Abhirami: ವಿಶ್ವ ತಾಯಿಯಂದಿರ ದಿನದಂದು ನಟಿ ಅಭಿರಾಮಿ ಹೆಣ್ಣು ಮಗಳನ್ನು ದತ್ತು ತೆಗೆದುಕೊಂಡಿರುವ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಮಗುವಿನ ಮುಖವನ್ನ ರಿವಿಲ್ ಮಾಡದೆ ತನ್ನ ಮಗಳು ಹಾಗೂ ಪತಿಯ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ವೈವಾಹಿಕ ಜೀವನದಲ್ಲಾಗಲಿ, ವೃತ್ತಿ ಜೀವನದಲ್ಲಾಗಲಿ ಯಾವುದೇ ವಿವಾದಗಳಿಲ್ಲದೆ ನೆಮ್ಮದಿಯಾಗಿದ್ದ ನಟಿ ಮಗುವನ್ನ ದತ್ತು ಪಡೆದಿದ್ದಾರು ಯಾಕೆ, ಈ ನಟಿಗೆ ಮಕ್ಕಳಾಗುವ ಭಾಗ್ಯ ಇಲ್ವಾ ಎಲ್ಲವನ್ನ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡ್ತ್ತೀನಿ ಬನ್ನಿ.
ಮದರ್ಸ್ ಡೇ ದಿನ ವಿಷಯ ಹಂಚಿಕೊಂಡ ನಟಿ
ಹೌದು, ತಾಯಂದಿರ ದಿನದಂದು ನಾನು ತಾಯಿಯ ಜವಾಬ್ದಾರಿ ಹೊತ್ತಿರೋದು ಖುಷಿಯಾಗಿದೆ ಎಂದು ನಟಿ ಅಭಿರಾಮಿ(Abhirami) ಸಂತೋಷ ವ್ಯಕ್ತಪಡಿಸಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಖುಷಿಯಾನ್ನ ಹಂಚಿಕೊಂಡಿದ್ದಾರೆ. ಇದು ಎಲ್ಲಾ ರೀತಿಯಲ್ಲೂ ಜೀವನವನ್ನು ಬದಲಾಯಿಸುವ ನಿರ್ಧಾರ ಎಂದು ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿರುವ ನಟಿ ಅಭಿರಾಮಿ ದತ್ತು ತೆಗೆದುಕೊಂಡಿರುವ ಹೆಣ್ಣು ಮಗುವಿಗೆ ಕಲ್ಕಿ ಎಂದು ವಿಶೇಷವಾಗಿ ಹೆಸರಿಟ್ಟಿದ್ದಾರೆ. ಅಲ್ದೇ ಈ ದತ್ತು ಸ್ವೀಕಾರದ ಬಗ್ಗೆ ಯಾರಿಗೂ ಗೊಂದಲವಿಲ್ಲ, ರಾಹುಲ್ ಮತ್ತು ನಾನು ಪೋಷಕರಿಗೆ ತಿಳಿಸಿಯೇ ನಾವು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡೆವು. ಹೀಗಾಗಿ ಇದು ಎಲ್ಲಾ ರೀತಿಯಲ್ಲೂ ಜೀವನವನ್ನು ಬದಲಾಯಿಸುವ ನಿರ್ಧಾರವಾಗಿದೆ ಅಂತ ನಟಿ ಅಭಿರಾಮಿ ಬರೆದುಕೊಂಡಿದ್ದಾರೆ. ತಾಯಿಯಾಗಿ, ತಾಯಂದಿರ ದಿನವನ್ನು ಆಚರಿಸಲು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಹೊಸ ಕರ್ತವ್ಯವನ್ನು ನಿರ್ವಹಿಸುವಲ್ಲಿ ನೀವೆಲ್ಲರೂ ಆಶೀರ್ವದಿಸಬೇಕು ಎಂದು ಅಭಿರಾಮಿ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ರು, ಇದಕ್ಕೆ ನಟಿ ದಿವ್ಯಾ ಉನ್ನಿ, ನಟಿ ಶ್ವೇತಾ ಮೆನನ್ ಸೇರಿದಂತೆ ಚಿತ್ರರಂಗದ ಅನೇಕರು ಅಭಿರಾಮಿಗೆ ಶುಭ ಹಾರೈಸಿದ್ದಾರೆ.ಅಲ್ದೇ ಅಭಿರಾಮಿ ಶೇರ್ ಮಾಡಿಕೊಂಡಿದ್ದ ಫ್ಯಾಮಿಲಿ ಫೋಟೋಗೆ ಲೈಕ್ಗಳ ಸುರಿಮಳೆಯೇ ಸುರಿದಿದೆ.
View this post on Instagram
ಇನ್ನು ನಟಿ ಅಭಿರಾಮಿ ಕನ್ನಡದಲ್ಲಿ ಲಾಲಿಹಾಡು, ರಕ್ತ ಕಣ್ಣೀರು, ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಹೃದಯ ಗೆದ್ದಿದ್ರು. ಜೊತೆಗೆ ತೆಲುಗು, ತಮಿಳು ಭಾಷೆಗಳಲ್ಲಿಯೂ ಸಿನಿಮಾ ಮಾಡಿದ್ದು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡಕ್ಕಿಂತ ಹೆಚ್ಚಾಗಿ ನಟಿ ಅಭಿರಾಮಿ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ಗುರುತಿಸಿಕೊಂಡು ಸಾಕಷ್ಟು ಸಿನಿಮಾಗಳನ್ನ ಮಾಡಿದ್ರು, ಆದರೂ ಕನ್ನಡದಲ್ಲಿ ನಟಿಸಿದ್ದು ಕೆಲ ಸಿನಿಮಾಗಲ್ಲಾದ್ರೂ ಸಾಕಷ್ಟು ಕನ್ನಡಿಗರ ಹೃದಯ ಗೆದಿದ್ರು. ಅದರಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ಅವ್ರ ಜೊತೆ ನಟಿಸಿದ್ದ ಲಾಲಿ ಹಾಡು ಸಿನಿಮಾ ಅದರ ಹಾಡುಗಳು ಸಾಕಷ್ಟು ಹಿಟ್ ಆದ್ವು. ಅದರಿಂದ ನಟಿ ಅಭಿರಾಮಿ ಅವ್ರ ಬೇಡಿಕೆ ಕೂಡ ಹೆಚ್ಚಾಗಿ ಅಭಿಮಾನಿ ಬಳಗವು ದೊಡ್ಡದಾಯಿತು. ನಂತರ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದ ನಟ ಅಲ್ಲಿಯೂ ಬೇಡಿಕೆಯ ನಟಿಯಾಗಿದ್ರು. ನಂತರ ಡಿಸೆಂಬರ್ 27, 2009ರಂದು ಅಭಿರಾಮಿ, ರಾಹುಲ್ ಪವನ್ ಅನ್ನೋರ ಜೊತೆಗೆ ಹಸೆಮಣೆ ಏರಿದ್ರು.
ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ಸೋಲು! ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ಅಭಿರಾಮಿ ಅವರ ವೈಯಕ್ತಿಕ ಜೀವನ
ಹೌದು ಅಭಿರಾಮಿ(Abhirami) 2009ರಲ್ಲಿ ಮಲಯಾಳಂ ಖ್ಯಾತ ಸಾಹಿತಿ ಪುತನ್ ವೆಟೆಲ್ ನಾರಾಯಣನ್ ನಾಯರ್ ಅವರ ಮೊಮ್ಮಗ ರಾಹುಲ್ ಪವನ್ ಅವ್ರನ್ನ ಮದುವೆ ಆಗಿದ್ದಾರೆ. ಆದರೆ ಮದುವೆ ಆಗಿ 14 ವರ್ಷಗಳಾದರೂ ಈ ಜೋಡಿಗೆ ಮಕ್ಕಳು ಆಗಿಲ್ಲ. ಪ್ರತಿಯೊಬ್ಬರಿಗೂ ಅವ್ರ ಜೀವನದಲ್ಲಿ ಅವರದ್ದೇ ಆದ ಆಸೆಗಳಿರುತ್ತೆ ಅದರಲ್ಲಿ ಮದುವೆ ನಂತರ ತಂದೆ ತಾಯಿ ಆಗುವುದು ಕೂಡಾ ಒಂದು ಸುಂದರ ಕ್ಷಣ, ಎಲ್ಲರ ಬಯಕೆ ಕೂಡ ಆದರೆ ಎಷ್ಟೋ ಜನರಿಗೆ ಈ ಸಂತೋಷ ದೊರೆಯುವುದಿಲ್ಲ. ಅದೇ ರೀತಿ ಬಹುಭಾಷಾ ನಟಿ ಅಭಿರಾಮಿ ಅವರಿಗೆ ಕೂಡಾ ಕೆಲವು ವರ್ಷಗಳಿಂದ ಮಕ್ಕಳು ಇಲ್ಲ ಎಂಬ ಕೊರಗು ಕಾಡುತ್ತಿತ್ತು. ಆದರೆ ಇದೀಗ ಅವರ ನಿರ್ಧಾರ ಅವ್ರ ನೋವಿಗೆ ಮುಲಾಮಾಗಿದೆ. ಹೌದು ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಕಂಡಿರುವ ಅಭಿರಾಮಿ ವೈಯಕ್ತಿಕ ಜೀವನದಲ್ಲಿ ಪತಿಯೊಂದಿಗೆ ಖುಷಿ ಆಗಿದ್ದಾರೆ. ಆದರೆ ಅವರಿಗೆ ಮಕ್ಕಳು ಇಲ್ಲ. ಇದು ಅವರ ನೋವಿಗೆ ಕಾರಣವಾಗಿತ್ತು. ಆದರೆ ಇದೀಗ ಅಭಿರಾಮಿ ಅಮ್ಮ ಆಗಿದ್ದಾರೆ. ಅಭಿರಾಮಿ ಹಾಗೂ ರಾಹುಲ್ ಪವನ್ ದಂಪತಿ ಒಂದು ನಿರ್ಧಾರ ಮಾಡಿ ಮಗುವೊಂದನ್ನು ದತ್ತು ಪಡೆದಿದ್ದಾರೆ. ಈ ಮೂಲಕ 14ವರ್ಷದ ನೋವಿಗೆ ಕಲ್ಕಿ ಅನ್ನೋ ಪುಟ್ಟ ಕಂದ ಮುಲಾಮಾಗಿ ಅಭಿರಾಮಿ ಹಾಗೂ ರಾಹುಲ್ ದಂಪತಿಯ ಜೀವನ ಪ್ರವೇಶಿಸಿದೆ. ನೀವು ಕೂಡ ಈ ಕುಟುಂಬಕ್ಕೆ ಒಳ್ಳೆಯದಾಗ್ಲಿ ಅಂತ ಶುಭಾ ಆರೈಸಿ.
ಇದನ್ನೂ ಓದಿ: ಕಲರ್ಸ್ ಕನ್ನಡ ಹಾಗೂ ಜೀ ಕನ್ನಡದ ಪ್ರಮುಖ 2 ಧಾರಾವಾಹಿಗಳು ಮುಕ್ತಾಯ!!
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram