ಜನದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರಿಗೆ ಬರುತ್ತಿದೆ ಲೋಕಲ್ ಟ್ರೈನ್, ಇದು ಯಾವ ಯಾವ ಮಾರ್ಗದಲ್ಲಿ ಓಡಾಡಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ನಗರ ಪ್ರದೇಶದಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡಲು ಹರ ಸಾಹಸ ಪಡಬೇಕಾಗುತ್ತದೆ ಎಷ್ಟು ಹೊಸ ಸೌಲಭ್ಯವನ್ನು ಸೃಷ್ಟಿಸಿದರು ಕೂಡ ಎಷ್ಟು ಸೌಕರ್ಯವನ್ನು ಮಾಡಿದರು ಜನದಟ್ಟಣೆ(crowd) ಮಾತ್ರ ಕಮ್ಮಿಯಾಗುತ್ತಿಲ್ಲ. ಮೆಟ್ರೋ ಇದ್ದರೂ ಕೂಡ ಕ್ರೌಡ್ ಮಾತ್ರ ಕಮ್ಮಿಯಾಗಲೇ ಇಲ್ಲ. ಆದ್ದರಿಂದ ಜನಗಳಿಗೆ ಅನುಕೂಲವಾಗುವಂತೆ, ಬೆಂಗಳೂರು ನಗರಗಳಲ್ಲಿ ಒಂದು ಲೋಕಲ್ ಟ್ರೈನ್ ಓಡಾಡುತ್ತಿದ್ದರೆ ಸಂಚಾರ ದಟ್ಟಣೆಯನ್ನು ಸ್ವಲ್ಪ ಕಡಿಮೆ ಮಾಡಬಹುದೆಂಬ ನಂಬಿಕೆಯಿಂದ ನಗರಗಳಲ್ಲಿ ಓಡಾಡಲು ಒಂದು ರೈಲಿನ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದೆ.

WhatsApp Group Join Now
Telegram Group Join Now

ಮೆಟ್ರೋ ರೈಲಿನಿಂದ ಜನದಟ್ಟಣೆ ಸುಮಾರು ಕಡಿಮೆಯಾಗಿದೆ, ಆದರೆ ಬೆಂಗಳೂರಿನಂತಹ ಮೇಘ ಸಿಟಿಯಲ್ಲಿ ಇನ್ನೂ ಕಡಿಮೆಯಾಗಬೇಕಿದೆ ಜನರಿಗೆ ಇನ್ನೂ ಅನುಕೂಲವಾಗುವಂತೆ ಈ ಒಂದು ಹೊಸ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಬೆಂಗಳೂರಿನ ಹೊರವಲಯದಲ್ಲಿ ಸರ್ಕ್ಯುಲರ್ ಟ್ರೈನ್ ನಿರ್ಮಾಣಕ್ಕೆ ನೈರುತ್ಯ ರೈಲ್ವೆ ಇಲಾಖೆ ಅನುಮತಿಯನ್ನು ನೀಡಿದೆ. ಇದು ಒಟ್ಟು 287 ಕಿಲೋಮೀಟರ್ ಅನ್ನು ಕವರ್ ಮಾಡಲಿದ್ದು ವೃತ್ತಾಕಾರದಲ್ಲಿ ಬೆಂಗಳೂರು ನಗರದ ಜನರಿಗೆ ಹಾಗೂ ಹೊರವಲಯದವರಿಗೆ ಈ ರೈಲು ಸಂಚಾರದಿಂದ ಸಹಾಯವಾಗಲಿದೆ.

ಇದರಿಂದ ಬೆಂಗಳೂರು ನಗರದ ಒಳಗಡೆ ಇರುವ ಟ್ರಾಫಿಕ್ ಕೂಡ ಕಡಿಮೆಯಾಗುಬಹುದು. ಹಾಗೂ ಮೆಟ್ರೋದ ಮೇಲಿರುವ ಬರ್ಡನ್ ಕೂಡ ಕಡಿಮೆಯಾಗುತ್ತದೆ. ಮೆಟ್ರೋದಿಂದ ಇಳಿದ ನಂತರ ತಮ್ಮ ತಮ್ಮ ಊರುಗಳಿಗೆ ಸಾಗಲು ಈ ರೈಲಿನ ಸಹಾಯ ಅತ್ಯವಶ್ಯಕವಾದದ್ದು. ಸಮಯಕ್ಕೆ ಸರಿಯಾಗಿ ಜನರು ತಮ್ಮ ಊರನ್ನು ಸೇರಿಕೊಳ್ಳಬಹುದು ಬೆಂಗಳೂರಿನಲ್ಲಿ ದೊಡ್ಡ ತಲೆನೋವು ಅಂತಂದರೆ ಟ್ರಾಫಿಕ್. ಒಮ್ಮೆ ಲೋಕಲ್ ಟ್ರೈನ್ ಪ್ರಾರಂಭವಾದರೆ ಟ್ರಾಫಿಕ್ ಕೂಡ ಕಡಿಮೆಯಾಗಬಹುದು ನಂಬಿಕೆ ಇದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ರೈಲು ಯಾವ ಯಾವ ಮಾರ್ಗದ ಮೂಲಕ ಓಡಾಡಲಿದೆ?

ಇದು ಮೆಟ್ರೋ ಸ್ಟೇಷನ್ ಮಾರ್ಗವಾಗಿ ಓಡಾಡಲಿದೆ ಅಂದರೆ ಮೆಟ್ರೋ ಸ್ಟೇಷನ್ ಅನ್ನು ಸಂಪರ್ಕ ಮಾಡುತ್ತದೆ. ಈ ವೃತ್ತಾಕಾರದ ರೈಲು ನಾಲ್ಕು ರಸ್ತೆಗಳ ಸಂಕೇತದ ಮೂಲಕ ಹೋಗುತ್ತದೆ.

  1. ಹಾಸನ ರಸ್ತೆಯ ಸೋಲೂರು – ತುಮಕೂರು ರಸ್ತೆಯ ನಿಡುವಂಡ
  2. ದೊಡ್ಡಬಳ್ಳಾಪುರ – ಚಿಕ್ಕಬಳ್ಳಾಪುರ ರಸ್ತೆಯ ದೇವನಹಳ್ಳಿ
  3. ಬಂಗಾರ್‌ಪೇಟೆ – ಮಾಲೂರು
  4. ಆನೇಕಲ್‌ ರೋಡ್‌ನ ಹೀಲಾಳಿ – ರಾಮನಗರ ರಸ್ತೆಯ ಹೆಜ್ಜಾಲ – ಹಾಸನ ರಸ್ತೆಯ ಸೋಲೂರು 

ಈ ರೈಲು ಒಟ್ಟು ಈ ನಾಲ್ಕು ರಸ್ತೆಗಳಲ್ಲಿ ಸಂಚರಿಸುತ್ತದೆ. ರೈಲ್ವೆ ಇಲಾಖೆ ಈ ಯೋಜನೆಯ ಪರಿಶೀಲನೆಗಾಗಿ 72 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಯೋಜನೆಯ ಮುಖ್ಯ ನಿಲ್ದಾಣಗಳು, ಸರಕು ಸೌಲಭ್ಯ, ಜಾಗದ ಬಗ್ಗೆ, ಸೇತುವೆ ಮತ್ತು ಕಾಮಗಾರಿಗಳ ವಿಷಯದಲ್ಲಿ ಸಮೀಕ್ಷೆ ನಡೆಸಲಾಗಿದೆ. ಈ ರೈಲು ಸಂಚಾರದಿಂದ ಬೆಂಗಳೂರಿನ ಉಪನಗರಗಳಲ್ಲಿರುವ ಅಂದರೆ ಬೆಂಗಳೂರು ಹೊರ ವಲಯದಲ್ಲಿರುವ ಜನರಿಗೆ ಹೆಚ್ಚು ಉಪಯೋಗವಾಗುತ್ತದೆ. ಅವರಿಗೆ ಬೆಂಗಳೂರು ನಗರಕ್ಕೆ ಬಂದು ಹೋಗಲು ಸ್ವಲ್ಪ ಸಮಸ್ಯೆ ಆಗುತ್ತಿತ್ತು ಆದರೆ ಈ ರೈಲು ಸಂಚಾರದಿಂದ ಅವರಿಗೆ ವಿಳಂಬವಾಗಿ ಸಮಯಕ್ಕೆ ಸರಿಯಾಗಿ ಅವರ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಬಹುದಾಗಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಮಾರ್ಗ ಸೂಚಿ:

ಬೆಂಗಳೂರಿಗೆ ಚಿಕ್ಕಬಾಣಾವಾರ ಮೂಲಕ, ನಿಡುವಂಡದಿಂದ ದೊಡ್ಡಬಳ್ಳಾಪುರ, ದೊಡ್ಡಬಳ್ಳಾಪುರದಿಂದ ದೇವನಹಳ್ಳಿ, ದೇವನಹಳ್ಳಿಯಿಂದ ಮಾಲೂರು, ಮಾಲೂರಿನಿಂದ ಹೀಲಾಳಿ, ಹೀಲಾಳಿಗೆಯಿಂದ ಹೆಜ್ಜಾಲ, ಹೆಜ್ಜಾಲದಿಂದ ಸೋಲೂರು, ಸೋಲೂರಿನಿಂದ ನಿಡುವಂಡ ಇವುಗಳ ನಡುವಂಡದ ಮಾರ್ಗವಾಗಿ ಚಲಿಸಲಿದೆ. ಇದು ಲೋಕಲ್‌ ರೈಲು ಮಾರ್ಗವು ಕೆಲವು ಪ್ರಮುಖ ನಗರಗಳ ಮೂಲಕ ಹೋಗುವ ರೂಟಿನ ವಿವರಣೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಲೋಕಲ್ ರೈಲ್ ಯಾವ ಪ್ಲಾಟ್‌ಫಾರಂ ನಲ್ಲಿ ದೊರೆಯುವುದು ಮತ್ತು ಇತರ ವಿವರಗಳನ್ನು ನೋಡಲು ರೈಲು ಸೇವೆಯ ಅಧಿಕೃತ ವೆಬ್‌ಸೈಟ್ ಅಥವಾ ಸ್ಮಾರ್ಟ್‌ಫೋನ್ ಆ್ಯಪ್‌ಗಳನ್ನು ಬಳಸಿ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಈಗಾಗಲೇ ಇದರ ಬಗ್ಗೆ ಸಮೀಕ್ಷೆಯನ್ನು ನಡೆಸುತ್ತಿದ್ದು, ಇನ್ನು ಹತ್ತು ವರ್ಷದ ಒಳಗಡೆ ಈ ರೈಲಿನ ವ್ಯವಸ್ಥೆಯನ್ನು ಆರಂಭ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಮೊಬೈಲ್ ಪ್ರೀಯರಿಗೆ ಸಿಹಿ ಸುದ್ದಿ, ಇನ್ನು ಮುಂದೆ ಒನ್ ಪ್ಲಸ್ ನಾರ್ಡ್ C3 5G ಯನ್ನು ಕೇವಲ 1099 ರೂ. ಗೆ ಖರೀದಿಸಬಹುದು. 

ಇದನ್ನೂ ಓದಿ: ಟಾಟಾ ಹೆರಿಯರ್ 1.40 ಲಕ್ಷದ ಭರ್ಜರಿ ರಿಯಾಯಿತಿಯೊಂದಿಗೆ ಸಿಗಲಿದೆ. ಆಫರ್ ಪ್ರೈಸ್ ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿದೆ.