ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಹುಟ್ಟುಹಬ್ಬವನ್ನ ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ 135 ಸ್ಥಾನಗಳನ್ನ ಗೆದ್ದು ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ. ಒಂದು ಕಡೆ ಹಿಡಿದ ಆಟವನ್ನ ಛಲ ಬಿಡದೆ ಸಾಧಿಸಿದ ಖುಷಿಯ ಜೊತೆಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತೋ ಇಲ್ವೋ ಅನ್ನೋ ಗೊಂದಲದಲ್ಲೇ ನಿನ್ನೆ ಡಿಕೆಶಿ ಬಹಳ ಅದ್ದೂರಿಯಾಗಿಯೇ ಹುಟ್ಟುಹಬ್ಬ ಆಚರಿಸಿಕೊಂಡರು. ಹೌದು ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈಗಾಗ್ಲೇ ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು ಅನ್ನೋ ಚರ್ಚೆ ನಡೀತಿದೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ಸಿಎಂ ಖುರ್ಚಿ ಆಕಾಂಕ್ಷಿಗಳಾಗಿದ್ದು ಇಬ್ಬರ ನಡುವೆಯೂ ಜಟಾಪಟಿ ಜೋರಾಗಿಯೇ ನಡೀತಿದೆ. ಈ ಮಧ್ಯೆ ಅಪ್ಪನನ್ನ ಖುಷಿ ಪಡಿಸಿರೋ ಮಗಳು ಐಶ್ವರ್ಯ ಶಿವಕುಮಾರ್ ಅಪ್ಪನಿಗೆ ವಿಭಿನ್ನವಾಸಗಿ ವಿಡಿಯೋ ಮೂಲಕ ಭಾವನಾತ್ಮಕ ಸಾಲುಗಳನ್ನ ಹಂಚಿಕೊಂಡು ಅಪ್ಪನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸಿದ್ದಾರೆ. ಹಾಗಾದ್ರೆ ಡಿಕೆಶಿ ಮಗಳು ಐಶ್ವರ್ಯ ಯಾವ ರೀತಿ ವಿಶ್ ಮಾಡಿದ್ರು, ಮಗಳ ಭಾವನಾತ್ಮಕ ಸಾಲುಗಳೇನು ಮುಂದೆ ನೋಡೋಣ ಬನ್ನಿ
ಅಪ್ಪನಿಗೆ ವಿಭಿನ್ನವಾಗಿ ವಿಶ್ ಮಾಡಿದ ಮಗಳು ಐಶ್ವರ್ಯ.
ಹೌದು ನಿನ್ನೆ ಮೇ 15ನೇ ತಾರೀಖು ಡಿಕೆ ಶಿವಕುಮಾರ್ ಅವ್ರ ಜನ್ಮದಿನ. ಹೀಗಾಗಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಎರಡನ್ನು ಕೂಡ ಡಿಕೆ ಶಿವಕುಮಾರ್ ಆಚರಿಸಿಕೊಂಡಿದ್ದಾರೆ. ಇನ್ನು ಡಬಲ್ ಧಮಾಕದಂತೆ ಡಿಕೆಶಿಗೆ ಬ್ಯಾಕ್ ಟು ಬ್ಯಾಕ್ ಡಬಲ್ ಖುಷಿ ಸಿಗುತ್ತಿದೆ. ಇದೀಗ ಡಿಕೆ ಶಿವಕುಮಾರ್ ಅವರ ಪುತ್ರಿ ತಮ್ಮ ತಂದೆಯ ಹುಟ್ಟು ಹಬ್ಬದ ಸಲುವಾಗಿ ವಿಶೇಷವಾಗಿ ಆಡಿಯೋ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. ಅಲ್ಲದೇ ಡಿಕೆಶಿ ಮಗಳು ಐಶ್ವರ್ಯ ಭಾವನಾತ್ಮಕವಾಗಿ ತಮ್ಮ ಸುಮಧುರ ಕಂಠದಿಂದ ತಂದೆ ಡಿಕೆಶಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿರುವ ವಿಡಿಯೋ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ಎಲ್ಲಾ ಹುಡುಗಿಯರು ರಾಜಕುಮಾರಿ ಆಗಬೇಕು ಎಂದು ಕನಸು ಕಾಣುತ್ತಾರೆ. ನಾನು ಎಂದಿಗೂ ರಾಜಕುಮಾರಿ ಆಗಬೇಕು ಎಂದು ಕನಸು ಕಾಣಲಿಲ್ಲ ಯಾಕೆಂದರೆ, ನನ್ನನ್ನು ಪ್ರತಿ ಕ್ಷಣ ರಾಜಕುಮಾರಿಯಂತೆ ನೋಡಿಕೊಳ್ಳುತ್ತಿದ್ದರು. ಪ್ರತಿದಿನ ಬೆಳಗ್ಗೆ “ಮಗಳೇ” ಎನ್ನುವ ಶಬ್ದವನ್ನು ಕೇಳಿದ ತಕ್ಷಣ ನಿಜವಾದ ಪ್ರೀತಿ ಎಂದರೆ ಇದೇ ಇರಬೇಕು ಎನಿಸುತ್ತಿತ್ತು. ಮಗಳೇ ಎನ್ನುವ ಪದ ನನ್ನನ್ನು ಸ್ಟ್ರಾಂಗೆಸ್ಟ್ ವುಮೆನ್ ಆಗಿ ಬದಲಾಗಲು ಪ್ರೇರೇಪಿಸುತಿತ್ತು, ನಿಮ್ಮಂಥ ತಂದೆಯನ್ನು ಪಡೆದ ನಾನೇ ಧನ್ಯಳು ಈ ಕೆಟ್ಟ ಪ್ರಪಂಚದಿಂದ ನನ್ನನ್ನು ಪ್ರತಿ ಕ್ಷಣ ರಕ್ಷಿಸುತ್ತಿದ್ದೀರಿ. ನೀವು ಯಾವತ್ತೂ ನನ್ನನ್ನು ನಿಮ್ಮ ಮಗನಿಗಿಂತ ಕಡಿಮೆ ಎನ್ನುವಂತೆ ಬೆಳೆಸಲಿಲ್ಲ. ನಾನು ಕೇಳುವುದಕ್ಕಿಂತ ಮೊದಲೇ ನೀವು ನನಗೆ ಎಲ್ಲವನ್ನು ಕೊಟ್ಟಿದ್ದೀರಿ ನೀವು ನನ್ನನ್ನು ತುಂಬಾ ನಂಬಿದ್ರಿ ನನ್ನ ಜೀವನದಲ್ಲಿ ಎಂದಿಗೂ ನೀವು ತಲೆತಗ್ಗಿಸುವಂತಹ ಕೆಲಸ ಮಾಡುವುದಿಲ್ಲ. ನನ್ನ ಹೀರೋ ನೀವೇ. ಹ್ಯಾಪಿ ಬರ್ತಡೇ ಅಪ್ಪ ಎಂದು ಡಿಕೆಶಿ ಪುತ್ರಿ ಐಶ್ವರ್ಯ ತಮ್ಮ ತಂದೆಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ್ದಾರೆ. ಅಲ್ಲದೇ ಅ ವಿಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೂಡ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: 10ದಿನಕ್ಕೆ 150ಕೋಟಿ ಕಲೆಕ್ಷನ್ ಮಾಡಿದ ದಿ ಕೇರಳ ಸ್ಟೋರಿ ಪ್ಯಾನ್ ಇಂಡಿಯಾ ಚಿತ್ರದ ಕಲೆಕ್ಷನ್ ಹೆಚ್ಚಾಗ್ತಿರೋದು ಹೇಗ್ ಗೊತ್ತಾ
ಮಗಳ ವಿಶೇಷ ಸಂದೇಶ ನೋಡಿ ಭಾವುಕರಾದ ಡಿಕೆಶಿ
ಮಗಳ ಈ ವಿಶೇಷವಾದ ಸಂದೇಶವನ್ನ ನೋಡಿ ಡಿಕೆ ಶಿವಕುಮಾರ್ ಭಾವುಕರಾಗಿದ್ದಾರೆ. ಅಲ್ದೇ ಡಿಕೆ ಅಭಿಮಾನಿಗಳು ಕೂಡ ಐಶ್ವರ್ಯ ಅವ್ರ ವಿಭಿನ್ನ ವಿಡಿಯೋ ಹಾಗೂ ಮಾತುಗಳನ್ನ ಕೇಳಿ ಭಾವುಕಾರಾಗಿ ಕಮೆಂಟ್ಸ್ ಮೂಲಕ ವಿಶ್ ಮಾಡಿ ಮುಂದಿನ ಸಿಎಂ ಡಿಕೆಶಿ ಅಂತಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಮಗಳು ಐಶ್ವರ್ಯ ಅವ್ರನ್ನ ಬಹಳ ಮುದ್ದಾಗಿ ಬೆಳೆಸಿ, ವಿದ್ಯಾವಂತೆ ಬುದ್ದಿವಂತೆಯನ್ನಾಗಿ ಮಾಡಿ ಮಗಳಿಗಾಗಿಯೇ ಶಿಕ್ಷಣ ಸಂಸ್ಥೆಯೊಂದನ್ನ ಕಟ್ಟಿ ಮಗಳ ಜವಾಬ್ದಾರಿಗೆ ಕೊಟ್ಟಿದ್ರು ಅಲ್ಲದೇ ಮಗಳ ಮದುವೆಯನ್ನ ಬಹಳ ಅದ್ದೂರಿಯಾಗಿ ತುಂಬಾ ಶಾಸ್ತ್ರಬದ್ದವಾಗಿ ಮಾಡಿ ಮುಗಿಸಿದ್ರು. ಮದುವೆಯ ನಂತರವೂ ಐಶ್ವರ್ಯ ಅವ್ರಿಗೆ ಅಪ್ಪನ ಮೇಲಿನ ಪ್ರೀತಿ ಗೌರವ ಒಂದು ಚೂರು ಕಡಿಮೆಯಾಗಿಲ್ಲ. ಅಪ್ಪನನ್ನ ತನ್ನ ಪಾಲಿನ ಹೀರೊ ಅನ್ನುವಂತಲೇ ಈಗಲೂ ನಂಬಿದ್ದಾರೆ. ಅಲ್ದೇ ತಂದೆಯ ರಾಜಕೀಯ ಯಶಸ್ಸು ಎಲ್ಲವನ್ನ ಕೂಡ ಕಣ್ಣಾರೆ ಕಂಡಿರುವ ಮಗಳು ಐಶ್ವರ್ಯ ಅಪ್ಪನನ್ನ ದೊಡ್ಡ ಮಟ್ಟದಲ್ಲಿ ನೋಡಬೇಕು ಅನ್ನೋ ಆಸೆಯನ್ನ ಇಟ್ಟುಕೊಂಡಿದ್ದಾರೆ. ಅದರಂತೆ ಡಿಕೆ ಶಿವಕುಮಾರ್ ಕೂಡ ಇದೀಗ ಸಿಎಂ ಪಟ್ಟಕ್ಕಾಗಿ ಬಹಳಷ್ಟು ಸರ್ಕಸ್ ಮಾಡ್ತಿದ್ದು ಸಿಎಂ ಆಗ್ತಾರ ಅನ್ನೋದನ್ನ ಕಾದು ನೋಡಬೇಕಿದೆ. ಒಟ್ಟಾರೆ ಅಪ್ಪನಿಗೆ ಮಗಳ ಮೇಲಿರುವ ಪ್ರೀತಿ ಮಗಳಿಗೆ ಅಪ್ಪನ ಮೇಲಿರುವ ನಂಬಿಕೆ ಹೀಗೆ ಇರಲಿ ಅನ್ನೋದು ಅಭಿಮಾನಿಗಳ ಆಶಯ.
ಇದನ್ನೂ ಓದಿ: ಕಾಂಗ್ರೆಸ್ ನ 5ಭಾಗ್ಯಗಳಿಗೆ ದಿನಕ್ಕೆ ತಿಂಗಳಿಗೆ ಆಗುವ ದುಡ್ಡೆಷ್ಟು?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram