Top 10 Kannada Youtubers Earnings: ತಿಂಗಳಿಗೆ ಲಕ್ಷ ಲಕ್ಷ ದುಡಿಯುವ ಕನ್ನಡ ಟಾಪ್ 10 ಯೂಟ್ಯೂಬರ್ಸ್.!!

Top 10 Kannada Youtubers Earnings: ಇಂದು ಆನ್ಲೈನ್ ನಲ್ಲಿ ಹಣ ಗಳಿಸಲು ತುಂಬಾ ಪ್ಲಾಟ್ಫಾರ್ಮ್ ಗಳಿವೆ, ಅದರಲ್ಲಿ ತುಂಬಾ ಜನ ಮೊದಲು ನೋಡುವುದು ಯೂಟ್ಯೂಬ್ ನಿಂದ ವಿಡಿಯೋ ನೋಡುವುದಲ್ಲದೆ ಯೂಟ್ಯೂಬ್ ಗೆ ವಿಡಿಯೋ ಹಾಕಿ ಅದರಿಂದ ಇದೀಗ ಲಕ್ಷ ಲಕ್ಷ ದುಡಿಯುತ್ತಿರುವ ಎಷ್ಟೋ ಪ್ರತಿಭೆಗಳನ್ನು ನೀವು ನೋಡಿರಬಹುದು ಹಾಗೆ ಯೂಟ್ಯೂಬ್ ನಿಂದ ಅವರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಇದೀಗ ಯೂಟ್ಯೂಬ್ ನೆಚ್ಚಿಕೊಂಡು ಎಷ್ಟು ಯೂಟ್ಯೂಬರ್ಸ್ ಜೀವನ ನಡೆಸುತ್ತಿದ್ದಾರೆ. ಇನ್ನು ನಮ್ಮ ಕನ್ನಡದಲ್ಲಿ ಇತ್ತೀಚಿಗೆ ತುಂಬಾ ಕ್ರಿಯೇಟರ್ಸ್ ಬಂದು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ್ದಾರೆ ಜನಕ್ಕೆ ಗೊತ್ತಿಲ್ಲದ ವಿಷಯಗಳನ್ನು ತಿಳಿಸುವ ಮೂಲಕ ಅಥವಾ ಸಂದರ್ಶನದ ಮೂಲಕ, ಬೈಕ್ ಲಾಗ್ ಗಳು, ಕನ್ನಡ ಕಾಮಿಡಿ ವಿಡಿಯೋ ಮತ್ತು ಕನ್ನಡದಲ್ಲಿ ಟೆಕ್ನಾಲಜಿ ವಿಷಯಗಳನ್ನು ಹೇಳುವುದು ಅಡುಗೆ ಮಾಡುವುದು ಮತ್ತು ಡಾ. ಬ್ರೋ , Flying Passport ತರ ದೇಶ ಸುತ್ತಿ ಆ ದೇಶದ ವೈಶಿಷ್ಟತೆ ಮತ್ತು ಜನರಿಗೆ ಗೊತ್ತಿಲ್ಲದ ಮಾಹಿತಿಗಳನ್ನು ಹೇಳುವ ಮೂಲಕ ಇಂದು ಕನ್ನಡದ ಯೂಟ್ಯೂಬರ್ಸ್ ಜನರಿಗೆ ಹತ್ತಿರವಾಗಿದ್ದಾರೆ, ಇನ್ನು ಕನ್ನಡದಲ್ಲಿ ತುಂಬಾ ಯೂಟ್ಯೂಬರ್ಸ್ ಇಂದು ಲಕ್ಷಕ್ಕಿಂತ ಹೆಚ್ಚು ಹಣವನ್ನು ದುಡಿಯುತ್ತಿದ್ದಾರೆ ಆ ಯುಟ್ಯೂಬರ್ ಯಾರು ಯಾರು ಎಂದು ನೋಡೋಣ ಬನ್ನಿ ಮುಂದೆ ಓದಿ.

WhatsApp Group Join Now
Telegram Group Join Now

ಡಾಕ್ಟರ್ ಬ್ರೋ:

ಇವರು ಈಗಾಗಲೇ ಕರ್ನಾಟಕದಲ್ಲಿ ಬಹಳ ಫೇಮಸ್ ಆಗಿರುವ ಯೂಟ್ಯೂಬರ್. ಇಡೀ ಜಗತ್ತನ್ನೇ ತೋರಿಸುತ್ತೀನಿ ಎಂದು ಹೇಳಿದ ಡಾಕ್ಟರ್ ಬ್ರೋ ಮಾತಿಗೆ ತಕ್ಕಂತೆ ಈಗಾಗಲೇ ಬಹಳ ದೇಶಗಳನ್ನು ಸುತ್ತು ಹರಿದಿರುವ ಡಾಕ್ಟರ್ ಬ್ರೋ ಇನ್ನೂ ಹಲವು ದೇಶಗಳನ್ನು ತೋರಿಸುತ್ತೇನೆ ಎಂದು ಕೂಡ ಹೇಳಿದ್ದಾರೆ. ಡಾಕ್ಟರ್ ಬ್ರೋ ಅವರು ಮಾರ್ಚ್ 28 ,2018 ರಲ್ಲಿ ತಮ್ಮ ಯುಟ್ಯೂಬ್ ಚಾನೆಲ್ ಅನ್ನು ಶುರು ಮಾಡಿದ್ದು ಇವರು ಈಗಾಗಲೇ 132 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದು 15 ಲಕ್ಷಕ್ಕೂ ಹೆಚ್ಚಿನ ಚಂದಾದಾರರನ್ನು (Subscribers) ಹೊಂದಿದ್ದಾರೆ. ಡಾ. ಬ್ರೋ ಅವರು ತಮ್ಮ ಯುಟ್ಯೂಬ್ ಚಾನೆಲ್ ನಿಂದ ತಿಂಗಳಿಗೆ ಸುಮಾರು ಎರಡು ಲಕ್ಷದಿಂದ ಮೂರುವರೆ ಲಕ್ಷದವರೆಗೂ ಸಂಪಾದನೆ ಮಾಡುತ್ತಾರೆ.

ಮೀಡಿಯಾ ಮಾಸ್ಟರ್ಸ್:

ಇವರು ಕೂಡ ಒಬ್ಬ ಕನ್ನಡದ ಜನಪ್ರಿಯ ಯೂಟ್ಯೂಬರ್. ಇವರು ತಮ್ಮ ಚಾನಲ್ ನಲ್ಲಿ ದೇಶದ ಸುದ್ದಿ, ಅಂತರಾಷ್ಟ್ರೀಯ ಸುದ್ದಿ ಮತ್ತು ಮಹಾಭಾರತದ ಭಾಗಗಳ ಬಗ್ಗೆ ಇನ್ನು ಹಲವು ವಿಷಯಗಳ ಬಗ್ಗೆ ವಿಡಿಯೋಗಳನ್ನು ಮಾಡುತ್ತಾರೆ. ಇನ್ನು ಮೀಡಿಯಾ ಮಾಸ್ಟರ್ಸ್ ಚಾನಲ್ ಅನ್ನು ಮಾರ್ಚ್ 5, 2018ರಲ್ಲಿ ಶುರು ಮಾಡಿದ್ದ ಇವರು ಈಗಾಗಲೇ 3,100 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದು 23 ಲಕ್ಷಕ್ಕಿಂತಲೂ ಹೆಚ್ಚಿನ ಚಂದಾದಾರರನ್ನು(Subscribers) ಹೊಂದಿದ್ದಾರೆ. ಇನ್ನು ಇವರು ತಮ್ಮ ಯೂಟ್ಯೂಬ್ ಚಾನಲ್ ನಿಂದ ತಿಂಗಳಿಗೆ ಎರಡು ಲಕ್ಷದಿಂದ ಮೂರುವರೆ ಲಕ್ಷದವರೆಗೂ ಸಂಪಾದನೆ ಮಾಡುತ್ತಾರೆ.

ಮಲ್ಲು ಜಮುಖಂಡಿ:

ಇವರು ತಾವು ಮಾಡುವ ಹಲವು ತರದ ಕಾಮಿಡಿ ವಿಡಿಯೋಗಳಿಂದ ಕರ್ನಾಟಕದಲ್ಲಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಮಲ್ಲು ಜಮಖಂಡಿ ತಮ್ಮ ಚಾನೆಲ್ ಯನ್ನು ಡಿಸೆಂಬರ್ 21, 2017ರಲ್ಲಿ ಶುರು ಮಾಡಿದ್ದರು ಇವರು ಈಗಾಗಲೇ 410 ವಿಡಿಯೋಗಳನ್ನು ಕೂಡ ಅಪ್ಲೋಡ್ ಮಾಡಿದ್ದು 15 ಲಕ್ಷಕ್ಕೂ ಹೆಚ್ಚಿನ ಚೆಂದದಾರರನ್ನು(Subscribers) ಹೊಂದಿದ್ದಾರೆ. ಇನ್ನು ಇವರು ತಮ್ಮ ಯುಟ್ಯೂಬ್ ಚಾನೆಲ್ನಿಂದ ತಿಂಗಳಿಗೆ ನಾಲ್ಕುವರೆ ಲಕ್ಷದಿಂದ ಐದು ಲಕ್ಷದವರೆಗೂ ಸಂಪಾದನೆ ಮಾಡುತ್ತಾರೆ. ಮಲ್ಲು ಜಮಖಂಡಿಯವರು ನನ್ನಾಕಿ ಸಿನಿಮಾವನ್ನು ಕೂಡ ಡೈರೆಕ್ಟ್ ಮಾಡಿದ್ದು ತಾವೇ ಹೀರೋ ಆಗಿ ಕೂಡ ನಟನೆ ಮಾಡಿದ್ದಾರೆ.

ಕಲಾ ಮಾಧ್ಯಮ:

ಇವರು ಚಿತ್ರರಂಗದ ಹಲವಾರು ಹಿರಿಯ ಕಲಾವಿದರನ್ನು ಮತ್ತು ವಿಶೇಷ ವ್ಯಕ್ತಿಗಳನ್ನು ಸಂದರ್ಶನ ಮಾಡಿ ಜನಪ್ರಿಯತೆ ಗಳಿಸಿದ್ದಾರೆ. ಇವರು ತಮ್ಮ ಯುಟ್ಯೂಬ್ ಚಾನೆಲ್ ಅನ್ನು ಅಕ್ಟೋಬರ್ 31, 2014ರಲ್ಲಿ ಶುರು ಮಾಡಿದ್ದರೂ ಇವರು ಈಗಾಗಲೇ 4000 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದು 11 ಲಕ್ಷಕ್ಕಿಂತ ಹೆಚ್ಚು ಚೆಂದಾದಾರರನ್ನು(Subscribers) ಹೊಂದಿದ್ದಾರೆ. ಇವರು ತಮ್ಮ ಯುಟ್ಯೂಬ್ ಚಾನೆಲ್ ನಿಂದ ತಿಂಗಳಿಗೆ ಎರಡುವರೆ ಲಕ್ಷದಿಂದ ಮೂರು ಲಕ್ಷದ ವರೆಗೂ ಸಂಪಾದನೆ ಮಾಡುತ್ತಾರೆ.

ರೇಖಾ ಅಡುಗೆ:

ಈ ಚಾನಲ್ ಕೂಡ ಕರ್ನಾಟಕದಲ್ಲಿ ತುಂಬಾ ಫೇಮಸ್ ಆಗಿರುವ ಚಾನೆಲ್. ಈ ಚಾನಲ್ ನಲ್ಲಿ ತುಂಬಾ ತರಹದ ಅಡುಗೆ ವಿಡಿಯೋಗಳನ್ನು ಮಾಡಿ ತೋರಿಸುತ್ತಾರೆ. ರೇಖಾ ಅಡುಗೆ ಚಾನಲ್ ಯನ್ನು ಅಕ್ಟೋಬರ್ 2, 2016ರಲ್ಲಿ ಶುರು ಮಾಡಲಾಗಿದೆ. ಇವರು ಈಗಾಗಲೇ 1,900 ಅಡುಗೆ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದು 22 ಲಕ್ಷಕ್ಕಿಂತ ಹೆಚ್ಚಿನ ಚೆಂದದಾರರನ್ನು(Subscribers) ಹೊಂದಿದ್ದಾರೆ. ಇನ್ನು ಇವರು ತಮ್ಮ ಯುಟ್ಯೂಬ್ ಚಾನೆಲ್ ನಿಂದ ತಿಂಗಳಿಗೆ ಒಂದುವರೆ ಲಕ್ಷದಿಂದ ಎರಡು ಲಕ್ಷದವರೆಗೂ ಸಂಪಾದನೆ ಮಾಡುತ್ತಾರೆ.

ಟೆಕ್ ಇನ್ ಕನ್ನಡ:

ಈ ಚಾನಲ್ ನನ್ನು ನಡೆಸುತ್ತಿರುವವರ ಹೆಸರು ಸಂದೀಪ್ ಎಂದು ಇವರು ಅನೇಕ ಫೋನ್ ಗಳ ರಿವ್ಯೂಗಳನ್ನು ಹಲವು ಎಲೆಕ್ಟ್ರಿಕ್ ಗ್ಯಾಜೆಟ್ ಗಳನ್ನು ರಿವ್ಯೂ ಮಾಡುತ್ತಾರೆ. ಇನ್ನೂ ಇವರು ತಮ್ಮ ಯುಟ್ಯೂಬ್ ಚಾನೆಲ್ ಯನ್ನು ಫೆಬ್ರವರಿ 3, 2011 ರಂದು ಶುರು ಮಾಡಿದ್ದು. ಈಗಾಗಲೇ 1,700 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಇನ್ನು ಇವರು 8 ಲಕ್ಷಕ್ಕಿಂತ ಹೆಚ್ಚಿನ ಚಂದದಾರರನ್ನು(Subscribers) ಹೊಂದಿದ್ದಾರೆ. ಇವರು ತಮ್ಮ ಯೂಟ್ಯೂಬ್ ಚಾನಲ್ ನಿಂದ ತಿಂಗಳಿಗೆ ಒಂದು ಲಕ್ಷದಿಂದ ಒಂದುವರೆ ಲಕ್ಷದವರೆಗೂ ಸಂಪಾದನೆ ಮಾಡುತ್ತಾರೆ.

ಶಿವಪುತ್ರ ಯಶಾರದಾ ಕಾಮಿಡಿ ಶೋ

ಇವರು ಕೂಡ ಕಾಮಿಡಿ ವಿಡಿಯೋ ಮಾಡುತ್ತಿದ್ದು ಕರ್ನಾಟಕದಲ್ಲಿ ಫೇಮಸ್ ಕೂಡ ಆಗಿದ್ದಾರೆ. ಇನ್ನು ಇವರು ತಮ್ಮ ಯುಟ್ಯೂಬ್ ಚಾನೆಲ್ ಅನ್ನು ಅಕ್ಟೋಬರ್ 29, 2019 ರಲ್ಲಿ ಶುರು ಮಾಡಿದ್ದರು. ಇವರು ಈಗಾಗಲೇ 282 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದು 16 ಲಕ್ಷಕ್ಕಿಂತ ಹೆಚ್ಚಿನ ಚಂದಾದಾರರನ್ನು(Subscribers) ಹೊಂದಿದ್ದಾರೆ. ಇನ್ನೂ ಇವರು ತಮ್ಮ ಯೂಟ್ಯೂಬ್ ಚಾನೆಲ್ ನಿಂದ ತಿಂಗಳಿಗೆ ಸುಮಾರು ಮೂರುವರೆ ಲಕ್ಷದಿಂದ ನಾಲ್ಕು ವರೆ ಲಕ್ಷದವರೆಗೂ ಸಂಪಾದನೆ ಮಾಡುತ್ತಾರೆ.

ಡಿವಿ ಇನ್ ಕನ್ನಡ:

ಇವರು ಕೂಡ ಕನ್ನಡದ ಒಬ್ಬ ಜನಪ್ರಿಯ ಯುಟ್ಯೂಬರ್ ಇವರು ಒಬ್ಬ ಬೈಕ್ ರೈಡರ್ ತಮ್ಮ ಬೈಕ್ ನಲ್ಲೆ ಹಲವು ಸ್ಥಳಗಳನ್ನು ತೋರಿಸುತ್ತಿರುತ್ತಾರೆ. ಇವರ ಬಳಿ ಹೆಚ್ಚು ಬೆಲೆಯ ಬೈಕ್ ಕಲೆಕ್ಷನ್ ಗಳು ಇವೆ. ಇವರು ಜನವರಿ 16, 2021ರಂದು ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಶುರು ಮಾಡಿದ್ದರು ಇವರು ಈಗಾಗಲೇ 578 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದು 4 ಲಕ್ಷಕ್ಕಿಂತ ಹೆಚ್ಚಿನ ಚಂದದಾರರನ್ನು(Subscribers) ಹೊಂದಿದ್ದಾರೆ. ಇನ್ನು ಇವರು ತಮ್ಮ ಯುಟ್ಯೂಬ್ ಚಾನೆಲ್ನಿಂದ ತಿಂಗಳಿಗೆ ಒಂದು ಲಕ್ಷದಿಂದ ಒಂದುವರೆ ಲಕ್ಷದವರೆಗೂ ಸಂಪಾದನೆ ಮಾಡುತ್ತಾರೆ.

ಚರಿತ್ರೆ:

ಈ ಚಾನಲ್ ಕೂಡ ಒಂದು ಜನಪ್ರಿಯ ಚಾನೆಲ್ ಆಗಿದೆ ಇನ್ನು ಈ ಚಾನಲ್ ನಲ್ಲಿ ಫ್ಯಾಕ್ಟ್ ಸ್, ಅಂತರಾಷ್ಟ್ರೀಯ ಸುದ್ದಿ, ಬೇರೆ ಬೇರೆ ದೇಶಗಳ ಪರಿಚಯ ಇನ್ನೂ ಹಲವಾರು ವಿಷಯಗಳ ಬಗ್ಗೆ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ. ಈ ಚಾನಲ್ ಅನ್ನು ಫೆಬ್ರವರಿ 8, 2018 ಶುರು ಮಾಡಲಾಗಿದೆ. ಇನ್ನು ಚಾನಲ್ ನಲ್ಲಿ ಈಗಾಗಲೇ 1,100 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದು 11 ಲಕ್ಷಕ್ಕಿಂತ ಹೆಚ್ಚಿನ ಚಂದದಾರರನ್ನು(Subscribers) ಹೊಂದಿದ್ದಾರೆ. ಇವರು ತಮ್ಮ ಯೂಟ್ಯೂಬ್ ಚಾನಲ್ ನಿಂದ ತಿಂಗಳಿಗೆ ಎರಡು ಲಕ್ಷದಿಂದ ಎರಡುವರೆ ಲಕ್ಷದವರೆಗೂ ಸಂಪಾದನೆ ಮಾಡುತ್ತಾರೆ.

ಪ್ಲೈಯಿಂಗ್ ಪಾಸ್ಪೋರ್ಟ್:

ಈ ಚಾನಲ್ ಯನ್ನು ಗಂಡ ಮತ್ತು ಹೆಂಡತಿ ಇವರಿಬ್ಬರೂ ಸೇರಿ ನಡೆಸುತ್ತಿದ್ದಾರೆ ಇವರಿಬ್ಬರೂ ಕೆಲಸ ಮಾಡುತ್ತಾ ಬೇರೆ ಬೇರೆ ದೇಶಗಳನ್ನು ಸುತ್ತರೆಯುತ್ತ ಜನರಿಗೆ ಆ ದೇಶದ ಬಗ್ಗೆ ಹೇಳುತ್ತಾ ದೇಶವನ್ನು ಕೂಡ ತೋರಿಸುತಿರುತ್ತಾರೆ. ಇವರು ಜನವರಿ 21, 2020ರಲ್ಲಿ ತಮ್ಮ ಚಾನಲ್ ಅನ್ನು ಶುರು ಮಾಡಿದ್ದರು. ಇವರು ಈಗಾಗಲೇ 262 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದು ಎರಡುವರೆ ಲಕ್ಷಕ್ಕಿಂತ ಹೆಚ್ಚಿನ ಚಂದದಾರರನ್ನು(Subscribers) ಹೊಂದಿದ್ದಾರೆ. ಇವರು ತಮ್ಮ ಚಾನಲ್ ನಿಂದ ತಿಂಗಳಿಗೆ ಸುಮಾರು ಒಂದು ಲಕ್ಷದಿಂದ ಒಂದುವರೆ ಲಕ್ಷದವರೆಗೂ ಸಂಪಾದನೆ ಮಾಡುತ್ತಾರೆ.

ಇನ್ನು ಹಲವಾರು ಕನ್ನಡ ಯೂಟ್ಯೂಬ್ ಗಳು ಯೂಟ್ಯೂಬ್ ನಿಂದ ಲಕ್ಷ ಲಕ್ಷ ದುಡಿದು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ.

ಸೂಚನೆ: ಇನ್ನು ಈ ಮಾಹಿತಿಯನ್ನು Social Blade, Google Search ಹಾಗೂ ಇನ್ನಿತರ ಮೂಲಗಳಿಂದ ಸಂಗ್ರಹಿಸಿರುತ್ತೇವೆ ಇದು ಅಧಿಕೃತ ಮಾಹಿತಿ ಅಲ್ಲ.

ಇದನ್ನೂ ಓದಿ: ಈ ಬಾರಿ ಟಿ.ಆರ್.ಪಿ ಲಿಸ್ಟ್ ಔಟ್! ಟಾಪ್ 10ರಲ್ಲಿರುವ ಕನ್ನಡ ಧಾರಾವಾಹಿ ಗಳು ಯಾವುವು ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram