ತೃತೀಯ ಲಿಂಗಿಗಳಿಗೂ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲಿದೆ.

Gruhalakshmi Yojana New Update

ಗೃಹ ಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರವು ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ 2023 ರಲ್ಲಿ ಪ್ರಾರಂಭಿಸಿದ ಯೋಜನೆ ಆರಂಭ ಮಾಡಿತು. ಈಗಾಗಲೆ ಲಕ್ಷಾಂತರ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2000 ಹಣವನ್ನು ಪಡೆಯುತ್ತಾ ಇದ್ದಾರೆ. ಈಗ ಈ ಯೋಜನೆಯನ್ನು ವಿಸ್ತರಿಸಿದ ರಾಜ್ಯ ಸರಕಾರವು ತೃತೀಯ ಲಿಂಗಗಳಿಗೂ ಈ ಯೋಜನೆಯ ಹಣವನ್ನು ನೀಡಲು ಮುಂದಾಗಿದೆ.

WhatsApp Group Join Now
Telegram Group Join Now

ಮುಂದಿನ ತಿಂಗಳಿಂದ ಸಿಗಲಿದೆ ತೃತೀಯ ಲಿಂಗಿಗಳಿಗೆ ಗೃಹ ಲಕ್ಷ್ಮಿ ಯೋಜನೆಯ ಹಣ :- ಜೂಲೈ ತಿಂಗಳಲ್ಲಿ ಮಹಿಳೆಯರಿಗೆ ನೀಡುವ ಗೃಹಲಕ್ಷ್ಮಿ ಯೋಜನೆಯ ಹಣ ಅರ್ಜಿ ಸಲ್ಲಿಸಿದ ತೃತೀಯ ಲಿಂಗಿಗಳಿಗೆ ಸಹ ಸಿಗುತ್ತದೆ..

ತೃತೀಯ ಲಿಂಗಿಗಳು ಅರ್ಜಿ ಸಲ್ಲಿಸುವುದು ಹೇಗೆ?: ಜಿಲ್ಲಾಧಿಕಾರಿಗಳು ನೀಡುವ ತೃತೀಯ ಲಿಂಗಿ ಗುರುತಿನ ಕಾರ್ಡ್ ಪಡೆದುಕೊಂಡವರು ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ. ಗುರುತಿನ ಕಾರ್ಡ್ ಪಡೆದವರು ಹತ್ತಿರದ ಗ್ರಾಮ್ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ನಿಮ್ಮ ಆಧಾರ್ ಕಾರ್ಡ್ ಹಾಗೂ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ತೃತೀಯ ಲಿಂಗಿಗಳು ಇದೆ ತಿಂಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. 

1.20 ಕೋಟಿ ಮಹಿಳೆಯರಿಗೆ ಸಿಗುತ್ತಿದೆ ಗೃಹ ಲಕ್ಷ್ಮಿ ಯೋಜನೆಯ ಹಣ :- ರಾಜ್ಯದಲ್ಲಿ ಪ್ರತಿ ತಿಂಗಳು ಸಹ ಬರೋಬ್ಬರಿ 1.20 ಕೋಟಿಗೂ ಅಧಿಕ ಮಹಿಳೆಯರಿಗೆ 2000 ರೂಪಾಯಿ ಹಣವು ನೆರವಿಗೆ ಜಮಾ ಆಗುತ್ತಿದೆ.

ರಾಜ್ಯದಲ್ಲಿ 40,000 ಅಧಿಕ ತೃತೀಯ ಲಿಂಗಿಗಳು :- ಮೂಲಗಳ ಪ್ರಕಾರ ರಾಜ್ಯದಲ್ಲಿ 40,000 ಕ್ಕೂ ಅಧಿಕ ತೃತೀಯ ಲಿಂಗಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ನೀಡುವುದಾಗಿ ರಾಜ್ಯ ಸರಕಾರ ಮಾಹಿತಿ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಕೇವಲ 500 ರೂ. ಹೂಡಿಕೆ ಮಾಡುವುದರ ಮೂಲಕ, ಉತ್ತಮ ಲಾಭ ಗಳಿಸಿ! 

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳು :-

  • ಆಧಾರ್ ಕಾರ್ಡ್
  • ವಾಸ ನಿರ್ದಿಷ್ಟ ಪ್ರಮಾಣಪತ್ರ
  • ಬ್ಯಾಂಕ್ ಖಾತೆ ವಿವರ
  • ತೃತೀಯ ಲಿಂಗಿ ಗುರುತಿನ ಕಾರ್ಡ್

ತೃತೀಯ ಲಿಂಗಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ನೀಡುವುದರಿಂದ ಏನು ಉಪಯೋಗ?: 

ಆರ್ಥಿಕ ಸ್ವಾವಲಂಬನೆ: ತೃತೀಯ ಲಿಂಗಿಗಳಿಗೆ ಸಹಾಯ ಧನ ನೀಡುವುದರಿಂದ ಅವರು ಆರ್ಥಿಕ ಸ್ವಾವಲಂಬನ ಪಡೆಯಲು ಸಹಾಯಕ ಮತ್ತು ತಮ್ಮ ಸ್ವಂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯ ಆಗುತ್ತದೆ.

ಸಾಮಾಜಿಕ ಸೇರ್ಪಡೆ: ಈ ಯೋಜನೆಯು ಸಮಾಜದಲ್ಲಿ ತೃತೀಯ ಲಿಂಗಿಗಳ ಸ್ವೀಕಾರಾರ್ಹತೆಯನ್ನು ಉತ್ತೇಜಿಸಲು ಮತ್ತು ಅವರನ್ನು ಮುಖ್ಯವಾಹಿನಿಗೆ ಸೇರಿಸಲು ಉತ್ತಮ ಆಗಿದೆ. ಇದರಿಂದ ಸಮಾಜದಲ್ಲಿ ಅವರಿಗೆ ಒಂದು ಸ್ಥಾನ ಸಿಗುತ್ತದೆ.

ಜೀವನಮಟ್ಟದ ಸುಧಾರಣೆ: ಸಹಾಯಧನ ನೀಡುವ ಮೂಲಕ ಅವರಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ರಕ್ಷಣೆ ಮತ್ತು ಇತರ ಅಗತ್ಯ ಸೇವೆಗಳಿಗೆ ಪಡೆಯಲು ಅವಕಾಶ ಆಗುವ ಜೊತೆಗೆ ತೃತೀಯ ಲಿಂಗಿಗಳು ಜೀವನಮಟ್ಟವನ್ನು ಸುಧರಣೆ ಆಗುತ್ತದೆ.

ಸಾಮಾಜಿಕ ನ್ಯಾಯ ತೃತೀಯ ಲಿಂಗಿಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ನೀಡುವಲ್ಲಿ ಇದು ಸಹಾಯಕ ಆಗಿದೆ. ಜೊತೆಗೆ
ಇದು ದೀರ್ಘಕಾಲದಿಂದ ಕಡೆಗಣಿಸಲ್ಪಟ್ಟ ಮತ್ತು ತಾರತಮ್ಯಕ್ಕೊಳಗಾದ ಸಮುದಾಯದ ಸದಸ್ಯರಿಗೆ ಬೆಂಬಲದ ಜೊತೆಗೆ ಸಬಲೀಕರಣವನ್ನು ಒದಗಿಸುತ್ತದೆ.

ಗೃಹ ಲಕ್ಷ್ಮಿ ಯೋಜನೆಯುನ್ನ ಕರ್ನಾಟಕದ ತೃತೀಯ ಲಿಂಗಿಗಳಿಗೆ ವಿಸ್ತರಣೆ ಮಾಡಿರುವುದು ಸಕಾರಾತ್ಮಕ ಬದಲಾವಣೆಯನ್ನು ತರಲು ಸಹಾಯ ಮಾಡುವ ಒಂದು ಪ್ರಮುಖ ನಿರ್ಧಾರ ಆಗಿದೆ.

ಇದನ್ನೂ ಓದಿ: ಬಡವರ ಆರೋಗ್ಯ ರಕ್ಷಣೆಗೆ ಯಶಸ್ವಿನಿ ಯೋಜನೆಯಡಿ 5 ಲಕ್ಷ ರೂಪಾಯಿಗಳ ವರೆಗೆ ಸಹಾಯಧನ ಸಿಗಲಿದೆ.