HAL ನಲ್ಲಿ ಡಿಪ್ಲೊಮ ಪಾಸಾದವರಿಗೆ 116 ಹುದ್ದೆಗಳ ನೇಮಕಾತಿ ನಡೆಯುತ್ತಿದೆ.

HAL Jobs 2024 Apply Online

ಬೆಂಗಳೂರಿನ HAL ನಲ್ಲಿ ಉದ್ಯೋಗ ಖಾಲಿ ಇದ್ದು ಡಿಪ್ಲೊಮಾ ಪಾಸ್ ಆದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಬಗ್ಗೆ ಪೂರ್ಣ ಮಾಹಿತಿ ಈ ಲೇಖನದಲ್ಲಿ ಲಭ್ಯವಿದೆ.

WhatsApp Group Join Now
Telegram Group Join Now

ಹುದ್ದೆಗಳ ಬಗ್ಗೆ ಮಾಹಿತಿ :- HAL ನಲ್ಲಿ ಭಾರತದ ಕೆಲವು ರಾಜ್ಯಗಳಲ್ಲಿ ಹುದ್ದೆಗಳು ಖಾಲಿ ಇದ್ದೆ. ಒಟ್ಟು 116 ಟೆಕ್ನೀಷಿಯನ್ ಹುದ್ದೆಗಳು ಖಾಲಿ ಇವೆ. ಬೆಂಗಳೂರು ಮತ್ತು ಜೋಧ್‌ಪುರ್ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹುದ್ದೆಗಳು ಖಾಲಿ ಇವೆ. ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ಡಿಪ್ಲೊಮ ಓದಿರುವ ಅಭಾರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ :-

  • ಮೆಕ್ಯಾನಿಕಲ್ ಡಿಪ್ಲೊಮ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪಾಸ್ ಆಗಿರಬೇಕು.
  • ಇಲೆಕ್ಟ್ರಿಕಲ್ ಅಥವಾ ಡಿಪ್ಲೊಮ ಇನ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಆಗಿರಬೇಕು.
  • ಇಲೆಕ್ಟ್ರಾನಿಕ್ಸ್‌ ಅಥವಾ ಡಿಪ್ಲೊಮ ಇನ್ ಇಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್ ಆಗಿರಬೇಕು.

ಹುದ್ದೆಗಳ ಸಂಖ್ಯೆ ಎಷ್ಟು :-

  • ಮೆಕ್ಯಾನಿಕಲ್ ಎಂಜಿನಿಯರಿಂಗ್ 64 ಹುದ್ದೆಗಳು.
  • ಇಲೆಕ್ಟ್ರಿಕಲ್ ಎಂಜಿನಿಯರಿಂಗ್ 44 ಹುದ್ದೆಗಳು.
  • ಇಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್ 08 ಹುದ್ದೆಗಳು.

ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಯಸ್ಸಿನ ಮಿತಿ :- ಮೇಲಿನ ಹುದ್ದೆಗೆ ಅರ್ಜಿ ಗರಿಷ್ಠ ವಯಸ್ಸು 28 ವರ್ಷ ಸರ್ಕಾರದ ಮೀಸಲಾತಿ ನಿಯಮದ ಪ್ರಕಾರ ಒಬಿಸಿ ಅಥವಾ ಎನ್‌ಸಿಎಲ್‌ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ 31 ವರ್ಷ ಹಾಗೂ ಎಸ್‌ಸಿ ಅಥವಾ ಎಸ್‌ಟಿ ವರ್ಗಕ್ಕೆ ಸೇರಿದವರಿಗೆ 33 ವರ್ಷ ಗರಿಷ್ಠ ವಯಸ್ಸಿನ ಮಿತಿ ಆಗಿರುತ್ತದೆ. ಹಾಗೂ ಪಿಡಬ್ಲ್ಯೂಡಿ ಅವರಿಗೆ ಗರಿಷ್ಠ ವಯಸ್ಸಿನ ಮಿತಿ 38 ವರ್ಷ. 

  1. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ಜೂನ್ 20 2024.
  2. ಅಭ್ಯರ್ಥಿಗಳ ಆಯ್ಕೆಗೆ ಪರೀಕ್ಷೆಯ ನಡೆಯುವ ಸಂಭಾವ್ಯ ದಿನಾಂಕ :- ಜೂಲೈ 7 2024.

ಇದನ್ನೂ ಓದಿ: ಬಜಾಜ್ CNG ಬೈಕ್ ಜುಲೈ 17ಕ್ಕೆ ಬಿಡುಗಡೆ; ಎಲ್ಲಾ ಬೈಕ್ ಗಳಿಗೆ ನಡುಕ ಹುಟ್ಟಿಸಿದ ಬಜಾಜ್

ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ?

  1. ಅಧಿಕೃತ ವೆಬ್ಸೈಟ್ ಗೆ ಹೋಗಿ :- ಹುದ್ದೆಗೆ ಅರ್ಜಿ ಸಲ್ಲಿಸಲು ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಬೇಕು.
  2. ರಿಜಿಸ್ಟರ್ ಆಗಿ :- ಮುಖಪುಟದಲ್ಲಿ ನಿಮಗೆ ರಿಜಿಸ್ಟರ್ ಆಗಲೂ ಕೇಳುತ್ತದೆ. ನೀವು ನಿಮ್ಮ ಇಮೇಲ್ ವಿಳಾಸ ಮತ್ತು ಪಾಸ್ವರ್ಡ್ ಹಾಕಿ ರಿಜಿಸ್ಟರ್ ಆಗಿ.
  3. ಲಾಗಿನ್ ಆಗಿ :- ಲಾಗಿನ್ ಇನ್ ಆಗಿ ಅರ್ಜಿ ನಮೂನೆಯಲ್ಲಿ ಕೇಳಿದ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ನಿಮ್ಮ ವಿದ್ಯಾರ್ಹತೆಯ ಮಾಹಿತಿಗಳನ್ನು ಭರ್ತಿ ಮಾಡಿ.
  4. ಅರ್ಜಿ ಸಲ್ಲಿಸಿ :- ಅರ್ಜಿ ನಮೂನೆಯಲ್ಲಿ ಕೇಳಲಾದ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಇನ್ನೊಮ್ಮೆ ಎಲ್ಲವನ್ನೂ ಪರಿಶೀಲನೆ ಮಾಡಿ ಅರ್ಜಿ ಸಲ್ಲಿಸಿ.
  5. ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ :- ಮುಂದಿನ ಹಂತಕ್ಕೆ reference ಗೆ ಅರ್ಜಿ ಸಲ್ಲಿಸಿದ ಬಗ್ಗೆ ಪ್ರಿಂಟ್ ತೆಗೆದುಕೊಳ್ಳಿ.

ಆಯ್ಕೆ ಪ್ರಕ್ರಿಯೆಯ ವಿವರಗಳು :- ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳ ಅರ್ಜಿಯನ್ನು ಪರಿಶೀಲನೆ ಮಾಡಿ ಶಾರ್ಟ್ ಲಿಸ್ಟ್ ರೆಡಿ ಮಾಡಲಾಗುತ್ತದೆ. ಶಾರ್ಟ್ ಲಿಸ್ಟ್ ನಲ್ಲಿ ಇರುವ ಎಲ್ಲಾ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ ಅಲ್ಲಿ ಆಯ್ಕೆ ಮಾಡಲಾಗುತ್ತದೆ.

ಸಂಬಳದ ವಿವರ :- ಈ ಹುದ್ದೆಗಳು ಖಾಯಂ ಹುದ್ದೆಗಳು ಅಲ್ಲದ ಕಾರಣ ಮಾಸಿಕ ವೇತನ ಎಂದು ನಿರ್ಧಿಷ್ಟ ಇಲ್ಲ. ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫಂಡ್‌ ಅನ್ನು ಕೊಡಲಾಗುತ್ತದೆ. ಈ ಹುದ್ದೆಗಳು ನಿಗದಿತ ಅವಧಿಯ ತರಬೇತುದಾರ ಹುದ್ದೆಗಳಾಗಿವೆ. ಆದ್ದರಿಂದ ಅವಧಿ ಮುಗಿದ ನಂತರ ಕೆಲಸ ನಿಮಗೆ ಖಾಯಂ ಆಗುವುದಿಲ್ಲ.

ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬೆಂಗಳೂರಿನ ಮೆಟ್ರೋದಲ್ಲಿ ಹುದ್ದೆಗಳು ಖಾಲಿ ಇವೆ.