Chandan Gowda: ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈ ಬಾರಿಯ ರಾಜ್ಯ ವಿಧಾನಸಭಾ ಚನಾವಣೆಯು ಕೆಲವೊಂದು ವಿಚಾರಗಳಿಂದ ಭಾರಿ ಚರ್ಚೆಯಾಗ್ತಿತ್ತು, ಅದರಲ್ಲೂ ಕೆ. ಆರ್ ಪೇಟೆ ವಿಧಾನಸಭಾ ವಿಚಾರವಾಗಿ ಸಾಕಷ್ಟು ಕುತೂಹಲ ಕೇರಳಸಿತ್ತು. ಕಾರಣ 28ವರ್ಷದ ಯೂಟ್ಯೂಬರ್ ಚಂದನ್ ಕೆ. ಆರ್ ಪೇಟೆ ಕ್ಷೇತ್ರ ದಿಂದ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚುನಾವಣೆಗೆ ಸ್ಪರ್ಧಿಸಿದ್ದು, ಅಗ್ರಿಮೆಂಟ್ ಕೊಟ್ಟು ಮತ ಕೇಳುವ ಮೂಲಕ ಇಡಿ ಕರ್ನಾಟಕದ ಜನರ ಗಮನ ಸೆಳೆದಿದ್ರು, ಇದೀಗ ವಿಧಾನಸಭ ಚನಾವಣೆಯು ಮುಗಿದಿದ್ದು, ಫಲಿತಾಂಶ ಕೂಡ ಹೊರಬಂದಿದ್ದು, ಯೂಟ್ಯೂಬರ್ ಚಂದನ್ ಇದೀಗ ಅಲ್ಪ ಮತಗಳಿಗೆ ತೃಪ್ತಿ ಪಟ್ಟುಕೊಂಡಿದ್ದಾರೆ. ಇದು ಹಳೆ ವಿಚಾರ ಆದ್ರೆ ಇದೀಗ ಚುನಾವಣೆ ಮತ್ತು ಸೋಲಿನ ಕುರಿತು ಯೂಟ್ಯೂಬರ್ ಚಂದನ್ ನೀಡಿರುವ ಕೊಟ್ಟಿರುವ ಹೇಳಿಕೆ ಸಾಕಷ್ಟು ವೈರಲ್ ಆಗ್ತಿದ್ದು, ಈ ಒಂದು ಕಾರಣಕ್ಕೆ ತನಗೆ ಪ್ರಚಾರ ಸಿಗಲಿಲ್ಲ, ಹಾಗಾಗಿ ಸೋತಿದ್ದೇನೆ ಆದ್ರೆ ಹಿಂದೆ ಸರಿಯುವ ಮಾತಿಲ್ಲ, ಕ್ಷೇತ್ರದಲ್ಲೇ ಇದ್ದು ಜನರನ್ನ ತಲುಪುತ್ತಿನಿ ಅಂತ ಹೇಳಿದ್ದಾರೆ. ಹಾಗಾದ್ರೆ ಆ ಕಾರಣ ಯಾವುದು? ಚಂದನ್ ಸೋಲಿಗೂ, ಮಾಧ್ಯಮದವರಿಗೂ ಸಂಬಂಧ ಇದ್ಯಾ ಎಲ್ಲವನ್ನ ಸಂಪೂರ್ಣವಾಗಿ ನೋಡೋಣ ಬನ್ನಿ.
ದರ್ಶನ್ ಫ್ಯಾನ್ ಅಂತ ಮೀಡಿಯಾದವರು ಪ್ರಚಾರ ಮಾಡ್ಲಿಲ್ಲ
ಹೌದು ಚಂದನ್ ಗೌಡ(Chandan Gowda) ಕೆ. ಆರ್ ಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ಯೂಟ್ಯೂಬರ್ ಆಗಿದ್ದ ಚಂದನ್ ಬಹಳ ಬೇಗ ಜನಮಾನ ಗೆದಿದ್ರು. ಕೆ. ಆರ್ ಪೇಟೆ ವಿಧಾನಸಭ ಕ್ಷೇತ್ರದಲ್ಲಿ ಪ್ರತಿಹಳ್ಳಿ ಹಳ್ಳಿಗೂ ಭೇಟಿ ನೀಡಿ ಜನರ ಜೊತೆ ಮುಕ್ತವಾಗಿ ಮಾತನಾಡಿ, ಅಗ್ರಿಮೆಂಟ್ ಪೇಪರ್ ಕೊಟ್ಟು ಮತ ಕೇಳುವ ಮೂಲಕ ಇಡಿ ಕರ್ನಾಟಕದಾದ್ಯಂತ ಚುನಾವಣೆ ಯಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಲು ಹೊರಟ್ಟಿದ್ರು, ಅದೇ ರೀತಿ ಇವ್ರಿಗೆ ಎಲ್ಲೇ ಹೋದ್ರು ಒಳ್ಳೆ ಪ್ರತಿಕ್ರಿಯೆಯೇ ವ್ಯಕ್ತವಾಗಿತ್ತು. ಆದರೆ ಸೋಷಿಯಲ್ ಮೀಡಿಯಾ ಹೊರತು ಪಡಿಸಿ ಬೇರೆ ಯಾವ ಮಾಧ್ಯಮದವರು ಕೂಡ ಚಂದನ್ ಅವ್ರ ಚುನಾವಣಾ ಕುರಿತು ಒಂದು ಚಿಕ್ಕ ಸುದ್ದಿ ಯನ್ನ ಎಲ್ಲಿಯೂ ತೋರಿಸಿಲ್ಲ, ಇದೀಗ ಅದಕ್ಕೆ ಚಂದನ್ ಗೌಡ ದರ್ಶನ್ ಅವ್ರ ಅಭಿಮಾನಿಯಾಗಿದ್ದದ್ದೇ ಕಾರಣವಾಯ್ತು ಅಂತ ಹೇಳಲಾಗ್ತಿದೆ. ಹೌದು ಯಾವುದೇ ಮಾಧ್ಯಮಗಳ ಪ್ರಚಾರವಿಲ್ಲದೆ ಕೇವಲ ಸಾಮಾಜಿಕ ಜಾಲತಾಣದ ಮೂಲಕವೇ ಚಂದನ್ ಗೌಡ ಒಂದು ರೀತಿಯು ಟ್ರೆಂಡ್ ಶುರು ಮಾಡಿದ್ರು, ಸಾಮಾಜಿಕ ಜಾಲತಾಣದಿಂದಲೇ ಚಂದನ್ ಕರ್ನಾಟಕದ ಮನೆ ಮಗನಾಗಿದ್ರು, ಹೀಗಾಗಿಯೇ ಮೊದಲ ಚುನಾವನೆಯಲ್ಲಿಯೇ ಚಂದನ್ ಎಂಟುವರೆ ಸಾವಿರಕ್ಕೂ ಹೆಚ್ಚು ಮತಗಳನ್ನ ಪಡೆದದ್ದು ಕೂಡ ಒಂದು ರೀತಿಯ ಸಾಧನೆಯೇ ಅಂತ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರು ಚಂದನ್ ಅವ್ರನ್ನ ಕೊಂಡಾಡಿದ್ರು. ಆದರೆ ಇದೀಗ ಮತ್ತೊಂದು ವಿಚಾರ ಮುನನ್ನೆಲೆಗೆ ಬರುತ್ತಿದ್ದು, ಚುನಾವಣಾ ಫಲಿತಾಂಶದ ನಂತರ ಇದೀಗ ಚಂದನ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ಸಾಕಾಷ್ಟು ಸುದ್ದಿ ಮಾಡ್ತಿದೆ.
ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇನೆ ಎಂದ ಚಂದನ್
ಈಗಾಗ್ಲೇ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳ ಕುರಿತಂತೆ ಮಾತನಾಡಿರುವ ಚಂದನ್ ತಾವು ಸೋತರು ಸಹ ಕ್ಷೇತ್ರದಲ್ಲಿ ಇದ್ದು ಜನರ ಸಮಸ್ಯೆಗಳನ್ನ ಬಗೆಹರಿಸೋದು ಹಾಗೂ, ಈಗಾಗ್ಲೇ ಯಾವ ಸಮಸ್ಯೆಗಳ ಕುರಿತು ಬಗೆಹರಿಸುವ ಮಾತು ಕೊಟ್ಟಿದ್ನೋ ಅದೆಲ್ಲವನ್ನು ನಾನು ಮಾಡೇ ತಿರುತ್ತೀನಿ. ಪ್ರತಿ ಪಂಚಾಯಿತಿಗಳಿಗೂ ಭೇಟಿ ಕೊಡ್ತೀನಿ. ಪ್ರತಿಯೊಂದು ಗ್ರಾಮಗಳಿಗೂ ಭೇಟಿ ಕೊಟ್ಟು ಸಮಸ್ಯೆಗಳನ್ನ ಆಲಿಸಿ ಕುಂದುಕೊರತೆಗಳನ್ನ ಬಗೆಹರಿಸುತ್ತೇನೆ. ವಿಡಿಯೋ ಮಾಡಬಾರದು ಅಂದುಕೊಂಡಿದ್ದೆ ಆದ್ರೆ ಸಾಕಷ್ಟು ಜನರು ನನಗೆ ತುಂಬಾ ಸಪೋರ್ಟ್ ಮಾಡಿ ಮಾತಾನಾಡಿದ್ದಾರೆ, ನಿಮ್ಮ ಜೊತೆ ನಾವು ಇರ್ತೀವಿ ಅಂತೆಲ್ಲಾ ಹೇಳೋದನ್ನ ನೋಡ್ದಾಗ ಸುಮ್ನೆ ಕೂರೋಕೆ ಮನಸ್ಸಾಗಿಲ್ಲ, ನಮ್ಮ ಅಮ್ಮ ಕೂಡ ಕಣ್ಣೀರು ಇಟ್ರು, ಆದ್ರೆ ಎಲ್ಲರಿಗೂ ನಾನು ಒಂದು ಮಾತು ಹೇಳೋಕೆ ಇಷ್ಟ ಪಡ್ತೀನಿ ನಾನು ಮೊದಲ ಬಾರಿಗೆ ನಿಮ್ಮ ಪ್ರೀತಿಯನ್ನ ಇಷ್ಟರ ಮಟ್ಟಿಗೆ ಸಂಪಾದನೆ ಮಾಡಿದೀನಿ ಅಂದ್ರೆ ನಂಗೆ ಅದೇ ದೊಡ್ಡ ಗೆಲುವು, ನಾನು ಸೋತಿದೀನಿ ಆದ್ರೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ನಿಮ್ಮೊಟ್ಟಿಗ್ಗೆ ಇರ್ತೀನಿ. ಇವತ್ತಲ್ಲ ನಾಳೆ ನೀವು ನನ್ನ ಗೆದ್ದೇ ಗೆಳ್ಸ್ತೀರಾ ಅನ್ನೋ ನಂಬಿಕೆ ನನಗಿದೆ. ಮತ್ತೊಂದು ವಿಚಾರ ನಾನು ದರ್ಶನ್ ಅವರ ಫ್ಯಾನ್ ಅನ್ನೋ ಕಾರಣಕ್ಕೆ ಮೀಡಿಯಾದಾವ್ರು ನಂಗೆ ಸಪೋರ್ಟ್ ಮಾಡಿಲ್ಲ.. ಆದ್ರೂ ಪರವಾಗಿಲ್ಲ ನಿಮ್ಮ ಪ್ರೀತಿ ನಂಗೆ ಸಿಕ್ಕಿದೆ ಅಷ್ಟೆ ಸಾಕು ಅಂತ ಚಂದನ್ ಅವ್ರು ಬಹಳ ಸುದೀರ್ಘವಾದ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮಗಳ ಮುಖ ರಿವಿಲ್ ಮಾಡಿದ ನಟ ಧ್ರುವ ಸರ್ಜಾ. ಮುದ್ದುಮಗಳಿಗೆ ಭರ್ಜರಿ ಫೋಟೋಶೂಟ್ ಮಾಡಿಸಿರುವ ಧ್ರುವ ದಂಪತಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram