How Lightning Forms: ಸಿಡಿಲು ಹೇಗೆ ಉಂಟಾಗುತ್ತೆ, ಆಗ ಏನ್ ಮಾಡ್ಬೇಕು ಗೊತ್ತಾ? ಸಿಡಿಲಿನ ಅಪಾಯದಿಂದ ತಪ್ಪಿಸಿಕೊಳ್ಳುವುದು ಹೇಗೆ?

How Lightning Forms: ರಾಜ್ಯಾದ್ಯಂತ ಇದೀಗ ಬಿಡುವಿಲ್ಲದೆ ಮಳೆ ಸುರಿತ್ತಿದೆ. ಇನ್ನು ಕೆಲ ದಿನಗಳ ಕಾಲ ಮಳೆ ಹೀಗೆ ಮುಂದುವರೆಯುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ ಹೀಗಿರುವಾಗ ಮಳೆ ಬೀಳುವ ಸಮಯದಲ್ಲಿ ಗುಡುಗು ಸಿಡಿಲು ಬೀಳುವುದು ಸಾಮಾನ್ಯ. ಮಳೆಗಾಲ ಬಂತೆಂದರೆ ಸಾಮಾನ್ಯವಾಗಿ ಎಲ್ಲರನ್ನು ಕಾಡುವುದು ಮಳೆಗಿಂತ ಗುಡುಗು, ಸಿಡಿಲಿನ ಭಯ. ಏಕೆಂದರೆ ಸಿಡಿಲಿನ ಆರ್ಭಟವೇ ಅಂತಹದ್ದು. ಗುಡುಗಿನ ಘರ್ಜನೆಯ ಆರ್ಭಟಕ್ಕೆ ಬೆಚ್ಚಿ ಬೀಳದೆ ಇರುವವರು ಕಡಿಮೆ ಜನ. ದೊಡ್ಡವರು ಚಿಕ್ಕವರು ಅನ್ನದೆ ಈ ಸಿಡಿಲಿನ ಆರ್ಭಟಕ್ಕೆ ಅಂಜುವುದು ಇದೆ. ಅದರಲ್ಲೂ ಮಿಂಚು ಮತ್ತು ಸಿಡಿಲುಗಳು ಅಗಾಧ ಶಕ್ತಿ ನಿಜಕ್ಕೂ ಎಲ್ಲರಲ್ಲು ವಿಸ್ಮಯ ಮೂಡಿಸುತ್ತವೆ ಅದರ ಜೊತೆ ಜೊತೆಗೆ ಭಯವನ್ನ ಕೂಡ ಉಂಟು ಮಾಡಿತ್ತೆ. ಹಾಗಾದ್ರೆ ಮಳೆಗಾಲದಲ್ಲಿ ಅನುಸರಿಸಬೇಕಾದ ಕ್ರಮಗಳೇನು, ಸಿಡಿಲಿನ ಹೊಡೆತದಿಂದ ತಪ್ಪಿಸಿಕೊಳ್ಳುವುದು ಹೇಗೆ, ಸಿಡಿಲು ಬೀಳುವ ಸಂದರ್ಭದಲ್ಲಿ ಏನು ಮಾಡಬೇಕು ನೋಡೋಣ ಬನ್ನಿ.

WhatsApp Group Join Now
Telegram Group Join Now

ಸಿಡಿಲು ಹೇಗೆ ಬೀಳುತ್ತೆ ಗೊತ್ತಾ?

ಮೊದಲಿಗೆ ಸಿಡಿಲಿನ ಬಗ್ಗೆ ತಿಳಿದುಕೊಳ್ಳೊದಾದ್ರೆ ಒಂದು ಬಾರಿ ಅಪ್ಪಳಿಸುವ ಸಿಡಿಲು ಹಾಗೂ ಮಿಂಚುನಲ್ಲಿ 500 ಕೋಟಿ ಜೌಲ್ಸ್ ಶಕ್ತಿ ಇರುತ್ತದೆ. ಅಂದರೆ 1000 ವ್ಯಾಟ್ ಸಾಮರ್ಥ್ಯದ ವಿದ್ಯುತ್‌ಗೆ ಅದು ಸಮ. ಒಂದು ಮನೆಗೆ ಒಂದು ತಿಂಗಳಿಗೆ ಈ ವಿದ್ಯುತ್ ಸಾಕಾಗುತ್ತದೆ. ಸಿಡಿಲು ಎಷ್ಟು ಭಯಂಕರ ಅಂದ್ರೆ ಸೂರ್ಯನ ಮೇಲಿರುವ ಉಷ್ಣಾಂಶಕ್ಕಿಂತ ಮೂರು ಪಟ್ಟು ಉಷ್ಣಾಂಶ ಹೆಚ್ಚಾಗಿ ಇರುತ್ತದೆ ಅಂತ ಹೇಳ್ತಾರೆ. ಅಷ್ಟೇ ಅಲ್ಲ ಪ್ರಪಂಚದಾದ್ಯಂತ ಪ್ರತಿ ಸೆಕೆಂಡ್ ಗೆ ೧೦೦ ಸಿಡಿಲು ಬಡಿಯುತ್ತದೆ ಅಂತ ಕೂಡ ಅಂದಾಜು ಮಾಡಲಾಗಿದೆ. ಇನ್ನು ಏಪ್ರಿಲ್‌-ಮೇ ತಿಂಗಳಲ್ಲಿ ಮುಂಗಾರು ಪೂರ್ವದ ದಟ್ಟ ಕಪ್ಪು ಮೋಡಗಳು ಕವಿಯಲಾರಂಭಿಸುತ್ತವೆ. ಇವುಗಳನ್ನು ‘ಕ್ಯುಮುಲೋನಿಂಬಸ್’ ಮೋಡಗಳೆನ್ನುತ್ತಾರೆ. ಇವು ಭೂಮಿಯಿಂದ ಸುಮಾರು 2 ಕಿಲೋಮೀಟರ್‌ ದೂರವಿರುತ್ತದೆ. ಅವುಗಳ ಮೇಲ್ತುದಿ ಸುಮಾರು 15 ಕಿಲೋಮೀಟರ್‌ ಎತ್ತರದಲ್ಲಿರುತ್ತದೆ. ಮೋಡಗಳಲ್ಲಿ ಉಷ್ಣಾಂಶ ಕಡಿಮೆ ಇರುವುದರಿಂದ ಮೋಡಗಳ ಮಳೆ ನೀರು ಚಿಕ್ಕ ಚಿಕ್ಕ ಹಿಮ ಗಡ್ಡೆಗಳ ರೂಪ ತಾಳಿರುತ್ತದೆ. ತುಂಬಾ ಗಾಳಿ ಬೀಸಿದಾಗ ಆ ಮಂಜು ಕಣಗಳ ಮದ್ಯೆ ಘರ್ಷಣೆ ಉಂಟಾಗಿ ವಿದ್ಯುತ್ ಶಕ್ತಿ ಉಂಟಾಗುತ್ತದೆ. ಹೀಗೆ ಉಂಟಾಗುವುದರಿಂದ ಪಾಸಿಟಿವ್ ಮತ್ತು ನೆಗೆಟಿವ್ ಕಣಗಳು ಬಿಡುಗಡೆಯಾಗುತ್ತವೆ. ಪಾಸಿಟಿವ್ ಕಣಗಳು ಕಡಿಮೆ ತೂಕ ಇರುವುದರಿಂದ ಮೋಡಗಳ ಮೇಲ್ಭಾಗಕ್ಕೆ, ನೆಗೆಟಿವ್ ಕಣಗಳು ತೂಕ ಇರುವುದರಿಂದ ಕೆಳ ಭಾಗದಲ್ಲಿ ಇರುತ್ತವೆ.

ಹೌದು ಆಗ ಅಯಸ್ಕಾಂತದ ಉತ್ತರ ಪೋಲ್ ದಕ್ಷಿಣ ಪೋಲ್ ಯಾವ ರೀತಿ ಆಕರ್ಷಣೆಗೆ ಒಳಗಾಗುತ್ತವೆಯೋ, ಹಾಗೆ ಮೋಡಗಳಲ್ಲಿನ ಪಾಸಿಟಿವ್ ಮತ್ತು ನೆಗೆಟಿವ್ ಪೋಲ್’ಗಳು ಆಕರ್ಷಣೆಗೆ ಒಳಗಾಗುತ್ತವೆ. ಒಂದು ಮೋಡಕ್ಕೆ ಇನ್ನೊಂದು ಮೋಡ ಡಿಕ್ಕಿ ಹೊಡೆದರೆ ಕಣಗಳ ಆಕರ್ಷಣೆಯಿಂದ ಸಿಡಿಲು ಉತ್ಪತ್ತಿಯಾಗುತ್ತದೆ. ಒಂದೊಂದು ಸಮಯದಲ್ಲಿ ಮೋಡದ ಕೆಳಭಾಗದಲ್ಲಿರುವ ನೆಗೆಟಿವ್ ಕಣಗಳು ಭೂಮಿಯ ಮೇಲಿರುವ ಪಾಸಿಟಿವ್ ಕಣಗಳ ಜತೆ ಆಕರ್ಷಣೆ ಉಂಟಾಗುತ್ತವೆ. ಇವು ಭೂಮಿಯ ಮೇಲಿರುವ ಎತ್ತರವಾದಂತಹ ಪ್ರದೇಶಗಳು ಮರ, ಪರ್ವತ ಅಥವಾ ಒಬ್ಬ ಮನುಷ್ಯನಾಗಲಿ ಇವುಗಳಿಂದ ಕಣಗಳ ಸಂಘರ್ಷಣೆ ಉಂಟಾಗಿ ಸಿಡಿಲು ಉಂಟಾಗುತ್ತದೆ. ಸಿಡಿಲು ಬಡಿದರೆ ದೇಹವನ್ನು ಹೊಕ್ಕ ಭಾಗದಲ್ಲಿ ಪ್ರವೇಶ ಗಾಯ ಹಾಗೂ ನಿರ್ಗಮಿಸಿದ ಜಾಗದಲ್ಲಿ ನಿರ್ಗಮನ ಗಾಯಗಳು ಉಂಟಾಗುತ್ತವೆ. ಸಾಮಾನ್ಯವಾಗಿ ಮಿಂಚು ಮಾನವನ ದೇಹವನ್ನು ತಲೆಯ ಭಾಗದಿಂದ ಪ್ರವೇಶಿಸುತ್ತದೆ. ಮಿಂಚು ಹರಿದು ಹೋದ ಮಾರ್ಗದಲ್ಲಿ ಜೀವಕೋಶಗಳು ಸುಟ್ಟು ಸತ್ತು ಕಪ್ಪಾಗಿರುತ್ತವೆ. ಬಟ್ಟೆ, ಚರ್ಮ, ಕೂದಲು ಸುಟ್ಟ ಗುರುತುಗಳಿರುತ್ತವೆ. ಹೃದಯದ ಬಡಿತ ನಿಂತು, ಮಿದುಳಿನ ಕ್ರಿಯೆ ಸ್ಥಗಿತಗೊಳ್ಳುತ್ತದೆ. ಸಿಡಿಲಿನಿಂದ ಸುಟ್ಟು ಹೋಗುವವರು ಕಡಿಮೆ. ವಿದ್ಯುತ್‌ ಪ್ರವಾಹದಿಂದ ಮೆದುಳಿಗೆ ಆಗುವ ಏಟು ಅಥವಾ ಹೃದಯಸ್ತಂಭನದಿಂದ ಸಾಯುವವರೇ ಅಧಿಕ ಅಂತ ಹೇಳಲಾಗುತ್ತದೆ.

ರಾಜಕೀಯ ನಾಯಕರು ಬಳಸುವ ಹೆಲಿಕ್ಯಾಪ್ಟರ್ ಬಾಡಿಗೆ ಎಷ್ಟು? ಹೆಲಿಪ್ಯಾಡ್ ಬಾಡಿಗೆ ಹೇಗಿರುತ್ತೆ? ಪೈಲೇಟ್ ಗೆ ನೀಡಬೇಕಾದ ಸೌಲಭ್ಯ ಏನ್ ಗೊತ್ತಾ?

ಇನ್ನು ಸಿಡಿಲಿನಿಂದ ತಪೋಸಿಕೊಳ್ಳುವುದು ಹೇಗೆ ಅಥವಾ ಆ ಸಮಯದಲ್ಲಿ ಏನ್ ಮಾಡ್ಬೇಕು ಮಾಡಬಾರದು ಅಂತ ನೋಡೋದಾದ್ರೆ

  • ಸಿಡಿಲು ಬೀಳುವ ಸಮಯದಲ್ಲಿ ಟಿವಿ ನೋಡಬಾರದು
  • ಶವರ್ ಕೆಳಗಡೆ ಸ್ನಾನ ಮಾಡುವುದು, ನಲ್ಲಿಯಿಂದ ಬರುವ ನೀರಿನಿಂದ ಕೈತೊಳೆಯುವುದು, ಪಾತ್ರೆಗಳನ್ನು ತೊಳೆಯುವುದು ಇಂತಹ ಕೆಲಸಗಳನ್ನು ಮಾಡಬಾರದು.
  • ಮಳೆ ಬೀಳುವ ಸಮಯದಲ್ಲಿ ಕಿಟಕಿ ಬಾಗಿಲಲ್ಲಿ ನಿಲ್ಲಬಾರದು, ಎಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚಬೇಕು. ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ.
  • ಮಳೆಯಲ್ಲಿ ನೆನೆದರೂ ಪರವಾಗಿಲ್ಲ, ಛತ್ರಿಯನ್ನು ಮಾತ್ರ ಬಳಸಬೇಡಿ.
  • ಗುಡುಗು- ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಹೊಲದಲ್ಲಿದ್ದರೆ, ಹತ್ತಿರದಲ್ಲಿರುವ ಯಾವುದೇ ಕಟ್ಟಡದಲ್ಲಿ ಅಥವಾ ಪಂಪ್’‌ಹೌಸ್‌ನಲ್ಲಿ ಆಶ್ರಯ ಪಡೆಯಿರಿ.
  • ಒಂದು ವೇಳೆ ನೀವು ವಿಶಾಲವಾದ ಮೈದಾನದಲ್ಲಿ ಇದ್ದರೆ, ಮರಗಳಿಂದ ದೂರವಾಗಿ, ತಗ್ಗಿರುವ ಪ್ರದೇಶಗಳಲ್ಲಿ ಕೂತು ತಲೆಯನ್ನು ಮೊಣಕಾಲಿನ ಮದ್ಯೆ ಇರಿಸಿ. ಕಣ್ಣು, ಕಿವಿ ಮುಚ್ಚಿಕೊಳ್ಳಿ. ಯಾಕೆಂದರೆ ಸಿಡಿಲು ಬಡಿಯುವುದರಿಂದ ಆ ಬೆಳಕು ಮತ್ತು ಶಬ್ದದಿಂದ ಕಿವಿ ಮತ್ತು ಕಣ್ಣು ಹಾಳಾಗುವ ಸಾಧ್ಯತೆ ಇರುತ್ತದೆ.
  • ನಮ್ಮನ್ನು ನಂಬಿಕೊಂಡು ಇರುವ ಮೂಕ ಪ್ರಾಣಿಗಳನ್ನು ಕಾಪಾಡುವ ಜವಾಬ್ದಾರಿ ಕೂಡ ನಮ್ಮದು. ಮನೆಯಲ್ಲಿರುವ ಹಸು, ಕುರಿ, ನಾಯಿಗಳು, ಸಾಕು ಪ್ರಾಣಿಗಳನ್ನು ಶೆಡ್ ನಲ್ಲಾಗಲಿ ಅಥವಾ ಮನೆಯಲ್ಲಾಗಲಿ ಇರಿಸಬೇಕು.
  • ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ, ಏಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷ್ಯನನ್ನೇ ಆರಿಸಿಕೊಳ್ಳುತ್ತದೆ.
  • ಕೆರೆಯಲ್ಲಿ ಈಜುವುದು ,ಸ್ನಾನ ಮಾಡುವುದು ಬೇಡ, ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ .
  • ವಿದ್ಯುತ್ ಕಂಬ, ಎಲಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ.
  • ತಂತಿಬೇಲಿ, ಬಟ್ಟೆ ಒಣಹಾಕುವ ತಂತಿ, ಇವುಗಳಿಂದ ದೊರವಿರಿ. ಇವು ದೂರದಿಂದಲೇ ಮಿಂಚನ್ನು ಸೆಳೆಯುತ್ತವೆ.
  • ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸನ್ನು ಸ್ವಚ್ಛ ಮಾಡುವ ಸಾಹಸ ಬೇಡ.
  • ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್ ಮಾಡಬೇಡಿ. ಅದನ್ನು ಚಾರ್ಜ್ ಮಾಡುವ ಸಹಸವೂ ಬೇಡ.
  • ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು.
  • ಕಂಪ್ಯೂಟರ್ ಗಳಿಂದ ದೂರ ಇರಿ. ಕೆಲಸ ಮಾಡುವವರಾದರೆ ಸ್ವಲ್ಪ ಹೊತ್ತು ಅದರಿಂದ ದೂರ ಇರಿ.
    ಯಾವುದೇ ಲೋಹದ ವಸ್ತುಗಳನ್ನು ದೂರವಿರಿಸಿ.

ಮನೆಗೆ ಮಿಂಚುಬಂಧಕವನ್ನು ಅಳವಡಿಸುವುದು ಕ್ಷೇಮ. ಇದು ಲೋಹದ ಒಂದು ಕಡ್ಡಿಯಾಗಿದ್ದು, ಮನೆಯ ಎತ್ತರ ಪ್ರದೇಶದಲ್ಲಿ ಇರುತ್ತದೆ. ಇದರಿಂದ ಒಂದು ತಂತಿಯ ಸಂಪರ್ಕ ನೇರವಾಗಿ ಭೂಮಿಗೆ ಇರುತ್ತದೆ. ಇದು ಮಿಂಚಿನ ಪ್ರವಾಹವನ್ನು ಆಕರ್ಷಿಸಿ ಭೂಮಿಗೆ ಸಾಗಿಸುತ್ತದೆ.

ಒಟ್ಟಿನಲ್ಲಿ ಸ್ನೇಹಿತರೆ ಈ ಮಿಂಚು ಮತ್ತು ಗುಡುಗಿನ ಆರ್ಭಟಕ್ಕೆ ಪ್ರಾಣ ಕಳೆದುಕೊಂಡವರಲ್ಲಿ ರೈತರ ಸಂಖ್ಯೆಯೇ ಅತ್ಯಧಿಕ. ಸಾಮಾನ್ಯವಾಗಿ ಮುಂಗಾರು ಪೂರ್ವ ಕೆಲಸಗಳಿಗಾಗಿ ರೈತರು ಈ ಹೊತ್ತಿನಲ್ಲಿ ಹೊಲ ಗದ್ದೆಗಳಲ್ಲಿರುತ್ತಾರೆ. ಮಳೆಯ ಸೂಚನೆ ತೋರಿಬಂದಾಗ ಮರಗಳ ಅಡಿಗೆ ಬಂದು ನಿಲ್ಲುತ್ತಾರೆ. ಆದರೆ ಹೊಲಗಳ ನಡುವೆ ಮರ ಇದ್ದರೆ, ಸಿಡಿಲು ಬಡಿಯಲು ಮರವನ್ನೇ ಆರಿಸಿಕೊಳ್ಳುತ್ತದೆ. ಹೀಗಾಗಿ ರೈತರೇ ಹೆಚ್ಚಾಗಿ ಸಾವು ನೋವಿಗೆ ತುತ್ತಾಗುತ್ತಾರೆ. ಕಾಂಕ್ರೀಟ್ ಕಟ್ಟಡವು ವಿದ್ಯುತ್‌ ಪ್ರವಾಹವನ್ನು ತಾನೇ ಪಡೆದು, ಅದನ್ನು ನೇರವಾಗಿ ಭೂಮಿಗೆ ಇಳಿಸುತ್ತದೆ. ಹೀಗಾಗಿ ಒಳಗಿದ್ದವರಿಗೆ ಅಪಾಯವಿಲ್ಲ. ಸಾಧ್ಯವಾದಷ್ಟು ನಾವು ನೀಡಿರುವ ಈ ಉಪಾಯಗಳನ್ನ ಅನುಸರಿಸಿ ಉಂಟಾಗುವ ಸಾವು ನೋವಿನಿಂದ ನಿಮ್ಮನ್ನ, ನಿಮ್ಮ ಕುಟುಂಬದವರನ್ನ ರಕ್ಷಿಸಿಕೊಳ್ಳಿ..

ಇದನ್ನೂ ಓದಿ: ಹಿರಿಯ ನಟಿ ಮಾಧವಿ ಅವರು ಈಗ ಹೇಗಿದ್ದಾರೆ ಮತ್ತು ಎಲ್ಲಿದ್ದಾರೆ? ಅವರ ಪತಿ ಮತ್ತು ಮಕ್ಕಳು ಹೇಗಿದ್ದಾರೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram