ಬೇಸಿಗೆ ರಜೆಯಲ್ಲಿ ಬೀಚ್ ಗೆ ಹೋಗಲು ಎಲ್ಲರೂ ಇಷ್ಟ ಪಡುತ್ತಾರೆ. ಬಿಸಿಲಿನಲ್ಲಿ ತಂಪಾದ ವಾತಾವರಣದಲ್ಲಿ ಕಾಲ ಕಳೆಯಬೇಕು ರಜೆಯನ್ನು ಎಂಜಾಯ್ ಮಾಡಬೇಕು ಎಂದು ಬಯಸುವ ಬೆಂಗಳೂರಿನ ಜನರಿಗೆ ರೈಲ್ವೆ ಇಲಾಖೆಯು ಹೆಚ್ಚುವರಿ ಟ್ರೈನ್ ಬಿಡುಗಡೆ ಮಾಡುವ ಮೂಲಕ ಸಂತಸದ ಸುದ್ದಿ ನೀಡಿದೆ.
ಯಾವ ಯಾವ ಪ್ರದೇಶಗಳಿಗೆ ವಿಶೇಷ ಟ್ರೈನ್ ಬಿಡಲಾಗುತ್ತದೆ :-
ವಿಶಾಖ ಪಟ್ಟಣಂ:- ವಿಶಾಖಪಟ್ಟಣಂ ನಿಂದಾ ವಿಶೇಷ ಟ್ರೈನ್ ಬಿಡಲಾಗುತ್ತಿದೆ. ವಿಶೇಷ ಟ್ರೈನ್ ಸಂಖ್ಯೆ 08549. ಏಪ್ರಿಲ್ 27 ನೇ ತಾರೀಖಿನಿಂದ ಜೂನ್ 29 ರವರೆಗೆ ಈ ಟ್ರೈನ್ ಸಂಚರಿಸಲಿದ್ದು, ಪ್ರತಿ ಶನಿವಾರ ಮಧ್ಯಾಹ್ನ 1.15 ಗಂಟೆಗೆ ವಿಶಾಖಪಟ್ಟಣದಿಂದ ಬೆಂಗಳೂರಿಗೆ ವಿಶೇಷ ರೈಲು ಬರಲಿದ್ದು. ವಿಶಾಖಪಟ್ಟಣಂ ಇಂದ ಬೆಂಗಳೂರಿಗೆ ಒಟ್ಟು 10 ಟ್ರಿಪ್‌ಗಳನ್ನು ಸಂಚರಿಸಲಿದೆ ಎಂದು ಮಾಹಿತಿಯನ್ನು ರೈಲ್ವೆ ಇಲಾಖೆ ನೀಡಿದೆ. ಈ ವಿಶೇಷ ರೈಲು ಏಪ್ರಿಲ್ 27, ಮೇ 4, ಮೇ 11, ಮೇ 18, ಮೇ 25, ಜೂನ್ 1, ಜೂನ್ 8, ಜೂನ್ 15, ಜೂನ್ 22, ಜೂನ್ 29 ರಂದು ಸಂಚರಿಸಲಿದೆ. 1.15ಕ್ಕೆ ವಿಶಾಖಪಟ್ಟಣದಿಂದ ಹೊರಟ ಟ್ರೈನ್ ಭಾನುವಾರ ಬೆಳಗ್ಗೆ 7.30ಕ್ಕೆ ಬೆಂಗಳೂರು ತಲುಪಲಿದೆ. ಹಾಗೆಯೇ ಬೆಂಗಳೂರಿಂದ 08550 ಸಂಖ್ಯೆಯ ರೈಲು ಬೆಂಗಳೂರಿಂದ ವಿಶಾಖ ಪಟ್ಟಣಂ ಗೆ ಹೊಗುತ್ತದೆ. ಇದು ಭಾನುವಾರ ರಾತ್ರಿ 8.30 ಗಂಟೆಗೆ ಬೆಂಗಳೂರಿನಿಂದ ಹೊರಟು ಸೋಮವಾರ ಬೆಳಗ್ಗೆ 3.10 ಗಂಟೆಗೆ ವಿಶಾಖ ಪಟ್ಟಣಂ ತಲುಪಲಿದೆ. ಈ ಟ್ರೈನ್ ಏಪ್ರಿಲ್ 28, ಮೇ 5, ಮೇ 12, ಮೇ 19, ಮೇ 26, ಜೂನ್ 2, ಜೂನ್ 9, ಜೂನ್ 16, ಜೂನ್ 23, ಜೂನ್ 30 ರಂದು ಸಂಚರಿಸಲಿದೆ. ಈ ರೈಲು ದುವ್ವಾಡ, ರಾಜಮಂಡ್ರಿ, ವಿಜಯವಾಡ, ಓಂಗೋಲ್, ನೆಲ್ಲೂರು, ಗುಡೂರು, ರೇಣಿಗುಂಟಾ, ಕಟಪಾಡಿ, ಜೋಲಾರ್‌ಪೇಟ್ಟೈ ಮತ್ತು ಕೃಷ್ಣರಾಜಪುರಂ ಮಾರ್ಗದಲ್ಲಿ ಸಂಚರಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬೀದರ್ :- ಬೆಂಗಳೂರಿನಿಂದ ಬೀದರ್ ಗೆ ವಿಶೇಷ ರೈಲು ಸಂಚರಿಸಲಿದೆ. ಇದು ವಾರದಲ್ಲಿ ಎರಡು ದಿನ ಸಂಚರಿಸಲಿದೆ. ವಿಶೇಷ ರೈಲಿನ ಸಂಖ್ಯೆ 06589. ಈ ಟ್ರೈನ್ ಭಾನುವಾರ ಮತ್ತು ಮಂಗಳವಾರದಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ರಾತ್ರಿ 11 ಗಂಟೆಗೆ ಹೊರಡುತ್ತದೆ ಹಾಗೂ ಮರು ದಿನ ಮಧ್ಯಾಹ್ನ 12 ಗಂಟೆಗೆ ಬೀದರ್ ತಲುಪುತ್ತದೆ. ಹಾಗೂ 06597 ಸಂಖ್ಯೆಯ ಟ್ರೈನ್ ಸಂಚರಿಸಲಿದ್ದು ಶುಕ್ರವಾರ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ರಾತ್ರಿ 11 ಗಂಟೆಗೆ ಹೊರಟ ಟ್ರೈನ್ ಮರುದಿನ ಮಧ್ಯಾನ್ಹ 12 ಗಂಟೆಗೆ ಬೀದರ್ ತಲುಪಲಿದೆ.
ಬಿಹಾರ್ :- ಬೆಂಗಳೂರಿಂದ ಬಿಹಾರದ ಮುಜಾಫರ್‌ಫುರ ನಿಲ್ದಾಣದವರೆಗೆ ನಾಲ್ಕು ಟ್ರಿಪ್‌ಗಳ ವಿಶೇಷ ರೈಲು ಬಿಡುಗಡೆ ಮಾಡಲಾಗಿದೆ . ಈ ವಿಶೇಷ ಟ್ರೈನ್ ಏಪ್ರಿಲ್ 15 ರಿಂದ ಮೇ 6 ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಿಂದ ವಿವಿಧ ಪ್ರದೇಶಗಳಿಗೆ ಜನರು ಹೋಗಲು ಅನುಕೌಲ ಆಗಲಿ ಎಂಬ ದೃಷ್ಟಿಯಿಂದ ಈ ವಿಶೇಷ ಟ್ರೈನ್ ಬಿಡಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಈ ವ್ಯವಸ್ಥೆಯಿಂದ ಜನದಟ್ಟಣೆ ಕಡಿಮೆ ಆಗುವ ಸಾಧ್ಯತೆ ಹೆಚ್ಚಿದೆ. ಹಾಗೂ ಬೇಸಿಗೆಯಲ್ಲಿ ಒಂದೇ ಟ್ರೈನ್ ನಲ್ಲಿ ಹೆಚ್ಚಿನ ಪ್ರಯಾಣ ನಡೆಸಲು ಕಷ್ಟ ಆಗುವುದರಿಂದ ವಿಶೇಷ ಟ್ರೈನ್ ಬಿಡುವುದು ಬಹಳ ಉಪಯೋಗ ಆಗಲಿದೆ.
ಇದನ್ನೂ ಓದಿ: ಎಲೆಕ್ಷನ್ ಕಾರ್ಡ್ ಇಲ್ಲದೆಯೇ ವೋಟ್ ಮಾಡುವುದು ಹೇಗೆ?
ಇದನ್ನೂ ಓದಿ: ಪ್ರಭಾವಶಾಲಿ ವಿಶೇಷಣಗಳನ್ನು ಹೊಂದಿರುವ ಟೊಯೋಟಾ ಟೈಸರ್, ಮಾರುಕಟ್ಟೆಯನ್ನು ಆಳಲಿದೆಯಾ?