ಆಧಾರ್ ಕಾರ್ಡ್ ಭಾರತದಲ್ಲಿ ಅತಿ ಮುಖ್ಯವಾದ ಗುರುತಿನ ಚೀಟಿ. ಮಗುವಿನ ಸ್ಕೂಲ್ ಗೆ ಅಡ್ಮಿಷನ್ ಪ್ರೋಸೆಸ್ ನಿಂದ ಹಿಡಿದು ಮರಣ ಹೊಂದಿದ ವ್ಯಕ್ತಿಯ death certificate ತೆಗೆದುಕೊಳ್ಳುವ ವರೆಗೂ ಈಗ ಆಧಾರ್ ಕಾರ್ಡ್ ಎಂಬುದು ಬೇಕೆ ಬೇಕು. ಸರ್ಕಾರದ ಹಲವು ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಮುಖ್ಯವಾಗಿ ಆಧಾರ್ ಕಾರ್ಡ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಜೆರಾಕ್ಸ್ ಕೇಳುತ್ತಾರೆ. ಆಧಾರ್ ಕಾರ್ಡ್ ಗುರುತಿನ ಪೂರಾವೆಗೆ ಮಾತ್ರವಲ್ಲ ಏಷ್ಟೋ ಪೊಲೀಸ್ ಪ್ರಕರಣಗಳಲ್ಲಿ ಸಹ ಬಹಳ ಇದು ತುಂಬಾ ಉಪಯೋಗ ಆಗಿದೆ. ವ್ಯಕ್ತಿಯ ಫಿಂಗರ್ ಪ್ರಿಂಟ್ ಸಹಾಯದಿಂದ ಅಪರಾಧಿ ಯಾರು ಎಂಬುದನ್ನು ಪತ್ತೆ ಹಚ್ಚಲು ಆಧಾರ್ ಕಾರ್ಡ್ ಬಹಳ ಉಪಯೋಗ ಆಗಿದೆ.
ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ನ ಹೆಸರು, ವಿಳಾಸ, ಅಥವಾ ಫೋಟೋ, ಮೊಬೈಲ್ ಸಂಖ್ಯೆಗಳನ್ನು ಬದಲಾಯಿಸಬೇಕು ಎಂದಾದರೆ ಯಾವುದೇ ಕಚೇರಿಗೆ ತೆರಳದೆ ನಿಮ್ಮ ಮನೆಯಲ್ಲಿಯೇ ಕುಳಿತು ವಿವರಗಳನ್ನು ಎಡಿಟ್ ಮಾಡಬಹುದಾಗಿದೆ. ಹಾಗಾದರೆ ವಿವರಗಳನ್ನು ಚೇಂಜ್ ಮಾಡುವ ಪ್ರಕ್ರಿಯೆ ಹೇಗೆ ಹಾಗೂ ಉಚಿತವಾಗಿ ಆಧಾರ್ ಕಾರ್ಡ್ ಮಾಹಿತಿಯನ್ನು ನವೀಕರಣ ಮಾಡುವ ಕೊನೆಯ ದಿನಾಂಕ ಯಾವುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಉಚಿತವಾಗಿ ಆಧಾರ್ ನವೀಕರಿಸಲು ಇಲಾಖೆಯು ನೀಡಿದ ಸಮಯಾವಧಿ:- ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಐ) ಡಿಸೆಂಬರ್ 15, 2023 ರಿಂದ ಮಾರ್ಚ್ 14, 2024 ರವರೆಗೆ ಆಧಾರ್ ಕಾರ್ಡ್ ವಿವರಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸಲು ಅವಕಾಶವನ್ನು ನೀಡಿದೆ. ಇದರ ನಂತರ ನವೀಕರಣ ಮಾಡಿದರೆ ನೀವು ಕಡ್ಡಾಯವಾಗಿ ಶುಲ್ಕ ಪಾವತಿಸಬೇಕು. ಈ ಸಮಯದಲ್ಲಿ ನೀವು ಯಾವುದೇ ಸೇವಾ ಕೇಂದ್ರಗಳಿಗೆ ತೆರಳಿ ಆಧಾರ್ ಅಪ್ಡೇಟ್ ಮಾಡಿಸಲು ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಇನ್ನು ಮುಂದೆ ನೀವು ಪೇಮೆಂಟ್ ಗಳನ್ನು ಮಾಡಲು ಚಿಂತಿಸಬೇಕಾಗಿಲ್ಲ, ಬರುತ್ತಿದೆ ಹೊಸ Flipkart UPI
ಯಾಕೆ ಆಧಾರ್ ಅಪ್ಡೇಟ್ ಮಾಡಲು ಇಲಾಖೆ ಹೇಳುತ್ತಿದೆ?
ಜನಸಂಖ್ಯಾ ವಿವರಗಳನ್ನು ಮರುಮೌಲ್ಯಮಾಪನ ಮಾಡಲು ಮತ್ತು ಆಧಾರ್ ಡೇಟಾಬೇಸ್ ಅನ್ನು ನವೀಕೃತವಾಗಿರಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) 10 ವರ್ಷಗಳ ಹಿಂದೆ ನೀಡಲಾದ ಮತ್ತು ನಂತರ ನವೀಕರಿಸಿದ ಆಧಾರ್ ಕಾರ್ಡ್‌ಗಳನ್ನು ಹೊಂದಿರುವ ನಿವಾಸಿಗಳಿಗೆ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ ದಾಖಲೆಗಳನ್ನು ಅಪ್‌ಲೋಡ್ ಮಾಡಲು ತಿಳಿಸಿದೆ.
ಆನ್‌ಲೈನ್‌ನಲ್ಲಿ ಮೂಲಕ ಆಧಾರ್ ಕಾರ್ಡ್ ನವೀಕರಣ ಮಾಡುವುದು ಹೇಗೆ?
ಇಲಾಖೆಯ ಅಧಿಕೃತ ವೆಬ್ಸೈಟ್ https://myaadhaar.uidai.gov.in/ ಗೆ ತೆರಳಿ ನಿಮ್ಮ ಆಧಾರ್ ವಿಳಾಸ ಎಂಬ ಆಪ್ಷನ್ ಆಯ್ಕೆ ಮಾಡಿ ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಸಂಖ್ಯೆಗೆ OTP ಬರುತ್ತದೆ. ಅದನ್ನು ನಮೂದಿಸಿ. ನಂತರ ಡಾಕ್ಯುಮೆಂಟ್ ಅಪ್ಡೇಟ್ ಬಟನ್ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ನಿವಾಸದ ವಿವರಗಳನ್ನು ಪರಿಶೀಲಿಸಿ ನಂತರ ಹೈಪರ್ಲಿಂಕ್ ಬಟನ್ ಕ್ಲಿಕ್ ಮಾಡಿ
ಡ್ರಾಪ್‌ಡೌನ್ ಪಟ್ಟಿಯಿಂದ ನಿಮ್ಮ ಗುರುತಿನ ಪುರಾವೆ ಹಾಗೂ ವಿಳಾಸದ ವಿವರಗಳನ್ನು ಆಯ್ಕೆಮಾಡಿ. ನಿಮ್ಮ ವಿಳಾಸದ ವಿವರಗಳನ್ನು ಭರ್ತಿ ಮಾಡಿ ಕೊನೆಯದಾಗಿ ಸಲ್ಲಿಸಿ ಬಟನ್ ಕ್ಲಿಕ್ ಮಾಡಿ . ನೀವು 14-ಅಂಕಿಯ ನವೀಕರಣ ವಿನಂತಿ ಸಂಖ್ಯೆ (URN) ಯನ್ನೂ ಸ್ವೀಕರಿಸುತ್ತೀರಿ.
ಹೆಸರು ಅಥವಾ ಹುಟ್ಟಿದ ದಿನಾಂಕವನ್ನು ಬದಲಿಸಲು ಹೀಗೆ ಮಾಡಿ :-
ಆಧಾರ್ ವೆಬ್ಸೈಟ್ ಗೆ ತೆರಳಿ ಲಾಗಿನ್ ಮಾಡಿದ ನಂತರ ಹೆಸರು/ಲಿಂಗ/ಹುಟ್ಟಿದ ದಿನಾಂಕ ಮತ್ತು ವಿಳಾಸ ನವೀಕರಣ ಬಟನ್ ಕ್ಲಿಕ್ ಮಾಡಬೇಕು. ‘ವಿಳಾಸ’ ಅನ್ನು ನಮೂದಿಸಿ. ನಂತರ ‘ಆಧಾರ್ ಅನ್ನು ನವೀಕರಿಸಲು ಮುಂದುವರಿಯಿರಿ’ ಕ್ಲಿಕ್ ಮಾಡಿ. ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ ಹಾಗೂ ಮಾಹಿತಿಯನ್ನು ನಮೂದಿಸಿ.
ಇದನ್ನೂ ಓದಿ: ಕರ್ನಾಟಕ ಲೋಕಸೇವಾ ಆಯೋಗ ಕರ್ನಾಟಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ 97 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ