ಹೋಮ್ ಲೋನ್ ತೆಗೆದುಕೊಂಡರೆ ತೀರಿಸುವ ಹೊಣೆ ನಮ್ಮ ಮೇಲೆ ಇರುತ್ತದೆ. ಹೋಮ್ ಲೋನ್ ಲಕ್ಷ ಲಕ್ಷ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ತೆಗೆದು ಕೊಳ್ಳಬೇಕಾಗುತ್ತದೆ. ಅವಧಿಗೂ ಮುನ್ನ ಸಾಲವನ್ನು ತೀರಿಸಬೇಕೆಂದು ಬರುವ ಸಂಬಳವನ್ನು EMI ಕಟ್ಟುಬೇಕಾಗುತ್ತದೆ. ನಮ್ಮ ದಿನನಿತ್ಯದ ಜೀವನಕ್ಕೆ ಅದು ಹೊರೆಯಾಗುತ್ತದೆ. ಹಾಗಿದ್ದಾಗ ನಾವು EMI ಹೊರೆಯನ್ನು ತಪ್ಪಿಸಲು ಅನುಸರಿಸಬಹುದಾದ ಮಾರ್ಗಗಳ ಬಗ್ಗೆ ತಿಳಿಯೋಣ.
ಸುಲಭವಾಗಿ EMI ಮೂಲಕ ಹೋಮ್ ಲೋನ್ ಪಾವತಿಸುವ 5 ವಿಧಾನಗಳು :-
1) ಸಾಲದ ಪೂರ್ವ ಪಾವತಿ ವಿಧಾನ :- ನೀವು ಹೋಮ್ ಲೋನ್ ಪಡೆಯುವಾಗ ಬಡ್ಡಿಯನ್ನು ಕಡಿಮೆ ಮಾಡಲು ನೀವು ಸಾಲದ ಪೂರ್ವ ಪಾವತಿ ವಿಧಾನವನ್ನು ಅನುಸರಿಸಬಹುದು. ನೀವು ಸಾಲ ಪಡೆಯುವ ಮುನ್ನ ಸ್ವಲ್ಪ ಹಣವನ್ನು ಪಾವತಿ ಮಾಡಿದರೆ ನಿಮಗೆ ಪಾವತಿಸುವ ಸಾಲದ ಮೊತ್ತದ ಜೊತೆಗೆ ನಿಮಗೆ ಬಡ್ಡಿದರ ಕಡಿಮೆ ಆಗುತ್ತದೆ. ಆದರೆ ನೀವು ಬ್ಯಾಂಕ್ ನಲ್ಲಿ ಸಾಲದ ಪೂರ್ವ ಪಾವತಿ ಮಾಡುವ ಮುನ್ನ ಯಾವುದೇ ಶುಲ್ಕ ಅಥವಾ ದಂಡ ನೀಡಬೇಕಾಗುವುದೇ ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳಿ.
2) ದೀರ್ಘಾವಧಿ ಸಾಲದ ಆಯ್ಕೆ :- ನೀವು ಹೋಮ್ ಲೋನ್ ಪಡೆಯುವಾಗ ಧೀರ್ಘಾವಧಿ ಮರುಪಾವತಿ ಮಾಡುವ ಸಾಲದ ಆಯ್ಕೆ ಮಾಡಿ. ಆಗ ನಿಮಗೆ ತಿಂಗಳ EMI ಕಡಿಮೆ ಪಾವತಿಸಬಹುದು. ಆದರೆ ನೀವು ಅಲ್ಪಾವಧಿ ಸಾಲವನ್ನು ಪಡೆದರೆ ನಿಮಗೆ ಬಡ್ಡಿದರವು ಕಡಿಮೆ ಆಗುತ್ತದೆ ಎಂಬುದನ್ನು ಅರಿತುಕೊಳ್ಳಿ. ನಿಮಗೆ ಹೆಚ್ಚಿನ ಹಣವನ್ನು ಪಾವತಿಸಲು ನಿಮ್ಮ ಆರ್ಥಿಕ ಸ್ಥಿತಿ ಉತ್ತಮ ಇಲ್ಲ ಎಂಬುದಾದರೆ ನೀವು ದೀರ್ಘಾವಧಿ ಸಾಲವನ್ನು ಪಡೆಯುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
3) ಕಂತು ಹೆಚ್ಚಿಸಿಕೊಳ್ಳಿ :- ನಿಮ್ಮ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿದೆ ಎಂದಾದರೆ ನೀವು ಹೆಚ್ಚು ಕಂತುಗಳನ್ನು ಪಾವತಿ ಮಾಡಬಹುದು. ಹಾಗೂ ICICI ನಿರ್ದೇಶಕರು ಹೇಳುವುದೇನೆಂದರೆ ಕಂತುಗಳನ್ನು ಹೆಚ್ಚಿಸುವುದರಿಂದ ಬಡ್ಡಿದರವನ್ನು ಗಣನೀಯವಾಗಿ ಕಡಿಮೆ ಆಗುತ್ತದೆ. ಆದಾಗ್ಯೂ, ಈ ಯೋಜನೆಯನ್ನು ಪರಿಗಣಿಸುವ ಮೊದಲು, ನಿಮ್ಮ ಹಣಕಾಸಿನ ಅಗತ್ಯಗಳನ್ನು ಅಂದಾಜು ಮಾಡಿ, ಗೃಹ ಸಾಲದ EMI ಲೆಕ್ಕಾಚಾರ ಮಾಡಿ ಮತ್ತು ನಿಮ್ಮ ಸಂಬಳ ಮೊತ್ತ ಅಥವಾ ವಾರ್ಷಿಕ ಬೋನಸ್ನಿಂದ ನೀವು ಎಷ್ಟು ಹೆಚ್ಚುವರಿ EMI ಅನ್ನು ಭರಿಸಬಹುದು ಎಂಬುದನ್ನು ನಿರ್ಧರಿಸಿ. ಯಾವುದೇ ಹೆಚ್ಚುವರಿ ಪಾವತಿಸಿದರೂ, ಸಣ್ಣ ಮೊತ್ತವಾಗಿದ್ದರೂ ಸಹ, ಸಾಲದ ಅವಧಿಯ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು.
4) ಕಡಿಮೆ ಬಡ್ಡಿ ದರಗಳ ಬಗ್ಗೆ ಮಾಹಿತಿ ಪಡೆಯಿರಿ :- ಎಲ್ಲಾ ಬ್ಯಾಂಕ್ ಅಥವಾ ಲೋನ್ ನೀಡುವ ಸಂಸ್ಥೆಯಲ್ಲಿ ಬಡ್ಡಿದರ ಕಡಿಮೆ ಇರುವುದಿಲ್ಲ. ಕೆಲವು ಪೈನಾನ್ಸ್ ಕಂಪನಿ ಅಥವಾ ಬ್ಯಾಂಕ್ ಗಳು ಮಾತ್ರ ಕಡಿಮೆ ಬಡಿದ್ದರ ನೀಡುತ್ತದೆ. ಯಾವ ಬ್ಯಾಂಕ್ ನಲ್ಲಿ ಏಷ್ಟು ಬಡ್ಡಿ ಇದೆ ಎಂಬುದನ್ನು ಮೊದಲು ವಿಚಾರಿಸಿ ಸಾಲ ಪಡೆಯಿರಿ.
5) down payment ಪಾವತಿಸಿ :- ನೀವು ಹೋಮ್ ಲೋನ್ ಪಡೆಯುವಾಗಲೇ ನಿಮಗೆ ಸಾಧ್ಯವಾದಷ್ಟು ಮೊತ್ತದ ಡೌನ್ ಪೇಮೆಂಟ್ ಪಾವತಿ ಮಾಡಲು ಯತ್ನಿಸಿ. ಇದರಿಂದ ನಿಮಗೆ ಸಾಲದ ಮೊತ್ತವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ನೀವು ಪಾವತಿಸುವ ಕಡಿಮೆ ಬಡ್ಡಿ ದರ ಕಡಿಮೆ ಆಗುತ್ತದೆ. ಇದರಿಂದ ನೀವು ಬೇಗ ನಿಮ್ಮ ಹೋಮ್ ಲೋನ್ ಮರುಪಾವತಿ ಮಾಡಲು ಸಾಧ್ಯವಿದೆ.
ಇದನ್ನೂ ಓದಿ: ಕರ್ನಾಟಕ ಸರ್ಕಾರ ಕ್ರೀಡಾಪಟುಗಳಿಗೆ 2% ಮೀಸಲಾತಿ; ಉತ್ತೇಜಿತ ಪ್ರಗತಿ!
ಇದನ್ನೂ ಓದಿ: EPF ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳು: ನಿಮ್ಮ ಖಾತೆಗೆ ಏನು ಲಾಭ ಆಗುತ್ತೆ?