ಆಧಾರ್ ಕಾರ್ಡ್ ಭಾರತೀಯರ ಗುರುತಿನ ಚೀಟಿ ಆಗಿದೆ. ಭಾರತೀಯ ಯಾವುದೇ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಯಾವುದೇ ಹೂಡಿಕೆ, ಅಥವಾ ಯಾವುದೇ ಉಚಿತ ಸ್ಕೀಮ್ ಗಳಿಗೆ ಅರ್ಜಿ ಸಲ್ಲಿಸುವಾಗ ಅಥವಾ ಯಾವುದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬೇಕು ಎಂದರೆ ಮುಖ್ಯವಾಗಿ ಆಧಾರ್ ಕಾರ್ಡ್ ಮುಖ್ಯ. ಹತ್ತು ವರ್ಷಗಳ ಹಿಂದಿನ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. ಮಾರ್ಚ್ 14 2024 ಉಚಿತವಾಗಿ ಆಧಾರ್ ಅಪ್ಡೇಟ್ ಗೆ ಕೊನೆಯ ದಿನ ಎಂದು ಈ ಹಿಂದೆ ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ ಈ ಗಡುವನ್ನು ಕೇಂದ್ರ ಸರ್ಕಾರ ಮುಂದೂಡಿದೆ. ಹಾಗಾದರೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಕೊನೆಯ ದಿನ ಯಾವುದು ಎಂದು ತಿಳಿಯೋಣ.
ಉಚಿತ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವ ಕೊನೆಯ ದಿನಾಂಕ ಆಧಾರ್ ಕಾರ್ಡ್ ಹಳೆಯದಾದರೆ ಅಥವಾ ಫೋಟೋ, ವಿಳಾಸ, ಹೆಸರು ಉಚಿತವಾಗಿ ಬದಲಾವಣೆ ಮಾಡಲು ಮೂರು ತಿಂಗಳು ಮುಂದೂಡಿದ್ದು ಈಗ ಜೂನ್ 14 2024 ಕೊನೆಯದಿನವಾಗಿದೆ. ಇನ್ನು ಆಧಾರ್ ಅಪ್ಡೇಟ್ ಮಾಡದೆ ಇದ್ದವರು ಜೂನ್ ಒಳಗೆ ಅಪ್ಡೇಟ್ ಮಾಡಿಸಬೇಕು.
ಆಧಾರ್ ಕಾರ್ಡ್ ಅಪ್ಡೇಟ್ ಏಕೆ ಮುಖ್ಯ?
UIDAI ಆಧಾರ್ ಕಾರ್ಡ್ ಹತ್ತು ವರುಷಕ್ಕೆ ಒಮ್ಮೆ ಅಪ್ಡೇಟ್ ಮಾಡುವುದು ಕಡ್ಡಾಯ ಗೊಳಿಸಿದೆ. ಡೇಟಾಬೇಸ್‌ನಲ್ಲಿನ ನಿಖರವಾದ ಮಾಹಿತಿಗೆ ಈ ಅಪ್ಡೇಟ್ ಮುಖ್ಯವಾಗಿದೆ. ಹಾಗೂ ಮಗುವಿಗೆ ನೀಡುವ ನೀಲಿ ಆಧಾರ್ ಕಾರ್ಡ್ ಅನ್ನು ಮಗುವಿಗೆ 15ವರ್ಷ ತುಂಬಿದ ನಂತರ ಬಯೋಮೆಟ್ರಿಕ್ ನೀಡಿ ಆಧಾರ್ ಕಾರ್ಡ್ ಪಡೆಯಬೇಕು. ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದರಿಂದ ಆಧಾರ್ ಕಾರ್ಡ್ ದುರ್ಬಳಕೆ ಮತ್ತು ವಂಚನೆಯನ್ನು ತಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ?
- ಸ್ಟೆಪ್ 1:- ಆಧಾರ್ ಅಪ್ಡೇಟ್ ಮಾಡಲು https://myaadhaar.uidai.gov.in/ website ಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಮತ್ತು ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒನ್-ಟೈಮ್ ಪಾಸ್‌ವರ್ಡ್ (OTP) ಬಳಸಿ ಲಾಗ್ ಇನ್ ಆಗಬೇಕು.
- ಸ್ಟೆಪ್ 2:- ಆಧಾರ್ ನಲ್ಲಿ ಇರುವ ಮಾಹಿತಿಗಳು ಎಲ್ಲವೂ ಸರಿಯಾಗಿ ಪರಿಶೀಲಿಸಿ, ‘ಮೇಲಿನ ವಿವರಗಳು ಸರಿಯಾಗಿವೆಯೇ ಎಂದು ನಾನು ಪರಿಶೀಲಿಸುತ್ತೇನೆ’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಕೆಳಗಿನ ಹಂತಗಳನ್ನು ಅನುಸರಿಸಿ.
- ಸ್ಟೆಪ್ 3:- ಮೊದಲು ಡ್ರಾಪ್-ಡೌನ್ ಪಟ್ಟಿಯಿಂದ ಗುರುತಿನ ದಾಖಲೆಯ ಪ್ರಕಾರವನ್ನು ಆಯ್ಕೆ ಮಾಡಬೇಕು.
- ಸ್ಟೆಪ್ 4:- ಆಯ್ಕೆಮಾಡಿದ ಡಾಕ್ಯುಮೆಂಟ್ ಪ್ರಕಾರವನ್ನು PNG, JPEG, ಅಥವಾ PDF ನಲ್ಲಿ 2 MB ಗಿಂತ ಕಡಿಮೆ ಸೈಜ್ ನಲ್ಲಿ ಅಪ್‌ಲೋಡ್ ಮಾಡಬೇಕು.
- ಸ್ಟೆಪ್ 5:- ಕೊನೆಯದಾಗಿ ಓಕೆ ಬಟನ್ ಕ್ಲಿಕ್ ಮಾಡಿ.
ಇದನ್ನೂ ಓದಿ: ಭಾರತದಲ್ಲಿ ಹೆಚ್ಚು ಬೇಡಿಕೆ ಇರುವ ಎಲೆಕ್ಟ್ರಿಕ್ ಕಾರುಗಳು ಇವು, ಇದರ ಬೆಲೆಗಳು ಎಷ್ಟು ಗೊತ್ತಾ?
ಆಧಾರ್ ಅಪ್ಡೇಟ್ ಮಾಡಿಸುವುದರಿಂದ ಏನು ಉಪಯೋಗ?
ನೀವು ಸರಿಯಾದ ಸಮಯಕ್ಕೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದರಿಂದ ಯಾವುದೇ ಸರ್ಕಾರಿ ಸ್ಕೀಮ್ ಗಳಿಗೆ ಅರ್ಜಿ ಸಲ್ಲಿಸುವುದು ಸುಲಭ. ಮನೆಯ ವಿಳಾಸದ ಪೂರವೆಯ ಸಲುವಾಗಿ ಆಧಾರ್ ಕಾರ್ಡ್ ಮುಖ್ಯವಾಗಿ ಇರುವುದರಿಂದ ಆಧಾರ್ ಕಾರ್ಡ್ ನಲ್ಲಿ ವಿಳಾಸದ ಅಪ್ಡೇಟ್ ಮಾಡಿಸುವುದು ಮುಖ್ಯ. ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದರಿಂದ ಬೇರೆ ಡಾಕ್ಯುಮೆಂಟ್ ನಲ್ಲಿ ಹೆಸರು ಬದಲಾವಣೆ ಇದ್ದರೆ ಆಧಾರ್ ಕಾರ್ಡ್ ನಲ್ಲಿ ಅದೇ ಹೆಸರು ಸೇರಿಸಿ ಡಾಕ್ಯುಮೆಂಟ್ verification ಸಮಯದಲ್ಲಿ ಯಾವುದೇ ಗೊಂದಲ. ಇರುವುದಿಲ್ಲ.
ಇದನ್ನೂ ಓದಿ: ನಿಮ್ಮ ಚಾಲನೆಗೆ ಒಂದು ಹೊಸ ಉತ್ಸಾಹ ನೀಡುವ ಹುಂಡೈ ಕ್ರೆಟಾ N ಲೈನ್ ನ ಎಕ್ಸ್ ಶೋರೂಮ್ ಬೆಲೆ ಎಷ್ಟು ಗೊತ್ತಾ?