ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 78000 ರೂಪಾಯಿ ಸಬ್ಸಿಡಿ ಪಡೆಯಿರಿ.

PM Surya Ghar Yojana Subsidy

ನರೇಂದ್ರ ಮೋದಿ ಅವರು ರಾಮ ಮಂದಿರ ಪ್ರತಿಷ್ಟಾಪನೆ ಸಮಯದಲ್ಲಿ ಪ್ರತಿ ಮನೆಯಲ್ಲಿ ಸೌರ ಫಲಕವನ್ನು ಅಳವಡಿಸಿ ವಿದ್ಯುತ್ ಕೊರತೆ ನಿವಾರಣೆ ಗೆ ಹೊಸದಾಗಿ ಪಿಎಂ ಸೂರ್ಯ ಘರ್ ಯೋಜನೆಯನ್ನು ಆರಂಭ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದಾದ ನಂತರ ಕ್ಯಾಬಿನೆಟ್ ನಲ್ಲಿ ಅನುಮೋದನೆ ದೊರೆತಿತ್ತು. ಈಗ ಮತ್ತೊಮ್ಮೆ ಮೋದಿ ಅವರು ಪ್ರಧಾನ ಮಂತ್ರಿ ಆಗಿರುವ ಕಾರಣ ಈ ಯೋಜನೆಗೆ ಮತ್ತಷ್ಟು ಹೆಚ್ಚಿನ ಸಹಾಯಧನ ಸಿಗುತ್ತಿದೆ.

WhatsApp Group Join Now
Telegram Group Join Now

300 ಯೂನಿಟ್ ಉಚಿತ ವಿದ್ಯುತ್ ನೀಡುವ ಗುರಿ:- ಪಿಎಂ ಸೂರ್ಯ ಯೋಜನೆಯಲ್ಲಿ ಮೊದಲ ಹಂತದಲ್ಲಿ ಒಂದು ಕೋಟಿ ಮನೆಗಳಿಗೆ ಸೌರ ಮೇಲ್ಛಾವಣಿ ಅಳವಡಿಸಿ ಇದರಿಂದ ಬರುವ ವಿದ್ಯುತ್ ನಿಂದ ಬಡವರಿಗೆ ಉಚಿತ ವಿದ್ಯುತ್ ನೀಡುವ ಗುರಿಯನ್ನು ಕೇಂದ್ರ ಸರ್ಕಾರವು ಹೊಂದಿದೆ. ಇದರಿಂದ ಮಾಧ್ಯಮ ಮತ್ತು ಬಡ ವರ್ಗದ ಜನರಿಗೆ 300 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡಬಹುದು ಎಂಬ ಆಕಾಂಕ್ಷೆ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಲ್ಲಿ ಸಿಗುತ್ತೆ ಉಚಿತ ವಿದ್ಯುತ್; 300ಯೂನಿಟ್ ಗಳವರೆಗೆ ಸಿಗಲಿದೆ ವಿದ್ಯುತ್; ಅರ್ಜಿ ಸಲ್ಲಿಸೋದು ಹೇಗೆ? ಏನ್ ಮಾಡ್ಬೇಕು ಗೊತ್ತ 

ಸೌರ ವಿದ್ಯುತ್ ಫಲಕಕ್ಕೆ ತಗುಲುವ ವೆಚ್ಚ ಹಾಗೂ ಸಬ್ಸಿಡಿ ಎಷ್ಟು?

ನೀವು ಪಿಎಂ ಘರ್ ಯೋಜನೆಯ ಅಡಿಯಲ್ಲಿ ವಿದ್ಯುತ್ ಪ್ಯಾನೆಲ್ ಅಳವಡಿಕೆ ಮಾಡಿದರೆ ಒಂದು ಕಿಲೋ ವ್ಯಾಟ್ ಸೋಲಾರ್ ಫಲಕ್ಕೆ ಒಟ್ಟು 90,000 ರೂಪಾಯಿ ಖರ್ಚು ಆಗುತ್ತದೆ. ಅದೇ ನೀವು ಎರಡು ಕಿಲೋ ವ್ಯಾಟ್ ಸೋಲಾರ್ ಫಲಕ್ಕೆ ಒಟ್ಟು 1,50,000 ರೂಪಾಯಿ ಖರ್ಚು ಆಗುತ್ತದೆ. ಮೂರು ಕಿಲೋ ವ್ಯಾಟ್ ಸೋಲಾರ್ ಫಲಕ್ಕೆ ಒಟ್ಟು 2,00,000 ರೂಪಾಯಿಯ ವರೆಗೆ ಖರ್ಚು ಆಗುತ್ತದೆ. ನೀವು ಎಷ್ಟು ಕಿಲೋ ವ್ಯಾಟ್ ಸೋಲಾರ್ ಫಲಕ ಅಳವಡಿಕೆ ಮಾಡುತ್ತೀರಿ ಎಂಬ ಆಧಾರದ ಮೇಲೆ ಕೇಂದ್ರ ಸರ್ಕಾರವು ಸಬ್ಸಿಡಿ ನೀಡುತ್ತದೆ. ಒಂದು ಕಿಲೋ ವ್ಯಾಟ್ ಗೆ 18,000 ರೂಪಾಯಿ, ಎರಡು ಕಿಲೋ ವ್ಯಾಟ್ ಗೆ 30,000 ರೂಪಾಯಿ ಹಾಗೂ ಮೂರು ಕಿಲೋ ವ್ಯಾಟ್ ಗೆ 78,000 ರೂಪಾಯಿ ಮೊತ್ತವನ್ನು ಸಬ್ಸಿಡಿ ನೀಡಲಾಗುತ್ತದೆ. ಈ ಸಹಾಯಧನದ ಮೊತ್ತವನ್ನು ಕೇಂದ್ರವು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ.

ಸೌರ ಫಲಕ ಅಳವಡಿಕೆ ಮಾಡುವುದರ ಉಪಯೋಗಗಳು ಏನು?

  1. ವಿದ್ಯುತ್ ಬಿಲ್ ಪಾವತಿಸುವ ಅವಶ್ಯಕತೆ ಇಲ್ಲ. :- ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವ ಅಗತ್ಯ ಇಲ್ಲ. ಬಡವರಿಗೆ ಈ ಹಣವು ಉಳಿತ್ಯಾ ಆಗುವುದರಲ್ಲಿ ಸಂಶಯವಿಲ್ಲ.
  2. ವಿದ್ಯುತ್ ಮಾರಾಟ ಮಾಡಿ ಹಣ ಗಳಿಕೆ :- ಸೌರ ಫಲಕ ಅಳವಡಿಕೆ ಮಾಡಿಕೊಂಡರೆ ನಿಮ್ಮ ಮನೆಯಲ್ಲಿ ಬಳಕೆ ಆಗದೆ ಉಳಿಯುವ ವಿದ್ಯುತ್ ಅನ್ನು ಬೇರೆಯವರಿಗೆ ಮಾರಾಟ ಮಾಡುವ ಮೂಲಕ ಹಣ ಗಳಿಸಲು ಸಾಧ್ಯವಿದೆ.
  3. ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜ್ ಹಾಕಲು :- ಸೌರ ಫಲಕ ಅಳವಡಿಕೆ ಮಾಡಿದರೆ ಯಾವುದೇ ಹೆಚ್ಚಿನ ಖರ್ಚು ಇಲ್ಲದೆಯೇ ಎಲೆಕ್ಟಿಕ್ ವಾಹನಗಳು ಹಾಗೂ ಎಲೆಕ್ಟ್ರಿಕ್ ಬ್ಯಾಟರಿ ಹಾಗೂ ಮೊಬೈಲ್ ಗಳಿಗೆ ಚಾರ್ಜ್ ಹಾಕಲು ಸಹಾಯವಾಗುತ್ತದೆ.

ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ :-

  1. ಕಡ್ಡಾಯವಾಗಿ ಭಾರತೀಯ ಪ್ರಜೆ ಆಗಿರಬೇಕು.
  2. 18ವರ್ಷ ಮೇಲ್ಪಟ್ಟ ಯುವಕ ಯುವತಿಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
  3. ಹಿಂದುಳಿದ ಅಥವಾ ಮಾಧ್ಯಮ ವರ್ಗದವರಿಗೆ ಹೆಚ್ಚು ಆದ್ಯತೆ ಇದೆ.
  4. ಕುಟುಂಬದ ವಾರ್ಷಿಕ ಆದಾಯ 1,50,000 ಕ್ಕಿಂತ ಜಾಸ್ತಿ ಇರಬಾರದು.
  5. ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಹುದ್ದೆಯಲ್ಲಿ ಇರಬಾರದು.

ಇದನ್ನೂ ಓದಿ: ರೈತರಿಗೆ ಸಿಹಿಸುದ್ದಿ; ನಾಳೆ ಎಲ್ಲಾ ರೈತರ ಖಾತೆಗೆ 2000 ಹಣ ಜಮಾ