ ವಾರ್ಷಿಕ ಬಡ್ಡಿದರ 8.5% ಸಿಗುತ್ತದೆ. ಆಗ ವಾರ್ಷಿಕವಾಗಿ ನೀವು ವಾರ್ಷಿಕವಾಗಿ 1,23,000 ರೂಪಾಯಿ ಬಡ್ಡಿದರ ಸಿಗುತ್ತದೆ. 5 ವರ್ಷಕ್ಕೆ ನಿಮಗೆ 6,15,000 ರೂಪಾಯಿ ಬಡ್ಡಿದರ ಸಿಗುತ್ತದೆ. ಅಲ್ಲಿಗೆ ನಿಮ್ಮ ಅಸಲು ಬಡ್ಡಿ ಬಡ್ಡಿ ಎರಡು ಸೇರಿ ನಿಮಗೆ 21,15,000 ರೂಪಾಯಿ ಸಿಗುತ್ತದೆ. ಅದೇ ನೀವು ತ್ರೈಮಾಸಿಕ ಬಡ್ಡಿಯನ್ನು ಪಡದೇರೆ ಸಹ ನಿಮಗೆ ಸಿಗುವ ಮೆಚ್ಯೂರಿಟಿ ಹಣ ಒಟ್ಟು 21,15,000 ರೂಪಾಯಿ ಆಗಿರುತ್ತದೆ.
ನಿವೃತ್ತಿಯ ನಂತರ ಆರ್ಥಿಕ ಜೀವನಕ್ಕೆ ಈ ಹಣ ಸಹಕಾರಿ ಆಗಲಿದೆ ಜೊತೆಗೆ ಪೋಸ್ಟ್ ಆಫೀಸ್ ನಲ್ಲಿ ನೀವು ಹೂಡಿಕೆ ಮಾಡಿದರೆ ನಿಮಗೆ ನಿಮ್ಮ ಹಣ ಸೇಫ್ ಆಗಿ ಇರುತ್ತದೆ ಹಾಗೂ ಉತ್ತಮ ಬಡ್ಡಿದರ ಮತ್ತು ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಾಗುತ್ತದೆ. ನೀವು SCSS ಅಂಚೆ ಕಛೇರಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದು ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್ ನ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ ನಿಯಮಾವಳಿಗಳನ್ನು ಸರಿಯಾಗಿ ತಿಳಿದುಕೊಂಡು ಹೂಡಿಕೆ ಮಾಡುವುದು ಉತ್ತಮ.
ಇದನ್ನೂ ಓದಿ: ಫಿಕ್ಸೆಡ್ ಡಿಪಾಸಿಟ್ ಗೆ ಹೆಚ್ಚಿನ ಬಡ್ಡಿದರ ನೀಡುವ 5 ಬ್ಯಾಂಕ್ ಗಳ ಬಗ್ಗೆ ಮಾಹಿತಿ ಇಲ್ಲಿದೆ
ಇದನ್ನೂ ಓದಿ: AI ಟೂಲ್ ಉಪಯೋಗಿಸಿ ಮನೆಯಿಂದಲೇ ಕೆಲಸ ಮಾಡಿ ಹಣ ಸಂಪಾದನೆ ಮಾಡುವ ವಿಧಾನಗಳು ಯಾವುವು?