ಈಗ ಯಾವುದೇ ಸರಕಾರಿ ಕೆಲಸಕ್ಕೆ ಕಡ್ಡಾಯವಾಗಿ ಆಧಾರ್ ಸಂಖ್ಯೆ ಕೇಳುವುದು ಸಾಮಾನ್ಯ ಆಗಿದೆ. ಅದೇ ರೀತಿ ಈಗಾಗಲೇ ಪಾನ್ ಕಾರ್ಡ್(Pan Card) ಮತ್ತು ರೇಷನ್ ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯ ಗೊಳಿಸಿರುವುದು ಎಲ್ಲರಿಗೂ ತಿಳಿದಿದೆ. ಈಗ ರೈತರಿಗೆ ತಮ್ಮ ಜಮೀನಿನ ಪಹಣಿಗೆ ಸಹ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯ ಎಂದು ಇಲಾಖೆ ತಿಳಿಸಿದೆ.
ಯಾಕೆ ಆಧಾರ್ ಲಿಂಕ್ ಕಡ್ಡಾಯ ಗೊಳಿಸಲಾಗಿದೆ?: ಕಂದಾಯ ಇಲಾಖೆಯನ್ನು ಆಧುನೀಕರಣ ಗೊಳಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಲೇ ಕಂದಾಯ ಇಲಾಖೆ ಆಧುನೀಕರಣ ಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಲವಾರು ದುರುಪಯೋಗ ಪ್ರಕರಣ ಕಂಡುಬದಿರುವ ಹಿನ್ನೆಲೆಯಲ್ಲಿ ಇಲಾಖೆ ಈ ನಿಯಮವನ್ನು ಜಾರಿ ಗೊಳಿಸುತ್ತಿದೆ.
ಈಗಾಗಲೇ ಹಲವು ಅಕ್ರಮ ಪ್ರಕರಣಗಳು ತಿಳಿದಿವೆ :- ಒಟ್ಟು 19 ಲಕ್ಷ ರೈತರನ್ನು ಗ್ರಾಮಾಧಿಕಾರಿಗಳು ಸಂಪರ್ಕಿಸಿದ್ದಾರೆ. ಇದರಲ್ಲಿ ಒಟ್ಟು 10 ಲಕ್ಷ ರೈತರ ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡಲಾಗಿದೆ. ಇದ್ರಲ್ಲಿ ಒಟ್ಟು 6 ಲಕ್ಷ ಪಹಣಿಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಇದರಿಂದ ಸಾರ್ವಜನಿಕರ ಹೆಸರಿನಲ್ಲಿರುವ ಪಹಣಿಗಳ ದುರುಪಯೋಗದ ಸಾಧ್ಯತಗಳು ಹೆಚ್ಚಿವೆ. ಆಧಾರ್ ಜೋಡಣೆಯು ಆಸ್ತಿ ಒತ್ತಡ ಮತ್ತು ಅಕ್ರಮ ನೋಂದಣಿಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪಹಣಿಯಲ್ಲಿ ಯಾವ ಯಾವ ಮಾಹಿತಿಗಳು ಇರುತ್ತದೆ?
ಈ ಹಿಂದೆ ಪಹಣಿಯಲ್ಲಿ ಕೃಷಿ ಭೂಮಿಯ ಮಾಲೀಕರು ಹೆಸರು, ಪ್ರದೇಶದ ಮಾಹಿತಿ, ಒಟ್ಟು ವಿಸ್ತೀರ್ಣ, ಮಣ್ಣಿನ ಗುಣ, ಭೂಮಿಯ ಸ್ವರೂಪ, ಬೆಳೆಯ ಮಾಹಿತಿಗಳು ಇರುತ್ತಿತ್ತು. ಈಗ ಇದರ ಜೊತೆಗೆ ನಿಮ್ಮ ಆಧಾರ್ ಮಾಹಿತಿ ಇರಲಿದೆ.
ಆಸ್ತಿ ನೋಂದಣಿ ಸಮಯದಲ್ಲಿ ಆಧಾರ್ ಲಿಂಕ್ ಕಡ್ಡಾಯ :- ಈಗಾಗಲೇ ಯಾವುದೇ ಆಸ್ತಿ ಖರೀದಿ ಮಾಡುವಾಗ ನಿಮ್ಮ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಆಸ್ತಿ ರಿಜಿಸ್ಟೇಷನ್ ಮಾಡಿಸುವ ಸಮಯದಲ್ಲಿ ನಿಮ್ಮ ಆಧಾರ್ ಕಾರ್ಡ್ ಪರಿಶೀಲನೆ ಮಾಡಿ ನಂತರ ಆಸ್ತಿಯನ್ನು ನಿಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಕೊಡಲಾಗುತ್ತದೆ. ಇದರಿಂದ ಯಾರದ್ದೋ ಹೆಸರಿನಲ್ಲಿ ಇನ್ಯಾರೋ ಆಸ್ತಿ ಹೊಂದುವ ಅಕ್ರಮಗಳನ್ನು ತಡೆಗಟ್ಟಲು ಸಾಧ್ಯವಿದೆ.
ಗ್ರಾಮಾಧಿಕಾರಿಗಳು ಮನೆ ಮನೆಗೆ ತೆರಳಿ ಆಧಾರ್ ಲಿಂಕ್ ಮಾಡಿಸುತ್ತಿದ್ದಾರೆ: ಈಗಾಗಲೇ ಮನೆ ಮನೆ ಗೆ ತೆರಳಿ ಗ್ರಾಮಾಧಿಕಾರಿಗಳು ಪಹಣಿಗೆ ಆಧಾರ್ ಲಿಂಕ್ ಜೋಡಣೆಗೆ ತೆರಳಿ ಪಹಣಿಗೆ ಆಧಾರ್ ಲಿಂಕ್ ಮಾಡಿಸುತ್ತಾ ಇದ್ದಾರೆ. ನಿಮ್ಮ ಮನೆಗೆ ಗ್ರಾಮಾಧಿಕಾರಿಗಳು ಬಾರದೆ ಇದ್ದರೆ ನೀವು ನಿಮ್ಮ ಹತ್ತಿರದ ಕಂದಾಯ ಕಚೇರಿಗೆ ತೆರಳಿ ನಿಮ್ಮ ಆಧಾರ್ ಕಾರ್ಡ್ ಮತ್ತು ನಿಮ್ಮ ಪಹಣಿಯ ಮಾಹಿತಿಯನ್ನು ನೀಡಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕು.
ಇದನ್ನೂ ಓದಿ: ಈ ಕೆಲಸ ಮಾಡದೆ ಇದ್ದರೆ ರೈತರಿಗೆ ಬರ ಪರಿಹಾರದ ಹಣ ಬರುವುದಿಲ್ಲ
ಆಧಾರ್ ಜೋಡಣೆ ಮಾಡಿಸುವುದರಿಂದ ಏನು ಉಪಯೋಗ?
- ಜಮೀನು ಸುರಕ್ಷಿತವಾಗಿ ಇರುತ್ತದೆ :- ನಿಮ್ಮ ಜಮೀನಿನ ಪಹಣಿಗೆ ಆಧಾರ್ ಮಾಡಿಸುವುದರಿಂದ ನಿಮ್ಮ ಜಮೀನು ನಿಮ್ಮ ಹೆಸರಿನಲ್ಲಿ ಇರುತ್ತದೆ. ಯಾವುದೇ ಕಾರಣಕ್ಕೂ ಬೇರೆಯವರು ನಿಮ್ಮ ಜಮೀನನ್ನು ಬಳಸಲು ಸಾಧ್ಯವಾಗುವುದಿಲ್ಲ.
- ದುರುಪಯೋಗ ತಪ್ಪುತ್ತದೆ :- ನಿಮ್ಮ ಜಮೀನಿನ ಪಹಣಿಗೆ ಆಧಾರ್ ಮಾಡಿಸುವುದರಿಂದ ಬೇರೆಯವರು ನಿಮ್ಮ ಜಮಾನೀನಿನ ದುರುಪಯೋಗ ಪಡಿಸಿಕೊಳ್ಳುವ ಘಟನೆಗಳಿಗೆ ಕಡಿವಾಣ ಹಾಕಲು ಸಹಾಯವಾಗುತ್ತದೆ.
- ನಿಖರ ಮಾಹಿತಿ ದೊರೆಯುತ್ತದೆ :- ಇದರಿಂದ ಆನ್ಲೈನ್ ನಲ್ಲಿಯೇ ನಿಮಗೆ ನಿಮ್ಮ ಜಮೀನಿನ ಪೂರ್ಣ ಮಾಹಿತಿಗಳು ಸಿಗುತ್ತವೆ ಹಾಗೂ ನಿಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳು ಹಾಗೂ ಪೂರ್ಣ ವಿವರಗಳು ದೊರೆಯುತ್ತವೆ.
ಇದನ್ನೂ ಓದಿ: ಭಾರತದಲ್ಲಿ ಫ್ಯಾಮಿಲಿ SUVಗಳು ಮತ್ತು MPVಗಳ ಮಾರಾಟದಲ್ಲಿ ಏರಿಕೆ; ಏಪ್ರಿಲ್ 2024 ರ ಟಾಪ್ 5 ಕಾರ್ ಗಳು!