ಈಗ ಹೆಚ್ಚಿನ ಜನರು FD ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ. ಹಣವನ್ನು ಹೂಡಿಕೆ ಮಾಡುವಾಗ ಎಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ ಎಂಬುದು ನೋಡುವುದು ಸಾಮಾನ್ಯವಾಗಿದೆ. ಸಾಮಾನ್ಯವಾಗಿ FD ಯೋಜನೆಯಲ್ಲಿ ನಿಮಗೆ 6 ರಿಂದ 8 ಪ್ರತಿಶತ ಬಡ್ಡಿದರ ಸಿಗುತ್ತದೆ. ಆದರೆ ದೇಶದಲ್ಲಿ ಎಲ್ಲಾ ಬ್ಯಾಂಕ್ ಗಳಿಗೆ ಹೋಲಿಸಿದರೆ ನಿಮಗೆ ಒಂದು ಬ್ಯಾಂಕ್ ನಲ್ಲಿ ಹೆಚ್ಚಿನ ಬಡ್ಡಿ ಸಿಗುತ್ತದೆ. ಹಾಗಾದರೆ ಯಾವ ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ ಎಂಬುದನ್ನು ತಿಳಿಯೋಣ.
ಅತಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಯಾವುದು?: ದೇಶದಲ್ಲಿಯೇ FD ಯೋಜನೆಗೆ ಈ ಬ್ಯಾಂಕ್ ಅತಿ ಹೆಚ್ಚು ಬಡ್ಡಿ ನೀಡುತ್ತದೆ. ಅದು ಯಾವುದೆಂದರೆ ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್. ಹೂಡಿಕೆದಾರರಿಗೆ ಕೊಡುಗೆಗಳನ್ನು ನೀಡುವ ಮೂಲಕ ಹೆಚ್ಚಿನ ಹೂಡಿಕೆದಾರರನ್ನು ಪಡೆಯುವ ನಿಟ್ಟಿನಲ್ಲಿ ಈ ಬ್ಯಾಂಕ್ ಹೆಚ್ಚಿನ ಬಡ್ಡಿದರ ನೀಡುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
FD ಯೋಜನೆಗೆ ನೀಡುವ ಬಡ್ಡಿದರ ಎಷ್ಟು?
ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರು ಬರೋಬ್ಬರಿ 9.75 % ಬಡ್ಡಿಯನ್ನು ಪಡೆಯಬಹುದು. ಹಾಗೆಯೇ ವಿವಿಧ ಅವಧಿಗೆ ಅನುಗುಣವಾಗಿ ಬೇರೆ ಬೇರೆ ರೀತಿಯ ರೀತಿಯ ಬಡ್ಡಿದರಗಳನ್ನು ನೀಡುತ್ತಿದೆ.
- ಎಫ್ಡಿ ಯೋಜನೆ ಅವಧಿ 7 ರಿಂದ 14 ದಿನ ಇದ್ದರೆ ನೀವು ಶೇಕಡಾ 3.50% ಬಡ್ಡಿದರ ಪಡೆಯುತ್ತೀರಿ.
- 15 ರಿಂದ 29 ದಿನಗಳ ಅವಧಿಗೆ ಹೂಡಿಕೆ ಮಾಡಿದರೆ ನೀವು ಶೇಕಡಾ 4% ಬಡ್ಡಿದರ ಪಡೆಯುತ್ತೀರಿ.
- 30 ರಿಂದ 45 ದಿನಗಳ ಅವಧಿಕೆ ಹೂಡಿಕೆ ಮಾಡಿದರೆ ಶೇಕಡಾ 4.50% ಬಡ್ಡಿದರ ಸಿಗುತ್ತದೆ.
- 46 ರಿಂದ 90 ದಿನಗಳ ಅವಧಿಗೆ ಹೂಡಿಕೆ ಮಾಡಿದರೆ 5% ಬಡ್ಡಿ ಸಿಗುತ್ತದೆ.
- 91 ರಿಂದ 180 ದಿನಗಳ ಅವಧಿಯ ಹೂಡಿಕೆಗೆ ಶೇಕಡಾ 6.50% ಬಡ್ಡಿ ಸಿಗುತ್ತದೆ.
- 181 ದಿನಗಳಿಂದ 365 ದಿನಗಳ ಅವಧಿಗೆ ಸಿಗುವ ಬಡ್ಡಿದರ ಶೇಕಡಾ 7.25%.
- 366 ರಿಂದ 545 ದಿನಗಳ ಅವಧಿಯ ಹೂಡಿಕೆಗೆ ಶೇಕಡಾ 9% ಬಡ್ಡಿ ಸಿಗುತ್ತದೆ.
- 546 ದಿನಗಳಿಂದ 1111 ದಿನಗಳ ಅವಧಿಗೆ ಸಾಮಾನ್ಯ ಗ್ರಾಹಕ ಹೂಡಿಕೆ ಮಾಡಿದರೆ ಶೇಕಡಾ 9.25% ಬಡ್ಡಿದರ ಸಿಗುತ್ತದೆ. ಹಾಗೂ ಹಿರಿಯ ನಾಗರಿಕರು ಹೂಡಿಕೆ ಮಾಡಿದರೆ ಶೇಕಡಾ 9.75% ಬಡ್ಡಿ ಸಿಗುತ್ತದೆ.
ಹೆಚ್ಚಿನ ಬಡ್ಡಿದರಗಳನ್ನು ನೀಡುವ ಮೂಲಕ ಬ್ಯಾಂಕ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣ ಆಗಿದೆ. ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ದರ ಪರಿಷ್ಕರಣೆ ಮಾಡಿದ ನಂತರ ಉಳಿದ ಬ್ಯಾಂಕ್ ನಲ್ಲಿಯೂ ಸಹ ಬಡ್ಡಿದರಗಳು ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಯಾವ ಬಣ್ಣದ ನಂದಿನಿ ಪ್ಯಾಕೇಟ್ ಹಾಲು ಬಳಕೆಗೆ ಉತ್ತಮ ಎಂಬುದನ್ನು ತಿಳಿಯಿರಿ.
ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಬಗ್ಗೆ ಮಾಹಿತಿ :-
ಇದು ಒಂದು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಗಿದ್ದು .ಇದರ ಪ್ರಧಾನ ಕಚೇರಿ ಅಸ್ಸಾಂನಲ್ಲಿ ಇದೆ. ನೀವು ಬ್ಯಾಂಕ್ ಬಗ್ಗೆ ಮಾಹಿತಿಗೆ ಹೂಡಿಕೆ ಮಾಡಲು ಆನ್ಲೈನ್ ಮೂಲಕ ಬ್ಯಾಂಕ್ ಅಧಿಕೃತ ವೆಬ್ಸೈಟ್ ಚೆಕ್ ಮಾಡಬಹುದು. ಅಧಿಕೃತ ವೆಬ್ಸೈಟ್ ವಿಳಾಸ https://nesfb.com/ ಆಗಿದೆ.
ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವ ಮುನ್ನ ಬ್ಯಾಂಕ್ ನ ಎಲ್ಲಾ ನಿಯಮಗಳು ಹಾಗೂ ಷರತ್ತುಗಳನ್ನು ತಿಳಿದು ನಂತರ ಹೂಡಿಕೆ ಮಾಡುವುದು ಉತ್ತಮ.
ಇದನ್ನೂ ಓದಿ: IRCTC ID ಯಿಂದ ಬೇರೆಯವರಿಗೆ ಟಿಕೆಟ್ ಬುಕ್ ಮಾಡಿಸಿದರೆ ದಂಡ ವಿಧಿಸಬಹುದು.